ಬೇಸಿಗೆ ಪ್ರವಾಸಕ್ಕೆ ಇಲ್ಲಿವೆ 10 ಅತ್ಯುತ್ತಮ ಆಯ್ಕೆಗಳು
ಪರ್ವತ ಪ್ರದೇಶ, ಕಡಲತೀರಗಳು, ಗುಡ್ಡಗಾಡು ಮತ್ತು ಕಾಡುಗಳು ಬೇಸಗೆಯಲ್ಲಿ ಭಾರತದ ಅತ್ಯುತ್ತಮ ಪ್ರವಾಸದ ಆಯ್ಕೆಗಳಿವು. ಮೇನಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ 10 ಅತ್ಯುತ್ತಮ ಸ್ಥಳಗಳು ಇಲ್ಲಿವೆ
1. ಭೂಗ್ರಹದ ಸ್ವರ್ಗ- ಕಾಶ್ಮೀರ
ಅದ್ಭುತ ಸೌಂದರ್ಯ, ವಿಸ್ಮಯಕಾರಿ ಪರ್ವತಗಳು, ಶಾಲಿಮಾರ್ ಉದ್ಯಾನವನ, ದಲ ಸರೋವರದಲ್ಲಿ ರೋಮ್ಯಾಂಟಿಕ್ ಶಿಕಾರ ಪ್ರಯಾಣ ಹೀಗೆ ಕಾಶ್ಮೀರ ಭೂಗ್ರಹದಲ್ಲಿರುವ ಸ್ವರ್ಗ. ಮೇಯಲ್ಲಿ ಭೇಟಿ ಮಾಡಬಹುದಾದ ಒಂದು ಅತ್ಯುತ್ತಮ ಸ್ಥಳವಿದು. ಪ್ರಾಕೃತಿಕ ಸೌಂದರ್ಯ ಮತ್ತು ರುಚಿಕರ ಕಾಶ್ಮೀರಿ ಆಹಾರವನ್ನು ಸವಿಯಲು ಮರೆಯಬೇಡಿ. ಸಾಹಸ ಪ್ರೇಮಿಗಳಿಗೆ ಪರ್ವತ ಚಾರಣ ಮತ್ತು ಹೈಕಿಂಗ್ ಉತ್ತಮ ಆಯ್ಕೆಗಳು.
2. ಖಾಸಿ ಶೈಲಿಯ ಸಂಭ್ರಮ- ಶಿಲ್ಲಾಂಗ್
ಶಿಲ್ಲಾಂಗ್ ಸೌಂದರ್ಯದ ಸ್ವರ್ಗ. ಪವಿತ್ರ ಮತ್ತು ಹಿತಕರ. ಪ್ರಕೃತಿಯನ್ನು ಇಷ್ಟಪಡುವವರಿಗೆ ಇದು ಸ್ವರ್ಗ. ಈ ಮೇನಲ್ಲಿ ಶಿಲ್ಲಾಂಗ್ ಪ್ರವಾಸ ಕೈಗೊಂಡು ಅನುಭವಕ್ಕೆ ಇನ್ನಷ್ಟು ತಿರುವು ಕೊಡಿ. ಪ್ರಕೃತಿಯ ಸೌಂದರ್ಯದ ಜೊತೆಗೆ ಉಮಿಯಂ ಸರೋವರ, ಜಲಪಾತ, ಶಿಲ್ಲಾಂಗ್ ಪರ್ವತ ಶ್ರೇಣಿ ಮತ್ತು ಮೇಸ್ವಿನ್ರಾಂ ಕೂಡ ಇದೆ.
3. ಮಳೆಯಲ್ಲಿ ನೆನೆಯಿರಿ- ಚಿರಾಪುಂಜಿ
ಸಾಹಸ ಮತ್ತು ಮಜಾಗಾಗಿ ನೋಡುತ್ತಿದ್ದರೆ ಚಿರಾಪುಂಜಿಗೆ ಮೇನಲ್ಲಿ ಭೇಟಿ ನೀಡುವುದು ಉತ್ತಮ. ನಿಮಗೆ ಪುನಶ್ಚೇತನ ನೀಡಲಿರುವ ರಜಾ. ಜೀವಿತಾವಧಿ ಅನುಭವಕ್ಕೆ ಮಳೆಯಲ್ಲಿ ಮಿಂದು ಬನ್ನಿ. ಮಾಸ್ವಾಮಿ ಜಲಪಾತ, ನೊಕ್ರೆಕ್ ರಾಷ್ಟ್ರೀಯ ಉದ್ಯಾನವನ, ನೊಹ್ಕಲಿಕೈ ಜಲಪಾತ ಮತ್ತು ಕ್ರೇಮ್ ಮ್ವಾಮುಲ್ಹಾ ಗುಹೆಗೆ ಭೇಟಿ ನೀಡಬಹುದು.
4. ಗೋವಾಗೆ ಭೇಟಿ ಕೊಡಿ
ಅದ್ಭುತ ಕಡಲ ತೀರಗಳು, ಸುಂದರ ಸೂರ್ಯ ಮತ್ತು ಸಮುದ್ರದ ಅಲೆಗಳು ನಿಮಗೆ ಹೊಸ ಲೋಕವನ್ನು ತೋರಿಸಲಿದೆ. ವಸಾಹತುಶಾಹಿ ಕುರುಹುಗಳು ಗೋವಾದ ಹಲವು ಜನಪ್ರಿಯ ತಾಣಗಳಲ್ಲಿ ಕಾಣಬಹುದು. ಅದರ ಅದ್ಭುತ ಕಡಲ ತೀರಗಳು ಸುಂದರ ಮತ್ತು ಸಂಭ್ರಮ ಪಡಲು ಹೇಳಿಮಾಡಿಸಿದಂತಿವೆ. ಮೇ ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ.
5. ನಿಗೂಢ ಹಾರ್ಸ್ಲಿ ಗುಡ್ಡಗಳು
ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳಬೇಕಾದರೆ ಆಂಧ್ರ ಪ್ರದೇಶದ ಹಾರ್ಸ್ಲೀ ಗುಡ್ಡಗಳ ಪವಿತ್ರ ಜಾಗಕ್ಕೆ ಭೇಟಿ ನೀಡಬಹುದು. ಯೂಕಲಿಪ್ಟಸ್, ಗುಲ್ ಮೊಹರು, ಅಲಮಾನ ಮತ್ತು ಜಕರಂದ ಮೊದಲಾದ ಮರಗಳ ಸೌಂದರ್ಯ ನಿಮ್ಮನ್ನು ಸೂರೆಗೊಳಿಸಲಿದೆ. ಹಾರ್ಸ್ಲೀ ಹಿಲ್ಸ್ ಮ್ಯೂಸಿಯಂ, ಹೈ ವ್ಯೆ ಮತ್ತು ಪರಿಸರ ಉದ್ಯಾನವನ ಸರೋವರ ಗಂಗೋತ್ರಿ ನೋಡಲು ಮರೆಯಬೇಡಿ.
6. ಕಾಡಿನ ಸೌಂದರ್ಯ- ಮಸಿನಗುಡಿ
ಸಾಹಸ ಪ್ರಿಯರಿಗೆ ತಮಿಳುನಾಡಿನ ಮಸಿನಗುಡಿ ಅದ್ಭುತ ರೌದ್ರಮಯ ಕಾಡು ಮತ್ತು ಹಸಿರಿನ ಅನುಭವ ನೀಡಲಿದೆ. ಕಾಡು, ವನ್ಯಜೀವಿ ಮತ್ತು ಶಾಂತ ವಾತಾವರಣ ಮುದ ನೀಡಲಿದೆ.
7. ಬ್ರಿಟಿಷ್ ಕಾಲದ ಜನಪ್ರಿಯ ಬೇಸಗೆ ಸ್ಥಳ
ನೈನಿತಾಲ್ ಈಗಲೂ ಬೇಸಗೆಯಲ್ಲಿ ಜನರ ಪ್ರಿಯತಾಣ. ದೆಹಲಿ ಬಳಿ ಇರುವ ಇದರ ಪರಿಸರ ಸೌಂದರ್ಯ ಮತ್ತು ಸರೋವರದಲ್ಲಿ ಬೋಟಿಂಗ್ ಖುಷಿಕೊಡಬಹುದು.
8. ಮುನ್ನಾರ್ ಸೌಂದರ್ಯ
ಕೇರಳದಲ್ಲಿರುವ ಮುನ್ನಾರ್ ಮೇನಲ್ಲಿ ಭೇಟಿ ನೀಡಲಿರುವ ಅತ್ಯುತ್ತಮ ಸ್ಥಳ. ತೋಟಗಳು, ಪ್ರಾಕೃತಿಕ ಸೌಂದರ್ಯ, ಹಸಿರು ಕಣಿವೆ ಅದ್ಭುತ.
9. ಲಕ್ಷದ್ವೀಪದಲ್ಲಿ ಕದ್ಮತ್ ದ್ವೀಪ
ಮೋಜು ಮತ್ತು ರೋಮಾಂಚನ ಬಯಸುತ್ತಿದ್ದಲ್ಲಿ ಕದ್ಮತ್ ದ್ವೀಪಕ್ಕೆ ಭೇಟಿ ಕೊಡಿ. ಅಲ್ಲಿನ ಪ್ರಾಕೃತಿಕ ಸೌಂದರ್ಯ, ನೀಲಿ ಸಮುದ್ರ ಅದ್ಭುತವಾಗಿವೆ. ಮೀನು ಹಿಡಿಯುವುದ, ಕಯೇಕಿಂಗ್, ಸ್ಕೂಬಾ ಡೈವಿಂಗ್ ಮೊದಲಾದ ನೀರಿನ ಕ್ರೀಡೆಗಳಲ್ಲೂ ಭಾಗವಹಿಸಬಹುದು.
10. ಕೊಡಗಿನ ಸೌಂದರ್ಯ
ಮೇಯಲ್ಲಿ ಉತ್ತಮ ರಜಾ ತಾಣವೆಂದರೆ ಕರ್ನಾಟಕದ ಕೊಡಗು. ಕಾವೇರಿ ನದಿಯ ತಪ್ಪಲಿನ ಪ್ರಾಕೃತಿಕ ಸೌಂದರ್ಯ ಮತ್ತು ಹಸಿರು ಮನಮೋಹಕ. ನಾಗರಹೊಳೆ ಉದ್ಯಾನವನ, ಇರ್ಪು ಜಲಪಾತ, ಅಬ್ಬಿ ಜಲಪಾತ, ದುಬಾರೆ ಆನೆ ಶಿಬಿರ, ನಾಮಡ್ರೊಲಿಂಗ್ ಸ್ಮಾರಕ ಮತ್ತು ಪುಷ್ಪಗಿರಿ ವನ್ಯಜೀವಿ ತಾಣಗಳಿಗೆ ಭೇಟಿ ನೀಡಬಹುದು.
http://travel-blog.waytoindia.com