ನ್ಯಾಯ ಕೇಳಿದ್ದಕ್ಕೆ ಅಂಗಾಂಗಗಳನ್ನು ಕಳೆದುಕೊಂಡ ದಲಿತ

Update: 2016-03-22 17:16 GMT

ಜನವರಿ 5, 2006ರಂದು ಪಂಜಾಬ್‌ನ ಜಬರ್ ಗ್ರಾಮದ ಬಂತ್ ಸಿಂಗ್ ಎಂಬ ದಲಿತ ಕೃಷಿ ಕಾರ್ಮಿಕ ಮತ್ತು ಸಾಮಾಜಿಕ ಕಾರ್ಯಕರ್ತನನ್ನು ಕಬ್ಬಿಣದ ಸಲಾಕೆಗಳು ಮತ್ತು ಕತ್ತಿಗಳನ್ನು ಹಿಡಿದ ಮೇಲ್ಜಾತಿಯ ಜಾಟ್ ಸಮುದಾಯದ ವ್ಯಕ್ತಿಗಳು ಅಡ್ಡ ಹಾಕಿ ದಾರುಣವಾಗಿ ಹಲ್ಲೆ ನಡೆಸಿದರು. ಘಟನೆಯಲ್ಲಿ ಆತ ತನ್ನ ಎರಡೂ ಕೈಗಳನ್ನು ಮತ್ತು ಒಂದು ಕಾಲನ್ನು ಕಳೆದುಕೊಂಡ. ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ನ್ಯಾಯ ಸಿಗುವಂತೆ ಹೋರಾಡಿದ್ದಕ್ಕೆ ಶಿಕ್ಷೆಯಾಗಿತ್ತು ಆತನ ಈ ದುಸ್ಥಿತಿ. ಬಂತ್ ಸಿಂಗ್ ನ ಪ್ರಕರಣವು ಅತ್ಯಂತ ಅಪರೂಪದ್ದಾಗಿತ್ತು, ಯಾಕೆಂದರೆ ಓರ್ವ ದಲಿತನಾಗಿದ್ದ ಆತ ಗ್ರಾಮದ ಸರಪಂಚನನ್ನೇ ಎದುರುಹಾಕಿಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದು ಮಾತ್ರವಲ್ಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದ. ಮತ್ತು ಇದಕ್ಕಾಗಿ ಆತ ಮತ್ತಾತನ ಕುಟುಂಬ ಅತೀಹೆಚ್ಚಿನ ಬೆಲೆಯನ್ನು ಭರಿಸಬೇಕಾಯಿತು. ಯಾಕೆಂದರೆ ಓರ್ವ ದಲಿತ ಮೇಲ್ಜಾತಿಯ ಜಾಟ್ ಮತ್ತಿಬ್ಬರು ಅತ್ಯಾಚಾರ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದ. ಅಷ್ಟಕ್ಕೂ ಓರ್ವ ದಲಿತ ಕಾರ್ಮಿಕನಲ್ಲಿ ಇರುವುದಾದರೂ ಏನು? ಆತನ ಬಳಿ ಹಣವೂ ಇಲ್ಲ ಪ್ರಭಾವವೂ ಇಲ್ಲ. ಆತನ ಬಳಿಯಿರುವುದು ಆತನ ದೇಹ ಮಾತ್ರ. ಅದನ್ನಾತ ಉಪಯೋಗಿಸಿ ತನ್ನ ಮತ್ತು ಕುಟುಂಬದ ಜೀವನ ನಿರ್ವಹಣೆ ಮಾಡಬೇಕು. ಮತ್ತು ದಲಿತ ಮಹಿಳೆಯ ದೇಹವೆಂದರೆ ಅದು ಶೋಷಣೆಗೆ, ಅತ್ಯಾಚಾರಕ್ಕೆ ಸುಲಭವಾಗಿ ಮತ್ತು ಸಹಜವಾಗಿ ಸಿಗುವ ಒಂದು ವಸ್ತುವಿನಂತೆ ಪರಿಗಣಿಸಲಾಗುತ್ತದೆ. ಬಂತ್ ಸಿಂಗ್ ಮತ್ತು ಬಲ್ಜಿತ್ ಳ ವಿಷಯಗಳಲ್ಲಿ ಪೀಡನೆಗೊಳಗಾದ ವಸ್ತುಗಳೆಂದರೆ ಅವರಿಬ್ಬರ ದೇಹಗಳು.

ನಾನು ಪಂಜಾಬ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಕಲಿಯುತ್ತಿದ್ದಾಗ ನನ್ನ ಜಾಟ್ ಹುಡುಗ ಸಹಪಾಠಿ ಹೇಳಿದ ಜೋಕ್ ಹೀಗಿದೆ; ಹಳ್ಳಿಗಳಲ್ಲಿ ಒಬ್ಬ ಅಸ್ಪಶ್ಯ ಯುವತಿಯ ಜೊತೆ (ಆಗ ದಲಿತ ಎಂಬ ಶಬ್ದ ನಮ್ಮ ಹಳ್ಳಿಯಲ್ಲಿ ರೂಢಿಯಲ್ಲಿರಲಿಲ್ಲ) ಲೈಂಗಿಕ ಕ್ರಿಯೆ ನಡೆಸಿದರೆ ಆತ ಅಶುದ್ಧನಾಗುತ್ತಾನೆ ಮತ್ತು ಆತ ಮತ್ತೆ ಶುದ್ಧೀಕರಣಗೊಳ್ಳಲು ಓರ್ವ ಬ್ರಾಹ್ಮಣ ಯುವತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕು!. ಹತ್ತೊಂಬತ್ತರ ಹರೆಯದಲ್ಲಿ ಇದೊಂದು ಸಾಮಾನ್ಯವಾದ ಹಾಸ್ಯಚಟಾಕಿ ಎಂದು ನಾನು ಭಾವಿಸಿದ್ದೆ. ಆದರೆ ಅದರಲ್ಲಿ ನನ್ನನ್ನೇ ಶುದ್ಧೀಕರಣದ ಮಧ್ಯವರ್ತಿ ಎಂದು ಸೂಚಿಸಲಾಗಿತ್ತು ಎಂಬುದನ್ನು ನಾನು ಅರ್ಥಮಾಡಿಕೊಂಡಿರಲಿಲ್ಲ.

ನ್ಯಾಯ ಕೇಳುವುದು

ಜನವರಿ 8ರಂದು ಬಂತ್ ತನ್ನ ಮೂರು ಅಂಗಗಳನ್ನು ಕಳೆದುಕೊಂಡಿದ್ದ ಮತ್ತು ಆತನನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಮತ್ತೊಂದೆಡೆ ಈ ಆಘಾತದಿಂದ ಚೇತರಿಸಿಕೊಂಡ ನಂತರ ಆತನ ಕಾಮ್ರೇಡ್ ಗಳು ನ್ಯಾಯಕ್ಕಾಗಿ ಹೋರಾಟ ಸಂಘಟಿಸುವುದರಲ್ಲಿ ವ್ಯಸ್ಥವಾದರು. ಅದರ ಮೊದಲ ಹಂತವಾಗಿ ಪಿಜಿಐಯ ವೈದ್ಯರು ಬಂತ್ ಸಿಂಗ್ ನ ಪ್ರಾಣ ಅಪಾಯದಲ್ಲಿದೆ ಎಂಬ ಹೇಳಿಕೆಯನ್ನು ನೀಡುವುದರೊಂದಿಗೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನು ಜರಗಿಸಬೇಕೆಂದು ಪೊಲೀಸ್ ಇಲಾಖೆಯನ್ನು ಮನವಿ ಮಾಡುವುದಾಗಿತ್ತು. ಮುಂದಿನ ಹಂತ ಜನವರಿ 11ರಂದು ಚಂಡಿಗಡದ ಸೆಕ್ಟರ್ 22ರಲ್ಲಿರುವ ಪಂಜಾಬ್ ಬುಕ್ ಸೆಂಟರ್ ನ ತಳಮಹಡಿಯಲ್ಲಿ ಪತ್ರಿಕಾಗೋಷ್ಠಿ ಕರೆಯುವುದಾಗಿತ್ತು. ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿ ರಮನೀಂದರ್ ಕೌರ್ ನಡೆದ ಅನ್ಯಾಯದ ವಸ್ತುಸ್ಥಿತಿಯನ್ನು ಕೂಲಂಕಷವಾಗಿ ಬರೆದಿದ್ದರು: ಕಾನೂನು ಭಕ್ಷಕರು ವ್ಯವಸ್ಥೆಯನ್ನು ನಾಶಮಾಡುವ ಕೆಲಸದಲ್ಲಿ ಮೇಲುಗೈ ಸಾಧಿಸಿರುವ ದೇಶದಲ್ಲಿ ಓರ್ವ ಜಮೀನುರಹಿತ ಕೃಷಿ ಕಾರ್ಮಿಕ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಅತ್ಯಾಚಾರಕ್ಕೆ ನ್ಯಾಯ ಪಡೆದಿರುವುದಕ್ಕಾಗಿ ಭರಿಸಬೇಕಾದುದಾದರೂ ಎಷ್ಟು? ನಿಖರವಾಗಿ ಕೇಳುವುದಾದರೆ, ಎರಡು ಕೈಗಳು ಮತ್ತು ಒಂದು ಕಾಲು. ಇತರ ಪತ್ರಿಕೆಗಳೂ ಇದನ್ನೇ ಅನುರಿಸಿದವು ಮತ್ತು ಮನ್ಸಾದ ವರದಿಗಾರರು ಹೇರಿದ್ದ ನಿರ್ಬಂಧ ನಿಧಾನವಾಗಿ ತೆರವುಗೊಂಡಿತು. ಕಾಮ್ರೆಡ್ ಜೀತಾ ಈ ಬಗ್ಗೆ ದುಃಖದಿಂದ ಹೇಳುತ್ತಾನೆ: ದಾಳಿ ನಡೆದ ನಂತರ ನಾವು ಮಾಧ್ಯಮವನ್ನು ಸಂಪರ್ಕಿಸಿದೆವು. ಆದರೆ ಸ್ಥಳೀಯ ಪತ್ರಿಕೆಗಳು ಕೂಡಾ ದಲಿತನ ಮೇಲೆ ಹಲ್ಲೆ ನಡೆದ ಘಟನೆಯನ್ನು ಪ್ರಕಟಿಸಲಿಲ್ಲ. ಆತನ ಅಂಗಾಂಗಗಳನ್ನು ಕತ್ತರಿಸಿದಾಗ ಮಾತ್ರ ಅದೊಂದು ಸುದ್ದಿಯೋಗ್ಯ ಪ್ರಕರಣ ಎಂದು ಪತ್ರಕರ್ತರಿಗೆ ಕಂಡಿತು. ದುರಂತಗಳು ನಿಜವಾಗಿಯೂ ಸುದ್ದಿ ಮಾಡುವುದಕ್ಕೆ ಮಾನದಂಡವಾಗಿದೆ, ಆದರೆ ಬಂತ್ ಸಿಂಗ್ ಬಗೆಗಿನ ವರದಿಗಳು ಜನಾಕ್ರೋಶಕ್ಕೆ ನಾಂದಿ ಹಾಡಿತು ಮತ್ತು ಸಾಮೂಹಿಕ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವಲ್ಲಿ ಸಫಲವಾಯಿತು, ಯಾಕೆಂದರೆ ಅದು ಕೇವಲ ಒಬ್ಬ ವ್ಯಕ್ತಿಯ ಕತೆಯಾಗುಳಿದಿರಲಿಲ್ಲ-ಬಂತ್ ಪಂಜಾಬ್‌ನಲ್ಲಿ ದಲಿತರ ಪ್ರತಿರೋಧದ ಸಂಕೇತವಾಗಿ ಹೊರಹೊಮ್ಮಿದ. 1

930ರಲ್ಲಿ ಜಿನೀವಾ ನಗರದಲ್ಲಿ ಲೀಗ್ ಆಫ್ ನೇಷನ್ಸ್ ಪ್ರೇಕ್ಷಕರ ಗ್ಯಾಲರಿಯಿಂದ ಒಂದು ದೊಡ್ಡ ಶಿಳ್ಳು ಕೇಳಿಬಂದಿತು. ಸಮಿತಿಯ ಅಧ್ಯಕ್ಷರೂ, ಸದಸ್ಯರೆಲ್ಲರೂ ಚಕಿತರಾಗಿ ಶಿಳ್ಳು ಹೊಡೆದ ವ್ಯಕ್ತಿಯತ್ತ ತಿರುಗಿದರು. ಭಾರತೀಯ ಪ್ರತಿನಿಧಿ ಬಿಕನೀರ್ ಮಹಾರಾಜ ತಾನು ಮಾಡುತ್ತಿದ್ದ ಭಾಷಣವನ್ನು ನಿಲ್ಲಿಸಿ ನಿಬ್ಬೆರಗಾಗಿ ಪ್ರೇಕ್ಷಕರ ಗ್ಯಾಲರಿ ಕಡೆ ನೋಡಿದರು. ಆತ ಭಾರತ ದೇಶದಲ್ಲಿನ ಬ್ರಿಟಿಷರ ಆಡಳಿತದ ಶ್ರೇಷ್ಠತೆಯನ್ನು ಕುರಿತು ಭಾಷಣ ಮಾಡುತ್ತಿದ್ದರು. ಬಿಕನೀರ್ ಮಹಾರಾಜ ಲೀಗ್ ಆಫ್ ನೇಷನ್ಸ್ ಒಕ್ಕೂಟದಲ್ಲಿ ಮಾಡುತ್ತಿದ್ದ ಈ ಭಾಷಣಕ್ಕೆ ವಿರೋಧ ಸೂಚಕವಾಗಿ ಶಿಳ್ಳು ಹೊಡೆದವರು ರಾಮಮನೋಹರ ಲೋಹಿಯಾ. ಅನಂತರ ಅವರನ್ನು ಬಲವಂತವಾಗಿ ಹೊರದಬ್ಬಲಾಯಿತು.

ಲೋಹಿಯಾ ಹುಟ್ಟಿದ್ದು 1910 ಮಾರ್ಚ್ 23ರಂದು. ಅವರ ತಂದೆ ಹೀರಾಲಾಲರು ಉತ್ತರ ಪ್ರದೇಶದ ಫೈಝಾಬಾದಿನ ವ್ಯಾಪಾರಿ. ರಾಮ ಮನೋಹರನಿಗೆ ಎರಡೂವರೆ ವರ್ಷವಾಗಿದ್ದಾಗ ತಾಯಿ ತೀರಿಕೊಂಡರು. ಹುಡುಗನ ಅಜ್ಜಿ ಅವನನ್ನು ಸಾಕಿದರು. ತಂದೆಗೆ ಮಹಾತ್ಮ ಗಾಂಧೀಜಿಯಲ್ಲಿ ಬಹಳ ಭಕ್ತಿ ನಿಷ್ಠೆ. ತಮ್ಮ ಮಗ ಒಂಬತ್ತು ವರ್ಷದ ಬಾಲಕನಿದ್ದಾಗಲೇ ಗಾಂಧೀಜಿಯವರ ದರ್ಶನ ಮಾಡಿಸಿದರು. 1923ರಲ್ಲಿ ಬಿಹಾರದ ಗಯಾದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಮಹಾಧಿವೇಶನ ನಡೆಯಿತು. ಆಗ ಎಳೆಯ ಲೋಹಿಯಾ ಕಾಂಗ್ರೆಸ್ ಸ್ವಯಂಸೇವಕ. 1926ರಲ್ಲಿ ನಡೆದ ಗೌಹಾತಿ ಅಧಿವೇಶನಕ್ಕೂ ಹೋಗಿದ್ದರು.

ಲೋಹಿಯಾ ಕಲಿತದ್ದು ಮುಂಬೈ, ಕಾಶಿ ಹಾಗೂ ಕೊಲ್ಕತಾಗಳಲ್ಲಿ. 1925ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲನೆ ದರ್ಜೆ ಯಲ್ಲಿ ತೇರ್ಗಡೆಯಾದರು. ಕಾಶಿ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷ ಅಭ್ಯಾಸ ಮಾಡಿ, ಅನಂತರ ಕೊಲ್ಕತಾದ ವಿದ್ಯಾಸಾಗರ ಕಾಲೇಜನ್ನು ಸೇರಿ 1929ರಲ್ಲಿ ಇಂಗ್ಲಿಷ್ ಭಾಷೆಯ ಆನರ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಇಂಗ್ಲೆಂಡಿನಲ್ಲಿ ಓದುವುದು ಬೇಡವೆನಿಸಿ ಜರ್ಮನಿಗೆ ಹೋದರು. ಲೋಹಿಯಾ ಅವರಿಗೆ ಇಂಗ್ಲಿಷ್ ಭಾಷೆಯಲ್ಲಿ ಅಪಾರವಾದ ಪಾಂಡಿತ್ಯವಿತ್ತು. ಆದರೆ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅವರ ಪ್ರೊಫೆಸರ್ ಪೂರ್ಣವಾಗಿ ಜರ್ಮನ್ ಭಾಷೆಯಲ್ಲಿ ಸಂಭಾಷಿ ಸುತ್ತಿದ್ದರು. ಮೂರು ತಿಂಗಳ ನಂತರ ಪುನಃ ಬಂದು ತಮ್ಮ ಬಳಿ ಕಲಿಯುತ್ತೇನೆಂದು ವಾಗ್ದಾನ ಮಾಡಿ ಹೋದ ಲೋಹಿಯಾ ಜರ್ಮನ್ ಭಾಷೆಯಲ್ಲಿ ಅಪ್ರತಿಮ ಪರಿಣತಿ ಸಾಧಿಸಿ ತಮ್ಮ ಪೋಷಕರಿಗೆ ಅಚ್ಚರಿ ಹುಟ್ಟಿಸಿದರು. ಅಲ್ಲಿ ಆಗ ಹಿಟ್ಲರ್ ಮೇಲುಗೈ ಯಲ್ಲಿದ್ದ. ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಗೆ ಪ್ರಬಂಧ ಬರೆದರು. ವಿಷಯ: ಭಾರತದಲ್ಲಿ ನಡೆದಿದ್ದ ಉಪ್ಪಿನ ಸತ್ಯಾಗ್ರಹ. ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ಎರಡರಲ್ಲೂ ಅವರಿಗೆ ಡಾಕ್ಟರೇಟ್ ಪದವಿ ದೊರೆಯಿತು. 1932ರಲ್ಲಿ ಭಾರತಕ್ಕೆ ಮರಳಿದರು.

 ಆಗ ದೇಶದಾದ್ಯಂತ ಗಾಂಧೀಜಿ ಹೂಡಿದ ಸತ್ಯಾಗ್ರಹ ಹಬ್ಬಿತು. ಲೋಹಿಯಾ ಅದರಲ್ಲಿ ಸೇರಿದರು. ಸೆರೆಮನೆ ವಾಸ ಅವರಿಗೆ ಸಿಕ್ಕ ಬಹುಮಾನ. ಆಗ ಕಾಂಗ್ರೆಸಿನಲ್ಲಿದ್ದ ಹರೆಯದ ಹುಡುಗರು ಒಂದು ಆಲೋಚನೆ ಮಾಡಿದರು. ಹಿರಿಯರ ವೇಗ ಅವರಿಗೆ ಸಾಲದೆನಿಸಿತು. ಬೇಗಬೇಗ ಮುನ್ನುಗ್ಗುವ ತವಕ. ನಾಸ್ಕಿರೋಡ್ ಸೆರೆಮನೆಯಲ್ಲಿ ಇಂತಹ ಹಲವು ತರುಣರು ಒಟ್ಟಿಗೆ ಇದ್ದರು. ಅವರಿಗೆಲ್ಲ ಬಡವರಲ್ಲಿ, ರೈತರಲ್ಲಿ, ಕಾರ್ಮಿಕರಲ್ಲಿ ಬಹಳ ಅನುಕಂಪ. ಅವರ ಏಳಿಗೆಗಾಗಿ ದುಡಿಯುವ ಸಂಕಲ್ಪದಿಂದಾಗಿ ಕಾಂಗ್ರೆಸ್ಸಿನೊಳಗೆ ತರುಣರ ಒಂದು ಗುಂಪು ಕಟ್ಟಿದರು. ಇದರ ಮೂಲಪುರುಷರಲ್ಲಿ ಜಯಪ್ರಕಾಶ ನಾರಾಯಣ, ರಾಮ ಮನೋಹರ ಲೋಹಿಯಾ, ಯುಸುಫ್ ಮೆಹರಲಿ, ಅಚ್ಯುತ ಪಟವರ್ಧನ, ಅಶೋಕ್ ಮೆಹತಾ, ಕಮಲಾ ಭಾಯಿ ಚಟ್ಟೋಪಾಧ್ಯಾಯ, ಆಚಾರ್ಯ ನರೇಂದ್ರ ದೇವ ಮುಂತಾದವರೆಲ್ಲ ಸೇರಿದ್ದರು. ಶ್ರಮಜೀವಿಗಳ ರಾಜ್ಯವನ್ನು ಸ್ಥಾಪಿಸುವ ಕನಸು ಕಂಡರು. ಅದಕ್ಕಾಗಿಯೇ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಬೇಕೆಂದು ಪಟ್ಟು ಹಿಡಿದರು. ಕಾಂಗ್ರೆಸ್ ಸೋಷಿಯಲಿಸ್ಟ್ ಎಂಬ ಪತ್ರಿಕೆಗೆ ಲೋಹಿಯಾ ಸಂಪಾದಕರಾದರು.

ವಿದೇಶ ವ್ಯಾಸಂಗ ಮಾಡಿ ಬಂದಿದ್ದ ರಾಮ ಮನೋಹರರಿಗೆ ಅಂತಾರಾಷ್ಟ್ರೀಯ ವಿಷಯಗಳು ತುಂಬ ಚೆನ್ನಾಗಿ ತಿಳಿದಿದ್ದವು. ಕಾಂಗ್ರೆಸ್, ವಿದೇಶಾಂಗ ಶಾಖೆಯೊಂದನ್ನು ಸ್ಥಾಪಿಸಿತು. ಅದರ ಮೇಲ್ವಿಚಾರಣೆ ಇವರ ಕೈಗೆ ಬಂತು. ಜಗತ್ತಿನ ಬೇರೆಬೇರೆ ದೇಶಗಳ ಪ್ರಗತಿಪರರೊಡನೆ ಕಾಂಗ್ರೆಸ್ಸಿನ ಸಂಬಂಧ ಕಲ್ಪಿಸಿದರು. ವಿದೇಶ ಗಳಲ್ಲಿರುವ ಭಾರತೀಯರ ಹಿತರಕ್ಷಣೆಗೆ ಪ್ರತ್ಯೇಕ ಶಾಖೆ ರಚಿಸಿದರು.

ಲೋಹಿಯಾ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಆಯ್ಕೆ ಆದರು. ದೇಶದಾದ್ಯಂತ ಸಂಚರಿಸಿದರು. ಯುವಜನರನ್ನು ಸ್ವಾತಂತ್ರ ಚಳವಳಿಗೆ ಸೆಳೆದರು. 1938ರಲ್ಲಿ ರಾಜ ದ್ರೋಹದ ಆಪಾದನೆಗೆ ಗುರಿಪಡಿಸಿ ಬ್ರಿಟಿಷರು ಕೊಲ್ಕತಾದಲ್ಲಿ ಇವರನ್ನು ಬಂಧಿಸಿದರು. ಎರಡನೆಯ ಮಹಾಯುದ್ಧಕ್ಕೆ ಭಾರತವನ್ನು ಬಲಾತ್ಕಾರವಾಗಿ ಬ್ರಿಟಿಷರು ಸೆಳೆದಿದ್ದರು. ಡಾ. ಲೋಹಿಯಾ ಯುದ್ಧ ವಿರೋಧಿಯಾಗಿದ್ದರು. ಅವರು ಮಾಡಿದ ಯುದ್ಧ ವಿರೋಧಿ ಭಾಷಣಗಳಿಗಾಗಿ 1940ರಲ್ಲಿ ಅವರನ್ನು ಬ್ರಿಟಿಷ್ ಸರಕಾರ ಮತ್ತೆ ಸೆರೆಮನೆಗೆ ದೂಡಿತು.

1942 ಮಹಾತ್ಮಗಾಂಧೀಜಿ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂದು ಸತ್ಯಾಗ್ರಹ ಪ್ರಾರಂಭಿಸಿದರು. ಆ ವರ್ಷ ಆಗಸ್ಟ್ ಏಳು-ಎಂಟರಂದು ಮುಂಬೈಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಸೇರಿತು. ಅಲ್ಲಿ ‘ಚಲೇ ಜಾವ್’ ನಿರ್ಣಯ ಅಂಗೀಕಾರವಾಯಿತು. ಆಗಸ್ಟ್ 9 ರಂದು ಬೆಳಗಿನ ಜಾವ ಬ್ರಿಟಿಷ್ ಸರಕಾರ ಗಾಂಧೀಜಿ ಮತ್ತು ಇತರ ಎಲ್ಲ ರಾಷ್ಟ್ರನಾಯಕರನ್ನು ಸೆರೆಮನೆಗೆ ಒಯ್ದಿತು. ದೇಶಕ್ಕೆ ಬಾಪೂ ಒಂದು ಮಂತ್ರ ಕೊಟ್ಟರು. ‘ಮಾಡು ಇಲ್ಲವೇ ಮಡಿ’. ಈ ಮಂತ್ರವನ್ನು ಕೇಳಿ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಪ್ರಚಂಡವಾಗಿ ಎದ್ದು ನಿಂತಿತು. ಎಷ್ಟೋ ಮಂದಿ ರಾಷ್ಟ್ರನಾಯಕರು ಸರಕಾರದ ಕಣ್ಣು ತಪ್ಪಿಸಿ ತಲೆಮರೆಸಿಕೊಂಡು ಚಳವಳಿಯನ್ನು ಸಂಘಟಿಸಿದರು. ಅವರಲ್ಲಿ ಲೋಹಿಯಾ ಅಗ್ರಗಣ್ಯರು. ಗುಪ್ತ ಆಕಾಶವಾಣಿ ಕೇಂದ್ರವೊಂದನ್ನು ಅವರು ನಡೆಸಿದರು. ಜಯಪ್ರಕಾಶ ನಾರಾಯಣರೊಡಗೂಡಿ ಭೂಗತ ಚಳವಳಿಯನ್ನು ಸಂಘಟಿಸಿದರು.

1944ರಲ್ಲಿ ಸರಕಾರ ಲೋಹಿಯಾ ಅವರನ್ನು ಬಂಧಿಸಿತು. ಸೆರೆಮನೆಯಲ್ಲಿ ಬಗೆಬಗೆಯ ಚಿತ್ರಹಿಂಸೆಗೆ ಗುರಿಪಡಿಸಿತು. ಒಂದೊಂದು ದಿನ ಒಂದೊಂದು ತೂಕದ ಅಳತೆಯ ಕೈಕೋಳಗಳನ್ನು ತೊಡಿಸುವುದು, ಅವರನ್ನು ಅಧಿಕಾರಿಯ ಕೊಠಡಿಯಲ್ಲಿ ಕೂಡಿಸಿ ಒಂದೇ ಶಬ್ದವನ್ನು ಗಂಟೆಗಟ್ಟಲೆ ಅವರ ಮುಂದೆ ಉಚ್ಚರಿಸುವುದು, ಇಡೀ ರಾತ್ರಿ ಅವರು ಕಣ್ಣನ್ನು ಮುಚ್ಚದಂತೆ ನಿರ್ಬಂಧಿಸುವುದು, ಅವರು ಕಣ್ಣು ಮುಚ್ಚಿದರೆ ತಲೆ ಹಿಡಿದು ಸುತ್ತಿಸುವುದು ಇಲ್ಲವೆ ಕೈಕೋಳಗಳನ್ನು ಜಗ್ಗುವುದು, ನಾಲ್ಕೈದು ರಾತ್ರಿ ಅವರು ನಿದ್ರೆ ಮಾಡದಂತೆ ಪಕ್ಕದಲ್ಲೆ ಲೋಹದ ತುಂಡಿನಿಂದ ಮೇಜನ್ನು ಕುಟ್ಟುವುದು, ಅವರ ಎದುರಿಗೆ ರಾಷ್ಟ್ರೀಯ ನಾಯಕರನ್ನು ಬಾಯಿಗೆ ಬಂದಂತೆ ಬೈಯುವುದು-ಹೀಗೆ ವಿಧವಿಧವಾಗಿ ಅವರಿಗೆ ಹಿಂಸೆ. ಆಯಾಸಗೊಂಡಿದ್ದ ನಿಶ್ಯಕ್ತರಾಗಿದ್ದ ಲೋಹಿಯಾ, ಗಾಂಧೀಜಿಯನ್ನು ಬೈಯುತ್ತಿದ್ದ ಅಧಿಕಾರಿಗೆ ‘ಮುಚ್ಚು ಬಾಯಿ’ ಎಂದು ಗುಡುಗಿದರು. ಪೊಲೀಸಿನವನು ಎಗರಾಡಿದ. ಆದರೆ ಮತ್ತೆ ಹಾಗೆ ಮಾಡಲಿಲ್ಲ. ಕಡೆಗೆ 1946ರಲ್ಲಿ ಅವರ ಬಿಡುಗಡೆ ಆಯಿತು.

ಆ ವೇಳೆಗಾಗಲೇ ಭಾರತದ ಸ್ವಾತಂತ್ರ್ರ ಹತ್ತಿರ ಬಂದಿತ್ತು. ಬ್ರಿಟಿಷರ ಗುಲಾಮಗಿರಿ ತಪ್ಪಿದರೂ ಪೋರ್ಚುಗೀಸರ ಗುಲಾಮಗಿರಿ ತಪ್ಪುವಂತಿರಲಿಲ್ಲ. ಗೋವೆ, ದೀಮ್, ದಾಮನ್ ಈ ಭಾಗಗಳನ್ನು ನಾನೂರೈವತ್ತು ವರ್ಷಗಳಿಂದ ಪೋರ್ಚುಗೀಸ್ ಸಾಮ್ರಾಜ್ಯ ಶಾಹಿಗಳು ಆಳುತ್ತಿದ್ದರು. ಬ್ರಿಟಿಷರಿಗಿಂತ ಅವರ ಆಳ್ವಿಗೆ ಘೋರವಾಗಿತ್ತು. 1946ರಲ್ಲಿ ಸೆರೆಮನೆಯಿಂದ ಹೊರಬಂದ ಕೂಡಲೇ ಲೋಹಿಯಾ ಅವರ ಗಮನ ಗೋವೆಯ ಕಡೆ ತಿರುಗಿತು. ಕರ್ನಾಟಕದ ಬೆಳಗಾವಿ ನಗರಕ್ಕೆ ಬಂದರು. ಗೋವೆಯಲ್ಲಿ ಚಳವಳಿ ನಡೆಸಲು ಸಂಘಟನೆಗೆ ತೊಡಗಿದರು. ಗೋವೆಯನ್ನು ಪ್ರವೇಶಿಸಿದರು. ಪೋರ್ಚುಗೀಸ್ ಸರಕಾರ ಅವರನ್ನು ಬಂಧಿಸಿ ಹೊರದೂಡಿತು. ಹೀಗೆ ಗೋವೆಯ ವಿಮೋಚನೆಗೆ ಲೋಹಿಯಾ ತಳಹದಿ ಹಾಕಿದರು.

ಅತ್ತ ಉತ್ತರದ ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳ; ಅಲ್ಲಿ ರಾಣಾ ಮನೆತನದ ದಬ್ಬಾಳಿಕೆ. ನೇಪಾಳದ ತರುಣರು ಕಾಶಿಯಲ್ಲಿ ಕಲಿತವರು. ಅವರಿಗೆಲ್ಲ ಲೋಹಿಯಾ ರಾಜಕೀಯ ಗುರು. ನೇಪಾಳದಲ್ಲಿ ರಾಣಾಶಾಹಿಯ ಅಂತಕ್ಕಾಗಿ ನಡೆದ ಚಳವಳಿಗೆ ಇವರದೇ ಸ್ಫೂರ್ತಿ.

1947ರಲ್ಲಿ ದೇಶ ವಿಭಜನೆಯಾದ ದುರಂತ ಕಂಡು ಲೋಹಿಯಾ ಕಸಿವಿಸಿಗೊಂಡರು. 1948 ಜನವರಿ 30ರಂದು ಗಾಂಧೀಜಿಯ ಕೊಲೆ ಆಯಿತು. ದೇಶದಾದ್ಯಂತ ಕೋಮುವಾರು ವಿಷಜ್ವಾಲೆ ಆವರಿಸಿತು. ಈ ಸಂದರ್ಭದಲ್ಲಿ ಕಾಂಗ್ರೆಸಿನ ಹಿರಿಯ ನಾಯಕರು ಅನುಸರಿಸಿದ ನೀತಿ ಕಾಂಗ್ರೆಸ್ ಸಮಾಜವಾದಿ ಪಕ್ಷಕ್ಕೆ ಸರಿತೋರಲಿಲ್ಲ. ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಶ್ರಮಜೀವಿಗಳ ಸಂಘಟನೆಗೆ ಸಮಾಜವಾದಿಗಳು ಸಂಕಲ್ಪ ತಳೆದರು. ಆ ವರ್ಷ ಎಪ್ರಿಲ್ 15ರಂದು ಕಾಂಗ್ರೆಸ್ಸನ್ನು ತೊರೆದು ಸಮಾಜವಾದಿಗಳೆಲ್ಲ ಹೊರಬಂದರು. ತಮ್ಮದೇ ಆದ ಪ್ರತ್ಯೇಕ ಪಕ್ಷ ರಚಿಸಿದರು. ಅವರ ಅಗ್ರ ನಾಯಕರಲ್ಲಿ ಲೋಹಿಯಾ ಒಬ್ಬರಾದರು.

ಅನಂತರ ದೇಶಾದ್ಯಂತ ಲೋಹಿಯಾ ಸಂಚಾರ ಕೈಗೊಂಡರು. ಜವಾಹರಲಾಲ್ ನೆಹರೂ ಅವರ ಸರಕಾರ ಅನುಸರಿಸುತ್ತಿದ್ದ ಧೋರಣೆಗಳನ್ನು ಉಗ್ರವಾಗಿ ಟೀಕಿಸಿದರು. ತಮ್ಮದೇ ಆದ ರೀತಿಯಲ್ಲಿ ಸಮಾಜವಾದಿ ಪಕ್ಷದ ನೀತಿ ನಿಲುವುಗಳನ್ನು ಪ್ರತಿಪಾದಿಸಿದರು. ದೇಶದ ಯುವಜನರ ಮನಸ್ಸನ್ನು ಸೂರೆಗೊಂಡರು.

Writer - ನಿರುಪಮಾ ದತ್ತ್

contributor

Editor - ನಿರುಪಮಾ ದತ್ತ್

contributor

Similar News