ತಾಂತ್ರಿಕ ಕ್ರಾಂತಿ: ಯಾವ್ಯಾವ ಕ್ಷೇತ್ರಗಳಲ್ಲಿ ಕಡಿಮೆಯಾಗಲಿವೆ ಉದ್ಯೋಗವಕಾಶ?
ಡಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ 2016ಯು ನಾಲ್ಕನೇ ಔದ್ಯಮಿಕ ಕ್ರಾಂತಿ ನಡೆಯುತ್ತಿದೆ ಎಂದು ಹೇಳಿದೆ. ಈ ಕ್ರಾಂತಿಯು ಮುಂದಿನ ಐದರಿಂದ 10 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಗಳನ್ನು ನಾಶಮಾಡಲಿದೆ ಎಂದೂ ಹೇಳಿದೆ. ಅಮೆರಿಕ-ಮೆರಿಲ್ ಲಿಂಚ್ ವರದಿ ಈ ಹಿಂದೆ ಅಮೆರಿಕದಲ್ಲಿ ತಂತ್ರಜ್ಞಾನದಿಂದಾಗಿ ಶೇ 47ರಷ್ಟು ಉದ್ಯೋಗ ನಾಶವಾಗಲಿದೆ ಎಂದು ಹೇಳಿದೆ. ಹಾಗಿದ್ದರೆ ನಿಮ್ಮ ವೃತ್ತಿ ಸುರಕ್ಷಿತವೆ? ತಿಳಿದುಕೊಳ್ಳಿ...
1. ಕೃತಕ ಕಾಲ್ ಸೆಂಟರ್ ಏಜೆಂಟ್ ಅಮೆಲಿಯ 20 ಭಾಷೆಗಳಲ್ಲಿ ಮಾತನಾಡಬಲ್ಲಳು. ಕಾಲ್ ಸೆಂಟರಲ್ಲಿ ಶೇ 30ರಷ್ಟು ಕರೆ ಸ್ವೀಕರಿಸುವ ಸಾಮರ್ಥ್ಯ ಆಕೆಗಿದೆ. 2025ರೊಳಗೆ ಅಂತಹುದೇ ಸ್ವಯಂಚಾಲಿತ ಸಾಫ್ಟವೇರ್‌ಗಳು 250 ದಶಲಕ್ಷ ಕೆಲಸಗಾರರನ್ನು ಜಾಗತಿಕವಾಗಿ ಬದಲಿಸಲಿವೆ. ಅಂದರೆ ಈಗಿನ ಭಾರತದ ಶೇ 50ರಷ್ಟು ವೃತ್ತಿಪರರು ಉದ್ಯೋಗರಹಿತರಾಗಲಿದ್ದಾರೆ.
2. ಅಜಿಲ್ ಟೆಕ್ನಾಲಜಿ ವೃತ್ತಿಪರ ಸಾಫ್ಟವೇರ್ ತರುವುದು ತಂತ್ರಜ್ಞಾನ ಸಂಸ್ಥೆಗಳ ಗುರಿ. ಇದಕ್ಕಾಗಿ ಯುನಿಟ್ ಟೆಸ್ಟಿಂಗಿಗೆ ಡೆವಲಪರುಗಳು ಬೇಕು. ಕ್ಯುಎ ಅಟೋಮೇಶನ್ ಟೂಲ್ಸ್ ಬಳಸಬೇಕು. ಕ್ಯುಎ ಪ್ರಕ್ರಿಯೆಯಲ್ಲಿ ಸಮಯ ಖರ್ಚು ಮಾಡದೇ ತಮ್ಮದೇ ಟೆಸ್ಟಿಂಗ್ ಕೋಡ್ ಬರೆಯುವವರು ಬೇಕು. ಆದರೆ ಇದರಿಂದಾಗಿ ಕ್ಯುಎ ಇಂಜಿನಿಯರುಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಕೆಲವು ಕಂಪನಿಗಳ ಪ್ರಕಾರ 201 7ರ ಸಮಯಕ್ಕಾಗುವಾಗ ಯಾವುದೇ ಕ್ಯುಎ ಇಂಜಿನಿಯರನ್ನು ಉಳಿಸಿಕೊಳ್ಳುವುದಿಲ್ಲ ಮತ್ತು ಹೊಸದಾಗಿ ನೇಮಿಸುವುದೂ ಇಲ್ಲ.
3. ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಾ ಅಮೆರಿಕದ ಶೇ 2ರಷ್ಟು ಮಂದಿ ಮಾತ್ರ ನೇರವಾಗಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಭಾರತದಲ್ಲಿ ಈ ಪ್ರಮಾಣ ಈಗ ಶೇ 50. ಭೂಮಿ, ತಂತ್ರಜ್ಞಾನ, ರಾಸಾಯನಿಕ ಮತ್ತು ಬೀಜಗಳು ದುಬಾರಿಯಾಗುತ್ತ ಹೋದಂತೆ ತಂತ್ರಜ್ಞಾನವು ಅಗ್ಗದ ಕಾರ್ಮಿಕ ಪರಿಹಾರಗಳನ್ನು ನೀಡಲಿವೆ. ಹೀಗಾಗಿ ವ್ಯಕ್ತಿಗತ ರೈತರ ಸಂಖ್ಯೆ ಕಡಿಮೆಯಾಗಲಿದೆ. ಶ್ರೀಮಂತ ಭೂ ಒಡೆಯರು ಮತ್ತು ವಾಣಿಜ್ಯ ಮಂಡಳಿಗಳು ಕೃಷಿ ಕ್ಷೇತ್ರವನ್ನು ತಮ್ಮ ಕೈಗೆ ತೆಗೆದುಕೊಂಡು ಉದ್ಯೋಗವಕಾಶವನ್ನು ಇಳಿಸಲಿದ್ದಾರೆ.
4. ಜಪಾನಿನಲ್ಲಿ ಅಟೋಮೊಬೈಲ್ ಉದ್ಯಮದಲ್ಲಿ ಪ್ರತೀ 10,000 ಕಾರ್ಮಿಕರಿಗೆ 1500 ರೊಬೋಟುಗಳು ಕೆಲಸ ಮಾಡುತ್ತವೆ. ಅವುಗಳು ವೇಗವಾಗಿ, ಉತ್ತಮ ಕೆಲಸ ಮಾಟಿ ಅಗ್ಗದಲ್ಲಿ ಕೆಲಸ ಮುಗಿಸುತ್ತವೆ. ಜಾಗತಿಕವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಇದು ಹೆಚ್ಚಾಗಿ ಕಾರ್ಮಿಕರ ಜೀವನೋಪಾಯಕ್ಕೆ ಬರ ಬರುತ್ತಿದೆ.
5. ಅಸೋಶಿಯೇಟೆಡ್ ಪ್ರೆಸ್ ಈಗಾಗಲೇ 3000 ಹಣಕಾಸು ವರದಿಗಳನ್ನು ವರ್ಡ್‌ಸ್ಮಿತ್ ಬಳಸಿ ಪ್ರಕಟಿಸುತ್ತದೆ. ಇದು ಸಹಜವಾದ ಭಾಷಾ ವರದಿ ವೇದಿಕೆ. ಶೇ 8.5ರಷ್ಟು ವೈಕಿಪೀಡಿಯದ ವಿಷಯಗಳನ್ನು ರೊಬೊಟುಗಳು ಬರೆಯುತ್ತವೆ. ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಆದಾಯಗಳು ಕಡಿಮೆಯಾಗುತ್ತಿರುವ ಕಾರಣದಿಂದ ಬ್ರೇಕಿಂಗ್ ಸುದ್ದಿಗಾಗಿ ವರದಿಗಾರರನ್ನು ನೇಮಿಸಲು ಸಾಮರ್ಥ್ಯವಿರುವುದಿಲ್ಲ. ಉತ್ತಮ ಸಾಫ್ಟವೇರ್‌ಗಳು ಕೆಲಸ ಮುಗಿಸಲಿವೆ. ಹೀಗಾಗಿ ಬೆರಳೆಣಿಕೆಯ ವರದಿಗಾರರು ಇರಲಿದ್ದು, ಸುದ್ದಿ ಬರೆಯುವ ಬದಲಾಗಿ ಅಭಿಪ್ರಾಯ ವರದಿಗಳನ್ನಷ್ಟೇ ಬರೆಯಬಹುದು.
6. ಅಂತರ್ಜಾಲದ ಕಾಲೇಜು ಕ್ಲಾಸುಗಳು ಮತ್ತು ಪದವಿಗಳು ಆರಂಭವಾಗಿರುವ ಕಾರಣ ಇಂಟರ್ನೆಟ್ ಕಾಲೇಜಿಗೆ ಹೋಗಿ ಉನ್ನತ ವ್ಯಾಸಂಗ ಮಾಡುವ ಅವಶ್ಯಕತೆ ಕಡಿಮೆ ಮಾಡಿದೆ. ಹಾಗೆಯೇ ಸಪ್ಲಿಮೆಂಟರಿ ಶಿಕ್ಷಣವಾದ ಟ್ಯೂಷನ್ ಮತ್ತು ಕೋಚಿಂಗ್ ಅನ್ನು ಆಪ್ಸ್ ಮತ್ತು ಆನ್ಲೈನ್ ಕ್ಲಾಸುಗಳು ಬದಲಿಸಿವೆ. ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಹೊರತುಪಡಿಸಿ ಉಳಿದವುಗಳಲ್ಲಿ ಅಧ್ಯಾಪಕರ ಸಂಖ್ಯೆ ಮತ್ತು ವೇತನವನ್ನು ಉಳಿಸಲಿವೆ.
7. ಐಬಿಎಂ ಕೊಗ್ನಿಟಿವ್ ಕಂಪ್ಯೂಟಿಂಗ್ ಪ್ರೊಟೊಟೈಪ್ ಆಗಿರುವ ವಾಸ್ಟನ್ ಈಗ ವೈದ್ಯಕೀಯ ಡಯಗ್ನಸಿಸನ್ನು ಕ್ರಾಂತಿಕಾರಿಗೊಳಿಸುವ ಪ್ರಯತ್ನದಲ್ಲಿದೆ. ಅದರಲ್ಲಿ ಕರಾರುವಾಕ್ಕಾದ, ಸ್ಥಿರವಾದ ಡಯಾಗ್ನಸಿಸ್ ರೋಗಿಗಳಿಗೆ ಸಿಗಲಿದೆ. ಸ್ಮಾರ್ಟ್ ಫೋನುಗಳು ಗ್ರಾಮೀಣ ತಾಂತ್ರಿಕ ಆರೋಗ್ಯ ನಿಯಂತ್ರಣ ಸಾಧನಗಳು ಮತ್ತು ಕಂಪ್ಯೂಟರೈಸ್ಡ್ ವೈದ್ಯಕೀಯ ಇತಿಹಾಸದ ಮೂಲಕ ಬೆರಳೆಣಿಕೆಯ ವೈದ್ಯ ಸಿಬ್ಬಂದಿ ಇದ್ದರೆ ಸಾಕಾಗುತ್ತದೆ. ಬಹುತೇಕ ರೋಗಿಗಳು ದೂರದಲ್ಲಿದ್ದೇ ಚಿಕಿತ್ಸೆ ಪಡೆಯಬಲ್ಲರು.
8. ಕಾನೂನು ವ್ಯವಸ್ಥೆಯಲ್ಲಿ ವಕೀಲರ ತಂಡವು ಹಿರಿಯ ಮತ್ತು ಕಿರಿಯರನ್ನೊಳಗೊಂಡು ಹಳೇ ದಾಖಲೆಗಳನ್ನೆಲ್ಲ ಪರಿಶೀಲಿಸಿ ವಿಚಾರಣೆಗೆ ಸಿದ್ಧವಾಗಬೇಕಾಗುತ್ತದೆ. ಆದರೆ ಲೀಗಲ್ ಜೂಮ್‌ನಂತಹ ಸಾಫ್ಟವೇರುಗಳು ಈ ಕೆಲಸವನ್ನು ನಾಟಕೀಯವಾಗಿ ಕಡಿಮೆಗೊಳಿಸುತ್ತದೆ.
9. ಸಾಫ್ಟವೇರ್ ಪ್ರಕಾರ ಉದ್ಯಮವು ಬಳಕೆಗೆ ಸುಲಭವಾಗುತ್ತದೆ. ಸಣ್ಣ ಉದ್ಯಮಗಳು ಫ್ರೆಶ್‌ಬುಕ್ಸ್ ಪರಿಹಾರಗಳನ್ನು ಪಡೆದುಕೊಂಡು ಮಾನವನ ಅಗತ್ಯವನ್ನು ಕಡಿಮೆಗೊಳಿಸುತ್ತಿವೆ. ಅವುಗಳೇ ಅಕೌಂಟಂಟುಗಳು ಮಾಡುವ ಎಲ್ಲಾ ಕೆಲಸವನ್ನೂ ಮಾಡಿಬಿಡುತ್ತವೆ. ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಅಕೌಂಟಂಟುಗಳ ಅಗತ್ಯವು ಬಹುತೇಕ ಕಡಿಮೆಯಾಗಲಿದೆ.
10. ಚಾಲಕನಿಲ್ಲದ ಕಾರುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಅಮೆರಿಕದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಇವುಗಳನ್ನು ಪರೀಕ್ಷಿಸಲಾಗಿದೆ. ಆಪ್ ಮೂಲಕ ಚಾಲಕನಿಲ್ಲದ ಕಾರನ್ನು ನಿಮ್ಮ ಅಥವಾ ಸರಕು ಸಾಗಾಣೆಗಾಗಿ ಚಾಲಕನಿಲ್ಲದ ಟ್ರಕ್ಕುಗಳನ್ನು ಕರೆಸಿಕೊಳ್ಳಬಹುದು. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿ ವೇಗವಾಗಿ ಚಲಿಸಬಹುದು ಮತ್ತು ಚಾಲಕರಿಗೆ ಕೆಲಸವಿರುವುದಿಲ್ಲ.
11. ಸೂಪರ್ ಮಾರ್ಕೆಟುಗಳಲ್ಲಿ ಮತ್ತು ದೊಡ್ಡ ಮಳಿಗೆಗಳಲ್ಲಿ ಸಾವಿರಾರು ಕ್ಯಾಶಿಯರುಗಳಿರುತ್ತಾರೆ. ಆದರೆ ಅಲ್ಲಿ ಸ್ವಯಂಚಾಲಿತ ಸೆಲ್ಫ್ ಚೆಕೌಟ್ ಸಿಸ್ಟಂಗಳು ಬಂದು RFID ಚಿಪ್‌ಗಳಿರುವ ಸ್ವಯಂಚಾಲಿತ ಸ್ಕಾನರಿನಿಂದ ವಿವರ ಪಡೆದು ನಿಮ್ಮ ಚೀಲದಲ್ಲಿರುವ ವಸ್ತುಗಳಿಗೆ ತಕ್ಕ ಬಿಲ್ಲು ಮಾಡಲಿವೆ. ನೀವು ಕಾರ್ಡು ಸ್ವೈಪ್ ಮಾಡಿ ಹೊರಗೆ ಬರಬಹುದು. ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಮಾನವ ಕ್ಯಾಶಿಯರುಗಳಿಗೆ ಕೆಲಸವಿರುವುದಿಲ್ಲ.
12. ನಾಗಸಾಕಿಯ ಹೆನ್ನಾ ಹೊಟೇಲ್ ಕೇವಲ ರೊಬೊಟ್ ಸಿಬ್ಬಂದಿ ಹೊಂದಿರುವ ಜಗತ್ತಿನ ಮೊದಲ ಹೊಟೇಲ್. ರೆಸ್ಟೊರೆಂಟುಗಳು ಜಾಗತಿಕವಾಗಿ ಟೇಬಲುಗಳ ಮೇಲೆ ಆಹಾರ ತರಿಸಲು ಟಚ್ ಸ್ಕ್ರೀನ್ ಮಾಡುವುದು, ವೈಟರುಗಳ ಬದಲಾಗಿ ರೊಬೊಟುಗಳು ಅಥವಾ ಸೆಲ್ಫ್ ಸರ್ವಿಸಿಂಗ್ ಇಡುವುದನ್ನು ಮಾಡಲಿವೆ. ಸ್ವಯಂಚಾಲಿತ ವ್ಯವಸ್ಥೆ ಪರಿಪೂರ್ಣ ಆಹಾರ ಬೇಯಿಸಿ ನೀಡಲಿದೆ. ಇದೀಗ ಕಾರ್ಮಿಕರ ಶೇ 5ರಷ್ಟಕ್ಕೆ ಉದ್ಯೋಗ ಕೊಡುವ ಆತಿಥ್ಯ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಕಡಿಮೆಯಾಗಲಿದೆ.
http://timesofindia.indiatimes.com/