ವಿಮಾನ ಪ್ರಯಾಣ ಸುಲಭವಾಗಲು ಇವುಗಳನ್ನು ತಿಳಿದುಕೊಳ್ಳಿ

Update: 2016-03-18 13:34 GMT

ರಜಾದಿನ ಎಂದರೆ ನಿಮಗೆ ರಿಲ್ಯಾಕ್ಸ್ ಆಗಿರಲು ಇರುವ ದಿನ. ಆದರೆ ಕೊನೆಯಿಲ್ಲದ ಯೋಜನೆ, ಧೀರ್ಘ ವಿಮಾನಯಾನ ಮತ್ತು ಜೆಟ್ ಲ್ಯಾಗ್ ನಿಮ್ಮನ್ನು ಅವಿಶ್ರಾಂತವಾಗಿಸುತ್ತದೆ. ಹೀಗಾಗಿ ರಜಾದಿನದಿಂದ ವಿರಾಮ ಪಡೆದುಕೊಳ್ಳಲು ಒಂದು ರಜಾದಿನ ಬೇಕೆಂದು ಬಹಳಷ್ಟು ಮಂದಿ ಹೇಳುವುದರಲ್ಲಿ ಅಚ್ಚರಿಯಿಲ್ಲ.

ಅಪ್‌ಗ್ರೇಡ್ ಪಡೆಯುವ ಸರಳ ಹಾದಿ

ಎಲ್ಲಾ ಏರ್‌ಲೈನ್‌ಗಳು ಇಕಾನಮಿ ಕ್ಲಾಸಿನಲ್ಲಿ ಟಿಕೆಟ್ ಬುಕ್ ಮಾಡಿದರವನ್ನು ಬ್ಯುಸಿನೆಸ್ ಕ್ಲಾಸಿಗೆ ಅಪ್‌ಗ್ರೇಡ್ ಮಾಡಲು ಒಂದಲ್ಲ ಒಂದು ದಾರಿಯನ್ನು ಇಟ್ಟಿರುತ್ತಾರೆ. ಅಪ್‌ಗ್ರೇಡ್ ಪಡೆಯಲು ಉತ್ತಮ ಅವಕಾಶವೆಂದರೆ ಚೆಕ್ ಇನ್ ಕೌಂಟರಿನಲ್ಲಿ ಮೊದಲೇ ಬಂದು ನಿಲ್ಲುವುದು. ಅಲ್ಲದೆ ಆಗಾಗ್ಗೆ ವಿಮಾನದಲ್ಲಿ ಓಡಾಡುವ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ದಾಖಲಿಸಿಕೊಳ್ಳುವುದು ಕೂಡ ನೆರವಾಗಲಿದೆ. ಯಾವುದಾದರೂ ಒಂದು ವಿಮಾನದಲ್ಲಿಯೇ ಹೆಚ್ಚು ಓಡಾಡಿದಲ್ಲಿ ಇನ್ನೂ ಲಾಭ ಸಿಗುತ್ತದೆ. ಬಹುತೇಕ ವಿಮಾನಗಳು ತಮ್ಮ ಸೌಲಭ್ಯವನ್ನು ಹೆಚ್ಚು ಬಳಸುವವರಿಗೆ ಅವಕಾಶ ಕೊಡುತ್ತಾರೆ. ಅಧಿಕ ಭಾರದ ಬ್ಯಾಗುಗಳನ್ನು ನಿಭಾಯಿಸುವುದು

ಕಡಿಮೆ ಬ್ಯಾಗುಗಳನ್ನು ಕೊಂಡೊಯ್ಯುವ ಹಾದಿ ಉತ್ತಮ ಪರಿಹಾರ. ನಿಮ್ಮ ಚೆಕ್ ಇನ್ ಮತ್ತು ಕೈ ಬ್ಯಾಗ್ ನಡುವೆ ಸಮತೋಲನ ಕಾಪಾಡಿಕೊಳ್ಳುವುದೇ ಉತ್ತಮ ಹಾದಿ. ಯಾವಾಗಲೂ ಬ್ಯಾಕ್ ಪ್ಯಾಕನ್ನು ಟ್ರಾಲಿ ಬ್ಯಾಗ್ ಬದಲಾಗಿ ಆರಿಸಿ.

ಪದೇ ಪದೇ ಅಳುವ ಮಗುವಿನ ಸಮಸ್ಯೆ

ಪ್ರತಿಯೊಂದು ಮಗುವೂ ಭಿನ್ನವಾಗಿ ವರ್ತಿಸುತ್ತದೆ. ಆದರೆ ಕೆಲವೊಮ್ಮೆ ಮಕ್ಕಳನ್ನು ಅತ್ತಿತ್ತ ಓಡಾಡಿಸುವುದೂ ಕೂಡ ಖುಷಿ ಕೊಡಬಹುದು. ಸಾಮಾನ್ಯವಾಗಿ ಮಕ್ಕಳು ಸುಮ್ಮನೆ ಕುಳಿತು ಜೋರಾಗಿ ಅಳುವುದೂ ಇರುತ್ತದೆ. ಸಕ್ಕರೆ ಪದಾರ್ಥಗಳನ್ನು ಕೊಟ್ಟು ಸಮಾಧಾನಿಸಲು ಯತ್ನಿಸಬೇಡಿ. ಇದು ಅವರಿಗೆ ಕಿರಿಕಿರಿ ಮಾಡಬಹುದು. ಬಹಳಷ್ಟು ಹಸುಗೂಸುಗಳು ಕಿವಿಯಲ್ಲಿ ಒತ್ತಡ ಬಿದ್ದು ಅಳುತ್ತಾರೆ. ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಹಾಲುಣಿಸುವುದು ನೆರವಾಗಲಿದೆ. ಹಲ್ಲಿನ ಚಲನೆಯಿಂದ ಕಿವಿಗಳು ತೆರೆದುಕೊಳ್ಳುತ್ತವೆ.

ಬ್ಯಾಗು ಮೊದಲು ಸಿಗಬೇಕೆಂದರೆ?

ಸರಳ ದಾರಿಯೆಂದರೆ ಆದ್ಯತೆಯ ಬ್ಯಾಗು ಎಂದು ಗುರುತು ಹಾಕಿರಬೇಕು. ನೀವು ಯಾವಾಗಲೂ ವಿಮಾನದಲ್ಲಿ ಓಡಾಡುವವರಾಗಿದ್ದರೆ, ಈ ಬೇಡಿಕೆಗೆ ಬೆಲೆ ಇರುತ್ತದೆ. ಆದರೆ ಯಾವಾಗಲೂ ಓಡಾಡದೆ ಇದ್ದರೂ ನಯವಾಗಿ ಕೇಳಿದರೆ ಬ್ಯಾಗ್ ಸಿಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News