ಭಾರತ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ 3ನೆ ಸ್ಥಾನ
ಉತ್ತಮ ಆಡಳಿತವಿರುವ ದೇಶದಲ್ಲಿ ಬಡತನವಿದ್ದರೆ ನಾಚಿಕೆಯಾಗಬೇಕು. ಕೆಟ್ಟ ಆಡಳಿತವಿರುವ ದೇಶದಲ್ಲಿ ಸಂಪತ್ತು ಇದ್ದರೆ ನಾಚಿಕೆಯಾಗಬೇಕು - ಕನ್ ಫ್ಯೂಶಿಯಸ್
ಅಂಕಿ ಅಂಶಗಳ ಪ್ರಕಾರ ಅಮೇರಿಕ ಹಾಗು ಚೀನಾದ ಬಳಿಕ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ಬಿಲಿಯನೇರ್ ಗಳು ಇರುವ ದೇಶ ಭಾರತ. ಉದಾರೀಕರಣದ ಮೊದಲು ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇತ್ತು. ಈಗ ಬಿಲಿಯನೇರ್ ಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವುದು ಖುಷಿಯ ವಿಷಯವೇ. ಆದರೆ ಇದು ನಮ್ಮ ದೇಶದ ಅಭಿವೃದ್ಧಿಯ ದಾರಿಯ ಕುರಿತೇ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ.
ಕೆಲವರನ್ನು ಮಾತ್ರ ತಲುಪಿದ ಅಭಿವೃದ್ಧಿ
ದೀರ್ಘ ಹಾಗು ಆರೋಗ್ಯವಂತ ಜೀವನ , ಸುಶಿಕ್ಷಿತರಾಗುವುದು ಹಾಗು ಉತ್ತಮ ಜೀವನ ಮಟ್ಟದಂತಹ ಮಾನವ ಅಭಿವೃದ್ಧಿಯ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಆಗಿರುವ ಸರಾಸರಿ ಬೆಳವಣಿಗೆಯ ಮಾಪಕದ ಸಾರಾಂಶ ದಿ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ (HDI). ಈಗ ಭಾರತದ HDI ಸ್ಥಾನ 130, 1991 ರಲ್ಲಿ ಇದು 133 ರಲ್ಲಿತ್ತು. ಇದರಿಂದ ತಿಲಿಯುವುದೇನೆಂದರೆ, ಅಭಿವೃದ್ಧಿ ಹಾಗು ಆ ಬಳಿಕ ಲಭ್ಯವಾದ ಸಂಪನ್ಮೂಲಗಳು ಜನರ ಆರೋಗ್ಯ ಹಾಗು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಾಕಷ್ಟು ಬಳಕೆಯಾಗಿಲ್ಲ. ಶ್ರೀಲಂಕಾ HDI ನಲ್ಲಿ 73 ನೆ ಸ್ಥಾನದಲ್ಲಿದೆ ಹಾಗು ನಮಗಿಂತ ಉತ್ತಮ ಸ್ಥಿತಿಯಲ್ಲಿರುವ ಹತ್ತು ದೇಶಗಳ ಪಟ್ಟಿಯಲ್ಲಿ ಇರಾಕ್ , ಮೊರೊಕ್ಕೊ ಹಾಗು ತಝಾಕಿಸ್ತಾನದಂತಹ ದೇಶಗಳಿವೆ ಎಂಬುದು ಇಲ್ಲಿ ಗಮನಾರ್ಹ.
ಸಾಮಾಜಿಕ ಖರ್ಚು ಶೋಚನೀಯವಾಗಿ ಕಡಿಮೆ
ನಮ್ಮ ಜಿಡಿಪಿಯ ಕೇವಲ 3.4 % ವನ್ನು 2014-15 ನೆ ಸಾಲಿನಲ್ಲಿ ಶಿಕ್ಷಣಕ್ಕಾಗಿ ಬಳಸಲಾಗಿದೆ. ಕೊಟ್ಹಾರಿ ಆಯೋಗ (1964 -65 ರಲ್ಲಿ ನೇಮಕವಾಗಿದ್ದು) ಹಾಗು ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಿಫಾರಸು ಮಾಡಲಾದ ಜಿಡಿಪಿಯ 6% ಕ್ಕೆ ಹೋಲಿಸಿದರೆ ಇದು ಶೋಚನೀಯವಾಗಿ ಕಡಿಮೆಯಾಗಿದೆ. ಅದೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಾಡಿದ ಖರ್ಚು ಜಿಡಿಪಿಯ ಕೇವಲ 1.2%. ದಿಉ ವಿಶ್ವದಲ್ಲೇ ಕನಿಷ್ಠ. ಶಿಕ್ಷಣ ಹಾಗು ಆರೋಗ್ಯ ಕ್ಷೇತ್ರದಲ್ಲಿ ಕಡಿಮೆ ಖರ್ಚು ಎಂದರೆ ದೇಶದ ದೊಡ್ಡ ಜನಸಂಖ್ಯೆ ಇಲ್ಲಿನ ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ಪ್ರಯೋಜನ ಪಡೆದಿಲ್ಲ.
ಅಭಿವೃದ್ಧಿಯಾದ ದೇಶ ಎಂದರೇನು ?
ದೇಶದ ಅಭಿವೃದ್ಧಿ ಎಂದರೆ ಆ ದೇಶದ ಜನರ ಜೀವನ ಮಟ್ಟ ಸುಧಾರಿಸಲು ಇರುವ ಸಾಮರ್ಥ್ಯ. ಜಿಡಿಪಿ , ಸಾಕ್ಷರತೆ ಇತ್ಯಾದಿಗಳು ಭೌತಿಕ ಬೆಳವಣಿಗೆಯ ಮಾನದಂಡ ಗಳಾಗಿವೆ. ದೇಶದಲ್ಲಿ ಬಿಲಿಯನೇರ್ ಗಳು ಹೆಚ್ಚಲಿ. ಆದರೆ ದೇಶದ ದೊಡ್ಡ ಸಂಖ್ಯೆಯ ಜನರ ಆರೋಗ್ಯ ಹಾಗು ಶೈಕ್ಷಣಿಕ ಪರಿಸ್ಥಿತಿ ಸುಧಾರಿಸುವ ಮೂಲಕ ಅವರೂ ದೇಶದ ಬೆಳವಣಿಗೆಗೆ ಕೊಡುಗೆ ನೀಡುವಂತಾಗಬೇಕು. ಆಗ ನಿಜವಾದ ಅಭಿವೃದ್ಧಿಯಾಗುತ್ತದೆ.
courtesy : http://thelogicalindian.com/