ಭಾರತದ ಅತ್ಯಂತ ಪರಿಶುದ್ಧ ಗಾಳಿ ಸಿಗುವ ಇಲ್ಲಿಗೆ ನೀವು ಭೇಟಿ ನೀಡುವುದಿಲ್ಲವೆ?
ದೆಹಲಿ ಐಐಟಿಯ ಪರಿಸರ ವಿಜ್ಞಾನ ಅಧ್ಯಯನ ಕೇಂದ್ರವು ಮಾಲಿನ್ಯದಿಂದ ಆಗುತ್ತಿರುವ ಅವಧಿಪೂರ್ವ ಮರಣಗಳ ಬಗ್ಗೆ ಅಧ್ಯಯನ ನಡೆಸುವಾಗ ಭಾರತದ ಹಿಮಾಚಲ ಪ್ರದೇಶದ ಕಿನ್ನೌರ್ ಅತೀ ಪರಿಶುದ್ಧ ಜಿಲ್ಲೆ ಎಂದು ಬಹಿರಂಗಪಡಿಸಿದೆ. ದೆಹಲಿ ದೇಶದಲ್ಲಿಯೇ ಅತೀ ಕೆಟ್ಟ ಪರಿಸರವಿರುವ ಮೆಟ್ರೋಪಾಲಿಟನ್ ಪ್ರಾಂತ ಎಂದೂ ಸಮೀಕ್ಷೆ ಹೇಳಿದೆ.
2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಅಂಶಗಳು ಗಾಳಿಯಲ್ಲಿರುತ್ತವೆ ಎನ್ನುವುದನ್ನು ಪಿಎಂ 2.5 ಸೂಚಿಸುತ್ತದೆ. ಈ ಸೂಕ್ಷ್ಮ ಮಾಲಿನ್ಯಕಾರಕಗಳು ಗಾಳಿಯನ್ನು ಮಲಿನಗೊಳಿಸಿ ಬ್ರೊಂಚಿಟಿಸ್, ಅಲರ್ಜಿಗಳು, ನಿರಂತರ ಕೆಮ್ಮು ಮತ್ತು ಉರಿಯೂತವನ್ನು ತರಬಹುದು. ವಾಹನಗಳು ಉಗುಳಿದ ಈ ಸೂಕ್ಷ್ಮ ಕಣಗಳು ಅವಧಿಗೆ ಮುನ್ನವೇ ಮರಣ ಸಂಭವಿಸುವಂತೆ ಮಾಡುವಷ್ಟು ಮಾರಕವಾಗಿವೆ. ಇವುಗಳು ಕ್ರೋನಿಕ್ ಅಬಸ್ಟ್ರಕ್ಟಿವ್ ಪಲ್ಮನರಿ ರೋಗ, ಇಶಮಿಕ್ ಹೃದಯ ರೋಗ, ಹೃದಯಾಘಾತ ಮತ್ತು ಶ್ವಾಸಕೋಶದ ಕ್ಯಾನ್ಸರ್ ತರುವ ಸಾಧ್ಯತೆಯಿದೆ.
ಕಿನ್ವೌರ್‌ನಲ್ಲಿರುವ ಗಾಳಿ ಎಷ್ಟು ಸ್ವಚ್ಛವಾಗಿದೆ ಎಂದರೆ ಅಲ್ಲಿ ಈ ಕಣಗಳು ಶೇ 10ಕ್ಕೂ ಕಡಿಮೆ ಇವೆ.
ಉಪಗ್ರಹ ಆಧಾರಿತ ಮಾಹಿತಿಯನ್ನು ಪಡೆದು ಅಧ್ಯಯನ ನಡೆಸಿರುವ ಸಂಶೋಧಕರ ಪ್ರಕಾರ ಕಿನ್ನೌರ್‌ನಲ್ಲಿರುವ ಪಿಎಂ 2.5 ವಾರ್ಷಿಕವಾಗಿ 3.7+-1 ಮೈಕ್ರೋಗ್ರಾಮ್ ಪರ್ ಕ್ಯೂಬಿಕ್ ಮೀಟರ್ (g/m³) ಇವೆ. ಅವುಗಳು ರಾಷ್ಟ್ರೀಯ ಗುಣಮಟ್ಟದ ಗುರಿ 40g/m³ ಗಿಂತ ಶೇ 10ರಷ್ಟು ಕಡಿಮೆ ಇದೆ. ಮತ್ತೊಂದೆಡೆ ಪಿಎಂ 2.5 ಮಟ್ಟವು ವಾರ್ಷಿಕವಾಗಿ 148+-51g/m³ ರಷ್ಟಿವೆ. ಇವುಗಳು ಸುರಕ್ಷಿತ ಮಿತಿಗಿಂತ ಹಲವು ಪಟ್ಟು ಅಧಿಕ.
►ಹಿಮಾಚಲ ಪ್ರದೇಶದ ಕಿನ್ವರ್‌ನ ಈ ಅದ್ಭುತ ಚಿತ್ರಗಳನ್ನು ನೋಡಿ.
►ವಾಹ್, ಗಾಳಿ ಎಷ್ಟು ಸ್ವಚ್ಛ!
►ಗಾಳಿ ಎಷ್ಟು ಸ್ವಚ್ಛವಾಗಿದೆ ಎಂದರೆ ನೀವು ಮೈಲುಗಟ್ಟಲೆ ದೂರ ನೋಡಬಹುದು!
►ದೂರದಲ್ಲಿ ಮಂಜಿನಿಂದ ತುಂಬಿದ ಹಿಮಾಲಯ!
►ಹಿಮ ಕರಗಿ ಹರಿಯುತ್ತಿರುವ ತೊರೆಗಳು!
►ಎಲ್ಲಿದೆ ಸಾರಿಗೆ?
►ನೀಲಿಯ ಎಷ್ಟೊಂದು ಅಲೆಗಳು!
►ಬ್ಯಾಗುಗಳನ್ನು ಪ್ಯಾಕ್ ಮಾಡಿ ಅಲ್ಲಿಗೆ ಸಾಗುವಾಸೆ!
ಕೃಪೆ: www.indiatimes.com