ಖುಷಿ ಖುಷಿ ಆಗಿರಲು, ಆರೋಗ್ಯ ಕಾಪಾಡಲು ಕ್ಷಮಿಸಿಬಿಡಿ, ಮರೆತುಬಿಡಿ

Update: 2016-04-25 06:22 GMT

ಪ್ರತೀ ಧರ್ಮವೂ ಕ್ಷಮೆಯನ್ನು ಕಲಿಸುತ್ತದೆ. ಆದರೆ ನಾವು ಅದನ್ನು ಜೀವನದಲ್ಲಿ ಪಾಲಿಸುವುದು ಕಡಿಮೆ. ಕ್ಷಮೆ ಎನ್ನುವುದು ಪ್ರಜ್ಞಾಪೂರ್ವಕವಾಗಿ ನಿಮಗೆ ಯಾವುದೋ ಒಂದು ರೀತಿಯಲ್ಲಿ ಹಾನಿ ಮಾಡಿದ ಒಬ್ಬ ವ್ಯಕ್ತಿಯ ಮೇಲಿನ ಸೇಡಿನ ಭಾವನೆಯನ್ನು ಹೊರಗೆ ಹಾಕಿಬಿಡುವುದು. ಆದರೆ ಅದನ್ನು ಮಾಡುವುದು ಸುಲಭವಲ್ಲ. ಅನುಭೂತಿಯನ್ನು ಬೆಳೆಸಿಕೊಳ್ಳುವುದು ಮತ್ತು ಭಾವನೆಗಳನ್ನು ಸೂಕ್ತವಾಗಿ ಮುಂದಿಡುವ ಮೂಲಕ ಕ್ಷಮೆ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಜನರನ್ನು ಕ್ಷಮಿಸುವ ಕಲೆ ಕಲಿಯುವುದರಿಂದ ಎಂತಹ ದೈಹಿಕ ಮತ್ತು ಮಾನಸಿಕ ಲಾಭಗಳಿವೆ?

1. ಇದು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಹಲವು ಸಂಶೋಧಕರು ಹೇಳಿರುವಂತೆ ಒಬ್ಬರನ್ನು ಕ್ಷಮಿಸುವುದು ಕ್ಷಮೆ ನೀಡುವಾತನ ಒತ್ತಡವನ್ನು ಕಡಿಮೆ ಮಾಡುತ್ತದೆ. ವೈಜ್ಞಾನಿಕವಾಗಿ ನೀವು ಒಬ್ಬರನ್ನು ಕ್ಷಮಿಸಿದಾಗ ಸಿಸ್ಟಾಲಿಕ್ ಮತ್ತು ಡಯಸ್ಟಾಲಿಕ್ ಒತ್ತಡವು ಕೆಳಗಿಳಿಯುತ್ತದೆ.

2. ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

2011ರಲ್ಲಿ ನಡವಳಿಕೆ ವೈದ್ಯ ಸಮಾಜ ನಡೆಸಿದ ಸಂಶೋಧನೆಯ ಪ್ರಕಾರ ಎಚ್‌ಐವಿ ಇರುವ ಮಂದಿ ಕ್ಷಮೆಯನ್ನು ನೀಡಲು ಆರಂಭಿಸಿದಾಗ ಅವರಲ್ಲಿ ಹೆಚ್ಚಿನ ಸಿಡಿ4 ಕೋಶಗಳು ಉಂಟಾಗಿದೆ. ಇವುಗಳನ್ನು ನಿರೋಧಕ ಶಕ್ತಿಗೆ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

3. ನೋವು ಮತ್ತು ಮಾರಕ ರೋಗ ಕಡಿಮೆ ಮಾಡುತ್ತದೆ

ಅಧ್ಯಯನಗಳ ಪ್ರಕಾರ ಮಾರಕ ನೋವನ್ನು ಅನುಭವಿಸುವ ಜನರನ್ನು ಕ್ಷಮೆ ನೀಡಲು ಪ್ರಯತ್ನಿಸಲು ತಿಳಿಸಲಾಯಿತು. ಕೆಲ ಸಮಯದ ನಂತರ ನಿಜವಾಗಿಯೂ ಕ್ಷಮೆ ನೀಡಿದವರ ಆರೋಗ್ಯದಲ್ಲಿ ಬಹುತೇಕ ಸುಧಾರಣೆ ಕಂಡುಬಂದದ್ದು ತಿಳಿದು ಬಂತು.

4. ಧೀರ್ಘಕಾಲೀನ ಒತ್ತಡ ನಿವಾರಣೆ

ಕ್ಷಮೆ ನೀಡುವುದು ಒತ್ತಡ ಮತ್ತು ಮಾನಸಿಕ ಆರೋಗ್ಯದ ಮೇಲಿನ ನಕಾರಾತ್ಮಕ ಪರಿಣಾಮಗಳಿಂದ ರಕ್ಷಣೆ ನೀಡುತ್ತದೆ. ಕ್ಷಮಾದಾನ ತೆರಪಿಗೆ ಒಳಗಾದವರು ಸಾಧಾರಣ ಮಟ್ಟದಲ್ಲಿದ್ದ ಖಿನ್ನತೆಯಿಂದ ಪರಿಹಾರ ಕಂಡುಕೊಂಡದ್ದು ತಿಳಿದಿದೆ.

ಕ್ಷಮೆ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತೆ?

ಕ್ಷಮೆ ನಿಮ್ಮ ದೇಹಕ್ಕೆ ಮಾಡುವ ಮೊದಲ ಕೆಲಸವೆಂದರೆ ಒತ್ತಡ ನಿವಾರಣೆ. ಒತ್ತಡದಿಂದ ದೇಹದಲ್ಲಿ ಬಹಳಷ್ಟು ಅನಾರೋಗ್ಯ ಬರುತ್ತದೆ. ರಕ್ತದೊತ್ತಡ, ಕಾತುರತೆ ಮತ್ತು ಖಿನ್ನತೆ ಮತ್ತು ನಿರೋಧಕ ಶಕ್ತಿಯನ್ನೂ ಇಳಿಸುತ್ತದೆ. ಕ್ಷಮೆಯು ಮನಸ್ಸನ್ನು ಸಂಘರ್ಷದ ಘಟ್ಟದಿಂದ ಶಾಂತಿ ಮತ್ತು ಸಮಾಧಾನದ ಕಡೆಗೆ ಕೊಂಡೊಯ್ಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News