ತೆಲಂಗಾಣದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 15 ಮಂದಿ ಸಾವು

Update: 2016-05-15 18:24 GMT

ಹೈದರಾಬಾದ್, ಮೇ 15: ಟಿಪ್ಪರ್ ಮತ್ತು ಆಟೊ ಮಧ್ಯೆ ಢಿಕ್ಕಿಯಾಗಿ ಸಂಭವಿಸಿರುವ ಭೀಕರ ಅಪಘಾತದಲ್ಲಿ ದೇಗುಲಕ್ಕೆ ತೆರಳುತ್ತಿದ್ದ ಐವರು ಮಹಿಳೆಯರು ಹಾಗೂ ಏಳು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 15 ಜನ ಸಾವಿಗೀಡಾದ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಸಂಭವಿಸಿದೆ.

ಶನಿವಾರ ತಡ ರಾತ್ರಿ ಭೈನ್ಸಾ ನಗರದ ಹೊರ ವಲಯದಲ್ಲಿ ಈ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಮಹಾರಾಷ್ಟ್ರ ಮೂಲದವರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News