ಹಿಂದುತ್ವ ಪ್ರತಿಪಾದಕರ ಇಬ್ಬಗೆ ನೀತಿಆರೆಸ್ಸೆಸ್‌ಗೆ ಭಗವಾಧ್ವಜ; ಇತರರಿಗೆ ತ್ರಿವರ್ಣ ಧ್ವಜ!

Update: 2016-03-18 16:10 GMT

ಸ್ವಯಂಘೋಷಿತ ದೇಶಪ್ರೇಮಿ ಸಂಘಟನೆ ಅಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ್ದು ಮತ್ತದೇ ಚಾಳಿ. ಭಾರತೀಯ ಮುಸಲ್ಮಾನರ ಮೇಲೆ ರಾಷ್ಟ್ರಪ್ರೇಮದ ವಿಲಕ್ಷಣ ಅವತಾರ ಹೇರುವ ಹುನ್ನಾರದಿಂದ ಆರೆಸ್ಸೆಸ್‌ನ ಅಂಗ ಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಕಳೆದ ಜನವರಿ 26ರಂದು ಎಲ್ಲ ಮದ್ರಸಗಳಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂಬ ಪ್ರಚಾರಾಂದೋಲನ ಕೈಗೊಂಡಿತು. ಭಾರತದ ಅತಿದೊಡ್ಡ ಮುಸ್ಲಿಂ ಸಂಘಟನೆ, ದಾರುಲ್ ಉಲೂಮ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಆರೆಸ್ಸೆಸ್ ತನ್ನ ನಾಗ್ಪುರ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತದೆಯೇ ಎಂದು ಪ್ರಶ್ನೆ ಎಸೆಯಿತು.

ಅದರ ಹಿಂದಿನ ಹಾಗೂ ಇಂದಿನ ಇತಿಹಾಸ ಪರಿಶೀಲಿಸಿ. ಭಾರತದ ರಾಷ್ಟ್ರೀಯತೆ ಹಾಗೂ ತ್ರಿವರ್ಣ ಧ್ವಜದ ಬಗ್ಗೆ ಛಿದ್ರ ಸಂಬಂಧವನ್ನೇ ಆರೆಸ್ಸೆಸ್ ಹೊಂದಿದೆ. ಧರ್ಮಾಂಧತೆ ಪ್ರತಿಪಾದಕರಿಗೆ ಭಗವಾಧ್ವಜ; ಇತರರಿಗೆ ರಾಷ್ಟ್ರಧ್ವಜ. ಇಲ್ಲಿ ಇತರರು ಎಂದರೆ ಮುಸಲ್ಮಾನರು ಎಂದು ಅರ್ಥೈಸಿಕೊಳ್ಳಬಹುದು. ರಾಷ್ಟ್ರಧ್ವಜ ಬಗೆಗಿನ ಆರೆಸ್ಸೆಸ್ ನಿಲುವನ್ನು ಅರ್ಥ ಮಾಡಿಕೊಳ್ಳಬೇಕಾದರೆ ತೀರಾ ಹಿಂದಕ್ಕೇನೂ ಹೋಗಬೇಕಿಲ್ಲ. 2015ರ ಸೆಷ್ಟಂಬರ್ 20ರಂದು ಆರೆಸ್ಸೆಸ್‌ನ ಅಖಿಲ ಭಾರತ ಪ್ರಚಾರ ಪ್ರಮುಖ ಮನಮೋಹನ ವೈದ್ಯ, ಭಾರತದ ತ್ರಿವರ್ಣಧ್ವಜದ ಬಗ್ಗೆ ಅಪಸ್ವರ ಎತ್ತಿದ್ದರು. ವೈದ್ಯ ಅವರ ಪ್ರಕಾರ, ರಾಷ್ಟ್ರಧ್ವಜದಲ್ಲಿ ವಿವಿಧ ಬಣ್ಣಗಳು ವಿವಿಧ ಧರ್ಮಗಳ ಸಂಕೇತ. ಇದು ಸಹಜವಾಗಿಯೇ ಕೋಮು ಭಾವನೆ ಕೆರಳಿಸಲು ಕಾರಣವಾಗುತ್ತದೆ.

ಮೊಟ್ಟಮೊದಲ ಬಾರಿಗೆ ಆರೆಸ್ಸೆಸ್ ತನ್ನ ಕೇಂದ್ರ ಕಚೇರಿಯಲ್ಲಿ ತ್ರಿವರ್ಣಧ್ವಜ ಹಾರಿಸಿದ್ದು, ಮೊದಲ ಎನ್‌ಡಿಎ ಸರಕಾರ ಅಧಿಕಾರಾವಧಿಯಲ್ಲಿ ಅಂದರೆ 2002ರಲ್ಲಿ. ಈಗ ಆರೆಸ್ಸೆಸ್ ಅನುಸರಿಸುತ್ತಿರುವ ಇಂಥ ಕುಟಿಲ ತಂತ್ರಗಳನ್ನು ಸಾಧ್ವಿ ಹಾಗೂ ಆರೆಸ್ಸೆಸ್/ವಿಎಚ್‌ಪಿ ಮುಖಂಡರಾದ ಉಮಾಭಾರತಿ 1994ರ ಆಗಸ್ಟ್ 15ರಂದೇ ಅನುಸರಿಸಿದ್ದರು. ಅಂದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಪ್ರಯತ್ನ ಮಾಡಿದ್ದರು. ಮತ್ತೆ 2011ರಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಮತ್ತೆ ಬಾಲ ಬಿಚ್ಚಿ ಮುಸ್ಲಿಂ ಸಮುದಾಯದ ವಿರುದ್ಧ ಭ್ರಮೆ ಹುಟ್ಟಿಸುವ ಸಲುವಾಗಿ, 2011ರ ಜನವರಿ 26ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸುವುದಾಗಿ ಘೋಷಿಸಿದರು.
ಬಿಜೆಪಿ ಹಾಗೂ ಆರೆಸ್ಸೆಸ್‌ನ ಮಾರ್ಗದರ್ಶಕರು ಶ್ರೀನಗರದಲ್ಲಿ ತ್ರಿವರ್ಣಧ್ವಜ ಹಾರಿಸಬೇಕು ಎಂದು ಅಸೂಯೆ ಪಡುವುದು ಇಲ್ಲಿ ಅಪ್ರಸ್ತುತ. ಆದರೆ ಅವರು ತ್ರಿವರ್ಣ ಧ್ವಜದ ಬಗ್ಗೆ ಕನಿಷ್ಠ ಗೌರವ ಹೊಂದಿರುವ ಬಗ್ಗೆ ಆರೆಸ್ಸೆಸ್‌ನ ಹಳೆಯ ದಾಖಲೆಗಳಲ್ಲಿ ಪುರಾವೆಗಳು ಸಿಗುತ್ತವೆ.ರೆಸ್ಸೆಸ್‌ನ ಇಂಗ್ಲಿಷ್ ಮುಖವಾಣಿ ಆರ್ಗನೈಸರ್‌ನ ಮೂರನೆ ಸಂಚಿಕೆಯಲ್ಲಿ (ಜುಲೈ 17, 1947) ರಾಷ್ಟ್ರಧ್ವಜ ಎಂಬ ಹೆಸರಿನ ಒಂದು ಲೇಖನ ಪ್ರಕಟಿಸಿತ್ತು. ಸಂವಿಧಾನ ರಚನಾ ಸಮಿತಿ, ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಆಯ್ಕೆ ಮಾಡಿದ ಕ್ರಮದಿಂದ ವಿಚಲಿತವಾಗಿದ್ದ ಆರೆಸ್ಸೆಸ್, ಕೇಸರಿ ಧ್ವಜವನ್ನು ರಾಷ್ಟ್ರಧ್ವಜವಾಗಿ ಸ್ವೀಕರಿಸುವಂತೆ ಆಗ್ರಹಿಸಿತ್ತು. ಇದೇ ಅಭಿಪ್ರಾಯವನ್ನು ಸ್ವಾತಂತ್ರದ ಮುನ್ನಾದಿನದ ಸಂಚಿಕೆಯ ಸಂಪಾದಕೀಯದಲ್ಲೂ ವ್ಯಕ್ತಪಡಿಸಿತ್ತು. (ಜುಲೈ 31ರ ಸಂಚಿಕೆಯ ಸಂಪಾದಕೀಯ ‘ಹಿಂದೂಸ್ತಾನ್’ ಹಾಗೂಆಗಸ್ಟ್14ರ ಸಂಪದಕೀಯ ‘ವೈಟರ್’) ಇದರಲ್ಲಿ ಸಂಯೋಜಿತ ರಾಷ್ಟ್ರದ ಪರಿಕಲ್ಪನೆಯನ್ನೇ ತಿರಸ್ಕರಿಸಲಾಗಿತ್ತು. ಆಗಸ್ಟ್ 14ರ ಸಂಚಿಕೆ ಭಗವಾಧ್ವಜ ಹಿಂದಿನ ವಿಸ್ಮಯ ಎಂಬ ಇನ್ನೊಂದು ಲೇಖನವನ್ನೂ ಪ್ರಕಟಿಸಿತ್ತು. ದಿಲ್ಲಿಯ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸಬೇಕು ಎಂದು ಆಗ್ರಹಿಸಿ, ತ್ರಿವರ್ಣ ಧ್ವಜಕ್ಕೆ ಈ ಕೆಳಗಿನಂತೆ ಬಹಿರಂಗ ವಿರೋಧ ವ್ಯಕ್ತಪಡಿಸಿತ್ತು. ಅದೃಷ್ಟದ ಆಟದಿಂದ ಅಧಿಕಾರಕ್ಕೆ ಬಂದವರು ನಮ್ಮ ಕೈಗೆ ತ್ರಿವರ್ಣಧ್ವಜ ನೀಡಿರಬಹುದು. ಆದರೆ ಇದನ್ನು ಹಿಂದೂಗಳು ಒಪ್ಪಿಕೊಳ್ಳುವುದೂ ಇಲ್ಲ; ಗೌರವಿಸುವುದೂ ಇಲ್ಲ. ಮೂರು ಎಂಬ ಶಬ್ದವೇ ಅನಿಷ್ಟ. ಆದ್ದರಿಂದ ಮೂರು ಬಣ್ಣದ ಧ್ವಜ ಖಂಡಿತವಾಗಿಯೂ ಕೆಟ್ಟ ಭಾವನೆಗೆ ಕಾರಣವಾಗುತ್ತದೆ
ಸ್ವಾತಂತ್ರ್ಯ ಬಂದು, ತ್ರಿವರ್ಣ ಧ್ವಜ ಅಧಿಕೃತವಾಗಿ ನಮ್ಮ ದೇಶದ ರಾಷ್ಟ್ರಧ್ವಜವಾದ ಬಳಿಕವೂ ಅದನ್ನು ರಾಷ್ಟ್ರಧ್ವಜ ಎಂದು ಸ್ವೀಕರಿಸಲು ಆರೆಸ್ಸೆಸ್ ನಿರಾಕರಿಸಿತು.ರೆಸ್ಸೆಸ್‌ನ ಎರಡನೆ ಮುಖ್ಯಸ್ಥ ಹಾಗೂ ಇಂದಿನವರೆಗೂ ಚಾಲ್ತಿಯಲ್ಲಿರುವ ಆರೆಸ್ಸೆಸ್ ಸಿದ್ಧಾಂತದ ಪ್ರತಿಪಾದಕ ಗೋಲ್ವಾಳ್ಕರ್ 1946ರ ಜುಲೈ 14ರಂದು ನಾಗ್ಪುರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿ, ಕೇಸರಿ ಬಣ್ಣ ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯನ್ನು ಸಮಗ್ರವಾಗಿ ಪ್ರತಿನಿಧಿಸುತ್ತದೆ. ಅದು ದೇವಾಂಶದ ಪರಿಕಲ್ಪನೆಯನ್ನು ಒಳಗೊಂಡಿದೆ. ಅಂತಿಮವಾಗಿ ಇಡೀ ದೇಶ ಕೇಸರಿ ಧ್ವಜಕ್ಕೆ ತಲೆಬಾಗುತ್ತದೆ ಎಂಬ ಅಚಲ ನಂಬಿಕೆ ನಮ್ಮದು ಎಂದು ಹೇಳಿದ್ದರು.

    ಸ್ವಾತಂತ್ರ್ಯ ಬಂದ ಬಳಿಕವೂ ಗೋಲ್ವಾಳ್ಕರ್ ಅವರ ಚಿಂತನೆಗಳ ಗೊಂಚಲು ಕೃತಿಯ ಡ್ರಿಫ್ಟಿಂಗ್ ಅಂಡ್ ಡ್ರಿಫ್ಟಿಂಗ್ ಪ್ರಬಂಧದಲ್ಲಿ, ನಮ್ಮ ನಾಯಕರು ದೇಶಕ್ಕೆ ಹೊಸ ರಾಷ್ಟ್ರಧ್ವಜ ನಿಗದಿ ಮಾಡಿದ್ದಾರೆ. ಯಾಕೆ ಅವರು ಹಾಗೆ ಮಾಡಿದರು? ಅದು ಹುಚ್ಚು ಮತ್ತು ಅನುಕರಣೆ. ನಮ್ಮದು ಪ್ರಾಚೀನ ಹಾಗೂ ಶ್ರೇಷ್ಠ ದೇಶ. ವೈಭವದ ಇತಿಹಾಸ ಹೊಂದಿದೆ. ಹಾಗಿದ್ದ ಮೇಲೆ ನಮ್ಮದೇ ಧ್ವಜ ಇರಲಿಲ್ಲವೇ? ಈ ಸಾವಿರಾರು ವರ್ಷಗಳಿಂದ ರಾಷ್ಟ್ರ ಲಾಂಛನ ಇರಲಿಲ್ಲವೇ? ನಿಸ್ಸಂದೇಹವಾಗಿ ಇತ್ತು. ಹಾಗಿದ್ದ ಮೇಲೆ ಈ ಶೂನ್ಯ ಸ್ಥಿತಿ ಏಕೆ? ಎಂದು ಪ್ರಶ್ನಿಸಿದ್ದರು. ಈ ಕೃತಿಯನ್ನು ಇಂದಿಗೂ ಆರೆಸ್ಸೆಸ್‌ನ ಬೈಬಲ್ ಎಂದು ಪರಿಗಣಿಸಲಾಗುತ್ತದೆ.ನ್ನೂ ಪ್ರಮುಖ ಅಂಶವೆಂದರೆ, ಆರೆಸ್ಸೆಸ್ ಕಾರ್ಯಚಟುವಟಿಕೆಗಳಲ್ಲಿ ಕೂಡಾ ರಾಷ್ಟ್ರಧ್ವಜವನ್ನು ಬಳಸುವುದಿಲ್ಲ. ನಾಗ್ಪುರದ ರೇಷಮ್‌ಬಾಗ್‌ನಲ್ಲಿರುವ ಕೇಂದ್ರ ಕಚೇರಿಯಲ್ಲಾಗಲಿ, ಆರೆಸ್ಸೆಸ್ ಶಾಖೆಗಳ ದೈನಂದಿನ ಕವಾಯತಿನಲ್ಲಾಗಲಿ ರಾಷ್ಟ್ರಧ್ವಜಕ್ಕೆ ಜಾಗವಿಲ್ಲ.ರೆಸ್ಸೆಸ್‌ಗೆ ರಾಷ್ಟ್ರಧ್ವಜ ಎನ್ನುವುದು ಮುಸಲ್ಮಾನರ ವಿರುದ್ಧ ಹುಸಿಭ್ರಮೆ ಹುಟ್ಟಿಸುವ ಅಸ್ತ್ರ. 1991ರ ಏಕತಾ ಯಾತ್ರೆಯಲ್ಲಿ ಆರೆಸ್ಸೆಸ್‌ನ ನಿಷ್ಠಾವಂತ ಮುಖಂಡ ಮುರಳಿ ಮನೋಹರ ಜೋಶಿ, ಕಾಶ್ಮೀರದ ಲಾಲ್‌ಚೌಕದಲ್ಲಿ ತ್ರಿವರ್ಣಧ್ವಜ ಹಾರಿಸಲು ಮುಂದಾದರು. ಹುಬ್ಬಳ್ಳಿಯ ಈದ್ಗಾವನ್ನು ಹಿಂದುತ್ವ ಶಕ್ತಿಗಳು ಗುರಿ ಮಾಡಿದಾಗ ಉಮಾಭಾರತಿ ತ್ರಿವರ್ಣ ಧ್ವಜ ಒಯ್ದರು. ಆದರೆ 1992ರಲ್ಲಿ ಹಿಂದುತ್ವ ಶಕ್ತಿಗಳು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲು ತೆರಳಿದಾಗ ತ್ರಿವರ್ಣ ಧ್ವಜ ಒಯ್ಯಲಿಲ್ಲ. ಅವರು ಕೇಸರಿ ಧ್ವಜ ಒಯ್ದು ಅಲ್ಲಿ ಹಾರಿಸಿದರು.ರೆಸ್ಸೆಸ್ ವಿಚಿತ್ರ ಇಬ್ಬಂದಿತನವನ್ನು ಎದುರಿಸುತ್ತಿದೆ. ಹಿಂದೂಗಳಿಗೆ ಕೇಸರಿ ಧ್ವಜ; ಮುಸ್ಲಿಮರಿಗೆ ತ್ರಿವರ್ಣ ಧ್ವಜ. ಈ ಆಯ್ದ ರಾಷ್ಟ್ರೀಯ ಸಂಕೇತಗಳು ಅವರಿಗೇ ತಿರುಗುಬಾಣವಾಗಿ, ಹಿಂದುತ್ವ ಶಿಬಿರದ ವಾಸ್ತವ ರಚನೆಯನ್ನೇ ನಗ್ನಗೊಳಿಸಲಿದೆ. ಆದರೆ ಒಂದಂತೂ ನಿಜ. ಮುಸಲ್ಮಾನ ಸಮುದಾಯ ಹಿಂದುತ್ವ ಗ್ಯಾಂಗ್‌ಗೆ ಕಾಲಕ್ಷೇಪದ ಆಟಿಕೆ. ಕೋಮು ಧ್ರುವೀಕರಣ, ಅವರ ನೆಚ್ಚಿನ ಅಲ್ಪಾವಧಿ ಹಾಗೂ ದೀರ್ಘಾವಧಿ ಗೀಳು. ಪ್ರಜಾಪ್ರಭುತ್ವದ ದಿನ ಕೂಡಾ.
ಹಿನ್ನೆಲೆರೆಸ್ಸೆಸ್ 1925ರಲ್ಲಿ ಆರಂಭವಾದಾಗಿನಿಂದಲೂ, ಬ್ರಿಟಿಷ್ ಆಡಳಿತ ವಿರುದ್ಧದ ಭಾರತೀಯರ ಸಂಘಟಿತ ಹೋರಾಟವನ್ನು ವಿರೋಧಿಸುತ್ತಾ ಬಂದಿತ್ತು. ಅದರಲ್ಲೂ ತ್ರಿವರ್ಣ ಧ್ವಜದ ವಿಚಾರದಲ್ಲಿ ಅದು ಖಂಡ ತುಂಡವಾಗಿ ನಿರಾಕರಿಸಿತ್ತು. 1929ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಲಾಹೋರ್ ಅಧಿವೇಶದಲ್ಲಿ ಪೂರ್ಣ ಸ್ವರಾಜ್ಯ ಅಥವಾ ಸಂಪೂರ್ಣ ಸ್ವಯಂ ಆಡಳಿತವೇ ದೇಶದ ಗುರಿ ಎಂಬ ನಿರ್ಣಯ ಅಂಗೀಕರಿಸಿತು. 1930ರ ಜನವರಿ 26ನ್ನು ದೇಶದ ಸ್ವಾತಂತ್ರ್ಯ ದಿನವಾಗಿ ಘೋಷಿಸಿ, ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿತು. ತ್ರಿವರ್ಣ ಧ್ವಜವನ್ನು ಆಗ ರಾಷ್ಟ್ರೀಯ ಚಳವಳಿಯ ಧ್ವಜ ಎಂದು ಒಮ್ಮತದಿಂದ ಅಂಗೀಕರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಆರೆಸ್ಸೆಸ್ ಸರ ಸಂಘಚಾಲಕರಾಗಿದ್ದ ಹೆಡಗೇವಾರ್ ಸುತ್ತೋಲೆ ಹೊರಡಿಸಿ, ಎಲ್ಲ ಆರೆಸ್ಸೆಸ್ ಶಾಖೆಗಳು ಭಗವಾಧ್ವಜವನ್ನೇ ರಾಷ್ಟ್ರಧ್ವಜವಾಗಿ ಪೂಜಿಸಬೇಕು ಎಂದು ಸೂಚಿಸಿದರು.ದಕ್ಕೊಂದು ಕುತೂಹಲಕಾರಿ ಅಡಿಟಿಪ್ಪಣಿ ಇದೆ. ಐತಿಹಾಸಿಕ ದಾಖಲೆಗಳಿಂದ ತಿಳಿದು ಬರುವಂತೆ, ಮಹಾತ್ಮ ಗಾಂಧಿಯವರ ಹತ್ಯೆಯಾದ ಬಳಿಕ ಕೂಡಾ ಆರೆಸ್ಸೆಸ್ ತ್ರಿವರ್ಣ ಧ್ವಜದ ಬಗ್ಗೆ ಸಿಟ್ಟು ಪ್ರದರ್ಶಿಸಿತ್ತು. ಇದರಿಂದ ಅವರ ಈ ಮೋಸಗಾರಿಕೆಯ ಇಬ್ಬಂದಿತನ ಸರಳವಾಗಿ ತಿಳಿಯುತ್ತದೆ: ಇತರರಿಗೆ ತಿರಂಗ; ಆದರೆ ತನ್ನ ವಿಚಾರಕ್ಕೆ ಬಂದರೆ ಆರೆಸ್ಸೆಸ್‌ಗೆ ಭಗವಾಧ್ವಜ.

Writer - ಶಂಸುಲ್ ಇಸ್ಲಾಂ

contributor

Editor - ಶಂಸುಲ್ ಇಸ್ಲಾಂ

contributor

Similar News