ಈ ಪುಟ್ಟ ಗಲ್ಫ್ ದೇಶಕ್ಕೆ ಜಗತ್ತಿನ ಸುರಕ್ಷಿತ ತಾಣ ಎಂಬ ಹೆಗ್ಗಳಿಕೆ
Update: 2016-03-23 05:42 GMT
ಕತಾರ್ ವಿಶ್ವದ ಎರಡನೇ ಅತ್ಯಂತ ಸುರಕ್ಷಿತ ದೇಶ. ಗೋಲ್ಡನ್ ವೀಸಾ 2015 ವಿಶ್ವ ಸುರಕ್ಷತಾ ಸೂಚ್ಯಂಕದ ಪ್ರಕಾರ 10 ಪ್ರಮುಖ ಮಾನದಂಡಗಳ ಪೈಕಿ ಅಪರಾಧ ಮಟ್ಟ, ನಿರುದ್ಯೋಗ, ಜಾಗತಿಕ ದಾಳಿ ಅಪಾಯ ಹೀಗೆ ಮೂರರಲ್ಲಿ ಕತಾರ್ ಅಗ್ರ.
ಇಲ್ಲಿ ನಿರುದ್ಯೋಗ ಸಮಸ್ಯೆ ಕನಿಷ್ಠ; ಉಗ್ರ ದಾಳಿಯ ಭೀತಿ ಸೀಮಿತ ಹಾಗೂ ನೈಸರ್ಗಿಕ ವಿಕೋಪಗಳ ಸಾಧ್ಯತೆ ವಿರಳ. ಆದರೆ ಮಾಲಿನ್ಯದ ವಿಚಾರಕ್ಕೆ ಬಂದರೆ 70 ದೇಶಗಳ ಪೈಕಿ ಕತಾರ್‌ಗೆ 66ನೇ ರ್ಯಾಂಕ್.
ಒಟ್ಟಾರೆ ಸುರಕ್ಷಾ ಸೂಚ್ಯಂಕದಲ್ಲಿ ಸಿಂಗಾಪುರ ಪ್ರಥಮ. ಉಳಿದ ಅಗ್ರ ಐದರಲ್ಲಿ ಯೂರೋಪಿಯನ್ ಪ್ರಾಬಲ್ಯ. ಸ್ವಿಡ್ಜರ್‌ಲೆಂಡ್ (3), ಡೆನ್ಮಾರ್ಕ್ (4) ಹಾಗೂ ಜರ್ಮನಿ (5) ಪಟ್ಟಿಯಲ್ಲಿ ಮುಂದಿವೆ. ಅಗ್ರ 24 ರ್ಯಾಂಕಿಂಗ್ ಮಾತ್ರ ಈ ಬಾರಿ ನೀಡಲಾಗಿದೆ.