ಶ್ರುತಿಗೆ ಕೇರಳ ಸರಕಾರದಿಂದ 4 ಲಕ್ಷ ರೂ. ಚೆಕ್: ಎಂಡೋಸಂತ್ರಸ್ತೆ ವೈದ್ಯಕೀಯ ವಿದ್ಯಾರ್ಥಿನಿಯ ಕನಸು ನನಸು

Update: 2016-04-07 18:27 GMT


ಕಾಸರಗೋಡು, ಎ.7: ಎಂಡೋ ಸಂತ್ರಸ್ತೆ, ವೈದ್ಯಕೀಯ ವಿದ್ಯಾರ್ಥಿನಿ ಶ್ರುತಿಗೆ ಕೇರಳ ಸರಕಾರ ನೀಡಿದ ಭರವಸೆ ಕೊನೆಗೂ ಈಡೇರಿಸಿದೆ. ಸರಕಾರ ನೀಡಿದ ಭರವಸೆಯಂತೆ ಶಿಕ್ಷಣಕ್ಕಾಗಿ 4 ಲಕ್ಷ ರೂ.ನ ಚೆಕ್ ಶ್ರುತಿ ಕೈ ಸೇರಿದೆ.
 

ಸರಕಾರ ಘೋಷಿಸಿದ್ದ ಸಹಾಯಧನಕ್ಕಾಗಿ ಹಲವು ಸಮಯಗಳಿಂದ ವಿವಿಧ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದ ಶ್ರುತಿ ಮತ್ತು ಪತಿ ಜಗದೀಶ್ ಈಗ ನಿರಾಳರಾ ಗಿದ್ದಾರೆ. ಅಂಗವೈಕಲ್ಯ ಮತ್ತು ಬಡತನದಿಂದಲೇ ಬೆಳೆದು, ವೈದ್ಯೆ ಯಾಗಬೇಕೆಂಬ ಶ್ರುತಿಯವರ ದೀರ್ಘಕಾಲದ ಕನಸು ಸರ ಕಾರದ ನೆರವು ಕೈಗೆಟುಕುವುದರೊಂದಿಗೆ ನನಸಾಗುವಂತಾಗಿದೆ.

ಶ್ರುತಿ ಬೆಂಗಳೂರು ಮಾಗಡಿ ರಸ್ತೆಯ ಹೋಮಿಯೋ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ವೈದ್ಯ ಕೀಯ ಸೀಟು ಲಭಿಸಿದ ಬಳಿಕ ಕೇರಳ ಸರಕಾರ ನಾಲ್ಕು ಲಕ್ಷ ರೂ. ನೀಡುವ ಭರವಸೆ ನೀಡಿತ್ತು.ಆದರೆ ಹಲವು ಕಾರಣಗಳಿಂದ ಶ್ರುತಿಗೆ ಹಣ ಲಭಿಸಿರಲಿಲ್ಲ. ಶಿಕ್ಷಣವು ಅರ್ಧದಲ್ಲೇ ಮೊಟಕುಗೊಳ್ಳುವ ಸ್ಥಿತಿಗೂ ತಲುಪಿತ್ತು. ಇದರಿಂದ ಬೇಸತ್ತು ಶ್ರುತಿಯ ಪತಿ ಜಗದೀಶ್ ಆತ್ಮಹತ್ಯೆಗೂ ಯತ್ನಿಸಿದ್ದರು. ಈ ಬೆಳವಣಿಗೆ ಬಳಿಕ ಸರಕಾರ ಕೂಡಲೇ ಅನುದಾನ ನೀಡಲು ಮುಂದಾಗಿತ್ತು.

ಎಂಡೋಸಲ್ಫಾನ್ ಮಹಾಮಾರಿಗೆ ತುತ್ತಾಗಿದ್ದ ಶ್ರುತಿ ಹುಟ್ಟಿನಿಂದಲೇ ವಿಕಲಚೇತನೆಯಾಗಿದ್ದು, ಕೃತಕ ಕಾಲಿನ ಸಹಾಯದಿಂದ ನಡೆದಾಡುತ್ತಿದ್ದಾರೆ. ವೈದ್ಯಯಾಗಬೇಕೆಂಬ ಕನಸು ಹೊತ್ತಿರುವ ಶ್ರುತಿಯ ಶಿಕ್ಷಣಕ್ಕೆ ಸರಕಾರದ ನೆರವು ಲಭಿಸಿರುವುದರಿಂದ ಕನಸು ನನಸಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News