ವಿದೇಶಕ್ಕೆ ಹೋಗುವ ಮುನ್ನ ದೇಶದಲ್ಲೇ ಇರುವ ಈ ಸುಂದರ ಸ್ಥಳಗಳಿಗೆ ಒಮ್ಮೆ ಭೇಟಿ ಕೊಡಿ
ವಿದೇಶದಲ್ಲಿ ಅದ್ಭುತ ಜಾಗಕ್ಕೆ ಪ್ರವಾಸ ಹೋಗುವ ಯೋಜನೆ ಹಾಕುತ್ತೀರಿ. ಆದರೆ ನಿಮ್ಮದೇ ನಗರವನ್ನು ನೋಡಿರುವುದಿಲ್ಲ. ಆದರೆ ಕೆಲವೊಮ್ಮೆ ವಿದೇಶಿ ಪ್ರವಾಸಿಗನೊಬ್ಬ ಯಾವುದೋ ಒಂದು ಜಾಗದ ಬಗ್ಗೆ ನಿಮ್ಮೂರಲ್ಲೇ ನಿಮ್ಮನ್ನು ವಿಚಾರಿಸಿದಾಗ, ಅರೆ, ಈ ಜಾಗ ನಾನು ನೋಡೇ ಇಲ್ಲ ಎಂದುಕೊಳ್ಳುವಿರಿ. ಇಲ್ಲಿ ನಾವು ಅಂತಹ ಕೆಲವು ವಿಶೇಷ ತಾಣಗಳ ಬಗ್ಗೆ ತಿಳಿಸಿದ್ದೇವೆ.
ಮುಂಬೈ
►ಅಫ್ಘನ್ ಚರ್ಚ್
ಹಳೇ ಆಂಗ್ಲಿಕನ್ ಚರ್ಚ್ ಬ್ರಿಟಿಷರು ಕಟ್ಟಿಸಿದ್ದಾರೆ. ನೇವಿ ನಗರದ ಶಾಂತ ರಸ್ತೆಯಲ್ಲಿ ಈ ಪಾರಂಪರಿಕ ಕಟ್ಟಡವಿದೆ.
► ಗೋಸ್ಟಾನ
ಸಣ್ಣ ಕಾಫಿ ಮನೆಯನ್ನು ಬಾಂದ್ರದಲ್ಲಿ ಕಂಡು ಹಿಡಿಯುವುದು ಬಹಳ ಕಷ್ಟ. ಇದಿರುವ ಕಟ್ಟಡದ ಹಿಂದೆ ಅಡಗಿಕೊಂಡಿದೆ. ಇಲ್ಲಿ ಸಾಕು ನಾಯಿ ಇದೆ. ಸಂಗೀತ ಉಪಕರಣಗಳನ್ನು ಬಳಸಬಹುದು. ಕಾದಂಬರಿಗಳನ್ನು ಓದಬಹುದು. ಆಡಬಹುದು. ಮನೆಯಂತಹ ಭಾವ ಬರುವ ಪೀಠೋಪಕರಣಗಳೂ ಇವೆ. ಆಹಾರವೂ ಅತ್ಯುತ್ತಮವಾಗಿರುತ್ತದೆ.
► ಮಂಡಪೇಶ್ವರ ಗುಹೆಗಳು
ಪ್ರಸಿದ್ಧ ಕನಹೇರಿ ಗುಹೆಗಳಷ್ಟು ಪ್ರಸಿದ್ಧವಿಲ್ಲ. ಇವು ಬೊರಿವಿಲಿಯಲ್ಲಿ ಪಾಯ್ನಸರ್ ಪರ್ವತಗಳ ಮೇಲಿವೆ.
► ಸಿಯಾನ್ ಹಿಲಾಕ್ ಕೋಟೆ
ಈ ಪಾರಂಪರಿಕ ಕಟ್ಟಡವನ್ನು ಈಸ್ಟ್ ಇಂಡಿಯಾ ಕಂಪನಿ 1670ರಲ್ಲಿ ಕಟ್ಟಿದೆ. ಥಾಣೆಯ ಕಟ್ಟಡಗಳ ಅದ್ಭುತ ದೃಶ್ಯ ಇಲ್ಲಿ ಸಿಗುತ್ತದೆ.
ಪುಣೆ
► ಹೆನ್ರಿ ಗೌರ್ಮೆಟ್
ಪುಣೆಯ ಆಹಾರ ಕೇಂದ್ರಗಳಲ್ಲಿ ಒಂದು. ಎನ್‌ಐಬಿಎಂ ಬಳಿ ಇದೆ. ಇಲ್ಲಿನ ವಾಫಲ್ಸ್ ರುಚಿಯಾಗಿರುತ್ತವೆ.
►ಖಡ್ಕಿ ವಾರ್ ಸಿಮೆಟ್ರಿ
ಕಿರ್ಕೀ ಎಂದು ಪ್ರಸಿದ್ಧವಾಗಿರುವ ಶಾಂತವಾದ ಸಿಮೆಟರಿಯನ್ನು ಯುದ್ಧದ ಹುತಾತ್ಮರಿಗಾಗಿ ಕಟ್ಟಲಾಗಿದೆ. ಸುತ್ತ ಹಸಿರು ಇರುವ ಜಾಗಕ್ಕೆ ಭೇಟಿ ನೀಡುವುದರಿಂದ ಪ್ರಶಾಂತ ಪರಿಸರದ ಆನಂದ ಪಡೆಯಬಹುದು.
►ಡೈವ್ ಘಾಟ್ ರಸ್ತೆ
ಮಾಗರಪಟ್ಟ ನಗರದ ಹೊರಗೆ ಹೋದಾಗ ಡೈವ್ ಘಾಟ್ ರಸ್ತೆ ಸಿಗುತ್ತದೆ. ಇಲ್ಲಿ ನಿಂತರೆ ಪುಣೆ ನಗರದ ಅತ್ಯುತ್ತಮ ದೃಶ್ಯವನ್ನು ಕಾಣಬಹುದು.
ಬೆಂಗಳೂರು
►ದೊಡ್ಡ ಆಲದ ಮರ
ಇದು ಕೆಟ್ಟೊಹಳ್ಳಿ ಗ್ರಾಮದಲ್ಲಿದೆ. 400 ವರ್ಷ ಹಳೇ ಮರ 3 ಎಕರೆಗಳಷ್ಟು ಜಾಗವನ್ನು ಹರಡಿಕೊಂಡಿದೆ. ಒಂದು ಮರದ ಬೇರುಗಳಿಂದಲೇ ಪಸರಿಸಿರುವ ಜಾಗದಲ್ಲಿ ಕಳೆದು ಹೋಗಿಬಿಡಿ.
►ಬ್ರಾಹ್ಮಣರ ಕಾಫಿ ಬಾರ್
ಬಸವನಗುಡಿಯಲ್ಲಿರುವ ಇದು ದಕ್ಷಿಣ ಭಾರತೀಯ ಹೊಟೇಲ್. ಇಲ್ಲಿನ ಉಪಹಾರ ಬಹಳ ಪ್ರಸಿದ್ಧ. ರುಚಿಕರ ಫಿಲ್ಟರ್ ಕಾಫಿ ಸಿಗುತ್ತದೆ. ಇಡ್ಲಿಗಳು ಮತ್ತಷ್ಟು ರುಚಿಕರ.
► ಮಹಾಬೋಧಿ ಸಮಾಜ
ಬೌದ್ಧಮತೀಯರು ಮತ್ತು ಇತರರೂ ಆತ್ಮಾವಲೋಕನಕ್ಕಾಗಿ ಇಲ್ಲಿಗೆ ಭೇಟಿ ಕೊಡಬಹುದು. ಮರದ ಅಡಿಯಲ್ಲಿರುವ ಬುದ್ಧನ ಪ್ರತಿಮೆ ನಿಮ್ಮಲ್ಲಿ ಧಾರ್ಮಿಕ ಭಾವನೆ ಮೂಡಿಸದೆ ಇರದು.
ದೆಹಲಿ
►ಅಗ್ರೇಸನ್ ಕಿ ಬವೋಲಿ
ಬವೋಲಿ ಎಂದರೆ ಉತ್ತಮ ಹೆಜ್ಜೆ ಹಾಕು. ಪುರಾತನ ಬವೋಲಿ ಕನ್ನಾಟ್ ಪ್ಲೇಸಲ್ಲಿ ಅಡಗಿದೆ. ರಾಜ ಉಗ್ರಸೇನನ ಸಾಂಸ್ಕೃತಿಕ ಪರಂಪರೆ ಇಲ್ಲಿದೆ.
►ಚೀಸ್ ಚಾಪ್ಲಿನ್
ಎಂದಾದರೂ ರಸ್ತೆಗಳಲ್ಲಿ ತಿರುಗಾಡಿ ಅಚಾನಕ್ ಆಗಿ ಉತ್ತಮ ಹೊಟೇಲ್ ಸಿಕ್ಕಿದೆಯೇ? ಚೀಸ್ ಚಾಪ್ಲಿನ್ ಅಂತಹ ಸ್ಥಳ. ರುಚಿಕರ ಆಹಾರ ಅಗ್ಗದಲ್ಲಿ ಸಿಗುತ್ತದೆ.
► ಮೆಹ್ರೌಲಿ
ಇಲ್ಲಿ ಬಾಲಬನ್ ಸಮಾಧಿಗೆ ಭೇಟಿ ನೀಡಬಹುದು. 13 ಅಡಿಗಳ ಮಹಾವೀರನ ಬಂಡೆಯ ಪ್ರತಿಮೆಯೂ ಇಲ್ಲಿದೆ.
ಹೈದರಾಬಾದ್
►ರಾತ್ರಿ ಸಂಭಾಷಣೆ
ಸಂಪೂರ್ಣ ಕತ್ತಲಲ್ಲಿರುವ ರೆಸ್ಟೊರೆಂಟಿಗೆ ಹೋದಾಗ ಕೈಯಲ್ಲಿರುವ ಸಾಮಾನೆಲ್ಲವನ್ನೂ ರಿಸೆಪ್ಷನಿನಲ್ಲೇ ಇಡಬೇಕು. ಒಳಗೆ ನೀವು ಕುರುಡರು. ಇಲ್ಲಿ ಕಗ್ಗತ್ತಲಲ್ಲಿ ನಿಮ್ಮ ಆಹಾರವನ್ನು ಕೇವಲ ಸ್ಪರ್ಶಿಸಿ ಅನುಭೂತಿ ಪಡೆದು ತಿನ್ನಬೇಕು. ಜೀವನದಲ್ಲಿ ಒಮ್ಮೆ ಈ ಅನುಭವ ಪಡೆಯಲೇಬೇಕು.
►ಮೊಜಂಜಾಹಿ ಮಾರುಕಟ್ಟೆ
ನಿಜವಾದ ಹೈದರಾಬಾದನ್ನು ತೋರಿಸುವ ಕಿರಿದಾದ ಗಲ್ಲಿಗಳು. ಅಸಂಖ್ಯ ಅಂಗಡಿಗಳು, ತಿನಿಸುಗಳ ಜಾಗ ಮತ್ತು ಸ್ನಾಕ್‌ಗಳನ್ನು ಇಲ್ಲಿ ನೋಡುವುದು, ವಾಸನೆ ತೆಗೆದುಕೊಳ್ಳುವುದು ಮತ್ತು ಧ್ವನಿಯನ್ನೂ ಕೇಳಬಹುದು.
►ಕೆಫೆ ನಿಲೋಫರ್
ಹೈದರಾಬಾದಿನ ಭೇಟಿ ನೀಡಲೇಬೇಕಾದ ಇರಾನಿ ಕೆಫೆ. ರುಚಿಕರ ಇರಾನಿ ಚಾಯ್ ಮತ್ತು ರುಚಿಕರ ಆಸ್ಮಾನಿ ಬಿಸ್ಕತ್ತುಗಳನ್ನು ಇಲ್ಲಿ ಸವಿಯಬಹುದು.
ಕೋಲ್ಕತ್ತಾ
►ಕಾಲೇಜು ರಸ್ತೆ
ಸ್ಥಳೀಯರಿಗೆ ಬಯೋಪಡ ಎಂದೇ ಪರಿಚಿತ ಗಲ್ಲಿಗಳು ಪುಸ್ತಕ ಪ್ರೇಮಿಗಳ ಸ್ವರ್ಗ. ಇದು ಭಾರತದ ಅತೀ ದೊಡ್ಡ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುಕಟ್ಟೆ.
►ಕುಮರ್ತುಲಿ
ದುರ್ಗಾಪೂಜೆ ಪ್ರತಿಮೆ ನಿರ್ಮಾಣದ ಹಿಂದಿನ ಶ್ರಮವನ್ನು ಇಲ್ಲಿ ನೋಡಬಹುದು. ಕಲಾವಿದರ ಬದುಕನ್ನು ಹತ್ತಿರದಿಂದ ನೋಡಬಹುದು.
►ಚೈನಾ ಟೌನ್
ಭಾರತದ ಚೈನಾ ಟೌನ್ ಇಲ್ಲಿದೆ. ಕೋಲ್ಕತ್ತಾದ ಹೊರವಲಯದಲ್ಲಿ ಈ ಸಣ್ಣ ಸಮುದಾಯ ನೆಲೆಸಿದೆ. ಇಲ್ಲಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ದೇಗುಲ, ಮಳಿಗೆಗಳು ಮತ್ತು ವಾಸ್ತುಶಿಲ್ಪದಲ್ಲಿ ಕಾಣಬಹುದು.
►ಮದರ್ಸ್ ವ್ಯಾಕ್ಸ್ ಮ್ಯೂಸಿಯಂ
ಮದರ್ ತೆರೆಸಾ ಹೆಸರಲ್ಲಿ ಇರುವ ವ್ಯಾಕ್ಸ್ ಮ್ಯೂಸಿಯಂ 2014 ನವೆಂಬರಲ್ಲಿ ಆರಂಭವಾಗಿದೆ. ಇಲ್ಲಿ 19 ಪ್ರಮುಖ ವ್ಯಕ್ತಿಗಳ ಪ್ರತಿಮೆ ಇದೆ. ಮದರ್ ತೆರೆಸಾ, ಕಪಿಲ್ ದೇವ್ ಮತ್ತು ಲತಾ ಮಂಗೇಶ್ಕರ್ ಕೂಡ ಇದ್ದಾರೆ.
►ಹೋಗ್ ಮಾರುಕಟ್ಟೆ
ಸಿರ್ಸ್ ಸ್ಟುವರ್ಟ್ ಹೋಗ್ ಹೆಸರಲ್ಲಿರುವ ಹೊಸ ಮಾರುಕಟ್ಟೆಯಿದು. ಲಿಂಡ್ಸೆ ರಸ್ತೆಯ ಹೃದಯಭಾಗದಲ್ಲಿ ಇದು ಇದೆ.
ಚೆನ್ನೈ
►ಕೂಟು ಪಿ ಪತರಿ
ಪಾರಂಪರಿಕ ತಮಿಳು ಮೌಲ್ಯಗಳ ಆಧುನಿಕ ರಂಗಮಂದಿರ. 31 ವರ್ಷಗಳಿಂದ ಪ್ರಾಯೋಗಿಕ ನಾಟಕಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.
►ಜಾರ್ಜ್ ಟೌನ್
ಮೊದಲ ಇಂಗ್ಲಿಷ್ ನಗರವನ್ನು ಆಗಿನ ಮದ್ರಾಸಿನಲ್ಲಿ ಸ್ಥಾಪಿಸಲಾಗಿದೆ. ಜಾರ್ಜ್ ಟೌನ್ ವಸಾಹತುಶಾಹಿ ಪಟ್ಟಣವಾಗಿದೆ. ಹಳೇ ಜಗತ್ತಿನ ವೈಭವ ಮತ್ತು ಪರಂಪರೆ ಇಂದಿಗೂ ಇಲ್ಲಿ ಕಾಣಬಹುದು.
►ಹಿಗಿನ್‌ಬಾಥಂ ಪುಸ್ತಕಮಳಿಗೆ
ಮೌಂಟ್ ರಸ್ತೆಯಲ್ಲಿರುವ ಈ ಪುಸ್ತಕಮಳಿಗೆಯ ವಿಶೇಷತೆ ಎಂದರೆ ಭಾರತದ ಅತೀ ಹಳೇ ಪುಸ್ತಕ ಮಳಿಗೆ ಇದು. ಇದರ ಶಾಖೆಗಳು ದೇಶದಾದ್ಯಂತ ಇವೆ. ಚೆನ್ನೈನಲ್ಲಿರುವ ಈ ಶಾಖೆ 1844ರಲ್ಲಿ ಆರಂಭವಾಗಿದೆ.