ಭಾರತದಲ್ಲಿ ಭಯಾನಕ ಬರಗಾಲ ಆದರೂ...ಲೋಕಸಭೆಯಲ್ಲಿ ಚರ್ಚೆಗೆ ಬರ

Update: 2016-05-02 17:16 GMT

‘‘ ಹಿಂದೆಲ್ಲಾ ಭಾರತದಲ್ಲಿ ಬರಪರಿಸ್ಥಿತಿಯ ವೇಳೆ ಪರಿಹಾರ ಕಾರ್ಯಾಚರಣೆ ಗಳನ್ನು ಭಾವಾವೇಶದೊಂದಿಗೆ ನಿರ್ವಹಿಸಲಾಗುತ್ತಿತ್ತು. ಬೃಹತ್ ಪ್ರಮಾಣದ ಸಾರ್ವಜನಿಕ ಕಾಮಗಾರಿಗಳನ್ನು ಆಯೋಜಿಸಲಾಗುತ್ತಿತ್ತು. ಅನೇಕ ಸಲ ಒಂದೇ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಕ ಮಂದಿ ಕಾರ್ಯಕರ್ತರನ್ನು ಪರಿಹಾರ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗುತ್ತಿತ್ತು’’ 

 ಭಾರತದ ಶೇ.25ರಷ್ಟು ಜನಸಂಖ್ಯೆಯು ಪ್ರಸ್ತುತ ದಾಖಲೆ ಮಟ್ಟದ ಅಕ ತಾಪಮಾನ ಹಾಗೂ ತೀವ್ರ ಬರಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸತತವಾಗಿ ಮುಂಗಾರು ಮಳೆಯ ಕೊರತೆಯು ದೇಶದ 33 ಕೋಟಿ ಜನರ ಬದುಕನ್ನು ದುಸ್ತರಗೊಳಿಸಿದೆ.
 ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಬಂಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಭೈರೋ ಪ್ರಸಾದ್ ಮಿಶ್ರಾ ಅವರು ತನ್ನ ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ಆರ್ಥಿಕ ನೆರವು ನೀಡುವ ಕುರಿತ ಪ್ರಶ್ನೆಯನ್ನು ಸದನದಲ್ಲಿ ಎತ್ತಲು ಪ್ರಯತ್ನಿಸಿದ್ದರು. ಆನಂತರ ಲೋಕಸಭೆಯು, 11 ತಾಸುಗಳಿಗೂ ಅಕ ಸಮಯದವರೆಗೆ ಕಾರ್ಯನಿರ್ವಹಿಸಿತ್ತಾದರೂ ಬರ ಸಮಸ್ಯೆಯ ಬಗ್ಗೆ ಚರ್ಚಿಸಲು ಅದಕ್ಕೆ ಸಮಯವೇ ಸಿಗಲಿಲ್ಲ...!
   
ದೇಶದ ಅತ್ಯಂತ ಭೀಕರ ಬರಪೀಡಿತ ಪ್ರದೇಶಗಳ ಸಾಲಿನಲ್ಲಿರುವ ಒಡಿಶಾ ಹಾಗೂ ತೆಲಂಗಾಣಗಳಲ್ಲಿ ಈವರೆಗೆ ತೀವ್ರ ಬಿಸಿಲಝಳದಿಂದಾಗಿ 200ಕ್ಕೂ ಅಕ ಮಂದಿ ಸಾವನ್ನಪ್ಪಿದ್ದಾರೆ ಂದು ನಂಬಲಾಗಿದೆ. ಸೋಮವಾರದಿಂದೀಚೆಗೆ, ಲೋಕಸಭೆಯು ಉತ್ತರಾ ಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಹಾಗೂ ಶ್ರೀನಗರದ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆ (ಎನ್‌ಐಐಟಿ) ಕುರಿತ ಬಿಸಿಬಿಸಿ ಚರ್ಚೆಗಳಿಗೆ ಸಾಕ್ಷಿಯಾಯಿತು. ಇದರ ಜೊತೆ ಅಂಗೀಕರಿಸಲಾದ ಸಿಖ್ ಗುರುದ್ವಾರ (ತಿದ್ದುಪಡಿ) ವಿಧೇಯಕವು, ಸೆಹಜ್‌ಧಾರಿ ಅಥವಾ ಧರ್ಮದೀಕ್ಷೆ ಪಡೆದಿರದ ಸಿಖ್ಖರು, ಸಮುದಾಯದ ಧಾರ್ಮಿಕ ಸಂಸ್ಥೆಗಳಲ್ಲಿ ಮತದಾನ ನಿಷೇಸಲು ದಾರಿ ಮಾಡಿಕೊಟ್ಟಿತು. ಆದಾಗ್ಯೂ ಸದನದಲ್ಲಿ ಬರ ಪರಿಸ್ಥಿತಿ ಬಗ್ಗೆ ಸದನದಲ್ಲಿ ಚರ್ಚಿಸಲು ಇನ್ನೂ ಕಾಲ ಕೂಡಿಬಂದಿಲ್ಲ.

ಇತ ರಾಜ್ಯಸಭೆಯಲ್ಲಿ, ಬುಧವಾರ ಬರದ ಬಿಕ್ಕಟ್ಟಿನ ಕುರಿತು ಮೂರುವರೆ ತಾಸುಗಳ ಕಾಲ ಚರ್ಚಿಸಲಾಯಿತು. ಬರಪರಿಹಾರಗಳನ್ನು ಒದಗಿಸಲು ಸರಕಾರವು ಯಾವುದೇ ಮುತುವರ್ಜಿಯನ್ನು ಪ್ರದರ್ಶಿಸದ ಕಾರಣ, ಈ ವರ್ಷ ಬರಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆಯೆಂಬುದು ಗಮನಿಸಬೇಕಾದ ಅಂಶವಾಗಿದೆ. ‘‘ಹಿಂದೆಲ್ಲಾ ಭಾರತದಲ್ಲಿ ಬರಪರಿಸ್ಥಿತಿಯ ವೇಳೆ ಪರಿಹಾರ ಕಾರ್ಯಾಚರಣೆಗಳನ್ನು ಭಾವಾವೇಶದೊಂದಿಗೆ ನಿರ್ವಹಿಸಲಾಗುತ್ತಿತ್ತು. ಬೃಹತ್ ಪ್ರಮಾಣದ ಸಾರ್ವಜನಿಕ ಕಾಮಗಾರಿಗಳನ್ನು ಆಯೋಜಿಸಲಾಗುತ್ತಿತ್ತು. ಅನೇಕ ಸಲ ಒಂದೇ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಕ ಮಂದಿ ಕಾರ್ಯಕರ್ತರನ್ನು ಪರಿಹಾರ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗುತ್ತಿತ್ತು’’ ಎಂದು ಖ್ಯಾತ ಅರ್ಥಶಾಸಜ್ಞ ಜೀನ್ ಡ್ರೆಝ್ ಹೇಳುತ್ತಾರೆ. ಆದರೆ ಈ ಸಲ ದೇಶದ 256 ಜಿಲ್ಲೆಗಳನ್ನು ಬರಪೀಡಿತವೆಂದು ಘೋಷಿಸಿದ ಹೊರತಾಗಿಯೂ ಪರಿಹಾರ ಕಾರ್ಯಕ್ರಮಗಳಲ್ಲಿ ಯಾವುದೇ ತ್ವರಿತತೆ ಈ ಸಲ ಕಂಡುಬರಲಿಲ್ಲ’’ ಎಂದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
   ಬರಪೀಡಿತ ಪ್ರದೇಶಗಳ ಜನರಿಗೆ ಇನ್ನೂ ಹೆಚ್ಚಿನ ಸಾಮಾಜಿಕ ಭದ್ರತೆಯನ್ನು ಒದಗಿ ಸುವುದು ಹಾಗೂ ಉದ್ಯೋಗ ಖಾತರಿ ಯೋಜನೆಗಳ ಮೂಲಕ ಅಕ ಕೆಲಸದ ದಿನಗಳನ್ನು ಸೃಷ್ಟಿಸುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವುದೇ ಅವರಿಗೆ ನೆರವಾಗಲು ಇರುವ ಅತ್ಯಂತ ಸುಲಭದ ಪರಿಸ್ಥಿತಿಯಾಗಿದೆ. ಆದರೆ ಇವ್ಯಾವುದೂ ಕಾರ್ಯಗತಗೊಂಡಿಲ್ಲವೆಂದು ಡ್ರೆಝ್ ಬೆಟ್ಟು ಮಾಡುತ್ತಾರೆ.
‘‘ಬರಪೀಡಿತ ಪ್ರದೇಶಗಳ ಜನತೆ ಹಸಿವಿಗೆ ಸಿಲುಕು ವುದನ್ನು ತಡೆಯಲು ಇದೇ ಮೊದಲ ಬಾರಿಗೆ ಸರಕಾರದ ಬೆಂಬಲದ ಕೊರತೆ ಕಂಡುಬಂದಿದೆ ಎಂದು ಅವರು ಆಂಗ್ಲ ದೈನಿಕವೊಂದರಲ್ಲಿ ಪ್ರಕಟಿಸಿದ ಲೇಖನದಲ್ಲಿ ಹೇಳಿದ್ದಾರೆ.

 ದೇಶದ ಭೀಕರ ಬರಪರಿಸ್ಥಿತಿ ಕುರಿತು ಇತ್ತೀಚೆಗೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಸರಕಾರವು ಬರಪರಿಸ್ಥಿತಿಯ ಬಗ್ಗೆ ನಿರಂತರವಾದ ನಿಗಾವಿರಿಸಿರುವುದಾಗಿ ತಿಳಿಸಿದ್ದರು. ಬರಪೀಡಿತ ಪ್ರದೇಶಗಳಿಗೆ ಈಗಾಗಲೇ ಆರ್ಥಿಕನಿಗಳನ್ನು ಮಂಜೂರು ಮಾಡಲಾಗಿದೆಯೆಂದು ಅವರು ಹೇಳಿದ್ದಾರೆ. ಬರ ಸನ್ನಿವೇಶದ ತೀವ್ರತೆಯ ಬಗ್ಗೆ ಕೇಂದ್ರಕ್ಕೆ ಚೆನ್ನಾಗಿ ಅರಿವಿದ್ದು, ಇಂತಹ ಬಿಕ್ಕಟ್ಟು ಮತ್ತೊಮ್ಮೆ ಉದ್ಭವಿಸಲಾರದು ಎಂದವರು ತಿಳಿಸಿದ್ದಾರೆ.

Writer - ಮಾಯಾಂಕ್ ಜೈನ್

contributor

Editor - ಮಾಯಾಂಕ್ ಜೈನ್

contributor

Similar News