ದೇವರಿಗಿಂತ ಜಾತಿ ದೊಡ್ಡದು-ಜೀವಕ್ಕಿಂತ ಮರ್ಯಾದೆ ಹೆಚ್ಚು!
ತಮಿಳುನಾಡಿನ ಸ್ವಯಂಘೋಷಿತ ವಕೀಲ ಅರುಣ್‌ಕುಮಾರ್ ವಿಳ್ಳುಪುರಂ ವಿಲಕ್ಷಣವಾದ ಪೇಸ್‌ಬುಕ್ ಪೋಸ್ಟ್ ಮಾಡಿದರು. ನೀವು ಮರ್ಯಾದಾ ಹತ್ಯೆ ಮಾಡಿದ್ದರೆ ಹೆದರಬೇಡಿ. ನನ್ನ ಬಳಿಗೆ ಬನ್ನಿ. ನಾನು ಪ್ರಕರಣವನ್ನು ತೆಗೆದುಕೊಂಡು ನಿಮ್ಮನ್ನು ರಕ್ಷಿಸುತ್ತೇನೆ. ಮರ್ಯಾದಾ ಹತ್ಯೆ ಎನ್ನುವ ಅಪರಾಧವೇ ಇಲ್ಲ ಎಂಬ ಪೋಸ್ಟಿಂಗ್‌ನಲ್ಲಿ ವಕೀಲನ ಇ-ಮೇಲ್ ವಿಳಾಸವೂ ಇತ್ತು.
ಅಷ್ಟಾಗಿಯೂ ಹತ್ಯೆ ಎನ್ನುವುದು ಮರ್ಯಾದೆಯನ್ನು ಉಲ್ಲಂಘಿಸಿದ್ದಕ್ಕೆ ನೀಡುವ ಶಿಕ್ಷೆ. ಮರ್ಯಾದೆಯನ್ನು ಹತ್ಯೆ ಮಾಡಿದ ವರನ್ನು ಕೊಲ್ಲುವ ಎಲ್ಲ ಅಧಿಕಾರವೂ ತಂದೆ- ತಾಯಿಗೆ ಇದೆ. ಚೆನ್ನೈ ಮೂಲದ ಗೀತಾ ನಾರಾಯಣನ್ ತಕ್ಷಣ ಆ ಪೋಸ್ಟ್ ಹಂಚಿಕೊಂಡು ಮಾಡಿ, ಚೆನ್ನೈ ಪೊಲೀಸ್ ಆಯುಕ್ತ ರಿಗೆ ಜೋಡಿಸಿದರು. ಎರಡು ದಿನದಲ್ಲಿ ಚೆನ್ನೈ ವಕೀಲರೊಬ್ಬರು ಅವರಿಗೆ ನೋಟಿಸ್ ಕಳುಹಿಸಿದ ಬಳಿಕ ಆ ಪೋಸ್ಟಿಂಗ್ ವಾಪಸು ಪಡೆದು, ಪೇಸ್‌ಬುಕ್ ಖಾತೆ ರದ್ದುಪಡಿಸಲಾಯಿತು.
ಆದರೆ ಅರುಣ್‌ಕುಮಾರ್ ಇಂತಹ ನೂರಾರು ಖಾತೆದಾ ರರ ಪೈಕಿ ಕೇವಲ ಒಬ್ಬರು. ಹಲವು ಮಂದಿ ದಲಿತ ಯುವಕ ಶಂಕರ್ ಹತ್ಯೆಗಾಗಿ ಹಂತಕರಿಗೆ ಅಭಿನಂದನೆ ಸಲ್ಲಿಸಿದರು. ಶಂಕರ್‌ನನ್ನು ಆಕೆಯ ಮೇಲ್ಜಾತಿಯ ಪತ್ನಿ ಕೌಸಲ್ಯಾ ಅವರ ಕುಟುಂಬದವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
2013ರಿಂದೀಚೆಗೆ ತಮಿಳುನಾಡಿನಲ್ಲಿ ಜಾತಿ ಕಟ್ಟಳೆಗಳನ್ನು ಮೀರಿ ವಿವಾಹ ಬಂಧನಕ್ಕೆ ಒಳಪಟ್ಟ ಅಥವಾ ಪ್ರೀತಿಸಿದ ಇಂತಹ 80ಕ್ಕೂ ಹೆಚ್ಚು ಯುವಕ- ಯುವತಿಯರು ಹತ್ಯೆಗೀಡಾಗಿದ್ದಾರೆ. ಆದರೆ ಇದುವರೆಗೂ ಒಂದು ಪ್ರಕರಣದಲ್ಲೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಬಹುತೇಕ ಸಂತ್ರಸ್ತರು ಯುವತಿಯರು. ಸಾಮಾನ್ಯವಾಗಿ ಇವರನ್ನು ಸಾರ್ವಜನಿಕವಾಗಿಯೇ ಹತ್ಯೆ ಮಾಡಲಾಗಿದೆ ಅಥವಾ ಅನಿವಾರ್ಯವಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂಥ ವಾತಾವರಣ ಸೃಷ್ಟಿಸಲಾಗಿದೆ. ದಲಿತ ಯುವಕರನ್ನು ಮದುವೆಯಾದ್ದಕ್ಕೆ ಅಥವಾ ಪ್ರೀತಿಸಿದ್ದಕ್ಕೆ ಕುಟುಂಬದವರೇ ಈ ಶಿಕ್ಷೆ ನೀಡಿರುವ ಪ್ರಕರಣಗಳೇ ಅಧಿಕ.
ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗದಿರಲು ಪ್ರಮುಖ ಕಾರಣವೆಂದರೆ, ಈ ಹಿಂಸಾಪ್ರವೃತ್ತಿಯ ಕುಟುಂಬಗಳು ಆಡಳಿತ ಯಂತ್ರ ಹಾಗೂ ಪೊಲೀಸರ ಸಹಕಾರ ಪಡೆದು ಪ್ರಕರಣವನ್ನು ಮುಚ್ಚಿಹಾಕುತ್ತಿರುವುದು. ದಲಿತ ಹತ್ಯೆಗೀಡಾದರೆ, ಆತನ ಕುಟುಂಬ ಪ್ರಕರಣವನ್ನು ನ್ಯಾಯಾಲಯದಲ್ಲಿ ಮುಂದು ವರಿಸುತ್ತದೆ. ನಿಮ್ಮ ಮಗಳ ಜೀವಕ್ಕಿಂತ ಜಾತಿ ಮುಖ್ಯವೇ ಎಂದು ನಿಗೂಢವಾಗಿ ಕೊಲೆಯಾದ ಯುವತಿಯ ತಂದೆಯೊ ಬ್ಬರನ್ನು ಪ್ರಶ್ನಿಸಿದೆ ಎಂದು ಮಧುರೈ ಮೂಲದ ಎವಿಡೆನ್ಸ್ ಎಂಬ ಸ್ವಯಂಸೇವಾ ಸಂಸ್ಥೆಯ ಖತೀರ್ ಹೇಳುತ್ತಾರೆ. ದಲಿತರ ವಿರುದ್ಧದ ದೌರ್ಜನ್ಯದ ವಿರುದ್ಧ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಹೌದು ಎನ್ನುವುದು ಅವರ ಉತ್ತರವಾಗಿತ್ತು. ಜಾತಿ ದೇವರಿಗಿಂತಲೂ ದೊಡ್ಡದು. ಏಕೆಂದರೆ ದೇವರನ್ನಾಗಿ ಮಾಡಿರುವುದೇ ಜಾತಿ.
ರಾಜಕೀಯ ಪಕ್ಷಗಳ ಜಾಣವೌನ: ರಾಜ್ಯದಲ್ಲಿ ಜಾತಿ ಆಧರಿತವಾಗಿರುವ ಎರಡು ಪ್ರಮುಖ ರಾಜಕೀಯ ಪಕ್ಷ ಗಳಾದ ಎಐಎಡಿಎಂಕೆ ಹಾಗೂ ಡಿಎಂಕೆ ಈ ವಿಷಯದ ಬಗ್ಗೆ ಜಾಣ ವೌನ ವಹಿಸಿವೆ.
ಪಟ್ಟಾಲಿ ಮಕ್ಕಳ್ ಕಚ್ಚಿ ಮುಖಂಡ, ವನ್ನಿಯಾರ್ ಸಮುದಾಯದ ರಾಮದಾಸ್, ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಹತ್ಯೆ ಬಗ್ಗೆ ಪ್ರಶ್ನಿಸಿದಾಗ ಎದ್ದು ಹೊರನ ಡೆದಿದ್ದರು. ದಲಿತರು ಹಾಗೂ ವನ್ನಿಯಾರ್ ಸಮುದಾಯದ ನಡುವಿನ ಪ್ರೇಮ ಪ್ರಕರಣಗಳ ಹಿನ್ನೆಲೆಯಲ್ಲಿ ಪಿಎಂಕೆ ಕಾರ್ಯಕರ್ತರು ದಲಿತರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಎಂಡಿಎಂಕೆ ಸಂಸ್ಥಾಪಕ ವೈಕೊ ಮಾತ್ರ ಇಂತಹ ಅನಿಷ್ಟ ಪದ್ಧತಿ ವಿರುದ್ಧ ಧ್ವನಿ ಎತ್ತಿದ್ದಾರೆ.
ದ್ರಾವಿಡ ಚಳವಳಿಗೆ ಹೆಸರಾದ ರಾಜ್ಯದಲ್ಲಿ ಇನ್ನೂ ಜಾತಿ ಪದ್ಧತಿ ಹೇಗೆ ಉಳಿದುಕೊಂಡಿರಲು ಸಾಧ್ಯ? ಬ್ರಾಹ್ಮಣೇತರ ಚಳವಳಿಗಳ ವೌಲ್ಯಗಳು ಹೊರನೋಟಕ್ಕೆ ಬ್ರಾಹ್ಮಣ ವಿರೋಧಿಯಾಗಿದ್ದರೂ, ಸೂಚ್ಯವಾಗಿ ದಲಿತ ವಿರೋಧಿ ಎಂದು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಸಂಶೋಧನಾ ವಿದ್ಯಾರ್ಥಿ, ಸಿ.ಲಕ್ಷ್ಮಣನ್ ಹೇಳುತ್ತಾರೆ.
ಬ್ರಾಹ್ಮಣೇತರ ಮಧ್ಯಮವರ್ಗದ ಜಾತಿಗಳು ಪ್ರಬಲವಾಗಿ ಬೆಳೆದಂತೆಲ್ಲ, ಅವು ಕೂಡಾ ಊಳಿಗಮಾನ್ಯ, ಶ್ರೇಣೀಕೃತ ವೌಲ್ಯಗಳನ್ನು ಅಳವಡಿಸಿಕೊಂಡಿವೆ. ಜತೆಗೆ ದಲಿತರ ವಿರುದ್ಧ ತಾರತಮ್ಯವನ್ನೂ ಮುಂದುವರಿಸುತ್ತಿವೆ. ಪೊಲೀಸ್ ಇಲಾಖೆಯ ಅಧಿಕೃತ ಅಂಕಿ ಅಂಶಗಳ ಅನ್ವಯ, 2012ರಲ್ಲಿ ಜಾತಿ ಕಾರಣಕ್ಕಾಗಿ ಆಗಿರುವ ಹತ್ಯೆ 12. 2013ರಲ್ಲಿ 7 ಹಾಗೂ 2014 ರಲ್ಲಿ 18. ಪ್ರೇಮ ಪ್ರಕರಣ ಅಥವಾ ಲೈಂಗಿಕ ಕಾರಣಗಳಿಂದ ನಡೆದ ಹತ್ಯೆಗಳು 2012ರಲ್ಲಿ 321, 2013ರಲ್ಲಿ 351 ಹಾಗೂ 2015ರಲ್ಲಿ 320. ಆಡಳಿತಯಂತ್ರ, ನ್ಯಾಯಾಲಯ, ಪೊಲೀಸ್, ರಾಜಕೀಯ ಪಕ್ಷ ಹಾಗೂ ಆರ್ಥಿಕತೆಯಲ್ಲಿ ಜಾತಿ ಪ್ರಾಬಲ್ಯ ಇರುವ ಪಶ್ಚಿಮ, ದಕ್ಷಿಣ ಹಾಗೂ ಕೇಂದ್ರ ತಮಿಳುನಾಡಿನಲ್ಲಿ ಇಂತಹ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.
ಇಂತಹ ಸ್ಪಷ್ಟ ಪುರಾವೆಗಳಿದ್ದರೂ, ರಾಜ್ಯ ಸಎಕಾರ ಮಾತ್ರ ಇದನ್ನು ನಿರಾಕರಿಸುತ್ತಲೇ ಇದೆ. 2012ರಲ್ಲಿ ರಾಜ್ಯದಲ್ಲಿ ನಡೆದ ಮರ್ಯಾದಾ ಹತ್ಯೆಗಳ ಬಗ್ಗೆ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸದ ಹಲವು ರಾಜ್ಯಗಳ ಪೈಕಿ ತಮಿಳುನಾಡು ಕೂಡಾ ಸೇರಿದೆ.
ಚಲನಚಿತ್ರಗಳಲ್ಲಿ ಕೆಲ ಜಾತಿಗಳು ಊಳಿಗಮಾನ್ಯ ಪದ್ಧತಿಗೆ ಹಿಂದಿರುಗುತ್ತಿರುವ ಚಿತ್ರಣವನ್ನು ವೈಭವೀಕರಿಸಲಾಗುತ್ತಿದೆ. ಈ ಚಲನಚಿತ್ರ ರಂಗ ಹಾಗೂ ರಾಜಕೀಯದಲ್ಲಿ ಇವರು ಹೊಂದಿರುವ ಪ್ರಾಬಲ್ಯ ಈ ಮನೋಸ್ಥಿತಿಗೆ ಕಾರಣ ಎಂದು ನಾರಾಯಣನ್ ವಿವರಿಸುತ್ತಾರೆ.
2015ರ ಜುಲೈನಲ್ಲಿ ಪ್ರಬಲ ಗೌಡರ್ ಜಾತಿಯ ಮಹಿಳೆ ಯ ಜತೆ ಮಾತನಾಡಿದ್ದಕ್ಕಾಗಿ ಗೋಕುಲ್‌ರಾಜ್ ಎಂಬ ದಲಿತನ ಹತ್ಯೆಯಾಗಿತ್ತು. ಗೌಡರ್ ಯುವ ಸಂಘಟನೆಯ ಸಂಸ್ಥಾಪಕ ಹಾಗೂ ಈ ಹತ್ಯೆಯ ಆರೋಪಿ ಯುವರಾಜ್, ಆರು ತಿಂಗಳ ಕಾಲ ಬಂಧನವಾಗದಂತೆ ನೋಡಿಕೊಂಡರು. ಬಳಿಕ ನೂರಾರು ಮಂದಿ ಬೆಂಬಲಿಗರ ಸಮ್ಮುಖದಲ್ಲಿ ಶರಣಾಗತಿಯ ನಾಟಕವಾಡಿ ಪೊಲೀಸ್ ಇಲಾಖೆಗೆ ಇರಿಸು ಮುರಿಸು ಉಂಟುಮಾಡಿದರು.
ಇಂತಹ ಹತ್ಯೆ ಮುಂದುವರಿಯಲು ಮತ್ತು ಅಧಿಕೃತವಾಗಿ ನಿರಾಕರಣೆಗೆ ಮುಖ್ಯ ಕಾರಣವೆಂದರೆ, ಇದಕ್ಕೆ ಸಂಬಂಧಿಸಿದ ವನ್ನಿಯಾರ್, ಗೌಡರ್ ಹಾಗೂ ಥೇವರ ಜನಾಂಗದ ಪ್ರಬಲ ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ಎಂದು ಹೋರಾಟಗಾರ ಪ್ರಭಾಕರ್ ಹೇಳುತ್ತಾರೆ.