ಬುಲೆಟ್ ಪ್ರೇಮಿಗಳಿಗೆ ಬಂದಿದೆ ಹೊಸ ' ಹಿಮಾಲಯನ್ '
ಪ್ರತಿಷ್ಠಿತ " ಬುಲೆಟ್ " ಬೈಕುಗಳ ತಯಾರಿಕಾ ಸಂಸ್ಥೆ ರೋಯಲ್ ಎನ್ಫೀಲ್ಡ್ ಬುಧವಾರ ತನ್ನ ನೂತನ ಬೈಕ್ ' ಹಿಮಾಲಯನ್ ' ಬಿಡುಗಡೆ ಮಾಡಿದೆ. 411 ಸಿಸಿ ಸಾಮರ್ಥ್ಯದ ಹಿಮಾಲಯನ್ ನ ಎಕ್ಸ್ ಷೋ ರೂಂ ಬೆಲೆ ರೂ. 1.55 ಲಕ್ಷ.
ಬುಲೆಟ್, ಕ್ಲಾಸಿಕ್ , ತಂಡರ್ ಬರ್ಡ್ ಹಾಗು ಕಾಂಟಿನೆಂಟಲ್ ಜಿಟಿ ಹೆಸರಿನ ಭಾರೀ ಖ್ಯಾತಿಯ ಬೈಕುಗಳನ್ನು ಮಾರುತ್ತಿರುವ ರೋಯಲ್ ಎನ್ಫೀಲ್ಡ್ , ಈಶರ್ ಮೋಟರ್ಸ್ ನ ದ್ವಿಚಕ್ರ ವಾಹನ ವಿಭಾಗವಾಗಿದೆ.
" ನಾವು ಭಾರತದಲ್ಲಿ ಸಾಹಸ ಟೂರ್ ನ ಹೊಸ ಸವಾರರನ್ನು ಉತ್ತೇಜಿಸುವ ಪ್ರಯತ್ನ ಮಾಡಿದ್ದೇವೆ. ' ಹಿಮಾಲಯನ್ 'ಮೂಲಕ ದೊಡ್ಡ ಸಂಖ್ಯೆಯಲ್ಲಿ ಸಾಹಸಿ ಬೈಕರ್ ಗಳನ್ನು ಸೆಳೆಯುವ ಭರವಸೆಯಿದೆ. ಇದು ತಕ್ಷಣ ಸಾಹಸಿಗಳ ಗಮನ ಸೆಳೆಯುತ್ತದೆಯೇ ಅಥವಾ ಹಂತ ಹಂತವಾಗಿ ಜನಪ್ರಿಯವಾಗುತ್ತದೆಯೇ ಎಂದು ಕಾಡು ನೋಡುತ್ತೇವೆ " ಎಂದು ಈಶರ್ ಮೋಟರ್ಸ್ ನ ಎಂ ಡಿ ಹಾಗು ಸಿ ಇ ಒ ಸಿದ್ಧಾರ್ಥ ಲಾಲ್ ಹೇಳಿದ್ದಾರೆ.
ಹಿಮಾಲಯನ್ ನಲ್ಲಿ ಫೈವ್ ಸ್ಪೀಡ್ ಗೇರ್ ಬಾಕ್ಸ್ ಹಾಗು 24.5 BHP ಇಂಜಿನ್ ಇದೆ. ಇದರ ಗ್ರೌನ್ದ್ ಕ್ಲಿಯರೆನ್ಸ್ 210 mm. ಸಾಹಸಿಗಳಿಗೆ ಅಗತ್ಯವಿರುವ ಅಕ್ಸೆಸರಿಗಳನ್ನು ಕಂಪೆನಿ ಮಾರುತ್ತದೆ. ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಎರಡು ನೂತನ ಇಂಜಿನ್ ಪ್ಲಾಟ್ಫಾರ್ಮ್ ಗಳಲ್ಲಿ ಮಾಡಲಾದ ಪ್ರಪ್ರಥಮ ಮಾಡೆಲ್ ಈ ಹಿಮಾಲಯನ್. ಇದೇ ಹೊಸ ಇಂಜಿನ್ ಪ್ಲಾಟ್ಫಾರ್ಮ್ ಗಳಲ್ಲಿ 250 cc to 750 cc ನಡುವಿನ ಇನ್ನೂ ಹೊಸ ಬೈಕುಗಳು ಬರಲಿವೆ. ಈ ವಿಭಾಗದಲ್ಲಿ ಈಗಾಗಲೇ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಕಂಪೆನಿಗೆ ಈ ಹೊಸ ಬೈಕುಗಳ ಮೂಲಕ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪದಿಸಿಕೊಲ್ಲಬಹುದು.
ಭಾರತದಲ್ಲಿ ಈಗಾಗಲೇ ಆಗ್ರ ಸ್ಥಾನದಲ್ಲಿರುವ ಕಂಪೆನಿ ಕಳೆದ ಕೆಲವು ತಿಂಗಳಲ್ಲಿ ಬ್ಯಾಂಕಾಕ್ , ಲಂಡನ್, ಮ್ಯಾಡ್ರಿಡ್ , ಪ್ಯಾರಿಸ್, ದುಬೈ , ಬೊಗೋಟ ಹಾಗು ಮೆಡೆಲಿನ್ ಗಳಲ್ಲೂ ತನ್ನ ಮಾರುಕಟ್ಟೆಯನ್ನು ಬೆಳೆಸಿದೆ. ಈಗಾಗಲೇ ಇರುವ ಎರಡು ಉತ್ಪಾದನಾ ಘಟಕಗಳಲ್ಲದೆ ತಮಿಳುನಾಡಿನಲ್ಲಿ ಬರಲಿರುವ ಇನ್ನೊಂದು ಘಟಕದಲ್ಲಿ 2018 ರೊಳಗೆ 9 ಲಕ್ಷ ಬೈಕುಗಳನ್ನು ಉತ್ಪಾದಿಸುವ ಗುರಿ ಕಂಪೆನಿಗಿದೆ.
ಜಾಗತಿಕ ಮಧ್ಯಮ ವಿಭಾಗದ ಮೋಟರ್ ಸೈಕಲ್ ಗಳ ವಿಭಾಗದಲ್ಲಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ರೋಯಲ್ ಎನ್ಫೀಲ್ಡ್ ಭಾರತ ಹಾಗು ಇಂಗ್ಲೆಂಡ್ ನಲ್ಲಿ ಎರಡು ನೂತನ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಿದೆ.