ಹೆಚ್ಚು ಕುಳಿತುಕೊಳ್ಳುವುದು ಸಾವಿಗೆ ಕಾರಣವಾಗಬಹುದು: ಅಧ್ಯಯನ ವರದಿ

Update: 2016-03-29 12:27 GMT

ವಾಶಿಂಗ್ಟನ್, ಮಾರ್ಚ್.29: ಅಧ್ಯಯನವೊಂದು ಜಗತ್ತಿನಲ್ಲಿ ನಡೆಯುವ ಶೇ.ರಷ್ಟು ಸಾವುಗಳು ಮೂರುಗಂಟೆಗಿಂತ ಹೆಚ್ಚು ಕೂತುಕೊಳ್ಳುವುದರಿಂದ ಸಂಭವಿಸುತ್ತದೆ ಎಂದು ತಿಳಿಸಿದೆ. ಹಾಗೆ ಕೂತುಕೊಳ್ಳುವುದರಿಂದಾಗಿ ಶರೀರದ ಮೇಲಾಗುವ ದುಷ್ಪರಿಣಾದ ಕಾರಣದಿಂದ ಸಾವು ಸಂಭವಿಸಿದ್ದು 54 ದೇಶಗಳ ಸಮೀಕ್ಷೆಗಳಿಂದ ಈ ವಿಶ್ಲೇಷಣೆಯನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ಅಮೆರಿಕದ ಜರ್ನಲ್ ಆಫ್ ಫ್ರೀವೆಮಟ್ ಮೆಡಿಸಿನ್‌ನಲ್ಲಿ ಪ್ರಕಟಿತ ಅಧ್ಯಯನದಲ್ಲಿ ಸಮೀಕ್ಷೆ ಪ್ರಕಾರ ಪ್ರತಿ ದಿನ ಮೂರು ಗಂಟೆಗಿಂತ ಕಡಿಮೆ ಸಮಯ ಕುಳಿತುಕೊಳ್ಳುವವರ ಆಯಸ್ಸು ಪ್ರಮಾಣ0.2 ರಷ್ಟು ಹೆಚ್ಚಳವಾಗುತ್ತದೆ ಎಂದು ಹೇಳಲಾಗಿದೆ. ಕುಳಿತು ಆಗುವ ಹಾನಿಯನ್ನು ಪತ್ತೆಹಚ್ಚುವುದಕ್ಕಾಗಿ ಐವತ್ತನಾಲ್ಕು ದೇಶಗಳಲಿ ವ್ಯವಹಾರ ಸಂಬಂಧಿಸಿದ ಸಮೀಕ್ಷೆಯನ್ನು ವಿಶ್ಲೇಷಣೆ ನಡೆಸಿದ್ದು ಮತ್ತು ಅವುಗಳನ್ನು ಸಾವಿನ ಅಂಕಿಸಂಖ್ಯೆಗಳೊಂದಿಗೆ ಹೋಲಿಸಿ ನೋಡಲಾಗಿದೆ.

ಬ್ರಝಿಲ್ ಯುನಿವರ್ಸಿಟಿ ಆಫ್ ಸಾವೊಪಾವ್ಲೊದ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ತಮ್ಮ ಅಧ್ಯಯನದಲ್ಲಿ ಕುಳಿತುಕೊಳ್ಳುವ ಸಮಯ ಹಲವು ರೀತಿಯ ಸಾವಿನ ಕಾರಣಗಳಲ್ಲಿ ಪ್ರಭಾವಿತಗೊಳ್ಳಬಹುದಾಗಿದೆ ಕಂಡು ಹುಡುಕಿದ್ದಾರೆ. ಅವರ ಅಂಕಿ ಸಂಖ್ಯೆ 54 ದೇಶಗಳ ಒಟ್ಟು ಮರಣದ ಸಂಖ್ಯೆಯಲ್ಲಿ ಸುಮಾರು ಶೇ. 3.8 ಆಗಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News