ಸಂಶೋಧಕಿ ಬೇಲಾ ಭಾಟಿಯಾಗೆ ಬಸ್ತಾರ್‌ನಲ್ಲಿ ಜನರ ಬೆಂಬಲ

Update: 2016-04-01 17:58 GMT

 ಇತ್ತೀಚೆಗೆ ಛತ್ತೀಸ್‌ಗಡದ ಪರ್ಪ ಹಳ್ಳಿಯಲ್ಲಿ ಗುಂಪುಗಳು ಸಂಶೋಧಕಿ ಬೇಲಾ ಭಾಟಿಯಾ ಒಬ್ಬ ಮಾವೋವಾದಿ ಎಂದು ಘೋಷಣೆ ಕೂಗಿದ್ದವು. ಛತ್ತೀಸ್‌ಗಡದ ಉತ್ತರ ದಿಕ್ಕಿನ ಜಗದಲ್ ಪುರದಿಂದ 8 ಕಿ.ಮೀ. ದೂರದಲ್ಲಿರುವ ಪರ್ಪ ಹಳ್ಳಿ ಎಂದಿನಂತೆ ತಣ್ಣಗಿತ್ತು. ಆದರೆ ಮಾರ್ಚ್ 24ರ ಸಂಜೆ ವೇಳೆ 4 ಜೀಪು, ಐದು ಆಟೋ ಮತ್ತು ಒಂದು ಟ್ರಕ್ಕಿನಲ್ಲಿ ಬಂದಿಳಿದ ನೂರಾರು ಜನರ ಸಮೂಹ ಹಳ್ಳಿಯ ನೆಮ್ಮದಿಯನ್ನು ಹಾಳುಮಾಡಿತು. ಅವರೆಲ್ಲರ ಕೈಗಳಲ್ಲಿ ನಕ್ಸಲ್ ಪರವಾಗಿರುವವರು ಬಸ್ತಾರ್ ಬಿಟ್ಟು ತೊಲಗಲಿ ಎಂಬ ಬ್ಯಾನರಗಳಿದ್ದವು. ಮತ್ತು ಅವರೆಲ್ಲಾ ಬೇಲಾ ಭಾಟಿಯಾ ಸಾಯಲಿ ಎಂದು ಘೋಷಣೆ ಕೂಗುತ್ತಿದ್ದರು. ಭಾಟಿಯಾ ಯುನೈಟೆಡ್ ಕಿಂಗ್ಡಮ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿರುವ ಸಮಾಜ ವಿಜ್ಞಾನಿ.

ಅವರು ಕೆಲ ಸಮಯ ಮುಂಬೈ ಟಾಟಾ ಇನ್‌ಸ್ಟಿಟ್ಯೂಟ್ ನಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದವರು. ಮತ್ತು ಕೇಂದ್ರ ಸರಕಾರಕ್ಕೆ ಎಡಪಂಥೀಯ ಉಗ್ರಗಾಮಿತ್ವವನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ ಆಡಳಿತದ ಸವಾಲುಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದಾರೆ. 53 ವರ್ಷದ ಭಾಟಿಯಾ ಕಳೆದ 4 ತಿಂಗಳ ಹಿಂದೆಯಷ್ಟೇ ಪರ್ಪ ಹಳ್ಳಿಗೆ ಬಂದು ನೆಲೆಸಿದ್ದರು. ಆ ಮೊದಲು ಹತ್ತಿರದ ಜಗದಲ್‌ಪುರ ಪಟ್ಟಣದಲ್ಲಿ ಒಂದು ವರ್ಷ ವಾಸವಾಗಿದ್ದರು. ಪ್ರತಿಭಟನಾಕಾರರು ಪರ್ಪ ಹಳ್ಳಿಗೆ ಬಂದಿಳಿದಾಗ ಬೇಲಾ ಭಾಟಿಯಾ ಹತ್ತಿರದ ಜಗದಲ್ ಪುರದಲ್ಲಿದ್ದರು. ಅವರೆ ಲ್ಲರು ಅಲ್ಲಿ ಹಸಿರು, ನೀಲಿ ಮತ್ತು ಕೆಂಪು ಕರ ಪತ್ರಗಳನ್ನು ಹಂಚು ತ್ತಿದ್ದರು. ಆ ಕರಪತ್ರಗಳಲ್ಲಿ ನಿಮ್ಮೆಲ್ಲರ ನಡುವೆ ವಾಸಿಸುತ್ತಿರುವ ನಕ್ಸಲ್ ಬ್ರೋಕರ್ ಬೇಲಾ ಭಾಟಿಯಾ ಎಂದಿತ್ತು.

‘ಆಪಾದಿತ ನಕ್ಸಲ್ ಸಹಾನುಭೂತಿ’ ಭಾಟಿಯಾ ವಿರುದ್ಧ ಈ ಆಪಾದನೆ ಏಕೆ ಹೋರಿಸಲಾ ಗುತ್ತಿದೆ? ಆಕೆಯ ಯಾವ ಕೆಲಸದಿಂದ ಆಕೆಗೆ ನಕ್ಸಲರ ಕುರಿತು ಸಹಾನುಭೂತಿ ಹೊಂದಿದ್ದಾಳೆಂದು ಬಿಂಬಿಸಲಾಯಿತು? ಕಳೆದ ನವೆಂಬರ್ ತಿಂಗಳಿನಲ್ಲಿ ಭಾಟಿಯಾ ಮತ್ತು ಕೆಲವು ಇತರ ಕಾರ್ಯಕರ್ತರು ಭದ್ರತಾ ಪಡೆಗಳು ಆದಿವಾಸಿ ಮಹಿಳೆಯರು ಮೇಲೆ ಅತ್ಯಾಚಾರ ಎಸೆಗಿದ್ದಾರೆ ಎಂಬ ಆರೋಪವನ್ನು ತನಿಖೆಗೊಳಿಸಲು ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ಆಂತರಿಕ ಹಳ್ಳಿಗಳಿಗೆ ಭೇಟಿಕೊಟ್ಟಿದ್ದರು. ಕಾರ್ಯಕರ್ತರು ಅನೇಕ ಮಹಿಳೆಯರಿಂದ ಸಾಕ್ಷಗಳನ್ನು ಕಲೆಹಾಕಿದ್ದು ಅವುಗಳು ಪೊಲೀಸ್ ತನಿಖೆಗೆ ಪ್ರಥಮ ಸಾಕ್ಷಗಳಾದವು. ಈ ಕುರಿತು ಪೊಲೀಸ್ ತನಿಖೆ ತೀವ್ರಗೊಂಡಿದೆ. ಈ ಘಟನೆಯಾದ ಒಂದು ತಿಂಗಳ ನಂತರ ಭಾಟಿಯಾ ಮನೆಯೊಡತಿ ಆಕೆ ವಾಸವಿದ್ದ ಜಗದಲ್ ಪುರ್ ಮನೆ ಖಾಲಿಮಾಡಬೇಕೆಂದು ಹೇಳಿದರು.

ಆಕೆ ವೃತ್ತಿಯಲ್ಲಿ , ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಸಮವಸ್ತ್ರಗಳನ್ನು ಹೊಲಿಯುವ ಒಪ್ಪಂದ ಹೊಂದಿದ್ದರು. ಕಾರಣ ಕೇಳಿದಾಗ ಭಾಟಿಯ ನಾಯಿ ಅತೀವ ಸದ್ದು ಮಾಡುತ್ತದೆ ಎಂದಳು. ಆ ಕಾರಣ ವಿಚಿತ್ರವಾಗಿತ್ತು, ಏಕೆಂದರೆ ಭಾಟಿಯಾ ಮನೆಯಲ್ಲಿ ಇಲ್ಲದ ದಿನಗಳಲ್ಲಿ ಆ ನಾಯಿಗೆ ಆಹಾರ ಮತ್ತು ನೀರನ್ನು ಕೊಡುತ್ತಿದ್ದ ಒಡತಿಯಿಂದ ಈ ಕಾರಣ ನಿರೀಕ್ಷಿಸಲಾಗಿರಲಿಲ್ಲ. ಆದರೂ ಭಾಟಿಯಾ ಪರ್ಪ ಹಳ್ಳಿಗೆ ಸ್ಥಳಾಂತರಗೊಂಡರು. ನಂತರ ಮೊನ್ನೆ ಜನವರಿಯಲ್ಲಿ ಭಾಟಿಯಾ ಛತ್ತೀಸ್‌ಗಡದ ಬಿಜಾಪುರಕ್ಕೆ ತೆರಳಿದ್ದ ಕಾರಣ, ಅಲ್ಲಿ ಆಕೆಯ ವಿರುದ್ಧ ಘೋಷಣೆ ಕೂಗುತ್ತ ಗುಂಪೊಂದು ಜಮಾಯಿಸಿತ್ತು. ಅವರು ಬಸ್ತಾರ್ ಛೋಡೊ ಬಸ್ತಾರ್ ಛೋಡೊ ಬೇಲಾ ಭಾಟಿಯಾ ಬಸ್ತಾರ್ ಛೋಡೊ ಎಂದರೆ ಬೇಲಾ ಭಾಟಿಯಾ ಬಸ್ತಾರ್‌ವನ್ನು ಬಿಟ್ಟು ತೊಲಗಿ ಎಂದು. ಆದರೆ ಅಲ್ಲಿ ಸೇರಿದ್ದ ಸಮೂಹ ಮಾತ್ರ ನಕ್ಸಲ್ ಸಂತ್ರಸ್ಥರೆೆನ್ನುವುದು ತಿಳಿದು ಬಂದಿದೆ. ಅಲ್ಲಿದ್ದ ಕೆಲವರು ಮಾವೋವಾದಿಗಳಿಂದ ತುಳಿತಕ್ಕೊಳಗಾಗಿದ್ದವರು ಮತ್ತು ಅವರ ನೋವಿಗೆ ಕಿವಿಯಾಗುವುದು ಅತೀವ ಅಗತ್ಯವಿದೆ ಎನ್ನುತ್ತಾರೆ ಸಂಶೋಧಕಿ ಬೇಲಾ ಭಾಟಿಯಾ. ಭಾಟಿಯಾ ತಾನು ಎಲ್ಲಾ ತೆರೆನಾದ ಹಿಂಸೆಯನ್ನು ವಿರೋಧಿಸುವುದಾಗಿ ಮತ್ತು ಹಿಂಸೆಯ ಪರವಾಗಿ ಅದು ಯಾವುದೇ ಇರಲಿ ಸರಕಾರ ಅಥವಾ ಮಾವೋವಾದ ತಾನು ಅದರ ವಿರುದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಆಕೆಯ ಪ್ರಕಾರ ಸರಕಾರದ ಹಿಂಸೆಯನ್ನು ವಿರೋಧಿಸುವುದು ಸುಲಭ.

ಕಾರಣ ಸರಕಾರ ಒಂದು ಚೌಕಟ್ಟನ್ನು ಹೊಂದಿದ್ದು ಪೂರ್ವ ನಿರ್ಧಾರಿತ ನಿಯಮಗಳನ್ನು ಪಾಲಿಸುತ್ತದೆ. ಒಂದು ಪಕ್ಷ ಅದು ಹಾಗೆ ನಡೆದು ಕೊಳ್ಳದೆ ಹೋದಲ್ಲಿ ಮಾನವ ಹಕ್ಕು ಸಂರಕ್ಷಣಾ ಸಂಘಟನೆಗಳು ಹೋರಾಟಕ್ಕಿಳಿಯುತ್ತವೆ. ಆದರೆ ಮಾವೋವಾದಿ ಹಿಂಸಾಚಾರ ಖಂಡಿಸಿ ಅದರ ವಿರುದ್ಧ ಹೋರಾಡಲು ಮತ್ತು ಪರಿಹಾರ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲ ಎಂದು ಭಾಟಿಯಾ ಅಭಿಪ್ರಾಯಪಟ್ಟಿದ್ದಾರೆ. ಭಾಟಿಯಾ ಪ್ರಕಾರ, ನಾವು ಧ್ರುವೀಕರಣ ಸಮಾಜದಲ್ಲಿ ಬದುಕುತ್ತಿದ್ದು ಒಂದು ಗುಂಪನ್ನು ನಿರಂತರವಾಗಿ ವಿರೋಧಿಸಿದರೆ ಮತ್ತೊಂದು ಗುಂಪಿಗೆ ಸೇರಿದವರು ಎಂದು ಗ್ರಹಿಸಲಾಗುತ್ತದೆ. ಈ ಬಗೆಯ ಧ್ರುವೀಕರಣ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಾ ಗುವುದು ಚರ್ಚೆ ಮತ್ತು ಸಂವಾದಗಳಿಂದ ಮಾತ್ರ. ಹಾಗೂ ಇದು ಪ್ರಜಾಪ್ರಭುತ್ವ ಮಾರ್ಗ ಕೂಡ. ಪ್ರತಿಯೊಂದು ಗುಂಪು ತನ್ನದೇ ಆದ ವಾದ ಮತ್ತು ತರ್ಕವನ್ನು ಹೊಂದಿದ್ದು ಪರಿಹಾರ ಕಂಡುಕೊಳ್ಳಲು ಮಾತುಕತೆಯ ಆವಶ್ಯಕತೆಯಿದೆ ಎನ್ನುತ್ತಾರೆ.

ಭಾಟಿಯಾ ಮನೆಯ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರ ವಿರುದ್ಧ ಜಿಲ್ಲಾ ಕಲೆಕ್ಟರ್ ಬಳಿ ದೂರು ನೀಡಿದ ಇವರು ಕಲೆಕ್ಟರ್ ಅಮಿತ್ ಕಟಾರಿಯವರನ್ನು ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಮತ್ತು ಈ ತೆರೆನಾದ ಘಟನೆಗಳು ಮತ್ತೆ ಜರಗದಂತೆ ತರಾಟೆ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಈ ಹಿಂದೆ ಇದೇ ಮಾದರಿಯ ಘಟನೆಗಳು ಘಟಿಸಿರುವುದನ್ನು ಮರೆಯುವಂತಿಲ್ಲ. ಭಾಟಿಯಾ ವಿರುದ್ಧದ ಪ್ರತಿಭಟನೆಗೂ ಮುನ್ನ ವಕೀಲೆ ಶಾಲಿನಿ ಗೆರಾ, ಐಶಾ ಖಂಡೇಲವಾಲ ಮತ್ತು ಮಾಲಿನಿ ಸುಬ್ರಹ್ಮಣ್ಯಂ ವಿರುದ್ಧ ಘೋಷಣೆ ಕೂಗಿದ ಗುಂಪುಗಳು ಮಾಲಿನಿ ಸುಬ್ರಹ್ಮಣ್ಯಂ ಮನೆಯ ಮೇಲೆ ಕಲ್ಲು ತೂರಾಟವನ್ನು ಸಹ ನಡೆಸಿದ್ದವು. ನಂತರ ನಕ್ಸಲರನ್ನು ಓಡಿಸಿ ಎನ್ನುವ ಕರಪತ್ರಗಳನ್ನು ಕೂಡ ಹಂಚಿದ್ದವು. ಕೆಲವೇ ಸಮಯದಲ್ಲಿ ವಕೀಲರು ಮತ್ತು ಪತ್ರಕರ್ತರನ್ನು ಬಲವಂತವಾಗಿ ಜಗದಲ್ ಪುರದಿಂದ ಹೊರಕಳಿಸಲಾಯಿತು.

ಜಗದಲ್ ಪುರದಲ್ಲಿ ಭಾಟಿಯಾ ಮತ್ತು ಇತರರ ವಿರುದ್ಧ ಪ್ರತಿಭಟನೆ ನಡೆಸಿದ ಗುಂಪು ಸಾಮಾಜಿಕ ಏಕತಾ ಮಂಚ್ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿದೆ. ಇದು ಬಸ್ತಾರ್ ಜನರ ಪರ ಹೋರಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದೆ. ಆದರೆ ಬಸ್ತಾರ್‌ನ ಅನೇಕರು ಈ ಉದ್ದೇಶವನ್ನು ಸ್ಪಷ್ಟಪಡಿಸಿಲ್ಲ. ಜಗದಲ್ ಪುರ್ ನ ಅನೇಕರು ವಕೀಲರಾಗಿದ್ದು ಜಗದಲ್ ಪುರ್ ಲೀಗಲ್ ಏಡ್ ನ ಭಾಗವಾಗಿದ್ದರು. ಜಗದಲ್‌ಪುರ್ ನ ನೆರೆಹೊರೆಯವರು ವಕೀಲರ ಪರವಾಗಿ ಮಾತನಾಡಿ ಜಗ್‌ಲಗ್‌ನ ಆಡಳಿತದಲ್ಲಿ ಉಂಟಾದ ಅಹಿತಕರ ಬೆಳವಣಿಗೆಯಿಂದ ಜಗ್ ಲಗ್‌ನನ್ನು ವಿಸರ್ಜಿಸಲಾಯಿತು. ಆಟೋ ಚಾಲಕನೊಬ್ಬ ಈ ಕುರಿತು ಹೀಗೆನ್ನುತ್ತಾನೆ. ಅವರು ನಕ್ಸಲ್ ಪರವಾಗಿದ್ದರು ಎನ್ನುವುದನ್ನು ನಾವು ನಂಬುವುದಿಲ್ಲ ಭಾಟಿಯಾ ಜಗದಲ್ ಪುರ್‌ನಲ್ಲಿ ವಾಸ ಮಾಡುತ್ತಿದ್ದಾಗ ಆಕೆಯ ಮನೆಯ ಹತ್ತಿರಲ್ಲಿದ್ದ ಅಂಗಡಿಯ ಮಾಲಕ ಆಕೆಯ ಕುರಿತು ಒಳ್ಳೆಯ ಮಾತುಗಳನ್ನಾಡುತ್ತಾನೆ.

ಪ್ರತಿ ದಿನವು ಭಾಟಿಯಾ ಆಕೆಯ ನಾಯಿಗೆ ಈ ಅಂಗಡಿಯಲ್ಲೇ ಬ್ರೆಡ್ಡು ಖರೀದಿಸುತ್ತಿದ್ದುದ್ದನ್ನು ನೆನಪಿಸಿಕೊಳ್ಳುವ ಮಾಲಕ ಆಕೆ ಹಿಂಸೆಯನ್ನು ಬೆಂಬಲಿಸುವುದನ್ನು ನಂಬುವುದು ನಿಜಕ್ಕೂ ಆಘಾತಕರ ಎನ್ನುತ್ತಾನೆ. ಸಾಮಾಜಿಕ ಏಕತಾ ಮಂಚ್‌ನ ಸದಸ್ಯ ಸುಬ್ಬಾ ರಾವ್‌ನ ಪ್ರಕಾರ, ಭಾಟಿಯಾ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿ ಘೋಷಣೆ ಕೂಗಿದ ಶೇ.90 ಜನರು ಪರ್ಪ ಹಳ್ಳಿಯವರೇ. ಅಂದರೆ ಆಕೆಯ ಹಳ್ಳಿಯವರಿಗೆ ಆಕೆ ಅಲ್ಲಿ ವಾಸವಿರುವುದು ಇಷ್ಟವಿಲ್ಲ ಎನ್ನುತ್ತಾರೆ. ಆದರೆ ಹಳ್ಳಿಯ ಮಂದಿ ಬೇರೆಯದೇ ಆದ ಮಾಹಿತಿ ನೀಡುತ್ತಾರೆ. ಅವರ ಪ್ರಕಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು ಊರಿನ ಸದಸ್ಯರಲ್ಲ. ಹಾಗೂ ಅವರು ಮನೆಯನ್ನು ನಕ್ಸಲ್ ಭಾಟಿಯಾಗೆ ಬಾಡಿಗೆ ನೀಡಬೇಡ ಎಂದು ಮನೆಯೊಡತಿಗೆ ಆದೇಶಿಸಿದ್ದರು. ಭಾಟಿಯಾ ಜಗದಲ್ ಪುರದಿಂದ ಮರಳಿ ಬಂದ ಬಳಿಕ ಆಕೆಯ ಮನೆಯೊಡತಿ ಹೀಗೆನ್ನುತ್ತಾಳೆ. ನೀನು ನಕ್ಸಲ್ ಎಂದು ಅವರು ಹೇಳುತ್ತಾರೆ ಆದರೆ ನಾನು ಅವರಿಗೆ ತಿಳಿಸಿದೆ. ನೀನು ನಿನ್ನ ಅಕ್ಕಿ ಬೇಳೆ ತಂದು ಅಡಿಗೆ ಮಾಡಿಕೊಂಡು ನಿನ್ನಷ್ಟಕ್ಕೆ ಬದುಕುತ್ತೀಯ ಎಂದು. ಹಾಗೂ ಕೇವಲ ಒಂದಷ್ಟು ಪುಸ್ತಕ ಮತ್ತು ಹಾಳೆಗಳನ್ನು ಹೊಂದಿರುವ ನೀನು ನಕ್ಸಲಳಾ ಎಂದು ಪ್ರಶ್ನಾರ್ಥಕವಾಗಿ ನೋಡಿದ್ದರಂತೆ. ಪ್ರತಿಭಟನಾಕಾರರು ಪರ್ಪ ಹಳ್ಳಿಯವರ ಮೇಲೆ ಹೆಚ್ಚೇನು ಪ್ರಭಾವ ಭೀರಲು ಸಾಧ್ಯವಾಗಲಿಲ್ಲ. ಕುಡಿಯುವ ನೀರಿಗಾಗಿ ಭಾಟಿಯಾ ಮನೆ ಮುಂದಿನ ಹ್ಯಾಂಡ್ ಪಂಪ್ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದ ಹೆಂಗಸರು, ಆಕೆಯ ಕುರಿತು ಹೀಗೆನ್ನುತ್ತಿದ್ದರು. ನಾವು ಆಕೆಯ ಕುರಿತು ಕಳವಳಿಸುತ್ತೇವೆ. ನಮಗೆ ನಕ್ಸಲರು ಹೇಗಿರುತ್ತಾರೆಂದು ಗೊತ್ತು ಆದರೆ ಆಕೆ ನಕ್ಸಲ್ ಅಲ್ಲ ಎಂದು.

Writer - ರಕ್ಷಾ ಕುಮಾರ್

contributor

Editor - ರಕ್ಷಾ ಕುಮಾರ್

contributor

Similar News