ಸಮಸ್ಯೆ ಪರಿಹರಿಸಲಿಕ್ಕೇ ಹುಟ್ಟಿದ ಪುಣ್ಯಾತ್ಮ ಅರಸು

Update: 2016-03-29 17:37 GMT

ಭಾಗ 2

‘ನನ್ ಫೈಲಿಗೂ ಇಲ್ಲ ಅಂದಂತೆ...’

1979 ರಲ್ಲಿ ಹುಣಸೂರಿನಲ್ಲಿ ಡಿಎಫ್‌ಒ ಆಗಿದ್ದಾಗ ಮೈಸೂರು ಜಿಲ್ಲಾಧಿಕಾರಿಗಳಿಂದ ಒಂದು ಪತ್ರ ಬಂತು. ಆ ಪತ್ರದಲ್ಲಿ 300 ಎಕರೆ ಅರಣ್ಯ ಭೂಮಿಗಾಗಿ ಮನವಿ ಇತ್ತು. ಅದಕ್ಕೆ ಮುಖ್ಯಮಂತ್ರಿ ದೇವರಾಜ ಅರಸು ಅವರ ಸ್ಪೆಷಲ್ ನೋಟ್ ಕೂಡ ಇತ್ತು. 300 ಎಕರೆ ಅರಣ್ಯ ಭೂಮಿ ಕೊಡೋದು ಅಂದ್ರೇನು, ಕಾಡೇ ಕಣ್ಮರೆಯಾದಂತೆ. ಆದರೆ ಮುಖ್ಯಮಂತ್ರಿಗಳ ನೋಟ್ ತಿರಸ್ಕರಿಸುವಷ್ಟು ಧೈರ್ಯವಿರಲಿಲ್ಲ. ನನ್ನ ಹಿರಿಯ ಅಧಿಕಾರಿಗೆ ಕೇಳಿದೆ, ಅವರು ‘ನಿನಗೇನು ಅನ್ನಿಸುತ್ತದೋ ಅದನ್ನೇ ಮಾಡು’ ಎಂದರು. ಅದು ನಿಮಗೇ ಸಮಸ್ಯೆಯಾಗುತ್ತದೆ ಅಂದೆ. ಅವರು ಹೆದರಲಿಲ್ಲ. ಅದೇ ಜೋಷ್‌ನಲ್ಲಿ ನಾನು ಆ ಮನವಿಯನ್ನು ತಿರಸ್ಕರಿಸಿದೆ. ಮಾರನೆ ದಿನ ಮೈಸೂರಿನ ಡಿಸಿ ನೇರವಾಗಿ ನನ್ನ ಕಚೇರಿಗೆ ಬಂದರು. ಕೂರಿಸಿ ಕಾಫಿ ಕೊಡಿಸಿದೆ. 300 ಎಕರೆ ಭೂಮಿ ಬಗ್ಗೆ ಕೇಳಿದರು, ಕೊಡಲು ಆಗಲ್ಲ ಎಂದೆ. ಅವರು ‘ಯೂ ವಿಲ್ ಹ್ಯಾವ್ ಇಟ್’ ಎಂದು ಖಾರವಾಗಿ ಪ್ರತಿಕ್ರಿಯಿಸಿ ಹೊರಹೋದರು. ಅದಾದ ಮೂರೇ ದಿನಕ್ಕೆ ಸ್ವತಃ ಮುಖ್ಯಮಂತ್ರಿ ಅರಸು ಅವರೇ ಬಂದರು. ಬರುತ್ತಿದ್ದಂತೆಯೇ ‘ಎಲ್ರಿ ಲಕ್ಷ್ಮಣ್’ ಎಂದರು. ನಾನು ಹೋಗಿ ಅವರ ಮುಂದೆ ನಿಂತೆ. ಹೆಗಲ ಮೇಲೆ ಕೈ ಹಾಕಿ ಅತ್ತ ಕರೆದುಕೊಂಡು ಹೋದ ಅರಸು, ‘ಏನಪ್ಪ, ನನ್ನ ಫೈಲ್‌ಗೂ ಇಲ್ಲ ಅಂದಂತೆ’ ಎಂದರು.

ನಾನು ‘ಪ್ರಬಲವಾದ ಕಾರಣವಿದೆ ಸರ್’ ಎಂದೆ. ಅದಕ್ಕವರು ‘ನಾನು ಬಂದಿದ್ದು ನಿನ್ನ ಕಾರಣ ಕೇಳಲಿಕ್ಕಲ್ಲ, ಸಮಸ್ಯೆ ಪರಿಹರಿಸಲಿಕ್ಕೆ’ ಅಂದರು. ಧ್ವನಿ ಗಡುಸಾಗಿತ್ತು. ಆದರೂ ಧೈರ್ಯ ಮಾಡಿ, ‘ಸರ್, ಈ ಹಿಂದೆ ಇದೇ ಡಿಸಿ ಮತ್ತು ರೆವಿನ್ಯೂ ಇಲಾಖೆಯವರು ಸೇರಿ ಪಕ್ಷಿರಾಜಪುರದಲ್ಲಿ 3,600 ಎಕರೆ ಭೂಮಿ ಪಡೆದರು, ಅದು ಕಣ್ಣಿಗೆ ಕಾಣದಂಗಾಗೋಯ್ತು’ ಅಂದೆ. ಅರಸು ಕೊಂಚ ವೌನವಾದರು. ಡಿಸಿಯತ್ತ ನೋಡಿ ‘ಏನಿದು’ ಎಂದರು. ಅವರು ಅದೂ ಅದೂ ಸರ್ ಎಂದು ತಡವರಿಸತೊಡಗಿದರು. ನಾನು ತಿರಸ್ಕರಿಸಿದ್ದು ಅರಸುಗೆ ಜನಪರ ನಿಲುವಾಗಿ ಕಂಡಿತ್ತು. ಮುಂದುವರಿದು, ‘ಇದು ಹಾಗೇನೆ ಆಗಬಹುದೆಂಬ ಅನುಮಾನ ಬಂದಿದೆ, ರಿಲೀಸ್ ಮಾಡಲ್ಲ ಸರ್’ ಎಂದೆ. ಆಗ ಅರಸರೇ ಮುಂದಾಗಿ, ‘ಈ ಪ್ರಾಜೆಕ್ಟ್ ಬೇರೆಯದು, ಹೋಗ್ಲಿ ರಿಲೀಸ್ ಮಾಡಿ’ ಎಂದು ಹೇಳಿ ಹೊರಡಲು ಅಣಿಯಾದರು. ನಾನು, ‘ಆಯ್ತು ಸರ್, ನೀವೇಳಿದ್ದಕ್ಕೆ ಮಾಡ್ತಿದ್ದೇನೆ, ಆದರೆ 300 ಎಕರೆ ಅಲ್ಲ, 150 ಎಕರೆ ಮಾತ್ರ. ಅದೂ 3 ಷರತ್ತಿಗೆ ಒಪ್ಪುವುದಾದರೆ...’ ಅಂದೆ. ಅದಕ್ಕವರು ಡಿಸಿಯತ್ತ ನೋಡಿ, ‘ಏನೊ ಫೈನಲೈಸ್ ಮಾಡಿ...’ ಎಂದು ಹೋದರು. ನಾನು 150 ಎಕರೆ ರಿಲೀಸ್ ಮಾಡಿ, ಲೀಸ್ ಮೇಲೆ ಕೊಡಲು ಒಪ್ಪಿದೆ. ಅರಣ್ಯ ಭೂಮಿ ಉಳಿಯಿತು.

 ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ, ಅವತ್ತು ಅರಸು ಮಧ್ಯ ಪ್ರವೇಶದಿಂದಾಗಿ ಉಳಿದ 150 ಎಕರೆ ಅರಣ್ಯ ಭೂಮಿ ಇವತ್ತು ‘ಅರಸು ಬಿದಿರು ವನ’ವನ್ನಾಗಿ ಮಾರ್ಪಡಿಸಲು ರಾಜ್ಯ ಸರಕಾರ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದೆ. ಈ ಜಾಗದಲ್ಲಿ ಬಿದಿರು ಕುರಿತು ಸಂಶೋಧನೆ, ತರಬೇತಿ, ನರ್ಸರಿಯನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಹಾಗಾಗಿ ಸರಕಾರಕ್ಕೆ ಕೋಟ್ಯಂತರ ರೂಪಾಯಿ ಸ್ವತ್ತು ಉಳಿದಿದೆ, ಅದಕ್ಕಿಂತಲೂ ಹೆಚ್ಚಾಗಿ ಅರಸು ಕೂಡ ಜೀವಂತವಾಗಿರುತ್ತಾರೆ.

ಸಿಎಂ ಲೆಟರ್ ಕೊಟ್ಟ, ನಕ್ಕ

 ಕೊಡಗಿನಲ್ಲಿ ಡಿಎಫ್‌ಒ ಆಗಿದ್ದಾಗ ಒಬ್ಬ ಗಣ್ಯ ವ್ಯಕ್ತಿ ಒಂದು ಲೆಟರ್ ತಂದರು. ಯಥಾಪ್ರಕಾರ ಕಾಫಿ ತರಿಸಿ ಕುಡಿಸಿ, ವಿಷಯ ಏನು ಅಂದೆ. ಮುಖ್ಯಮಂತ್ರಿಗಳೇ ಖುದ್ದಾಗಿ ಬರೆದ ಪತ್ರವನ್ನು ನನ್ನ ಮುಂದೆ ಇಟ್ಟರು. ಏನೋ ಸಹಾಯ ಮಾಡಲು ಹೇಳಿದ್ದರು. ಪತ್ರ ಓದಿದಾಗ ಏನು ಸಹಾಯ ಎಂಬುದು ತಿಳಿಯಿತು. ಅದು ಕಾನೂನಿಗೆ ವಿರುದ್ಧವಿತ್ತು. ಇಲಾಖೆಗೆ ನಷ್ಟವಾಗುತ್ತಿತ್ತು. ತಡಮಾಡದೆ, ‘ಇದು ಆಗಲ್ಲ, ನಾನು ಮಾಡಲ್ಲ’ ಎಂದೆ. ಅಷ್ಟೇ... ಕಾಫಿ ಕುಡಿಯುತ್ತಿದ್ದ ವ್ಯಕ್ತಿ ಪಕಪಕನೆ ನಗತೊಡಗಿದರು. ನನಗೇಕೋ ವಿಚಿತ್ರ ಅನ್ನಿಸಿತು. ಅವರು ಸಿಎಂರಿಂದ ಶಿಫಾರಸು ಪತ್ರ ತಂದಿದ್ದಾರೆ, ಕೆಲಸ ಆಗೇ ತೀರುತ್ತದೆಂದು ನಂಬಿದ್ದಾರೆ, ನಾನು ಆಗಲ್ಲ ಎಂದಿದ್ದೇನೆ... ಇದಕ್ಕೆ ನಗುವೇಕೆ ಬರುತ್ತದೆ ಎಂದು ಒಂದು ಕ್ಷಣ ಗೊಂದಲವಾಯಿತು. ಆ ವ್ಯಕ್ತಿಯೇ, ‘ನೀವು ಹೀಗೆಯೇ ಹೇಳುತ್ತೀರಿ ಎಂದು ದೇವರಾಜ ಅರಸು ಅವರು ನನಗೆ ಮೊದಲೇ ಹೇಳಿದ್ದರು. ಆದರೂ ನಾನು ಅವರ ಮೇಲೆ ಒತ್ತಡ ಹಾಕಿ ಲೆಟರ್ ಬರೆಸಿಕೊಂಡು ಬಂದೆ, ಅವರೇಳಿದಂತೆಯೇ ಆಯಿತು’ ಎಂದರು. ಲೆಟರ್ ಕೊಡುವಾಗಲೇ ಅರಸು, ‘ಲಕ್ಷ್ಮಣ್ ಸ್ಟ್ರಿಕ್ಟ್ ಆಫೀಸರ್, ಕಾನೂನಿಗೆ ವಿರುದ್ಧವಾಗಿ ಏನನ್ನು ಮಾಡಲ್ಲ’ ಎಂದು ಹೇಳಿ ನನ್ನ ಕಷ್ಟವನ್ನು ಕಡಿಮೆ ಮಾಡಿದ್ದರು. ಜೊತೆಗೆ ಆ ವ್ಯಕ್ತಿ ನನ್ನಲ್ಲಿ ಬರುವುದಕ್ಕೆ ಮುಂಚಿತವಾಗಿಯೇ ಆತನ ಮನಸ್ಥಿತಿಯನ್ನು ಸಿದ್ಧಗೊಳಿಸಿ ಕಳಿಸಿದ್ದರು. ನಾನು ಹೇಳಿದಾಗ ಅವರು ಕೆರಳದೆ, ಕೂಗಾಡದೆ, ಕೂಲಾಗಿ ತೆಗೆದುಕೊಂಡು ನಕ್ಕರು. ಇದು ಅಧಿಕಾರಿಗಳು ಮತ್ತು ಅರಸು ಅವರ ನಡುವಿದ್ದ ಅಲಿಖಿತ ಒಪ್ಪಂದ. ಅವರ ಹೃದಯದಲ್ಲಿದ್ದದ್ದು ನಮ್ಮಲ್ಲಿ, ಕನ್ನಡಿಯಂತೆ ಪ್ರತಿಫಲನವಾಗುತ್ತಿತ್ತು, ಅಷ್ಟೆ.
ನಾಡಿನಲ್ಲಿ ಪ್ರಜೆಗಳು, ಕಾಡಿನಲ್ಲಿ ಪ್ರಾಣಿಗಳು
ಹುಣಸೂರಿನಲ್ಲಿ ಅರಣ್ಯಾಧಿಕಾರಿಯಾಗಿದ್ದಾಗೊಮ್ಮೆ ಮುಖ್ಯಮಂತ್ರಿ ದೇವರಾಜ ಅರಸು ಬಂದರು. ಅಲ್ಲಿಂದ ಮಂಗಳೂರಿಗೆ ಹೋಗುವುದಿತ್ತು. ‘ಬನ್ರಿ ಲಕ್ಷ್ಮಣ್’ ಎಂದರು, ಹೊರಟೆ. ದಾರಿಯುದ್ದಕ್ಕೂ ಏನು ಮಾತನಾಡೋದು ಅಂತ ನಾನು ಬರೆದಿದ್ದ ‘ಕರ್ನಾಟಕ ವನ್ಯ ಸಂಪತ್ತು’ ಎಂಬ ಪುಸ್ತಕ ಕೊಟ್ಟೆ. ಪುಸ್ತಕಗಳು, ಓದುವುದು ಎಂದರೆ ಬಹಳ ಇಷ್ಟ. ಪಿರಿಯಾಪಟ್ಟಣಕ್ಕೆ ಹೋಗುವಷ್ಟರಲ್ಲಿ ಓದಿ ಮುಗಿಸಿದರು. ‘ಏನ್ರಿ ಕವಿಗೇಳೇನ್ರಿ ನೀವು, ತುಂಬ ಚೆನ್ನಾಗಿ ಬರೆದಿದ್ದೀರ’ ಎಂದರು. ಪುಸ್ತಕ ತಿರುವಿ ಹಾಕುತ್ತ, ಅದರಲ್ಲಿದ್ದ ಹುಲಿ ಚಿತ್ರ ನೋಡಿ ‘ನಮ್ಮ ಕಾಲದಲ್ಲಿ... ಹುಲಿಗಳಂದ್ರೆ...’ ಎಂದು ಹೇಳಲು ಮುಂದಾದವರನ್ನು ಅರ್ಧಕ್ಕೆ ತಡೆದ ನಾನು, ‘ಅದು ನಿಮ್ಮ ಕಾಲ, ಈ ಕಾಲದಲ್ಲಿ ಹುಲಿಗಳು ಪುಸ್ತಕಕ್ಕೆ ಬಂದಿವೆ, ಮುಂದಕ್ಕೆ ಇಲ್ಲಿಂದಲೂ ಕಣ್ಮರೆಯಾಗುತ್ತವೆ’ ಅಂದೆ.

 ‘ಏನ್ ಹಂಗಂದ್ರೆ’ ಅರಸರ ಧ್ವನಿ ಒರಟಾಗಿತ್ತು. ‘ಇನ್ನೇನ್ ಸರ್, ಕಾಡು ಬಿಟ್ಟು ನಾಡಿನತ್ತ ಬರುತ್ತಿವೆ, ದಿನದಿಂದ ದಿನಕ್ಕೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ’ ಅಂದೆ. ‘ಏನ್ಮಾಡಬೇಕು’ ಎಂದರು. ‘ಏನಿಲ್ಲ ಸಾರ್, ನಾಗರಹೊಳೆ ಕಾಡಲ್ಲಿ 200 ರೈತ ಕುಟುಂಬಗಳ 1,000 ಜನ ಇದಾರೆ, ಅವರಿಗೆ ಪುನರ್ವಸತಿ ಕಲ್ಪಿಸಬೇಕು, ಅವರಿಗಾಗಿ 400 ಎಕರೆ ಭೂಮಿ ಬೇಕು. ಅದಾದರೆ, ಕಾಡಿನಲ್ಲಿ ಪ್ರಾಣಿಗಳು, ನಾಡಿನಲ್ಲಿ ಪ್ರಜೆಗಳು ಸುಖವಾಗಿರ್ತಾರೆ’ ಅಂದೆ. ‘ಮಾಡಲಿಕ್ಕೇನು ತೊಂದರೆ’ ಅಂದರು. ನಾನು ಕಾಡಿಗಾಗಿ, ಪ್ರಾಣಿಗಳಿಗಾಗಿ, ಆದಿವಾಸಿಗಳಿಗಾಗಿ; ಅವತ್ತಿಗೆ ರಾಜಕೀಯವಾಗಿ ಅರಸು ಅವರಿಗೆ ವಿರುದ್ಧವಿದ್ದ ಎ.ಕೆ.ಸುಬ್ಬಯ್ಯನವರ ಹೆಸರು ಹೇಳಿದರೆ, ಅರಸು ಜಿದ್ದಿಗೆ ಬಿದ್ದು ಮಾಡಿಯೇ ತೀರುತ್ತಾರೆಂದು ಭಾವಿಸಿ, ‘ಎ.ಕೆ.ಸುಬ್ಬಯ್ಯನವರ ವಿರೋಧವಿದೆ, ಅವರಿಗೆ ಒಂದು ಮಾತು...’ ಎಂದು ಸುಳ್ಳು ಹೇಳಿಬಿಟ್ಟೆ. ನಾನು ಊಹಿಸಿದಂತೆಯೇ ಆಯಿತು. ಕುಶಾಲನಗರಕ್ಕೆ ಹೋಗುತ್ತಿದ್ದಂತೆಯೇ, ಸಿಎಂ ಅರಸರಿಗೆ ಎದುರಾದ ಡಿಸಿ, ಎಸ್ಪಿಯವರನ್ನು ಕುರಿತು, ‘ಲಕ್ಷ್ಮಣ್ ಜೊತೆ ಮಾತಾಡಿ’ ಅಂದರು. ಸಾಮಾನ್ಯವಾಗಿ ಅರಣ್ಯದಿಂದ ಹತ್ತಾರು ಪ್ರಯೋಜನಗಳನ್ನು ಪಡೆಯುವವರೇ ಹೆಚ್ಚು; ಅದು ಇದ್ದಂಗೆ ಇರಲಿ ಅನ್ನುವ ಅಧಿಕಾರಿಯನ್ನು ಇಷ್ಟಪಡದವರೂ ಹೆಚ್ಚು. ಆದರೆ ಅರಸು ಅವರೇ ಬೇರೆ, ಅವರ ಚಿಂತನೆಯೇ ಬೇರೆ. ಅಧಿಕಾರಿಗಳಿಗಿಂತಲೂ ಹೆಚ್ಚಾಗಿ ಅರಣ್ಯ, ಪರಿಸರ, ಪ್ರಾಣಿಪಕ್ಷಿ ಜಗತ್ತಿನ ಬಗ್ಗೆ ಓದಿಕೊಂಡಿದ್ದರು ಮತ್ತು ಬಾಲ್ಯದಿಂದಲೇ ಕಾಡಿನೊಂದಿಗೆ ಕಲೆತುಹೋಗಿದ್ದರು. ಕಾಡಿದ್ದರೆ ನಾಡು ಎಂಬುದನ್ನು ಅರಿತಿದ್ದರು. ಹಾಗಾಗಿ ನಮ್ಮಂತಹ ಅರಣ್ಯಾಧಿಕಾರಿಗಳು ಹೇಳಿದ ತಕ್ಷಣ ಅರ್ಥವಾಗುತ್ತಿತ್ತು, ಕಾರ್ಯರೂಪಕ್ಕಿಳಿಯುತ್ತಿತ್ತು. ಅಂದದ ಅವಿನ್ಯೂ

  ಹುಣಸೂರು ಬೈ ಪಾಸ್ ರಸ್ತೆ ಮಾಡುವ ಯೋಜನೆ ತಯಾರಾಗಿತ್ತು. ರಸ್ತೆ ನಿರ್ಮಾಣ ಕಾರ್ಯ ಈಗಲೂ ಆಗಲೂ ಲೋಕೋಪಯೋಗಿಯದ್ದೆ. ಅರಣ್ಯ ಅಧಿಕಾರಿಯಾಗಿದ್ದ ನಾನು ಹೋಗಿ, ‘ಆ ರಸ್ತೆಯ ಇಕ್ಕೆಲದಲ್ಲಿ ಗಿಡ ನೆಟ್ಟು ಅದ್ಭುತವಾದ ಅವಿನ್ಯೂ ನಿರ್ಮಿಸುತ್ತೇನೆ’ ಎಂದು ಅರಸರಲ್ಲಿ ವಿನಂತಿಸಿಕೊಂಡೆ. ಒಂದು ಸಲ ತೀಕ್ಷ್ಣವಾಗಿ ನೋಡಿದ ಅರಸು, ‘ಆಯ್ತು ಮಾಡು’ ಎಂದರು. ಲೋಕೋಪಯೋಗಿ ಇಂಜಿನಿಯರ್ ಕರೆದು ಸಹಕರಿಸಿ ಎಂದರು. ಹುಣಸೂರಿಗೆ ಹೋಗುವ ಬೈ ಪಾಸ್ ರಸ್ತೆ, ದೊಡ್ಡದಾಗಿತ್ತು. ನಾನು ನನ್ನ ಇಲಾಖಾ ಸಿಬ್ಬಂದಿಯ ಶ್ರಮದಿಂದ ಆ ರಸ್ತೆಯ ಅಕ್ಕಪಕ್ಕದಲ್ಲಿ ಗಿಡ ನೆಟ್ಟು ನೀರು ಹಾಕಿಸಿ ಬ್ಯೂಟಿಫುಲ್ ಅವಿನ್ಯೂ ನಿರ್ಮಿಸಿದೊ. ಒಂದು ದಿನ ಅರಸು ಊರಿಗೆ ಬಂದರು. ಜೊತೆಯಲ್ಲಿ ಅವರ ಮಡದಿಯೂ ಇದ್ದರು. ನಾನು ಹೋಗಿ, ‘ಸಾರ್, ಬೈ ಪಾಸ್ ರಸ್ತೆ ನೋಡಿದ್ರೆ ಚೆನ್ನಾಗಿತ್ತು’ ಅಂದೆ. ಪಕ್ಕದಲ್ಲಿದ್ದ ಮಡದಿ, ‘ಅಯ್ಯೋ ಈಗೆಲ್ಲಾಗುತ್ತೆ, ಕತ್ತಲೆಯಾಯಿತು, ಮನೆಗೆ ಹೋಗೋಣ’ ಎಂದರು. ಅರಸು ಮಾತಾಡಲಿಲ್ಲ. ನನ್ನ ಶ್ರಮ, ಉತ್ಸಾಹವೆಲ್ಲ ಕ್ಷಣಾರ್ಧದಲ್ಲಿ ಕರಗಿಹೋಗಿತ್ತು. ಪೆಚ್ಚು ಮೋರೆ ಹಾಕಿಕೊಂಡು ನಿಂತೆ. ಒಂಬತ್ತು ಗಂಟೆ ಸುಮಾರಿಗೆ ನನ್ನ ಸಹೋದ್ಯೋಗಿಯಿಂದ ಫೋನ್, ‘ಲಕ್ಷ್ಮಣ್, ಎಲ್ಲಿ ಹೋಗಿದ್ರಿ, ಸಿಎಂ ಇನ್ಸ್‌ಪೆಕ್ಷನ್‌ಗೆ ಬಂದಾಗ ನೀವಿರೋದಲ್ವ, ತುಂಬಾನೆ ಮೆಚ್ಚಿ ಮಾತನಾಡಿದರು, ಎಲ್ರಿ ಲಕ್ಷ್ಮಣ್ ಅಂತ ಕೇಳಿದರು’ ಎಂದರು. ನನಗೆ ಆಶ್ಚರ್ಯ, ಅಲ್ಲಿ ಮನೆಯವರು ಹಾಗೆಂದಾಗ ಮರು ಮಾತಾಡದ ಅರಸು, ಅವರೊಂದಿಗೆ ಮನೆಗೆ ಹೋದವರು, ಇಲ್ಲಿಗೆ ಬಂದಿದ್ದಾರೆ. ಚೆನ್ನಾಗಿ ಮಾಡಿದ್ದೀರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂದರೆ ಯಾರಿಗೂ ಮನ ನೋಯಿಸುವಂತೆ ನಡೆದುಕೊಳ್ಳುವ ವ್ಯಕ್ತಿತ್ವವೇ ಅವರದಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ. ಹುಟ್ಟಿದ್ದೆ ಪರಿಹಾರಕ್ಕೆ...

ದೇವರಾಜ ಅರಸು ಅವರು ಎಲ್ಲಿಗಾದರೂ ಬರುತ್ತಾರೆಂದರೆ, ಅದು ಹೇಗೋ ಜನ ಜಮಾಯಿಸಿಬಿಡುತ್ತಿದ್ದರು. ಆ ಜನರಲ್ಲಿ ಬಡವರು, ಶೋಷಿತರು, ಮಹಿಳೆಯರು, ಅಸಹಾಯಕರು, ಶ್ರೀಮಂತರು, ರೈತರು... ಎಲ್ಲರೂ ಇರುತ್ತಿದ್ದರು. ಅವರ ಕೈಯಲ್ಲೊಂದು ಅರ್ಜಿ ಇರುತ್ತಿತ್ತು. ಅರಸರು ಬರುವುದನ್ನು ಕಾದು ಆ ಅರ್ಜಿಯನ್ನು ಅವರ ಕೈಗಿಡುತ್ತಿದ್ದರು. ಅರಸರೂ ಅಷ್ಟೇ, ಕೊಟ್ಟ ಅರ್ಜಿಯನ್ನು ಅಲ್ಲಿಯೇ ಓದುತ್ತಿದ್ದರು. ಅಲ್ಲೇ ಆ ಸಮಸ್ಯೆ ಏನು, ಅದು ಯಾವ ಇಲಾಖೆಗೆ ಸಂಬಂಧಿಸಿದ್ದು, ಅದನ್ನು ಯಾವ ಅಧಿಕಾರಿಗೆ ಕೊಟ್ಟು ಹೇಳಬೇಕು ಎನ್ನುವುದನ್ನು ನಿಂತ ಜಾಗದಲ್ಲಿಯೇ ನಿರ್ಧರಿಸಿಬಿಡುತ್ತಿದ್ದರು. ಅವರವರಿಗೆ ಕೊಟ್ಟು, ಇಷ್ಟು ದಿನಗಳೊಳಗೆ ಇದಾಗಬೇಕು ಎಂದು ಆದೇಶಿಸುತ್ತಿದ್ದರು. ಈ ರೀತಿ, ನಿಂತ ನಿಲುವಿನಲ್ಲಿಯೇ ಈ ಅರ್ಜಿ ಇಂಥ ಇಲಾಖೆಗೆ ಸಂಬಂಧಿಸಿದ್ದು, ಇಂತಿಂಥ ಅಧಿಕಾರಿಗಳಿಗೆ ಇದನ್ನು ಕೊಡಬೇಕು ಎನ್ನುವುದನ್ನು ಆ ಕ್ಷಣದಲ್ಲಿಯೇ ನಿರ್ಧರಿಸುತ್ತಿದ್ದರಲ್ಲ, ಅದು ಅವರಲ್ಲಿ ಮಾತ್ರ. ಇದನ್ನು ಮತ್ತಿನ್ಯಾವ ಮುಖ್ಯಮಂತ್ರಿಗಳಲ್ಲೂ ಕಾಣಲಿಲ್ಲ, ಜನರ ಸಮಸ್ಯೆಗಳೂ ನೀಗಲಿಲ್ಲ. ಸಿಎಂ ಅರಸು ಬರುತ್ತಾರೆಂದರೆ ಸಾಮಾನ್ಯವಾಗಿ ಜಿಲ್ಲೆಯ ಅಷ್ಟೂ ಅಧಿಕಾರಿಗಳು ಅಲ್ಲಿ ಹಾಜರಿರುತ್ತಿದ್ದರು. ಒಂದೊಂದು ಸಲ, ಅಲ್ಲಿದ್ದ ಅಧಿಕಾರಿಯನ್ನೇ ಕರೆದು, ಅವರ ಕೈಗೆ ಅರ್ಜಿ ಕೊಟ್ಟು, ‘ಹೌ ಡು ಸಾಲ್ವ್ ದಿಸ್’ ಎಂದು ಪ್ರಶ್ನಿಸುತ್ತಿದ್ದರು. ಅಧಿಕಾರಿಗಳೂ ಅಷ್ಟೇ, ಅರಸು ಕೊಟ್ಟ ಅರ್ಜಿಗೆ ಸೂಕ್ತ ಸಲಹೆ ಸೂಚಿಸಿ, ಪ್ರಾಮಾಣಿಕವಾಗಿ ಸಮಸ್ಯೆಯನ್ನು ಪರಿಹರಿಸುತ್ತಿದ್ದರು. ನನಗೆ, ಈ ಮನುಷ್ಯ, ಜನರ ಸಮಸ್ಯೆ ಪರಿಹಾರ ಮಾಡಲಿಕ್ಕಾಗಿಯೇ ಹುಟ್ಟಿ ಬಂದವನೇನೋ ಅನ್ನಿಸುತ್ತಿತ್ತು. ಆ ಮಟ್ಟಿನ ಕಾಳಜಿ, ಕಳಕಳಿ ಮತ್ತೆ ಯಾರಲ್ಲಿಯೂ ಕಾಣಲಿಲ್ಲ. ಒಂದು ರಾಜ್ಯದ ಅತ್ಯುನ್ನತ ಅಧಿಕಾರದ ಸ್ಥಾನಕ್ಕೇರಿದರೂ ಜನಸಾಮಾನ್ಯರೊಡನೆ ಬೆರೆಯುತ್ತಿದ್ದ ಪರಿಯನ್ನು, ಅವರ ಹೃದಯ ವೈಶಾಲ್ಯತೆಯನ್ನು, ಜನರ ಬಗೆಗಿನ ಪ್ರೀತಿ-ಅನುಕಂಪವನ್ನು ಬಹಳ ಹತ್ತಿರದಿಂದ ನೋಡಲು ಸಿಕ್ಕಿದ್ದು, ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಭಾಗ್ಯ.

ವಿಐಪಿ, ಗೌಪ್ಯವಾಗಿರಲಿ...

ಅರಸು ನಮ್ಮನ್ನು ಎಷ್ಟರಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು ಎಂಬುದಕ್ಕೆ ಒಂದು ಪ್ರಸಂಗ ಹೇಳ್ತೀನಿ ಕೇಳಿ... 1978ರ ಚಿಕ್ಕಮಗಳೂರು ಪಾರ್ಲಿಮೆಂಟ್ ಬೈಎಲೆಕ್ಷನ್‌ಗಿಂತ ಮುಂಚೆ, ಅರಸು ಅವರಿಂದ ಬುಲಾವ್ ಬಂತು. ಅರಸು ಒಬ್ಬರೆ ಇದ್ದರು. ‘ಬನ್ನಿ ಲಕ್ಷ್ಮಣ್’ ಎಂದವರೆ ‘ನನಗೆ ತುಂಬಾ ಬೇಕಾದ ಒಬ್ಬರು ವಿಐಪಿ ಬರ್ತಿದಾರೆ, ಅವರ ಪೂರ್ತಿ ಜವಾಬ್ದಾರಿ ನಿಮ್ಮದು. ಅವರನ್ನು ನಾಗರಹೊಳೆ ಗೆಸ್ಟ್‌ಹೌಸ್‌ನಲ್ಲಿರಿಸಬೇಕು, ಉತ್ತಮ ವ್ಯವಸ್ಥೆ ಮಾಡಬೇಕು’ ಎಂದರು. ನಾನು ‘ಆಗಲಿ ಸಾರ್, ವ್ಯವಸ್ಥೆ ಮಾಡಿಸ್ತೀನಿ’ ಅಂದೆ. ಅದಕ್ಕವರು, ‘ನೀವು ವ್ಯವಸ್ಥೆ ಮಾಡಿಸುತ್ತೀರಿ, ಗೊತ್ತು, ಪ್ರಶ್ನೆ ಅದಲ್ಲ, ಅವರು ಇಲ್ಲಿಗೆ ಬರೋದು, ಇರೋದು ಯಾರಿಗೂ ಗೊತ್ತಾಗಬಾರದು, ಅವರು ವಿಐಪಿಗಳು, ನೀವೇ ಖುದ್ದಾಗಿ ನಿಂತು ನೋಡ್ಕೋಬೇಕಪ್ಪ, ನಾನು ಇರಲ್ಲ’ ಎಂದರು. ಅವರು ಹೇಳಿದಂತೆಯೇ 2 ಅಂಬಾಸಿಡರ್ ಕಾರಿನಲ್ಲಿ ವಿಐಪಿಗಳು ಬಂದರು. ಅವರ ಜೊತೆಗೆ ಗುಂಡೂರಾವ್, ಎಫ್.ಎಂ.ಖಾನ್, ಮಿಸಸ್ ಕುಲಕರ್ಣಿ ಎಂಬ ಹೆಂಗಸು ಕೂಡ ಇದ್ದರು. ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ, ನಮ್ಮ ಕೆಲಸಗಾರರು ಅವರಿಗೆ ನಮಸ್ಕರಿಸಿದರು. ಆ ವಿಐಪಿ, ‘ನಾನು ಬರೋದು ಎಲ್ಲರಿಗೂ ಗೊತ್ತಾಗಿದೆ’ ಎಂದು ಉದ್ಗರಿಸಿದರು. ಆ ವಿಐಪಿ ಇಂದಿರಾ ಗಾಂಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಇಂದಿರಾ ಅವರ ಮುಖದಲ್ಲಿ ಸೀಕ್ರೆಟ್ ವಿಸಿಟ್ ಬಯಲಾದ ಬಗ್ಗೆ ಕೊಂಚ ಅಸಮಾಧಾನವಿತ್ತು. ಅದೂ ಐದೇ ನಿಮಿಷ, ತಕ್ಷಣ ಮೇಡಂ, ‘ಕಾಡಿನ ನಡುವೆಯೂ ನಮ್ಮನ್ನು ಗುರುತಿಸುವ ಜನರಿದ್ದಾರಲ್ಲ’ ಎಂದರು. ಆ ಮಾತಿನಲ್ಲಿ ಹೆಮ್ಮೆ ಇತ್ತು. ಖುಷಿ ಇತ್ತು.
 
ಆಮೇಲೆ ಗುಂಡೂರಾವ್ ನನ್ನನ್ನು ಪರಿಚಯಿಸುತ್ತ, ‘ಮೇಡಂ, ಇವರು ತುಂಬಾ ಹಾನೆಸ್ಟ್ ಆಫೀಸರ್’ ಎಂದರು. ನಾನು ನಮಸ್ಕರಿಸಿದೆ. ಅವರೂ ನಮಸ್ಕರಿಸಿದರು. ಒಂದೈದು ನಿಮಿಷ ಆದಮೇಲೆ ಗುಂಡೂರಾವ್, ‘ಇವರು ಷಾ ಕಮಿಷನ್ ಮುಂದೆ ಹಾಜರಾಗಿದ್ದರು’ ಎಂದರು. ಇಂದಿರಾ ಗಾಂಧಿಯವರಿಗೆ ಏನನ್ನಿಸಿತೋ, ಅವರು ಜೈಲಿನಲ್ಲಿ ಪಟ್ಟ ಕಷ್ಟವನ್ನು, ಕೇವಲ ಒಬ್ಬ ಕೈದಿಯಂತೆ ನಡೆಸಿಕೊಂಡ ರೀತಿಯನ್ನು, ಮನದಾಳದ ನೋವನ್ನೆಲ್ಲ ಬಿಚ್ಚಿಕೊಂಡರು. ಆ ನಂತರ ಹತ್ತಿರ ಕರೆದರು, ಅದು ಹೇಗಿತ್ತೆಂದರೆ ತಾಯಿ ತನ್ನ ಮಗುವನ್ನು ಹತ್ತಿರ ಕರೆಯುವಂತ್ತಿತ್ತು. ದನಿಯೂ ಅದೇ ಭಾವವನ್ನು ಹೊಮ್ಮಿಸುತ್ತಿತ್ತು. ‘ಐ ಯಾಮ್ ಸಾರಿ, ಯೂ ಫೇಸ್ ದ ಕಾನ್ಸಿಕ್ವೆನ್ಸಸ್ ಬಿಕಾಸ್ ಆಫ್ ಮಿ’ ಎಂದರು. ಅಂದರೆ ನಾನು ಸೋತು, ಕಾಂಗ್ರೆಸ್ ಸೋತು ಅರಸು ಮೇಲೆ ಜನತಾ ಸರಕಾರ ಷಾ ಆಯೋಗ ನೇಮಿಸುವಂತಾಗಿ, ಆ ಆಯೋಗದ ಮುಂದೆ ಅರಸು ಸರಕಾರವನ್ನು ಸಮರ್ಥಿಸಿಕೊಳ್ಳಲು ನೀವೆಲ್ಲ ನಿಲ್ಲಬೇಕಾಯಿತಲ್ಲ ಎಂಬುದನ್ನು ಆ ಒಂದು ವಾಕ್ಯದಲ್ಲೇ ಹೇಳಿದ್ದರು.
ಸುತ್ತಮುತ್ತಲ ಕಾಡು, ಪ್ರಾಣಿಗಳು, ಹೊಳೆ ಎಲ್ಲವನ್ನು ನೋಡಲು, ಮೂರು ದಿನ ಇರಲು ಬಂದಿದ್ದವರು, ಒಂದೇ ದಿನಕ್ಕೆ ಕಾರ್ಯಕ್ರಮ ಬದಲಿಸಿ, ಬೇರೆಡೆಗೆ ಸ್ಥಳಾಂತರಿಸಿದರು. ಆದರೆ ಒಂದೇ ದಿನಕ್ಕೆ ನಮ್ಮ ಅಡುಗೆಯ ಪಿಳ್ಳೈ ಮತ್ತವನ ಸಹಾಯಕ ರವಿ ಇಷ್ಟವಾಗಿ, ಅವರೇ ಬೇಕೆಂದು ಅವರು ಹೋದಲ್ಲಿಗೂ ಕರೆಸಿಕೊಂಡರು.
  ಅಂದದ ಅವಿನ್ಯೂ

  ಹುಣಸೂರು ಬೈ ಪಾಸ್ ರಸ್ತೆ ಮಾಡುವ ಯೋಜನೆ ತಯಾರಾಗಿತ್ತು. ರಸ್ತೆ ನಿರ್ಮಾಣ ಕಾರ್ಯ ಈಗಲೂ ಆಗಲೂ ಲೋಕೋಪಯೋಗಿಯದ್ದೆ. ಅರಣ್ಯ ಅಧಿಕಾರಿಯಾಗಿದ್ದ ನಾನು ಹೋಗಿ, ‘ಆ ರಸ್ತೆಯ ಇಕ್ಕೆಲದಲ್ಲಿ ಗಿಡ ನೆಟ್ಟು ಅದ್ಭುತವಾದ ಅವಿನ್ಯೂ ನಿರ್ಮಿಸುತ್ತೇನೆ’ ಎಂದು ಅರಸರಲ್ಲಿ ವಿನಂತಿಸಿಕೊಂಡೆ. ಒಂದು ಸಲ ತೀಕ್ಷ್ಣವಾಗಿ ನೋಡಿದ ಅರಸು, ‘ಆಯ್ತು ಮಾಡು’ ಎಂದರು. ಲೋಕೋಪಯೋಗಿ ಇಂಜಿನಿಯರ್ ಕರೆದು ಸಹಕರಿಸಿ ಎಂದರು. ಹುಣಸೂರಿಗೆ ಹೋಗುವ ಬೈ ಪಾಸ್ ರಸ್ತೆ, ದೊಡ್ಡದಾಗಿತ್ತು. ನಾನು ನನ್ನ ಇಲಾಖಾ ಸಿಬ್ಬಂದಿಯ ಶ್ರಮದಿಂದ ಆ ರಸ್ತೆಯ ಅಕ್ಕಪಕ್ಕದಲ್ಲಿ ಗಿಡ ನೆಟ್ಟು ನೀರು ಹಾಕಿಸಿ ಬ್ಯೂಟಿಫುಲ್ ಅವಿನ್ಯೂ ನಿರ್ಮಿಸಿದೊ. ಒಂದು ದಿನ ಅರಸು ಊರಿಗೆ ಬಂದರು. ಜೊತೆಯಲ್ಲಿ ಅವರ ಮಡದಿಯೂ ಇದ್ದರು. ನಾನು ಹೋಗಿ, ‘ಸಾರ್, ಬೈ ಪಾಸ್ ರಸ್ತೆ ನೋಡಿದ್ರೆ ಚೆನ್ನಾಗಿತ್ತು’ ಅಂದೆ. ಪಕ್ಕದಲ್ಲಿದ್ದ ಮಡದಿ, ‘ಅಯ್ಯೋ ಈಗೆಲ್ಲಾಗುತ್ತೆ, ಕತ್ತಲೆಯಾಯಿತು, ಮನೆಗೆ ಹೋಗೋಣ’ ಎಂದರು. ಅರಸು ಮಾತಾಡಲಿಲ್ಲ. ನನ್ನ ಶ್ರಮ, ಉತ್ಸಾಹವೆಲ್ಲ ಕ್ಷಣಾರ್ಧದಲ್ಲಿ ಕರಗಿಹೋಗಿತ್ತು. ಪೆಚ್ಚು ಮೋರೆ ಹಾಕಿಕೊಂಡು ನಿಂತೆ. ಒಂಬತ್ತು ಗಂಟೆ ಸುಮಾರಿಗೆ ನನ್ನ ಸಹೋದ್ಯೋಗಿಯಿಂದ ಫೋನ್, ‘ಲಕ್ಷ್ಮಣ್, ಎಲ್ಲಿ ಹೋಗಿದ್ರಿ, ಸಿಎಂ ಇನ್ಸ್‌ಪೆಕ್ಷನ್‌ಗೆ ಬಂದಾಗ ನೀವಿರೋದಲ್ವ, ತುಂಬಾನೆ ಮೆಚ್ಚಿ ಮಾತನಾಡಿದರು, ಎಲ್ರಿ ಲಕ್ಷ್ಮಣ್ ಅಂತ ಕೇಳಿದರು’ ಎಂದರು. ನನಗೆ ಆಶ್ಚರ್ಯ, ಅಲ್ಲಿ ಮನೆಯವರು ಹಾಗೆಂದಾಗ ಮರು ಮಾತಾಡದ ಅರಸು, ಅವರೊಂದಿಗೆ ಮನೆಗೆ ಹೋದವರು, ಇಲ್ಲಿಗೆ ಬಂದಿದ್ದಾರೆ. ಚೆನ್ನಾಗಿ ಮಾಡಿದ್ದೀರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂದರೆ ಯಾರಿಗೂ ಮನ ನೋಯಿಸುವಂತೆ ನಡೆದುಕೊಳ್ಳುವ ವ್ಯಕ್ತಿತ್ವವೇ ಅವರದಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.

ಹುಟ್ಟಿದ್ದೆ ಪರಿಹಾರಕ್ಕೆ...

ದೇವರಾಜ ಅರಸು ಅವರು ಎಲ್ಲಿಗಾದರೂ ಬರುತ್ತಾರೆಂದರೆ, ಅದು ಹೇಗೋ ಜನ ಜಮಾಯಿಸಿಬಿಡುತ್ತಿದ್ದರು. ಆ ಜನರಲ್ಲಿ ಬಡವರು, ಶೋಷಿತರು, ಮಹಿಳೆಯರು, ಅಸಹಾಯಕರು, ಶ್ರೀಮಂತರು, ರೈತರು... ಎಲ್ಲರೂ ಇರುತ್ತಿದ್ದರು. ಅವರ ಕೈಯಲ್ಲೊಂದು ಅರ್ಜಿ ಇರುತ್ತಿತ್ತು. ಅರಸರು ಬರುವುದನ್ನು ಕಾದು ಆ ಅರ್ಜಿಯನ್ನು ಅವರ ಕೈಗಿಡುತ್ತಿದ್ದರು. ಅರಸರೂ ಅಷ್ಟೇ, ಕೊಟ್ಟ ಅರ್ಜಿಯನ್ನು ಅಲ್ಲಿಯೇ ಓದುತ್ತಿದ್ದರು. ಅಲ್ಲೇ ಆ ಸಮಸ್ಯೆ ಏನು, ಅದು ಯಾವ ಇಲಾಖೆಗೆ ಸಂಬಂಧಿಸಿದ್ದು, ಅದನ್ನು ಯಾವ ಅಧಿಕಾರಿಗೆ ಕೊಟ್ಟು ಹೇಳಬೇಕು ಎನ್ನುವುದನ್ನು ನಿಂತ ಜಾಗದಲ್ಲಿಯೇ ನಿರ್ಧರಿಸಿಬಿಡುತ್ತಿದ್ದರು. ಅವರವರಿಗೆ ಕೊಟ್ಟು, ಇಷ್ಟು ದಿನಗಳೊಳಗೆ ಇದಾಗಬೇಕು ಎಂದು ಆದೇಶಿಸುತ್ತಿದ್ದರು. ಈ ರೀತಿ, ನಿಂತ ನಿಲುವಿನಲ್ಲಿಯೇ ಈ ಅರ್ಜಿ ಇಂಥ ಇಲಾಖೆಗೆ ಸಂಬಂಧಿಸಿದ್ದು, ಇಂತಿಂಥ ಅಧಿಕಾರಿಗಳಿಗೆ ಇದನ್ನು ಕೊಡಬೇಕು ಎನ್ನುವುದನ್ನು ಆ ಕ್ಷಣದಲ್ಲಿಯೇ ನಿರ್ಧರಿಸುತ್ತಿದ್ದರಲ್ಲ, ಅದು ಅವರಲ್ಲಿ ಮಾತ್ರ. ಇದನ್ನು ಮತ್ತಿನ್ಯಾವ ಮುಖ್ಯಮಂತ್ರಿಗಳಲ್ಲೂ ಕಾಣಲಿಲ್ಲ, ಜನರ ಸಮಸ್ಯೆಗಳೂ ನೀಗಲಿಲ್ಲ. ಸಿಎಂ ಅರಸು ಬರುತ್ತಾರೆಂದರೆ ಸಾಮಾನ್ಯವಾಗಿ ಜಿಲ್ಲೆಯ ಅಷ್ಟೂ ಅಧಿಕಾರಿಗಳು ಅಲ್ಲಿ ಹಾಜರಿರುತ್ತಿದ್ದರು. ಒಂದೊಂದು ಸಲ, ಅಲ್ಲಿದ್ದ ಅಧಿಕಾರಿಯನ್ನೇ ಕರೆದು, ಅವರ ಕೈಗೆ ಅರ್ಜಿ ಕೊಟ್ಟು, ‘ಹೌ ಡು ಸಾಲ್ವ್ ದಿಸ್’ ಎಂದು ಪ್ರಶ್ನಿಸುತ್ತಿದ್ದರು. ಅಧಿಕಾರಿಗಳೂ ಅಷ್ಟೇ, ಅರಸು ಕೊಟ್ಟ ಅರ್ಜಿಗೆ ಸೂಕ್ತ ಸಲಹೆ ಸೂಚಿಸಿ, ಪ್ರಾಮಾಣಿಕವಾಗಿ ಸಮಸ್ಯೆಯನ್ನು ಪರಿಹರಿಸುತ್ತಿದ್ದರು. ನನಗೆ, ಈ ಮನುಷ್ಯ, ಜನರ ಸಮಸ್ಯೆ ಪರಿಹಾರ ಮಾಡಲಿಕ್ಕಾಗಿಯೇ ಹುಟ್ಟಿ ಬಂದವನೇನೋ ಅನ್ನಿಸುತ್ತಿತ್ತು. ಆ ಮಟ್ಟಿನ ಕಾಳಜಿ, ಕಳಕಳಿ ಮತ್ತೆ ಯಾರಲ್ಲಿಯೂ ಕಾಣಲಿಲ್ಲ. ಒಂದು ರಾಜ್ಯದ ಅತ್ಯುನ್ನತ ಅಧಿಕಾರದ ಸ್ಥಾನಕ್ಕೇರಿದರೂ ಜನಸಾಮಾನ್ಯರೊಡನೆ ಬೆರೆಯುತ್ತಿದ್ದ ಪರಿಯನ್ನು, ಅವರ ಹೃದಯ ವೈಶಾ

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News