ಸಸ್ಯಾಹಾರಿಗಳು ದೇಶವಿರೋಧಿಗಳು ! ಖ್ಯಾತ ವಿದ್ವಾಂಸ ಕಾಂಚಾ ಐಲಯ್ಯ ಪ್ರತಿಪಾದನೆ
ಖ್ಯಾತ ವಿದ್ವಾಂಸ , ಲೇಖಕ ಹಾಗು ಮೌಲಾನ ಆಝಾದ್ ರಾಷ್ಟ್ರೀಯ ಉರ್ದು ವಿವಿಯ ಸೆಂಟರ್ ಫಾರ್ ಸೋಶಿಯಲ್ ಎಕ್ಸ್ ಕ್ಲೂಶನ್ ಎಂಡ್ ಇನ್ಕ್ಲೂಸಿವ್ ಪಾಲಿಸಿಯ ನಿರ್ದೇಶಕ ಕಾಂಚಾ ಐಲಯ್ಯ ಹೊಸ ಬಾಂಬೊಂದನ್ನು ಹಾಕಿದ್ದಾರೆ. " ಸಸ್ಯಾಹಾರಿಯಾಗಿರುವುದು ದೇಶವಿರೋಧಿಯಾಗಿದೆ " ಎಂದವರು ಅಭಿಪ್ರಾಯಪಟ್ಟಿದ್ದಾರೆ. ವಿಷ್ಣುಪ್ರಿಯ ಭಂಡಾರಂ ಅವರೊಂದಿಗೆ ಮಾತುಕತೆಯಲ್ಲಿ ಅವರು ಹೀಗೆ ಹೇಳಿದ್ದಾರೆ ಎಂದು ಫರ್ಸ್ಟ್ ಪೋಸ್ಟ್ ನಲ್ಲಿ ವಿಷ್ಣುಪ್ರಿಯ ಬರೆದಿದ್ದಾರೆ.
"ಸಸ್ಯಾಹಾರಿಯಾಗಿರುವುದು ದೇಶವಿರೋಧಿಯಾಗಿದೆ.. ಇಡೀ ದೇಶವೇ ಸಸ್ಯಾಹಾರಿಯಾದರೆ ಅದರ ಪ್ರೊಟೀನ್ ಮಟ್ಟವೇ ಕುಸಿಯುತ್ತದೆ. ವೆಸ್ಟ್ ಇಂಡೀಸ್ ಎಲ್ಲ ಪಂದ್ಯಗಳನ್ನು ಯಾಕೆ ಗೆದ್ದಿತು ಗೊತ್ತಾ ? ಯಾಕೆಂದರೆ ಅವರು ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸುತ್ತಾರೆ " ಎಂದು ಕಾಂಚಾ ಐಲಯ್ಯ ಹೇಳಿದ್ದಾರೆ. ಜನರಿಗೆ ಬೀಫ್ ಆಗಲಿ, ಪೋರ್ಕ್ ಆಗಲಿ -ಯಾವುದು ಬೇಕು ಅದನ್ನು ತಿನ್ನಲು ಬಿಡಬೇಕು ಎಂದೂ ಕಾಂಚಾ ಹೇಳಿದ್ದಾರೆ.
ಕಾಂಚಾ ಈ ಹಿಂದೆಯೂ ಹಲವಾರು ಬಾರಿ ಬ್ರಾಹ್ಮಣ್ಯದ ವಿರುದ್ಧ, ಸಂಘ ಪರಿವಾರದ ವಿರುದ್ಧ ನಿರ್ಭೀತಿಯಿಂದ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. 1996 ರಲ್ಲಿ ಅವರು ಬರೆದ Why I am not a Hindu ಪುಸ್ತಕ ಅತ್ಯಂತ ಚರ್ಚೆ ಹಾಗು ವಿವಾದಕ್ಕೆ ಕಾರಣವಾದ ಪುಸ್ತಕ.
ಕಾಂಚಾ ಐಲಯ್ಯ ಅವರೊಂದಿಗಿನ ಮಾತುಕತೆಯ ವಿಷ್ಣುಪ್ರಿಯ ಅವರ ಪೂರ್ಣ ಬರಹದ ಲಿಂಕ್ ಈ ಕೆಳಗಿದೆ :
http://www.firstpost.com/politics/vegetarians-are-anti-national-kancha-ilaiahs-hyperbole-illustrating-ambedkars-food-democracy-2728650.html