ತಮಿಳುನಾಡು ವಿಧಾನ ಸಭೆ ಚುನಾವಣೆ

Update: 2016-05-16 04:05 GMT

ಚೆನ್ನೈ, ಮೇ 16: ಇಂದು ಬೆಳಗ್ಗೆ 7 ಗಂಟೆಗೆ ತಮಿಳುನಾಡು ವಿಧಾನ ಸಭಾ ಚುನಾವಣೆಗಾಗಿ ಮತದಾನ ಪ್ರಾರಂಭಗೊಂಡಿದೆ. 

ಚೆನ್ನೈನ ತೇನಾಂಪೇಟ್ ಮತಗಟ್ಟೆಯಲ್ಲಿ ಬಹುಬಾಷ ಪ್ರವೀಣ, ಹಿರಿಯ ನಟ ಕಮಲ್ ಹಾಸನ್ ತನ್ನ ಮಕ್ಕಳಾದ ಗೌತಮಿ ಮತ್ತು ಅಕ್ಷರಾಳ ಜೊತೆ ಬಂದು ಮತ ಚಲಾಯಿಸಿದರು. ಸ್ಟೆಲ್ಲಾ ಮೇರಿಸ್ ಮತಗಟ್ಟೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ ಚಲಾಯಿಸಿದರು. ಹಾಗೆಯೇ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಚೆನ್ನೈನ ಗೊಪಾಲ ಪುರದ ಶಾರದಾ ವಿದ್ಯಾಲಯದ ಮತಗಟ್ಟೆಯಲ್ಲಿ ತನ್ನ ಹಕ್ಕನ್ನು ಚಾಲಯಿಸಿದರೆ, ಕೇಂದ್ರದ ಮಾಜಿ ಸಚಿವ ಪಿ, ಚಿದಂಬರಂ ಪುದಿಕೊಟ್ಟಾಯಿಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. 

ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಪುತ್ರ ಎಂ.ಕೆ . ಸ್ಟಾಲಿನ್ ತನ್ನ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಹಕ್ಕನ್ನು ಚಲಾಯಿಸಿದರು.  

ವಿಪರೀತ ಮಳೆಯಿಂದಾಗಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಉಂಟಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News