ಬ್ರಿಟಿಷ್ ರಾಣಿಗೆ ವರ್ಷಕ್ಕೆ ಎರಡು ಜನ್ಮದಿನಗಳು! ಇಷ್ಟೇ ಅಲ್ಲ, ಇನ್ನೂ ಇವೆ ವಿಚಿತ್ರ ಸೌಲಭ್ಯಗಳು

Update: 2016-04-24 09:05 GMT

ರಾಜಮನೆತನದ ದರ್ಬಾರನ್ನು ಅನುಭವಿಸುವ ಜೊತೆಗೆ ಕೆಲವು ವಿಶಿಷ್ಟ ಸೌಲಭ್ಯಗಳನ್ನೂ ಬ್ರಿಟಿಷ್ ರಾಣಿ ಹೊಂದಿದ್ದಾರೆ. ಬ್ರಿಟಿಷ್ ರಾಣಿ ಹೊಂದಿರುವ ಅಂತಹ ವಿಶಿಷ್ಟ ಅಧಿಕಾರಗಳ ವಿವರ ಇಲ್ಲಿದೆ.

1. ಪರವಾನಗಿ ಇಲ್ಲದೆ ಗಾಡಿ ಓಡಿಸಬಹುದು

ಇಂಗ್ಲೆಂಡಿನಲ್ಲಿ ಗಾಡಿ ಚಲಾಯಿಸಲು ಪರವಾನಗಿ ನಂಬರ್ ಅಥವಾ ನಂಬರ್ ಪ್ಲೇಟ್ ಅಗತ್ಯವಿಲ್ಲದೆ ಇರುವ ಏಕೈಕ ವ್ಯಕ್ತಿ ರಾಣಿ. ವಿಶ್ವ ಯುದ್ಧ 11 ಸಂದರ್ಭದಲ್ಲಿ ರಾಣಿ ವಾಹನ ಚಲಾಯಿಸಲು ಕಲಿತಿದ್ದರು. ಆಗ ಮಹಿಳಾ ಆಕ್ಸಿಲರಿ ಟೆರಿಟರಿ ಸೇವೆಯ ಪ್ರಥಮ ಚಿಕಿತ್ಸಾ ಟ್ರಕ್‌ ಅನ್ನು ಅವರು ಓಡಿಸಿದ್ದರು.

2. ಪ್ರಯಾಣ ಮಾಡಲು ಪಾಸ್‌ಪೋರ್ಟ್ ಅಗತ್ಯವಿಲ್ಲ

ರಾಜಮನೆತನದ ಇತರ ಸದಸ್ಯರ ಬಳಿ ಪಾಸ್‌ಪೋರ್ಟ್‌ಗಳಿವೆ. ಆದರೆ ಎಲ್ಲಾ ಬ್ರಿಟಿಷ್ ಪಾಸ್‌ಪೋರ್ಟ್‌ಗಳು ರಾಣಿಯ ಹೆಸರಲ್ಲಿ ಕೊಡಲಾಗುವ ಕಾರಣ ಸ್ವತಃ ಅದರ ಅಗತ್ಯವಿಲ್ಲ.

3. ಎರಡು ಹುಟ್ಟುಹಬ್ಬ ಆಚರಿಸುತ್ತಾರೆ

ಎಷ್ಟು ಪ್ರಮುಖ ವ್ಯಕ್ತಿಯೆಂದರೆ ವರ್ಷಕ್ಕೆ ಎರಡು ಹುಟ್ಟುಹಬ್ಬ ಆಚರಿಸುತ್ತಾರೆ. ತಮ್ಮ ಅಧಿಕೃತ ಏಪ್ರಿಲ್ 21ರ ಹುಟ್ಟುಹಬ್ಬ ಮತ್ತು ಜೂನ್‌ನಲ್ಲಿ ಮತ್ತೊಂದು ಹುಟ್ಟುಹಬ್ಬ ಆಚರಿಸುತ್ತಾರೆ.

4. ರಾಣಿ ಖಾಸಗಿ ನಗದು ಯಂತ್ರ (ಎಟಿಎಂ) ಎಂದಿಗೂ ಬಳಸಿಲ್ಲ.

ಬಕಿಂಗ್‌ಹಾಮ್ ಪ್ಯಾಲೇಸಲ್ಲಿ ಪಾಷ್ ಬ್ಯಾಂಕ್ ಕೌಟಸ್ ಅವರಿಗಾಗಿ ಪ್ರತ್ಯೇಕ ನಗದು ಯಂತ್ರ ಅಳವಡಿಸಿದ್ದಾರೆ.

5. ಬಹಳಷ್ಟು ಪ್ರಾಣಿಗಳನ್ನು ಸಾಕುತ್ತಾರೆ

ಕಾರ್ಗಿಸ್ ಸಮೂಹಗಳ ಜೊತೆಗೆ ಥೇಮ್ಸ್ ನದಿಯ ಎಲ್ಲಾ ಬಾತುಕೋಳಿಗಳು ಮತ್ತು ಬ್ರಿಟಿಷ್ ನೀರಿನಲ್ಲಿರುವ ಡಾಲ್ಫಿನುಗಳು ತಿಮಿಂಗಿಲಗಳೂ ರಾಣಿಗೆ ಸೇರಿವೆ.

6. ಆಕೆ ತೆರಿಗೆ ಕಟ್ಟಬೇಕಾಗಿಲ್ಲ

ರಾಣಿಗೆ ತೆರಿಗೆ ಕಟ್ಟುವ ಅಗತ್ಯವಿಲ್ಲದೆ ಇದ್ದರೂ 1992ರಲ್ಲಿ ಅವರು ಸ್ವತಂತ್ರವಾಗಿ ತೆರಿಗೆ ಪಾವತಿಸಲು ಆರಂಭಿಸಿದ್ದಾರೆ.

7. ಆಕೆಯನ್ನು ಎಂದಿಗೂ ಬಂಧಿಸಲಾಗುವುದಿಲ್ಲ

ಅವರಿಗೆ ಶಿಕ್ಷೆ ವಿಧಿಸುವಂತಿಲ್ಲ. ರಾಣಿ ಮತ್ತು ಆಕೆಯ ಕುಟುಂಬ ತಮ್ಮ ಮಾಹಿತಿಯನ್ನು ಗೋಪ್ಯವಾಗಿಡಬಹುದು. ಬೇರೆಯವರಿಗೆ ನೀಡಬೇಕಾಗಿಲ್ಲ.

8. ತಮ್ಮದೇ ಕವಿ ಹೊಂದಿದ್ದಾರೆ

ಅವರ ಈಗಿನ ಆಸ್ಥಾನ ಕವಿ ಕ್ಯಾರೋಲ್ ಅನ್ ಡಫಿ. ರಾಷ್ಟ್ರೀಯ ಪ್ರಮುಖ ಕವಿಗೆ ಈ ಸ್ಥಾನ ಸಿಗುತ್ತದೆ.

9. ಧರ್ಮದ ಮುಖ್ಯಸ್ಥೆ

ರಾಜಮನೆತನದ ರಾಣಿಯಾಗುವ ಜೊತೆಗೆ ಇಂಗ್ಲೆಂಡಿನ ಚರ್ಚಿನ ಮುಖ್ಯಸ್ಥರೂ ಅವರೇ. ಹೀಗಾಗಿ ಅವರು ಇತರ ಧರ್ಮಕ್ಕೆ ಪರಿವರ್ತನೆಯಾಗುವಂತಿಲ್ಲ. ಹಾಗೆ ಮಾಡಿದರೆ ಅವರ ಪಟ್ಟ ಕಳೆದುಕೊಳ್ಳುತ್ತಾರೆ, ಮತ್ತೊಬ್ಬರನ್ನು ನೇಮಿಸಲಾಗುತ್ತದೆ.

ಕೃಪೆ: http://www.cosmopolitan.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News