Wi-Fi ಎಂಬ ಸೈಲೆಂಟ್ ಕಿಲ್ಲರ್ !

Update: 2016-03-18 12:43 GMT

ಜಗತ್ತು ಆಧುನಿಕವಾಗಿ , ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿಯಾದಂತೆ ಜೀವನ ಸುಲಭವಾಗುತ್ತಾ ಹೋಯಿತು. ಈಗ ಅವುಗಳಿಂದಲೇ ಜೀವನಕ್ಕೆ ಅಪಾಯ ಎದುರಾಗುತ್ತಿದೆ. ದಿನಕ್ಕೊಂದರಂತೆ ಬರುತ್ತಿರುವ ಹೊಸ ಹೊಸ ಎಲೆಕ್ಟ್ರಾನಿಕ್ ಉಪಕರಣಗಳು, ತಂತ್ರಜ್ಞಾನಗಳು ನಮಗೆ ಅನುಕೂಲ ಮಾಡಿದಷ್ಟೇ ನಮಗೆ ಅಪಾಯ ತರುತ್ತಿವೆ. ಇದರಲ್ಲಿ ಅತ್ಯಂತ ಪ್ರಮುಖವಾದದ್ದು ವೈ ಫೈ. ಯಾವುದೇ ಕೇಬಲ್ ಇಲ್ಲದೆ ಉಪಕರಣಗಳ ನಡುವೆ ಸಂಪರ್ಕ ಕಲ್ಪಿಸುವ ಕ್ರಾಂತಿಕಾರಿ ತಂತ್ರಜ್ಞಾನವಿದು. ಇದರಿಂದ ಅತಿ ದೊಡ್ಡ ಲಾಭವಿರುವುದು ಮೊಬೈಲ್ ಗಳಿಗೆ. ಆರೋಗ್ಯಕ್ಕೆ ಹಾನಿಯಾಗದಂತೆ ಹೇಗೆ ಅದು ಹೇಗಿರಬೇಕು ಎಂದು ಮೊಬೈಲ್ ಕಂಪೆನಿಗಳು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿರುತ್ತವೆ. 

ನಾವು ಬಳಸುವ ಟ್ಯಾಬ್ಲೆಟ್, ಲ್ಯಾಪ್ ಟಾಪ್ ಗಳು ಹಾಗು ಮೊಬೈಲ್ ಗಳಿಗೆ ಆನ್ ಲೈನ್ ನಲ್ಲಿ ಕನೆಕ್ಟ್ ಆಗಲು ರೂಟರ್ ಗಳು ಬೇಕು. ಈ ರೂಟರ್ ಗಳು ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳನ್ನು ಹೊರಸೂಸುತ್ತವೆ. ಇದನ್ನೇ ನಾವು WLAN signals ಎಂದು ಕರೆಯುತ್ತೇವೆ. ಈ ಅಲೆಗಳು ನಮ್ಮ ದೇಹಕ್ಕೆ ಅತ್ಯಂತ ಅಪಾಯಕಾರಿಯಾಗಿವೆ. 

ಬ್ರಿಟಿಷ್ ಹೆಲ್ತ್ ಏಜೆನ್ಸಿ ನಡೆಸಿದ ಅಧ್ಯಯನವೊಂದರಲ್ಲಿ ಈ ರೂಟರ್ ಗಳು ಮನುಷ್ಯರು ಹಾಗು ಸಸ್ಯಗಳ ಬೆಳವಣಿಗೆಗೆ ಅಪಾಯಕಾರಿ ಪರಿಣಾಮ ಬೀರುತ್ತವೆ ಎಂದು ತಿಳಿದು ಬಂದಿದೆ. 

ವೈ ಫೈ ಸಿಗ್ನಲ್ ಗಳು ಹಾಗು ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳಿಂದ ಈ ಕೆಳಗಿನ ಹಾನಿ ಉಂಟಾಗುತ್ತವೆ : 

ಏಕಾಗ್ರತೆಯ ಕೊರತೆ , 

ನಿದ್ರೆ ಸಮಸ್ಯೆಗಳು, 

ದೀರ್ಘ ಕಾಲದ  ಸುಸ್ತು , 

ಕಿವಿ ನೋವು, 

ಆಗಾಗ ತುಂಬಾ ತಲೆನೋವು ಇತ್ಯಾದಿ. 

ಇಂದು ನಾವು ಸಂಪೂರ್ಣವಾಗಿ ತಂತ್ರಜ್ಞಾನದಿಂದ ದೂರವಿರಲು ಅಸಾಧ್ಯ. ಹಾಗಾಗಿ ನಾವು ಹಾಗು ನಮ್ಮ ಮಕ್ಕಳು ಇದರ ಅಡ್ಡ ಪರಿಣಾಮಗಳನ್ನು ಅತ್ಯಂತ ಕನಿಷ್ಠ ಎದುರಿಸುವಂತೆ ಕೆಲವು ಕ್ರಮಗಳನ್ನು ಅನುಸರಿಸಬಹುದು. 

ಉಪಯುಕ್ತ ಮಾಹಿತಿಗಳು : 

ಮನೆಯಲ್ಲಿ ವೈರ್ ಲೆಸ್ ಫೋನ್ ಗಳ ಬದಲು ಕೇಬಲ್ ಫೋನ್ ಗಳನ್ನೇ ಬಳಸಬೇಕು. 

ಬೆಡ್ ರೂಂ ಹಾಗು ಕಿಚನ್ ಗಳಲ್ಲಿ ರೂಟರ್ ಇಡಬಾರದು. 

ರಾತ್ರಿ ಮಲಗುವ ಮುನ್ನ ಎಲ್ಲ ವೈ ಫೈ ಕನೆಕ್ಷನ್ ಗಳನ್ನು ಡಿಸ್ ಕನೆಕ್ಟ್ ಮಾಡಬೇಕು. 

ಪ್ರತಿ ಬಾರಿ ವೈ ಫೈ ಬಳಸುವಾಗಲೂ ಇದೇ ರೀತಿ ಮಾಡಬೇಕು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News