ಈಗ ವಿದೇಶದಲ್ಲಿ ಕುಳಿತು ನಿಮ್ಮ ಲಾಂಡ್‌ಲೈನ್‌ನಲ್ಲಿ ಕಾಲ್ ಮಾಡಿ!

Update: 2016-03-18 05:58 GMT

ಹೊಸದಿಲ್ಲಿ,ಮಾ,18; ಬಿಎಸ್‌ಎನ್‌ಎಲ್ ಈಗ ಒಂದು ಹೊಸ ಆಪ್‌ನ್ನು ಹೊರಬಿಟ್ಟಿದೆ. ಅದರಿಂದಾಗಿ ಇನ್ನು ಬಿಎಸ್‌ಎನ್‌ಎಲ್ ಗ್ರಾಹಕರು ವಿದೇಶ ಪ್ರಯಾಣ ಮಾಡುವಾಗ ಲ್ಯಾಂಡ್‌ಲೈನ್ ಬಳಸಿಕೊಂಡು ಮೊಬೈಲ್ ಮೂಲಕ ಐಎಸ್‌ಡಿ ಶುಲ್ಕ ಬೀಳದೆಯೇ ಕರೆ ಮಾಡಬಹುದು. ಸ್ಥಿರ ಮೊಬೈಲ್ ದೂರವಾಣಿ ಸೇವೆಯನ್ನು ಏಪ್ರಿಲ್ 2ರಿಂದ ಆರಂಭಿಸಲಾಗುವುದು. ಆದರೆ ಇದಕ್ಕೆ ಮಾಸಿಕ ದರ ಇರಲಿದೆ. ಎಫ್‌ಎಂಟಿ ಅಡಿಯಲ್ಲಿ ನಾವು ಸ್ಥಿರ ಲೈನುಗಳನ್ನು ಮೊಬೈಲ್ ಆಗಿ ವರ್ಚುವಲ್ ವರ್ಗಾವಣೆ ಮಾಡಿದ್ದೇವೆ. ಈಗ ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಸ್ಥಿರ ಫೋನ್ ಮತ್ತು ಮೊಬೈಲ್ ಫೋನ್‌ನ್ನು ಬಿಎಸ್‌ಎನ್‌ಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಪರ್ಕ ಕಲ್ಪಿಸಿಕೊಳ್ಳಬಹುದು ಎಂದು ಬಿಎಸ್‌ಎನ್‌ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ. ಈ ಆಪ್ ಇನ್‌ಸ್ಟಾಲ್ ಮಾಡಿದ ಮೇಲೆ ಗ್ರಾಹಕರು ತಮ್ಮ ಮೊಬೈಲ್ ಫೋನ್‌ನ್ನು ಸ್ಥಿರ ಲೈನ್ ಸಂಪರ್ಕವನ್ನು ಬಳಸಿಕೊಂಡು ಕರೆ ಮಾಡಲು ಬಳಸಿಕೊಳ್ಳಬಹುದು. ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಈ ಸೌಲಭ್ಯ ಲಭ್ಯವಿರಲಿದೆ

ಎಂದು ಅವರು ಹೇಳಿದ್ದಾರೆ. ಈ ಸೌಲಭ್ಯದಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಸ್ಥಿರ ಫೋನ್‌ಗಳನ್ನು ಮೊಬೈಲ್ ನೆಟ್ವರ್ಕ್ ಬಳಸಿ ಕರೆ ಮಾಡಲೂ ಬಳಸಿಕೊಳ್ಳಬಹುದಾಗಿದೆ. ಈ ಆಡ್ ಆನ್ ಸೇವೆಗೆ ಇನ್ನೂ ಬೆಲೆ ನಿಗದಿಯಾಗಿಲ್ಲ. ಮಾಸಿಕ ದರದಲ್ಲಿ ಪ್ರಿಪೈಡ್ ಮತ್ತು ಪೋಸ್ಟ್ ಪೈಡ್ ಗ್ರಾಹಕರು ಪಾವತಿಸಬಹುದು. ಆದರೆ ಗ್ರಾಹಕರು ತಾವು ಬಳಸುವ ನೆಟ್ವರ್ಕ್‌ಗೆ ಅನುಗುಣವಾಗಿ ಕರೆ ದರಗಳನ್ನು ತೆರಬೇಕಾಗುತ್ತದೆ. ಅವರು ಲ್ಯಾಂಡ್‌ಲೈನ್ ನೆಟ್ವರ್ಕ್ ಬಳಸಿದಲ್ಲಿ ಲ್ಯಾಂಡ್‌ಲೈನ್ ಪ್ಲಾನ್ ದರಗಳು ಅನ್ವಯಿಸುತ್ತವೆ. ಮೊಬೈಲ್ ನೆಟ್ವರ್ಕ್ ಬಳಸಿದಲ್ಲಿ ತಮ್ಮ ಮೊಬೈಲ್ ಫೋನ್ ಬಿಲ್ ಪ್ಲಾನಿನಂತೆ ಪಾವತಿಸಬೇಕಾಗುತ್ತದೆ. ಈ ತಂತ್ರಜ್ಞಾನದಲ್ಲಿ ಬಿಎಸ್‌ಎನ್‌ಎಲ್ ಈಗ ಎಸ್‌ಎಂಎಸ್ ಸೌಲಭ್ಯವನ್ನೂ ಲ್ಯಾಂಡ್‌ಲೈನ್ ಫೋನಿಗೆ ಕೊಡುವ ಬಗ್ಗೆ ಯೋಜಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News