ಸೊರಗಿದೆ ಉದ್ಯೋಗ ಖಾತ್ರಿ ಯೋಜನೆ

Update: 2016-04-01 18:01 GMT

ಭಾರತವು ಮತ್ತೊಮ್ಮೆ ಭೀಕರ ಬರವನ್ನು ಎದುರಿಸಲು ಹೊರಟಿದ್ದು, ನೀರು, ಆಹಾರ ಮತ್ತು ಉದ್ಯೋಗ ಅಲಭ್ಯವಾಗುತ್ತಿರುವಾಗ ಸರಕಾರವು, ಈ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯಿಂದಲೂ ಸಿದ್ಧತೆ ನಡೆಸಿರುವುದಾಗಿ ಹೇಳಿಕೊಳ್ಳುತ್ತಿರಬಹುದು. ಆದರೆ ಅದು ಅಪ್ಪಟ ಸುಳ್ಳು ಹೇಳಿಕೆ.

ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆಯಿರುವ ಸಿನಿಕ ಭಾವನೆಯು ನಮ್ಮನ್ನಾಳುವವರು ಯಾವ ರೀತಿ ಪ್ರಜ್ಞಾಪೂರ್ವಕವಾಗಿ ಬಂಡವಾಳವನ್ನು ತಡೆದು ಮತ್ತು ಕಾನೂನಿನ ಆದೇಶಗಳನ್ನು ಉಲ್ಲಂಘಿಸಿ ಸಾಮಾನ್ಯ ಜನರು ಅದ್ಯಾವ ರೀತಿ ಸಂಕಷ್ಟದಿಂದ ನರಳುವಂತೆ ಮಾಡುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಬಂಡವಾಳವನ್ನು ಕಡಿಮೆಗೊಳಿಸುವ ಮೂಲಕ ಸರಕಾರವು ಬರಪೀಡಿತ ಪ್ರದೇಶದ ಜನರಿಗೆ ಉದ್ಯೋಗಖಾತ್ರಿ ಯೋಜನೆಯು ಮಾಡಬಹುದಾಗಿದ್ದ ಸಹಾಯದ ಸಾಮರ್ಥ್ಯವನ್ನು ಪ್ರಜ್ಞಾಪೂರ್ವಕವಾಗಿ ಕುಂಠಿತಗೊಳಿಸಿದೆ. ಅಧಿಕೃತವಾಗಿ ದೇಶದ ಮೂರನೆ ಒಂದು ಭಾಗ ಬರಪೀಡಿತವಾಗಿದೆ. 29 ರಾಜ್ಯಗಳಲ್ಲಿ 9 ರಾಜ್ಯಗಳು, 660 ಜಿಲ್ಲೆಗಳಲ್ಲಿ 248 ಜಿಲ್ಲೆಗಳು, 6,800 ಬ್ಲಾಕ್‌ಗಳಲ್ಲಿ 2,327 ಬ್ಲಾಕ್‌ಗಳು ಮತ್ತು 2,57,000 ಪಂಚಾಯತ್‌ಗಳಲ್ಲಿ 96,954 ಪಂಚಾಯತ್‌ಗಳು. ಕೇವಲ ಕ್ಷಣಮಾತ್ರದಲ್ಲಿ ವಾತಾವರಣವನ್ನು ಧ್ವಂಸಮಾಡುವ ನೈಸರ್ಗಿಕ ವಿಕೋಪಗಳಾದ ನೆರೆ ಅಥವಾ ಭೂಕಂಪಗಳಂತಲ್ಲದೆ ಬರವು ನಿಧಾನವಾಗಿ ಹರಡುವುದರಿಂದ ಸರಕಾರಕ್ಕೆ ಮೊದಲೇ ಎಚ್ಚರಿಕೆ ನೀಡುವ ಕಾರಣ ಬರವನ್ನು ಸಮರ್ಥವಾಗಿ ನಿಭಾಯಿಸಲು ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ.

ಆದರೆ ಒಮ್ಮೆ ಬರ ಸಂಪೂರ್ಣವಾಗಿ ಆವರಿಸಿದರೆ ಮತ್ತು ಅದನ್ನು ಅಸಮರ್ಥವಾಗಿ ನಿಭಾಯಿಸಿದರೆ ಅದು ದಶಕಗಳಿಂದ ಗಳಿಸಿದ ಆರ್ಥಿಕ ಬೆಳವಣಿಗೆಯನ್ನೇ ನುಂಗಿ ಬಿಡುತ್ತದೆ ಮತ್ತು ಒಂದಿಡೀ ತಲೆಮಾರನ್ನು ಕಡುಬಡತನಕ್ಕೆ ದೂಡುತ್ತದೆ.
ಉದ್ಯೋಗ ಖಾತ್ರಿ ಯೋಜನೆಯು 1977ರಲ್ಲಿ ರೂಪಿಸಲ್ಪಟ್ಟ ಮಹಾರಾಷ್ಟ್ರ ಉದ್ಯೋಗ ಖಾತ್ರಿ ಕಾಯ್ದೆಯಿಂದ ಸ್ಪೂರ್ತಿ ಪಡೆದು ರಚಿಸಿದಂತಹ ಯೋಜನೆ. ಇದರಲ್ಲಿ ಸರಕಾರ ಬರದ ವಿರುದ್ಧ ಹೋರಾಡಲು ಜನರಿಗೆ ವೇತನಾಧಾರಿತ ಉದ್ಯೋಗವನ್ನು ಒದಗಿಸುವುದು ಒಂದು ಸಾಧನೆ ಎಂಬುದನ್ನು ಕಂಡುಕೊಂಡರು. ಈ ಯೋಜನೆಗೆ ಬಂಡವಾಳವು ಬರದಿಂದ ಕಡಿಮೆ ಪರಿಣಾಮಕ್ಕೊಳಗಾದ ಜನರ ಮೇಲೆ ಹೇರಲಾದ ನಾಲ್ಕು ವಿಧದ ತೆರಿಗೆಯಿಂದ ಸಂಗ್ರಹಿಸಲಾಗುತ್ತಿತ್ತು. ಹಾಗೆ ಪಡೆದ ಹಣ ಈ ಯೋಜನೆಗೆಂದೇ ರೂಪಿಸಲ್ಪಟ್ಟ ದೇಣಿಗೆಗೆ ಹೋಗುತ್ತಿತ್ತು. ಆದರೆ ಉದ್ಯೋಗ ಖಾತ್ರಿ ಯೋಜನೆ ಆ ಭಾಗ್ಯ ಹೊಂದಿಲ್ಲ. ಯಶಸ್ವಿಯೆಂದು ಸಾಬೀತಾಗಿದ್ದರೂ ಈ ಯೋಜನೆ ಆರ್ಥಿಕ ಬರವನ್ನು ಎದುರಿಸುತ್ತಿದೆ.
ಕೆಲವು ನಿಜಾಂಶಗಳು: ಪಾವತಿ ವಿಳಂಬವಾದ ಕಾರಣ 10,588 ಕೋಟಿ ರೂ. ಮೊತ್ತ ಬಾಕಿಯಿದೆ. ಬೇರೆ ಮಾತಲ್ಲಿ ಹೇಳುವುದಾದರೆ 25 ರಾಜ್ಯಗಳ ಒಂಬತ್ತು ಕೋಟಿ ಕಾರ್ಮಿಕರು ಅಕ್ರಮ ವೇತನ ವಿಳಂಬದಿಂದಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮೊತ್ತ ಬರಪೀಡಿತ ಪ್ರದೇಶದ್ದೇ ಆಗಿದೆ. ದುಃಖಕರ ವಿಷಯವೆಂದರೆ ಸರಕಾರ ಈ ಬರಪೀಡಿತ ರಾಜ್ಯಗಳಲ್ಲಿ ಕೆಲಸದ ದಿನಗಳನ್ನು 150ಕ್ಕೆ ಏರಿಸಿದ್ದರೂ ರಾಜ್ಯಗಳಲ್ಲಿ ಹಣದ ಅಭಾವವಿದೆ.
ಹಾಗಾಗಿ ಕೇವಲ ಶೇ.5ರಷ್ಟು ಜನರು ಮಾತ್ರ 150 ಕೆಲಸದ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಇದು ಸರಕಾರ ಉದ್ಯೋಗ ಖಾತ್ರಿ ಯೋಜನೆಯ ಎರಡು ಕಾನೂನಾತ್ಮಕ ಮುಖ್ಯ ಅಂಶಗಳನ್ನು ನಿರ್ಲಕ್ಷಿಸಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ-ಒಂದು ಬೇಡಿಕೆಗೆ ತಕ್ಕ ಕೆಲಸ ಮತ್ತು ಇನ್ನೊಂದು ಸಂಪೂರ್ಣ ಮತ್ತು ಸಕಾಲದಲ್ಲಿ ವೇತನ ಪಾವತಿ.
ಬಂಡವಾಳವನ್ನು ಕಡಿಮೆಗೊಳಿಸುವುದರಿಂದ ಒಂದು ಅನೈತಿಕ ಕ್ರೂರ ವೃತ್ತ ಆರಂಭವಾಗುತ್ತದೆ-ವಿಳಂಬ ಪಾವತಿ ವೇತನದಿಂದ ಕಡಿಮೆ ಬೇಡಿಕೆ ಮತ್ತು ಅದರಿಂದಾಗಿ ಕಡಿಮೆ ಪಾವತಿ. ಇದು ಅಸಹಾಯಕತೆ ಮತ್ತು ಒತ್ತಡಪೂರ್ವಕ ವಲಸೆಗೆ ಹೇತುವಾಗುತ್ತದೆ. ನಿರಂತರ ಬಂಡವಾಳದ ಕೊರತೆ ಕಾನೂನಿನ ವಿಶ್ವಾಸಾತ್ಮಕತೆಯನ್ನೇ ನಿರ್ಲಕ್ಷಿಸುವಂತೆ ಮಾಡುತ್ತದೆ.
ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಆಡಳಿತ ಕೂಡಾ ಇಕ್ಕಟ್ಟಿನಲ್ಲಿವೆ: ಕಾನೂನು ಇವರಿಗೆ ಉದ್ಯೋಗ ಒದಗಿಸುವಂತೆ ತಾಕೀತು ಮಾಡುತ್ತದೆ ಆದರೆ ಇವರ ಬಳಿ ವೇತನ ಪಾವತಿಸಲು ಸಾಕಷ್ಟು ಹಣವಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ ರಾಜ್ಯ ಸರಕಾರ ನಿರಂತರವಾಗಿ ಸಾಕಷ್ಟು ಬಂಡವಾಳ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಮತ್ತು ರಾಜ್ಯಗಳು ತಾವೇ ಬಂಡವಾಳ ಸೃಷ್ಟಿಸುವ ಇಕ್ಕಟ್ಟಿಗೆ ಸಿಲುಕಿವೆ. ಈ ವಿಕೃತಿ ಕಾನೂನನ್ನು ಒಂದು ಕ್ರೂರ ಹಾಸ್ಯವಾಗಿ ಬದಲಾಯಿಸುತ್ತದೆ.
ಆದರೆ ಕೇವಲ ಬರಪೀಡಿತ ಜನರು ಮಾತ್ರ ತೊಂದರೆಗೀಡಾಗಿ ರುವುದಲ್ಲ. ಹಣ ಪಾವತಿ ಮಾಡದ ಕಾರಣದಿಂದಾಗಿ ಬ್ಯಾಂಕ್‌ಗಳಲ್ಲಿ ನಿರ್ವಹಣೆ ಮಾಡದ ಆಸ್ತಿಯ (ಎನ್ಪಿಎ) ರೂಪದಲ್ಲಿ ಸಾಲವನ್ನು ತಲೆಗೆ ಹಾಕಿಕೊಂಡಿರುವ ವಿಜಯ ಮಲ್ಯಾನಂತಹ ಸಂಸ್ಥೆಯ ಮುಖ್ಯಸ್ಥರು ಕೂಡಾ ವಲಸೆ ಹೋಗಬೇಕಾಗಿ ಬಂದಿದೆ! ಬಜೆಟ್‌ನಲ್ಲಿ ಕಾರ್ಪೊರೇಟ್ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದು ಮೊದಲೇ ನಿರ್ಧರಿಸಲಾಗಿತ್ತು. ಮಾರ್ಚ್ 23ರಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಸರಕಾರಿ ಉದ್ಯೋಗಿಗಳಿಗೆ ನಿತ್ಯ ಭತ್ತೆಯಲ್ಲಿ ಶೇ.6 ಏರಿಕೆ ಮಾಡುವ ಮೂಲಕ 14,724 ಕೋಟಿ ರೂ. ಹೋಳಿ ಉಡುಗೊರೆಯನ್ನು ಘೋಷಿಸಿದರು.

ಖಂಡಿತವಾಗಿಯೂ ಭಾರತದಲ್ಲಿ ಅದಕ್ಕಿಂತಲೂ ಹೆಚ್ಚು ಆದ್ಯತೆ ನೀಡಬೇಕಾದ ವಿಷಯಗಳಿವೆ.
ಮಾಜಿ ಪ್ರಧಾನ ಮಂತ್ರಿ ದಿವಂಗತ ಲಾಲ್ ಬಹದೂರ್ ಶಾಸ್ತ್ರಿಯವರು, ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಸಲುವಾಗಿ ಉಳ್ಳವರು ಅನ್ನವನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ್ದರು. ಆ ಅನುಕರಣೀಯ ಯೋಚನೆ ಎಂದೂ ಕಾರ್ಯಗತಗೊಳ್ಳಲೇ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯು ಜವಾಬ್ದಾರಿಯನ್ನು ಉಂಟುಮಾಡುವ ಮತ್ತು ವೈಯಕ್ತಿಕ ಪ್ರಯತ್ನದಿಂದ ಆಚೆಗೆ ಸಾಗುವ ಪ್ರಯತ್ನವಾಗಿದೆ. ಆದರೆ ಇದನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಿದ ಪರಿಣಾಮ ವಿನಾಶಕಾರಿ ಫಲಿತಾಂಶ ಉಂಟಾಗಿದೆ. ಕೇವಲ ಉದ್ಯೋಗ ಖಾತ್ರಿ ಮಾತ್ರ ಬರದ ವಿರುದ್ಧ ಹೋರಾ ಡಲು ಅಗತ್ಯವಿರುವ ಮಾನದಂಡವಲ್ಲ. ಆದರೆ ಕಾನೂನಿನ ಪ್ರಾಮಾಣಿಕ ವಾದ ಅನುಷ್ಠಾನ ಬೃಹತ್ ಮಟ್ಟದಲ್ಲಿ ಬದಲಾವಣೆಯನ್ನು ತರಬಹುದು. ಪ್ರಾಮಾಣಿಕ


 

Writer - ನಿಖಿಲ್ ಡೇ

contributor

Editor - ನಿಖಿಲ್ ಡೇ

contributor

Similar News