ಈ ಜಗದ್ವಿಖ್ಯಾತರು ಪದವಿಯನ್ನೇ ಪಡೆದಿಲ್ಲ !

Update: 2016-04-02 09:05 GMT

ಭಾರತದಲ್ಲಿ ಹೆತ್ತವರು ಮತ್ತು ಬಹಳಷ್ಟು ಮಕ್ಕಳೂ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಜಾಗತಿಕ ತಂತ್ರಜ್ಞಾನ ಉದ್ಯಮಿಗಳು ಕೋಟ್ಯಾಧೀಶರಾಗಲು ಉತ್ತಮ ಶಿಕ್ಷಣದ ಅಗತ್ಯವಿಲ್ಲ ಎಂದು ಸಾಬೀತು ಮಾಡಿ ತೋರಿಸಿದ್ದಾರೆ. ತಂತ್ರಜ್ಞಾನ ಜಗತ್ತಿನಲ್ಲಿ ಶಿಕ್ಷಣದ ಹೊರತಾಗಿಯೂ ದೊಡ್ಡ ಸಾಧನೆ ಮಾಡಿದವರ ಹಲವಾರು ಉದಾಹರಣೆಗಳನ್ನು ಕಾಣಬಹುದು.


ಸ್ಟೀವ್ ಜಾಬ್ಸ್

ಆಪಲ್ ಕಂಪನಿಯನ್ನು ಎತ್ತರಕ್ಕೆ ಕೊಂಡೊಯ್ದ ಸ್ಟೀವ್ ಜಾಬ್ಸ್ 19ನೇ ವಯಸ್ಸಿನಲ್ಲಿ ಶಾಲೆ ಬಿಟ್ಟವರು. ಆದರೆ ಕ್ಯಾನ್ಸರಿಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲಿ ತೀರಿಕೊಂಡರು. ಆದರೆ ಅದೇನು ಅವರನ್ನು ಐಪಾಡ್ ಮತ್ತು ಐಫೋನ್ ತಯಾರಿಯಿಂದ ತಡೆಯಲಿಲ್ಲ.

ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಜಗತ್ತಿನ ಶ್ರೀಮಂತ ವ್ಯಕ್ತಿ. ಆದರೆ 20ನೇ ವಯಸ್ಸಿನಲ್ಲೇ ಕಾಲೇಜು ತೊರೆದರು. ಪಿಸಿ ಮತ್ತು ಲಾಪ್ ಟಾಪ್ ಒಎಸ್ ಬ್ರಾಂಡ್ ಮೈಕ್ರೋಸಾಫ್ಟ್ ನಿರ್ಮಿಸಿದರು. ಈವರೆಗೂ ಇದೇ ಒಪರೇಟಿಂಗ್ ಸಿಸ್ಟಂ ಜಾಗತಿಕವಾಗಿ ಜನಪ್ರಿಯ.

ಮೈಖಲ್ ಡೆಲ್

ಈತನ ಕಂಪನಿ ತಯಾರಿಸುವ ಪಿಸಿಗಳು ಮತ್ತು ಲಾಪ್ ಟಾಪ್ ಗಳನ್ನು ಜಗತ್ತು ಪ್ರೀತಿಸುತ್ತದೆ. ಆದರೆ ಈತ 19ನೇ ವಯಸ್ಸಿನಲ್ಲೇ ಕಾಲೇಜು ತೊರೆದು ಈ ಬ್ರಾಂಡ್ ನಿರ್ಮಿಸಲು ತೊಡಗಿದರು. ಅದು ಡೆಸ್ಕ್ ಟಾಪ್ ಗಳಿಂದ ಆರಂಭಿಸಿ ಸರ್ವರ್ ಗಳವರೆಗೆ ಎಲ್ಲವನ್ನೂ ಜಗತ್ತಿಗೆ ಕೊಟ್ಟಿದೆ.

ಇವಾನ್ ವಿಲಿಯಮ್ಸ್

ಟ್ವಿಟರ್ ವೀರ ಈತ. ಇವಾನ್ 20ನೇ ವಯಸ್ಸಿನಲ್ಲಿ ಶಿಕ್ಷಣ ನಿಲ್ಲಿಸಿದ ಮತ್ತು ದಶಕೋಟಿ ಡಾಲರ್ ಕಮಾಯಿಗಾಗಿ ವೆಬ್ ಸಾಮಾಜಿಕ ತಾಣ ಟ್ವಿಟರ್ ಆರಂಭಿಸಿದ. ಈಗ ಜಗತ್ತು ಅದನ್ನು ಅಪ್ಪಿಕೊಂಡಿದೆ.

ಟಾವಿಸ್ ಕಲನಿಕ್


ಉಬರ್ ಕಾರಿನಲ್ಲಿ ಅನೈತಿಕ ಚಟುವಟಿಕೆಯಾದ ಬಗ್ಗೆ ಬಹಳಷ್ಟು ಓದಿದ್ದೇವೆ. ಆದರೆ ಈ ಕಲ್ಪನೆಯನ್ನು ಅಮೆರಿಕದಲ್ಲಿ ಮೊದಲಿಗೆ ತಂದವನೀತ. ಭಾರತ ಮತ್ತು ಆಸ್ಟ್ರೇಲಿಯದಲ್ಲೂ ಉಬರ್ ಖ್ಯಾತಿ ಪಡೆದಿದೆ. ಟಾಕ್ಸಿ ಅಥವಾ ಕ್ಯಾಬ್ ಬೇಕೆಂದಾಗ ಜನರು ಉಬರ್ ಗೆ ಕರೆ ಮಾಡುತ್ತಾರೆ. ಟ್ರಾವಿಸ್ ಕೂಡ 21ನೇ ವಯಸ್ಸಿನಲ್ಲೇ ನಡತೆ ಸರಿಯಿಲ್ಲ ಎನ್ನುವ ಆರೋಪ ಬಂದು ಕಾಲೇಜು ಬಿಟ್ಟಿದ್ದ.

ಲಾರಿ ಎಲಿಸನ್


ಒರಾಕಲ್ ಸಾಫ್ಟವೇರ್ ಸಂಸ್ಥೆ ಹುಟ್ಟುಹಾಕಿದವ ಈತ. 20ನೇ ವಯಸ್ಸಿನಲ್ಲೇ ಶಿಕ್ಷಣದಿಂದ ಕೆಲಸದ ಕಡೆಗೆ ಗಮನಹರಿಸಿದ. ಆತ ಯಶಸ್ವಿಯಾಗಿ ಒರಾಕಲ್ ನಡೆಸುತ್ತಿದ್ದಾನೆ ಮತ್ತು ಕೋಟ್ಯಾಧೀಶ.


ಜಾನ್ ಕೌಮ್

ದಶಕೋಟಿ ಡಾಲರ್ ತೆತ್ತು ಫೇಸ್ಬುಕ್ ಹೇಗೆ ವಾಟ್ಸಪ್ ಪಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಜಾನ್ ಕೌಮ್ 21ನೇ ವಯಸ್ಸಿನಲ್ಲಿ ಕಾಲೇಜು ಬಿಟ್ಟು ವಾಟ್ಸಪ್ ನಿರ್ಮಿಸಿದ್ದ.


ಮಾರ್ಕ್ ಜುಕರ್ಬಗ್


 ಮಾರ್ಕ್ ಹಾರ್ವರ್ಡ್‌ನಲ್ಲಿದ್ದು ದೊಡ್ಡ ಸಾಮಾಜಿಕ ತಾಣ ಫೇಸ್ಬುಕ್ ಅನ್ನು ತಯಾರಿಸಿದಾಗ ಏನೆಲ್ಲ ಸಮಸ್ಯೆ ಎದುರಿಸಬೇಕಾಯಿತು ಎನ್ನುವುದನ್ನು ದ ಸೋಷಿಯಲ್ ನೆಟ್ವರ್ಕ್‌ಸಿನಿಮಾ ತೋರಿಸಿದೆ. ಅದೇ ಸಮಸ್ಯೆಗಳ ಕಾರಣ ಆತ 20ನೇ ವಯಸ್ಸಿನಲ್ಲಿ ಕಾಲೇಜು ತೊರೆದು ಕೋಟ್ಯಾಧೀಶನಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News