ಗಲ್ಫ್‌ನಲ್ಲಿ ಕೆಲಸ ಬದಲಾಯಿಸಲು ಬಯಸಿದ್ದೀರಾ?
ಯುಎಇಯಿಂದ ಹೊಸ ಉದ್ಯೋಗದ ವೀಸಾ ಪಡೆಯಲು ಇತರ ದೇಶಗಳಲ್ಲಿರುವ ವೀಸಾವನ್ನು ಉದ್ಯೋಗಿ ರದ್ದುಮಾಡಬೇಕಾಗುತ್ತದೆ.
ಪ್ರಶ್ನೆ: ನಾನು ಕುವೈತಿನಲ್ಲಿ ಕೆಲಸ ಮಾಡುವ ಭಾರತದ ಮೆಕಾನಿಕಲ್ ಇಂಜಿನಿಯರ್. ನನ್ನ ಕಂಪನಿ ಯುಎಇಯಲ್ಲಿ ಡ್ಯುಯಲ್ ವರ್ಕ್ ವೀಸಾಗೆ ಪ್ರಯತ್ನಿಸುತ್ತಿದೆ. ನನ್ನ ಕುವೈತ್ ವೇತನ 1500 ದಿನಾರುಗಳು. ಯುಎಇ ವೀಸಾ ಕೆಲಸದ ವೇತನ 18,000 ದಿನಾರ್.
ಯುಎಇಯಿಂದ ಮತ್ತೊಂದು ಕೆಲಸದ ಆಫರ್ ಬಂದಿದೆ. ಆ ಉದ್ಯೋಗ ನಾನು ಪಡೆದರೆ ಸಮಸ್ಯೆಯಾಗುವುದೆ?
► ನೀವು ಹೊಸ ಉದ್ಯೋಗವನ್ನು ಸ್ವೀಕರಿಸಬಹುದು. ಆದರೆ ಈಗ ನೀವು ಯುಎಇ ಮತ್ತು ಕುವೈತಲ್ಲಿ ಮಾಡುತ್ತಿರುವ ಕೆಲಸ ಬಿಡಬೇಕು. ಈಗಿನ ನಿಯಂತ್ರಣಗಳ ಪ್ರಕಾರ ಜಿಸಿಸಿಯ ಒಬ್ಬ ಸದಸ್ಯ ರಾಷ್ಟ್ರದಿಂದ ನಿವಾಸ/ಉದ್ಯೋಗ ವೀಸಾ ಪಡೆದವರಿಗೆ ಮತ್ತೊಬ್ಬ ಜಿಸಿಸಿ ಸದಸ್ಯ ದೇಶದ ಉದ್ಯೋಗ ಮಾಲೀಕರು ಉದ್ಯೋಗದ ವೀಸಾ ಕೊಡುವಂತಿಲ್ಲ. ಹೀಗಾಗಿ ಯುಎಇಯಲ್ಲಿ ಹೊಸ ಉದ್ಯೋಗ ವೀಸಾ ಪಡೆಯಲು ನೀವು ಕುವೈತ್ ಮತ್ತು ಯುಎಇ ಇಬ್ಬರ ಬಳಿ ಇರುವ ವೀಸಾವನ್ನೂ ರದ್ದುಪಡಿಸಬೇಕು.
ಪ್ರಶ್ನೆ: ಎಲ್‌ಎಲ್‌ಸಿಗೆ ಸೈಡ್ ಎಗ್ರಿಮೆಂಟುಗಳ ಕಾನೂನು ವಿಷಯವೇನು? ಯುಎಇಯಲ್ಲಿ ಲಿಮಿಟೆಡ್ ಲಯಬಿಲಿಟಿ ಕಂಪನಿಗೆ ಸೈಡ್ ಅಗ್ರಿಮೆಂಟ್ ಅನುಷ್ಠಾನ ಹೇಗಿದೆ? ಅದರಲ್ಲಿ ಎಲ್‌ಎಲ್‌ಸಿ ಪೂರ್ಣವಾಗಿ ಎಕ್ಸಪಾರ್ಟ್ ಇನ್ವೆಸ್ಟರ್ ಮಾಲೀಕತ್ವದಲ್ಲಿರಬೇಕು ಮತ್ತು ಸ್ಥಳೀಯ ಪ್ರಯೋಜಕ ಲಾಭದ ಮಾಲೀಕರಿಗೆ ನಾಮಿನಿ ಎಂದಿದೆ.
►ಈ ಒಪ್ಪಂದವು ಶೇ 51 ಷೇರನ್ನು ಸ್ಥಳೀಯ ಪ್ರಾಯೋಜಕ ಮತ್ತು ಉಳಿದದ್ದನ್ನು ಎಕ್ಸಪಾಟ್ ಹೂಡಿಕೆದಾರ ಹೊಂದಿರುವ ಕಂಪನಿಗಾಗಿ ನ್ಯಾಯಾಲಯದ ಹೆಚ್ಚುವರಿ ಒಪ್ಪಂದ (ದುಬೈ ನ್ಯಾಯಾಲಯಗಳ ನೋಟರೀಕೃತ). Article 10 (1) of the Federal Law No. 2 of 2015 (Company Law), ಪ್ರಕಾರ ಯುಎಇ ರಾಷ್ಟ್ರದ ಪ್ರಜೆಗಳು ಎಲ್‌ಎಲ್‌ಸಿಯ ಷೇರು ಬಂಡವಾಳದಲ್ಲಿ ಕನಿಷ್ಠ ಶೇ 51 ಷೇರುಗಳನ್ನು ಹೊಂದಿರಬೇಕು. ಈ ಕಾನೂನು ಹೇಳುವ ಪ್ರಕಾರ, ಸಹಯೋಗ ಕಂಪನಿಗಳನ್ನು ಹೊರತುಪಡಿಸಿ ಮತ್ತು ಎಲ್ಲಾ ಷೇರುದಾರರು ಯುಎಇ ಪ್ರಜೆಗಳಾಗಿರುವ ಸಿಂಪಲ್ ಲಿಮಿಟೆಡ್ ಕಂಪನಿಗಳನ್ನು ಹೊರತುಪಡಿಸಿ, ರಾಷ್ಟ್ರದಲ್ಲಿ ಸ್ಥಾಪನೆಯಾದ ಯಾವುದೇ ಕಂಪನಿ ಒಟ್ಟು ಕಂಪನಿ ಷೇರುಗಳ ಶೇ. 51 ಷೇರು ಹೊಂದಿರುವ ಒಂದು ಅಥವಾ ಹೆಚ್ಚು ಯುಎಇ ಸಹಯೋಗಿಗಳಿರಬೇಕು.
ಎಲ್‌ಎಲ್‌ಸಿಯಲ್ಲಿ ಉಳಿದ ಶೇ 49 ಷೇರುಗಳನ್ನು ವಿದೇಶಿ ಹೂಡಿಕೆದಾರರು ಪಡೆಯಬಹುದು. ಯುಎಇ ಪ್ರಜೆ ಶೇ 51 ಷೇರುಗಳನ್ನು ಬಂಡವಾಳದಲ್ಲಿ ಹೊಂದಿರಬೇಕು. ಆತ ನಿಜವಾದ ಸಹಯೋಗಿಯಾಗಿರಬಹುದು ಅಥವಾ ವಿದೇಶಿ ಹೂಡಿಕೆದಾರನ ನಾಮಿನಿಯೂ ಆಗಿರಬಹುದು. ಹಾಗಿರುವಾಗ ವಿದೇಶಿ ಹೂಡಿಕೆದಾರ ಕೆಲವು ಸೈಡ್ ಒಪ್ಪಂದಗಳನ್ನು ವಿದೇಶಿ ಹೂಡಿಕೆದಾರನ ಹೂಡಿಕೆ ರಕ್ಷಣೆಗೆ ಮಾಡಿಕೊಂಡಿರಬೇಕು.
ಹಲವಾರು ಸಂದರ್ಭಗಳಲ್ಲಿ ಯುಎಇಯ ವ್ಯಾಪ್ತಿಯಲ್ಲಿರುವ ಹಲವು ನ್ಯಾಯಾಲಯವು ಸೈಡ್ ಒಪ್ಪಂದಗಳ ಮಾನ್ಯತೆಯನ್ನು ಎತ್ತಿ ಹಿಡಿದಿವೆ. ಈ ವಿಷಯದ ಬಗ್ಗೆ ಹೆಚ್ಚು ವಿವರಗಳಿಗೆ ಯುಎಇಯಲ್ಲಿ ಕಾನೂನು ತಜ್ಞರನ್ನು ಕಾಣಬಹುದು.
ಕೃಪೆ: http://khaleejtimes.com/