ಬಂದೂಕುಧಾರಿ ಕಳ್ಳರಿಂದ ನಾಲ್ವರನ್ನು ರಕ್ಷಿಸಿದ ಧೀರ ಬಾಲಕಿ ಈಕೆ!

Update: 2016-04-16 06:12 GMT

ಸಾಮಾನ್ಯ ವ್ಯಕ್ತಿ ಏನಾದರೂ ದೊಡ್ಡ ಕೆಲಸವನ್ನು ಮಾಡಿದಾಗ ಅದು ನಿಜಕ್ಕೂ ವಿಶಿಷ್ಟವಾಗಿರುತ್ತದೆ. ಧೈರ್ಯ ನಮ್ಮೆಲ್ಲರಲ್ಲೂ ಇದ್ದರೂ ಸಂದರ್ಭ ಬಂದಾಗ ಎದ್ದುನಿಲ್ಲುವ ಬದ್ಧತೆ ಇರುವುದಿಲ್ಲ. ಯುಕೊ ಬ್ಯಾಂಕಿನ ಉದ್ಯೋಗಿ ಉತ್ತರಖಂಡದ ಡೆಹ್ರಾಡೂನ್‌ನ ಮಿತಾಲಿ ಶಾ ಧೈರ್ಯಕ್ಕೆ ಮತ್ತೊಂದು ಹೆಸರು. ಆಕೆಯ ಧೈರ್ಯ ಸಹಕೆಲಸಗಾರರ ಜೀವನವನ್ನು ಉಳಿಸಿದ್ದಲ್ಲದೆ ಬ್ಯಾಂಕ್ ದರೋಡೆಯಾಗುವುದು ತಪ್ಪಿದೆ.

 ಫೆಬ್ರವರಿ 20ರಂದು ಈ ಘಟನೆ ನಡೆದಿತ್ತು. ವಾರಾಂತ್ಯವಾಗಿದ್ದ ಕಾರಣ ಬ್ಯಾಂಕಿನಲ್ಲಿ ಕೆಲವೇ ಜನರಿದ್ದರು. ಮಿತಾಲಿಯೂ ಸೇರಿ ಮೂವರು ಮಹಿಳಾ ಉದ್ಯೋಗಿಗಳಿದ್ದರು. ದರೋಡೆಕೋರ ಹೆಲ್ಮೆಟ್ ಧರಿಸಿ ಮೊದಲು ತನಿಖೆಗಾಗಿ ಬಂದಿದ್ದ. ಮೂವರೇ ಯುವತಿಯರು ಇರುವುದು ನೋಡಿ ರಿವಾಲ್ವರ್ ತೆಗೆದು ಮಿತಾಲಿ ಹಣೆಗೆ ಹಿಡಿದಿದ್ದ. ಆಕೆ ಕ್ಯಾಶ್ ಕೌಂಟರ್ ಬಳಿ ಇದ್ದಳು. ಇತರ ಯುವತಿಯರು ಅಲ್ಲಾಡಿದರೆ ಕೊಲ್ಲುವುದಾಗಿ ಬೆದರಿಸಿದ್ದ. ಬ್ಯಾಂಕಿನಲ್ಲಿದ್ದ ಗ್ರಾಹಕರೂ ಮತ್ತು ಇಬ್ಬರು ಉದ್ಯೋಗಿಗಳು ಹೆದರಿಬಿಟ್ಟರು. ನನ್ನ ಹಣೆ ಮೇಲೆ ಗನ್ ಹಿಡಿದು ಆತನ ಬ್ಯಾಗಿಗೆ ಹಣ ತುಂಬಿಸಲು ಹೇಳಿದ ಕಾರಣ ಆಘಾತವಾಗಿತ್ತು. ಹಣ ಸಂಗ್ರಹಿಸಲು ಶುರು ಮಾಡಿದೆ. ಬಂದೂಕು ಕೆಳಗೆ ಮಾಡುವಂತೆಯೂ ಹೇಳಿದೆ ಎಂದು ವಿವರಿಸಿದರು ಮಿತಾಲಿ. ಮೊದಲಿಗೆ ಮಿತಾಲಿಗೆ ಸ್ವಲ್ಪ ಭಯವಾಗಿತ್ತು. ಆದರೆ ದರೋಡೆಕೋರ ಮತ್ತೊಮ್ಮೆ ಬೆದರಿಸಿದಾಗ ಮಿತಾಲಿ ಧೈರ್ಯತುಂಬಿ, ನಾನು ಹಣ ಕೊಡುವುದಿಲ್ಲ. ಬೇಕಾದರೆ ಶೂಟ್ ಮಾಡು ಎಂದು ಬಿಟ್ಟಳು. ಮಿತಾಲಿಯ ಧ್ವನಿಗೆ ಮತ್ತಿಬ್ಬರು ಹುಡುಗಿಯರಿಗೂ ಧೈರ್ಯ ಬಂದು, ಒಬ್ಬಾಕೆ ಸೈರನ್ ಒತ್ತಿದಳು. ಸೈರನ್ ಶಬ್ದ ಕೇಳಿ ದರೋಡೆಕೋರ ಭಯದಿಂದ ಓಟಕಿತ್ತರೆ, ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಸುದ್ದಿಮುಟ್ಟಿತು.

ಪೊಲೀಸರು ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಎಲ್ಲಾ ಮೂವರು ಯುವತಿಯರ ಧೈರ್ಯ ಬ್ಯಾಂಕಿಗೆ ನೆರವಾಗಿದೆ ಮತ್ತು ಆಡಳಿತ ಮಂಡಳಿಯೂ ಪ್ರಶಂಸಿಸಿದೆ. ರಾಜ್ಯ ಸರ್ಕಾರವು ಮಿತಾಲಿ ಮತ್ತು ಇತರ ಇಬ್ಬರಿಗೆ ಟುಲು ರೌಟೆಲಿ ಪ್ರಶಸ್ತಿ ನೀಡಿದೆ. ನನಗೆ ಹೇಗೆ ಧೈರ್ಯ ಬಂತು ಎಂದು ಗೊತ್ತಿಲ್ಲ. ನಾನು ನನ್ನ ಜೀವ ಕಳೆದುಕೊಳ್ಳಬೇಕು ಅಥವಾ ಎಲ್ಲರೂ ಉಳಿಯಬೇಕು ಎನ್ನುವುದಷ್ಟೇ ನನ್ನ ಮನದಲ್ಲಿತ್ತು ಎನ್ನುತ್ತಾಳೆ ಮಿತಾಲಿ. ಈ ಧೈರ್ಯಕ್ಕೆ ಪ್ರೇರಣೆ ಯಾರು ಎಂದು ಕೇಳಿದರೆ ಆಕೆ ‘ನೀರ್ಜಾ’ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News