ಬಿಜೆಪಿ ಜೊತೆ ಜಾನು ಮೈತ್ರಿ

Update: 2016-04-11 18:35 GMT

 ಆದಿವಾಸಿಗಳ ಭೂ ಹಕ್ಕುಗಳ ಹೋರಾಟಗಾರ್ತಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿರುವ ಸಿ.ಕೆ.ಜಾನು, ಸದ್ಯಕ್ಕೆ ತನಗೆ ರಾಜಕೀಯ ಪ್ರವೇಶಿಸುವ ಯೋಚನೆಯಿಲ್ಲವೆಂದು ಹೇಳಿದ ಕೇವಲ 15 ದಿನಗಳ ಬಳಿಕ ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದ್ದಾರೆ.
 ಪ್ರಮುಖ ಆದಿವಾಸಿ ನಾಯಕಿ ಹಾಗೂ ಕೇರಳದ ಭೂಮಿ ಹಕ್ಕುಗಳ ಹೋರಾಟಗಾರ್ತಿಯಾದ ಜಾನು ಬುಧವಾರ ‘ಜನಾಪತ್ಯ ರಾಷ್ಟ್ರೀಯ ಸಭಾ’ ಪಕ್ಷದ ಸ್ಥಾಪನೆಯನ್ನು ಘೋಷಿಸುವುದರೊಂದಿಗೆ, ಕಾಂಗ್ರೆಸ್ ಹಾಗೂ ಸಿಪಿಎಂ ನೇತೃತ್ವದ ಮೈತ್ರಿಕೂಟಗಳೇ ಪ್ರಬಲವಾಗಿರುವ ಕೇರಳ ರಾಜಕೀಯದಲ್ಲಿ ಹೊಸ ಸಂಚಲನವನ್ನುಂಟು ಮಾಡಿದ್ದಾರೆ.
  ನೂತನ ‘ಜನಾಪತ್ಯ ರಾಷ್ಟ್ರೀಯ ಸಭಾ’ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಜೊತೆ ಚುನಾವಣಾ ಹೊಂದಾಣಿಕೆಯನ್ನು ಏರ್ಪಡಿಸಲಿದೆಯೆಂದು ಜಾನು ತಿಳಿಸಿದ್ದಾರೆ.
 ಆದರೆ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಜಾನು ನಿರ್ಧಾರವು ಆದಿವಾಸಿ ಗೋತ್ರ ಮಹಾಸಭಾ (ಎಜಿಎಂಎಸ್)ದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಆದಿವಾಸಿ ಗೋತ್ರ ಮಹಾಸಭಾವು, ಕೇರಳದ ಬುಡಕಟ್ಟು ಜನರ ಸಾಮಾಜಿಕ ಸಂಘಟನೆಯಾಗಿದ್ದು, ಒಂದು ದಶಕಕ್ಕೂ ಅಕ ಸಮಯದಿಂ ಜಾನು ಅದರ ನೇತೃತ್ವ ವಹಿಸಿದ್ದರು. ಜನಾಪತ್ಯ ಊರು ವಿಕಸನ ಮುನ್ನಣಿ (ಪ್ರಜಾತಾಂತ್ರಿಕ ಬುಡಕಟ್ಟು ಗ್ರಾಮಗಳ ಅಭಿವೃದ್ಧಿ ರಂಗ)ಯನ್ನು ಆರಂಭಿಸುವ ತನ್ನ ನಿರ್ಧಾರವನ್ನು ಎಜಿಎಂಎಸ್ ಕೇವಲ ಹದಿನೈದು ದಿನಗಳ ಹಿಂದೆಯಷ್ಟೇ ತಡೆಹಿಡಿದಿತ್ತು.
ಜಾನು ಅವರು ಮಾರ್ಚ್ 21ರಂದುscroll.in ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, ‘‘ರಾಜಕೀಯ ಪಕ್ಷದ ಸ್ಥಾಪನೆ ಸುಲಭದ ಕೆಲಸವೇನಲ್ಲ. ಈ ನಿಟ್ಟಿನಲ್ಲಿ ನಾವು ಒಂದಿಷ್ಟು ಅಡಿಪಾಯ ಹಾಕಿದ್ದೇವೆ. ಆದರೆ ಅದು ಸಾಕಾಗದು. ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಾವು ತಟಸ್ಥ ನಿಲುವನ್ನು ಕೈಗೊಳ್ಳಲಿದ್ದೇವೆ. ನೂತನ ಪಕ್ಷವು ಆನಂತರದ ಹಂತದಲ್ಲಿ ಆರಂಭವಾಗಲಿದೆ’’ ಎಂದು ತಿಳಿಸಿದ್ದರು.
  ಆದರೆ ಇದ್ದಕ್ಕಿದ್ದಂತೆ ಜಾನು ತನ್ನ ಮನಸ್ಸನ್ನು ಬದಲಾಯಿಸಲು ಕಾರಣವೇನೆಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಸುವಂತೆ ಬಿಜೆಪಿ ನಾಯಕರು ಆಕೆಯ ಮನವೊಲಿಸಲು ಯತ್ನಿಸಿದ್ದರು. ಕೇರಳದಲ್ಲಿ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ‘ಭಾರತ ಧರ್ಮ ಜನಸೇನಾ’ದ ನಾಯಕ ವೆಲ್ಲಪಳ್ಳಿ ನಟೇಶನ್ ಕೂಡಾ ಬುಧವಾರ ಜಾನು ಜೊತೆ ಮಾತುಕತೆ ನಡೆಸಿದ್ದರು ಹಾಗೂ ತನ್ನ ಪಕ್ಷವನ್ನು ಸೇರುವಂತೆ ಆಕೆಗೆ ಆಹ್ವಾನ ನೀಡಿದ್ದರು.
  ವೆಲ್ಲಪ್ಪಳ್ಳಿ ಜೊತೆ ಮಾತುಕತೆ ನಡೆಸಿದ ಬಳಿಕ ಜಾನು, ತಾನು ಬಿಜೆಪಿ ಅಥವಾ ಬಿಡಿಜೆಎಸ್ ಪಕ್ಷದ ಭಾಗವಲ್ಲ ಎಂದು ಸ್ಪಷ್ಟಪಡಿಸಿದ್ದರು. ‘‘ಬಿಜೆಪಿಯು ಆದಿವಾಸಿಗಳ ಹಕ್ಕುಗಳ ಪರ ನಿಲ್ಲುವುದಿಲ್ಲವೆಂಬುದು ನನಗೆ ತಿಳಿದಿದೆ. ಮೊದಲಿಗೆ ಎನ್‌ಡಿಎ ಒಕ್ಕೂಟದಲ್ಲ್ಲಿ ನನ್ನ ಪಕ್ಷಕ್ಕೆ ಪ್ರವೇಶ ದೊರೆಯುವಂತೆ ಮಾಡುವುದೇ ನನ್ನ ಗುರಿಯಾಗಿದೆ. ಚುನಾವಣೆಯಲ್ಲಿ ನಾನು ಸ್ಪರ್ಸಬೇಕೇ ಎಂಬ ಬಗ್ಗೆ ಆನಂತರ ನಿರ್ಧರಿಸಲಾಗುವುದು’’ಎಂದವರು ತಿಳಿಸಿದ್ದಾರೆ.
ಜಾನು ನಿಲುವಿಗೆ ಸಹವರ್ತಿಗಳ ವಿರೋಧ
 ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಜಾನು ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ಕ್ಷೇತ್ರದಿಂದ ಸ್ಪರ್ಸುವ ಸಾಧ್ಯತೆಯಿದೆ. 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಆದಿವಾಸಿಗಳಿಗಾಗಿ ಮೀಸಲಾದ ಎರಡು ಕ್ಷೇತ್ರಗಳಲ್ಲಿ ಸುಲ್ತಾನ್ ಬತ್ತೇರಿ ಕೂಡಾ ಒಂದು. ಇದೇ ಜಿಲ್ಲೆಯಲ್ಲಿರುವ ಮಾನಂತವಾಡಿ ಇನ್ನೊಂದು ಬುಡಕಟ್ಟು ಮೀಸಲು ಕ್ಷೇತ್ರವಾಗಿದೆ.
ಬುಡಕಟ್ಟು ನಾಯಕಿಯಾದ ಜಾನು ಅವರು ಕಾಂಗ್ರೆಸ್ ನೇತೃತ್ವದ ಯುಡಿಎ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಐ.ಸಿ. ಬಾಲಕೃಷ್ಣನ್ ಮತ್ತು ಎಲ್‌ಡಿಎ್ ಅಭ್ಯರ್ಥಿ ರುಕ್ಮಿಣಿ ಸುಬ್ರಮಣಿಯನ್‌ಗೆ ಪ್ರಬಲ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ. ಈ ಕ್ಷೇತ್ರದಲ್ಲಿ ಜಾತಿ ರಾಜಕೀಯವು ಮುಖ್ಯ ಪಾತ್ರ ವಹಿಸುವ ಸಾಧ್ಯತೆಯಿದೆ. ಬಾಲಕೃಷ್ಣನ್ ಪ್ರಬಲ ಕುರಿಚಿಯಾ ಬುಡಕಟ್ಟು ಜಾತಿಗೆ ಸೇರಿದ್ದರೆ, ರುಕ್ಮಿಣಿ ಸುಬ್ರಮಣಿಯನ್ ಸಹ ಅಷ್ಟೇ ಬಲಿಷ್ಠವಾದ ಕುರುಮಾ ಪಂಗಡದವರು. ಜಾನು ಅವರು ಆದಿವಾಸಿಗಳಲ್ಲೇ ಕಡುಬಡವರಾದ ಅಡಿಯಾ ಪಂಗಡದವರಾಗಿದ್ದಾರೆ.
     ಈ ಮಧ್ಯೆ ನೂತನ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಜಾನು ಅವರ ನಡೆಗೆ, ಆದಿವಾಸಿ ನಾಯಕರು ಹಾಗೂ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಹಾಗೂ ಎನ್‌ಡಿಎ ಜೊತೆ ಕೈಜೋಡಿಸುವ ಅಕೆಯ ನಿರ್ಧಾರವು ಆತ್ಮಹತ್ಯೀಯವಾದುದು ಎಂದು ಎಜಿಎಂಎಸ್‌ನ ಸಮನ್ವಯಕಾರ ಎಂ.ಗೀತಾನಂದನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘‘ ಬಿಜೆಪಿ ಯಾವತ್ತೂ ಆದಿವಾಸಿಗಳು ಹಾಗೂ ದಲಿತರ ಪರವಾಗಿರಲಿಲ್ಲ. ಬಿಜೆಪಿ ನೇತೃತ್ವದ ಮೈತ್ರಿಕೂಟದ ಜೊತೆ ಚುನಾವಣಾ ಮೈತ್ರಿಯನ್ನು ಏರ್ಪಡಿಸುವುದರಿಂದ, ಶೋಷಿತ ವರ್ಗಗಳಿಗೆ ಯಾವುದೇ ಒಳಿತಾಗಲಾರದು’’ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಜಾನು ಅವರಂತಹ ಪ್ರಮುಖ ಆದಿವಾಸಿ ನಾಯಕಿಯೊಬ್ಬರು ಬಿಜೆಪಿ ಜೊತೆ ಯಾಕೆ ಮೈತ್ರಿ ಮಾಡಬೇಕಾಯಿತು ಎಂಬ ಬಗ್ಗೆ ಎಲ್‌ಡಿಎ್ಹಾಗೂ ಯುಡಿಎ್ ಚಿಂತಿಸಬೇಕಾಗಿದೆಯೆಂದು ಅವರು ಹೇಳಿದರು. ಬಿಜೆಪಿ ಜೊತೆ ಸಖ್ಯ ಬೆಳೆಸುವ ಜಾನು ನಿರ್ಧಾರವನ್ನು ಖ್ಯಾತ ದಲಿತ ಹೋರಾಟಗಾರ ಎ. ಕಾಪಿಕ್ಕಾಡು ಕೂಡಾ ಖಂಡಿಸಿದ್ದಾರೆ. ‘‘ಕೇರಳದ ಆದಿವಾಸಿಗಳ ವಿಷಯದಲ್ಲಿ ಜಾನು ಅವರಿಗೆ ಅಗಾಧವಾದ ಹೊಣೆಗಾ ರಿಕೆಯಿದೆ. ಆಕೆ ಕೇವಲ ಸಾಮಾನ್ಯ ನಾಯಕಿಯಲ್ಲ. ಹೀಗಾಗಿ ಅವರು ಈ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ’’ ಎಂದು ಕಾಪಿಕ್ಕಾಡು ಹೇಳಿದ್ದಾರೆ.

     ಆದಿವಾಸಿ ಹೋರಾಟಕ್ಕೆ ಜೀವತುಂಬಿದ್ದ ಜಾನು ಕಡುಬಡತನದ ಕುಟುಂಬದಲ್ಲಿ ಜನಿಸಿದ ಜಾನು, ತನ್ನ ಕುಟುಂಬದ ನಿರ್ವಹಣೆಗಾಗಿ ಮನೆಗೆಲಸ ಹಾಗೂ ಕೃಷಿಕೂಲಿ ಕಾರ್ಮಿಕಳಾಗಿ ದುಡಿಯುತ್ತಿದ್ದರು. ಮೊದಲು ಆಕೆ ಸಿಪಿಎಂಗೆ ನಿಷ್ಠವಾಗಿರುವ ಕೇರಳ ರಾಜ್ಯ ರೈತ ಕಾರ್ಮಿಕ ಒಕ್ಕೂಟದ ಜೊತೆ ನಂಟನ್ನು ಹೊಂದಿದ್ದರು. ಆದರೆ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಆಕೆ ಯೂನಿಯನ್‌ನಿಂದ ದೂರ ಸರಿದರು.ಆನಂತರ ಆದಿವಾಸಿ ಗೋತ್ರ ಮಹಾಸಭಾದ ನೇತೃತ್ವ ವಹಿಸಿದ ಆಕೆ ಭೂರಹಿತ ಆದಿವಾಸಿಗಳಿಗೆ ಭೂಮಿ ಒದಗಿಸಬೇಕೆಂದು ಆಗ್ರಹಿಸಿ ಪ್ರಬಲವಾದ ಚಳವಳಿಯನ್ನು ನಡೆಸುವ ಮೂಲಕ ಹೋರಾಟದಲ್ಲಿ ಮುಂಚೂಣಿಗೆ ಬಂದರು. ಆದಿವಾಸಿಗಳ ಸ್ಥಳಾಂತರ ವಿರುದ್ಧದ ಕುಡಿಲ್‌ಕೆಟ್ಟಾಲ್ ಹೋರಾಟ, ಮುತುಂಗಾ ಚಳವಳಿ ಹಾಗೂ ಆರಾಳಂ ಭೂಹಕ್ಕು ಚಳವಳಿಗಳಲ್ಲಿ ಈ ಸಂಘಟನೆಯು ಮುಂಚೂಣಿಯಲ್ಲಿತ್ತು. ಸಿಪಿಎಂನ್ನು ಬಲವಾಗಿ ವಿರೋಸುವ ಜಾನು, ಆ ಪಕ್ಷವು ಕೇರಳದ ಅತಿ ದೊಡ್ಡ ಅದಿವಾಸಿ ವಿರೋ ರಾಜಕೀಯ ಪಕ್ಷವೆಂದು ಟೀಕಿಸಿದ್ದಾರೆ.

Writer - ಸಿ.ಕೆ.ಜಾನು

contributor

Editor - ಸಿ.ಕೆ.ಜಾನು

contributor

Similar News