‘ರಾ’ ಏಜೆಂಟ್ ಬಂಧನದ ಹಿನ್ನೆಲೆಯಲ್ಲಿ....

Update: 2016-03-28 18:20 GMT

ಭಾರತದ ಗೂಢಚಾರನೊಬ್ಬನನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಅದರಲ್ಲಿ ಹೊಸತೇನೂ ಇಲ್ಲ. ಇದೆಲ್ಲ ಆಟದ ಒಂದು ಭಾಗ ಎಂದು ಹೇಳುತ್ತಾರೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ (ರಾ) ಮಾಜಿ ಮುಖ್ಯಸ್ಥ ಎ.ಎಸ್. ದುಲತ್. ಈ ಪ್ರಕರಣಗಳ ವಿವರಣೆಗಳು ಅದರ ಪರಿಣಾಮಕ್ಕಿಂತಲೂ ಹೆಚ್ಚು ಆಸಕ್ತಿದಾಯಕವಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುವವರು ನಿಜವಾದ ಗೂಢಚಾರರಲ್ಲ, ಅವರು ತೀರಾ ಅಪಾಯಕಾರಿಯಾದ ಕ್ಷೇತ್ರದಲ್ಲಿ ಹೊರಗೆ ಬರುವುದೇ ಅಪರೂಪ, ಆದರೆ ಅವರ ಜಾಲದಲ್ಲಿ ಇರುವ ಏಜೆಂಟ್‌ಗಳು ಬಂಧನಕ್ಕೊಳಗಾಗುತ್ತಾರೆ. ಇನ್ನು ಅಫ್ಘಾನ್-ಪಾಕ್ ಗಡಿಯಲ್ಲಿರುವ ಪಟ್ಟಣ ಚಮನ್‌ನಲ್ಲಿ ಬಂಧಿತನಾದ ಮತ್ತು ಪಾಕಿಸ್ತಾನವು ‘ರಾ’ ಏಜೆಂಟ್ ಎಂದು ಹೇಳಿಕೊಳ್ಳುತ್ತಿರುವ ಕುಲಭೂಷಣ್ ಜಾಧವ್ ನಿಜಕ್ಕೂ ಯಾರು ಎಂಬುವದರ ಬಗ್ಗೆ ಗೊಂದಲವುಂಟಾಗಿದೆ.

ಇನ್ನೂ ಆಸಕ್ತಿಕರ ವಿಷಯವೆಂದರೆ ಈತ ಕೆಲವು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಯಲ್ಲಿದ್ದ ಎಂದು ಭಾರತವು ಅಧಿಕೃತವಾಗಿ ಬಹಿರಂಗಪಡಿಸಿದೆ ಮತ್ತು ಮುಂಬೈ ಪೊಲೀಸ್ ಇಲಾಖೆಯಲ್ಲಿ ಆತನ ಕೌಟಿಂಬಿಕ ಸಂಪರ್ಕವಿದೆ ಎಂದು ಹೇಳಿಕೊಂಡಿದೆ. ಆತನ ಪಾಸ್‌ಪೋರ್ಟ್‌ನ ಫೋಟೊಗಳನ್ನು ಕೂಡಾ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಆತನ ನಕಲಿ ಹೆಸರು ನಮೂದಿಸಲಾಗಿರುವುದನ್ನು ಸೂಚಿಸಲಾಗಿದೆ. ಆತನ ಬಳಿ ಇರಾನ್‌ನ ವೀಸಾ ಇದ್ದ ಕಾರಣ ಮತ್ತು ನಿಖರವಾಗಿ ಚಬಹರ್ ಬಂದರು ಟ್ರಸ್ಟ್ ಎಂದು ಇದ್ದ ಕಾರಣ, ಮಾಜಿ ನೌಕಾಪಡೆಯ ಸಿಬ್ಬಂದಿಯೊಬ್ಬ ಅಲ್ಲಿನ ಬಂದರು ಪ್ರದೇಶದಲ್ಲಿ ಸಲಹೆಗಾರನಾಗಿ ಕೆಲಸ ಮಾಡುತ್ತಿರಬಹುದು ಎಂದು ತಿಳಿಯಬಹುದು ಮತ್ತು ಈತನ ಸಲಹಾ ಸಂಸ್ಥೆ ಬಲೂಚಿಸ್ತಾನದವರೆಗೂ ಹರಡಿರಬಹುದು ಎಂಬುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಿಲ್ಲ. ನೌಕಾಪಡೆಯ ಓರ್ವ ಮಾಜಿ ಸಿಬ್ಬಂದಿಯಾಗಿರುವ ಕಾರಣ ಬೇಹುಗಾರಿಕಾ ವೃತ್ತಿಪರರು ತಮ್ಮ ಗುಪ್ತಚರ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಲು ಈತನಿಂದ ಕೆಲವೊಂದು ವಿಷಯಗಳ ಬಗ್ಗೆ ತಲೆತಿನ್ನುತ್ತಿರಬಹುದು.

ಹಾಗಾಗಿ ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಈತನನ್ನು ಬಂಧಿಸುವಾಗ ಒತ್ತಡಕ್ಕೊಳಗಾಗಿ ಆತ ‘ರಾ’ ದಲ್ಲಿರುವ ತನ್ನ ಗೆಳೆಯನ ಹೆಸರನ್ನು ಬಾಯ್ಬಿಟ್ಟಿರಬಹುದು. ಹೌದು ನನಗೆ ಇಂತಿಂಥಾ ವ್ಯಕ್ತಿ ಗೊತ್ತು ಎಂದಾತ ಹೇಳಿರಬಹುದು. ಆದರೆ ಆತನನ್ನು ‘ರಾ’ ಏಜೆಂಟ್ ಎಂದು ಕರೆಯುವುದು ಪಾಕಿಸ್ತಾನದ ತರ್ಕಬಾಹಿರವಾದ ನಿಲುವು ಎಂದೇ ಹೇಳಬಹುದು.

ಗೂಢಚಾರರು ಮತ್ತು ಮೂಲಗಳು

ಸಾಮಾನ್ಯ ಮಾಧ್ಯಮ ವೀಕ್ಷಕರಿಗೆ, ತನ್ನ ವ್ಯವಹಾರದ ಮಧ್ಯೆ ತನಗೆ ತಿಳಿದಿರುವ ಸಾಮಾನ್ಯ ಮಾಹಿತಿಗಳನ್ನು ನೀಡುವ ಮತ್ತು ಕ್ಯಾಮರಾ ಮತ್ತು ಸ್ಫೋಟಕಗಳನ್ನು ಹಂಚುತ್ತಾ ಸಾಗುವವ ಮತ್ತು ಇಂಟರ್-ಸರ್ವಿಸಸ್ ಇಂಟಲಿಜೆನ್ಸ್ ಅಥವಾ ಐಎಸ್‌ಐ ಏಜೆಂಟ್‌ಗಳಾಗಿ ಜನರನ್ನು ನಿಯೋಜಿಸುವ ವ್ಯಕ್ತಿಗಳ ಮಧ್ಯೆ ಹೆಚ್ಚು ವ್ಯತ್ಯಾಸ ಕಾಣಲಾರದು. ಪ್ರಸಿದ್ಧ ಮಾಧ್ಯಮಗಳು ಈ ಗೊಂದಲವನ್ನು ಶಮನ ಮಾಡಲು ಏನೂ ಕ್ರಮಕೈಗೊಳ್ಳುವುದಿಲ್ಲ: ಸನ್ನಿ ಡಿಯೋಲ್ ಸಿನಿಮಾವೊಂದರಲ್ಲಿ ‘ರಾ’ ಮುಖ್ಯಸ್ಥನೊಬ್ಬ ತನ್ನ ಬಳಿಯಿರುವ ಮೆಷಿನ್ ಗನ್ ತೆಗೆದು ಪಾಕಿಸ್ತಾನಿ ಏಜೆಂಟ್ ಒಬ್ಬನಿಗೆ ಆತನ ಕಚೇರಿಯಲ್ಲೇ ಗುಂಡು ಹಾರಿಸುವ ದೃಶ್ಯವನ್ನು ಉಲ್ಲೇಖಿಸಿ ಮಾಜಿ ‘ರಾ’ ಮುಖ್ಯಸ್ಥ ವಿಕ್ರಂ ಸೂದ್ ಜೋರಾಗಿ ನಕ್ಕಿದ್ದರು. (ಈ ದೃಶ್ಯದಲ್ಲಿ ಅದೆಷ್ಟು ತಪ್ಪುಗಳಿವೆಯೆಂದರೆ ನೀವು ಕೇವಲ ನಿರಾಶೆಯಿಂದ ತಲೆಯಲ್ಲಾಡಿಸುತ್ತಾ ಸುಮ್ಮನೆ ಕುಳಿತುಕೊಳ್ಳಬೇಕಷ್ಟೇ). ಈ ಗುಪ್ತಚರ ಸಂಸ್ಥೆಗಳ ಬಗ್ಗೆ ಬರೆಯುವ ಪತ್ರಕರ್ತರು ಈ ಸಂಸ್ಥೆಗಳಿಂದ ಎಷ್ಟು ಪ್ರಭಾವಕ್ಕೊಳಗಾಗುತ್ತಾರೆ ಎಂದರೆ ಅವರು, ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲ ಎಂಬ ಕಾರಣದಿಂದ ಇಂಥವುಗಳಿಗೆಲ್ಲಾ ಸ್ಪಷ್ಟನೆ ನೀಡಲು ಹೋಗುವುದಿಲ್ಲ. ಸಾಮಾನ್ಯವಾಗಿ ಹೇಳಬೇಕೆಂದರೆ, ಒಬ್ಬ ಆಸಕ್ತಿದಾಯಕ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತನಾಗಿರುವ ಕಾರಣ ರಹಸ್ಯ ಮಾಹಿತಿಗಳನ್ನು ಒದಗಿಸುತ್ತಿದ್ದಾನೆಂದರೆ ಅದು, ಜೇಮ್ಸ್ ಬಾಂಡ್ ಸಿನೆಮಾಗಳಲ್ಲಿ ಆತ ಮಾಡುವ ಕರಾಮತ್ತುಗಳಂತಲ್ಲ, ಜಾನ್ ಲೆ ಕಾರೆಯ ಕಾದಂಬರಿಗಳಲ್ಲಿ ಬರುವ ಗೂಢಚಾರರ ಜಾಲವನ್ನು ನೇಮಿಸುವ ನಿಯೋಜಕನಂತಲ್ಲ ಅಥವಾ ಲೆ ಕಾರೆಯ ಕಾದಂಬರಿಗಳಲ್ಲಿ ಜಾರ್ಜ್ ಸ್ಮೈಲಿ ತನ್ನ ಮುಖ್ಯ ಕಚೇರಿಯಲ್ಲಿ ಕುಳಿತು ಪ್ರಮುಖ ವಂಚನಾ ಕಾರ್ಯಾಚರಣೆಗಳನ್ನು ರೂಪಿಸಿದಂತಲ್ಲ. ಯಾವುದೇ ರೀತಿಯಲ್ಲಿ ನೋಡಿದರೂ ಗೂಢಚಾರರನ್ನು ಮತ್ತು ಏಜೆಂಟ್‌ಗಳನ್ನು ಬಂಧಿಸುವುದು ಒಂದು ಸಾಮಾನ್ಯ ಸಂಗತಿ ಮತ್ತು ಅವರನ್ನು ಅದಲುಬದಲು ಮಾಡುವುದು ಮತ್ತು ಬಿಡುಗಡೆ ಮಾಡುವುದು ಕೂಡಾ ಸಾಮಾನ್ಯ ವಿಷಯವೇ ಅದನ್ನು ಹೆಚ್ಚು ಸುದ್ದಿಯಿಲ್ಲದೆ ಮಾಡಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೊವಲ್ ಮತ್ತು ಲೆಫ್ಟಿನೆಂಟ್ ಜನರಲ್ ಜಂಜುವಾ ರಹಸ್ಯವಾಗಿ ಭೇಟಿಯಾದರೆ ಈ ವಿಷಯವನ್ನು ಅವರು ತಮ್ಮಿಳಗೆ ಬಗೆಹರಿಸಲು ಪ್ರಯತ್ನಿಸಬಹುದು. ಎಷ್ಟಾದರೂ ನಮ್ಮವರು ಮಾಜಿ ಗುಪ್ತಚರ ಉದ್ಯೋಗಿಯಾಗಿದ್ದರೆ ಅವರದ್ದು ಮಾಜಿ ಸೈನಿಕ, ಹಾಗಾಗಿ ಇಂಥಾ ಬಂಧನಗಳ ವಿಷಯವನ್ನು ಸಾರ್ವಜನಿಕವಾಗಿ ಸುದ್ದಿ ಮಾಡುವುದು ಸರಿಯಲ್ಲ ಎಂಬುದು ಅವರಿಗೆ ತಿಳಿದಿರಬಹುದು.

Writer - ಆದಿತ್ಯ ಸಿನ್ಹ

contributor

Editor - ಆದಿತ್ಯ ಸಿನ್ಹ

contributor

Similar News