ಪಾಕಿಸ್ತಾನದ ಮುಸ್ಲಿಂ ಮಹಿಳೆಗೆ 13 ವರ್ಷಗಳ ನಂತರ ಭಾರತದ ನಾಗರಿಕತೆ ಸಿಕ್ಕಿತು!

Update: 2016-05-16 05:48 GMT

   ಗುರುದಾಸಪುರ, ಮೇ 16: ಬರೋಬ್ಬರಿ ಹದಿಮೂರು ವರ್ಷಗಳ ಕಾಯುವಿಕೆಯ ಬಳಿಕ ಪಾಕಿಸ್ತಾನದ ಮಹಿಳೆ ಭಾರತೀಯ ನಾಗರಿಕತೆಯನ್ನು ಪಡೆದುಕೊಂಡಿದ್ದಾರೆ. ಆಧಿಕಾರಿಗಳ ಪ್ರಕಾರ ನಿನ್ನೆ ಸಂಜೆ ಉಪಾಯುಕ್ತ ಪ್ರದೀಪ್ ಸಂಬರ್‌ವಾಲರು ತಾಹಿರಾ ಹುಜೂರ್ ಎಂಬ ಮಹಿಳೆಗೆ ಭಾರತೀಯ ನಾಗರಿಕತೆಯ ಪ್ರಮಾಣಪತ್ರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ತಾಹಿರಾ ಗುರುದಾಸ್‌ಪುರದ ಕಾಂದಿಯ ನಿವಾಸಿ ಮಕ್ಬೂಲ್ ಅಹ್ಮದ್‌ರೊಂದಿಗೆ 2003ರಲ್ಲಿ ಮದುವೆ ಆಗಿದ್ದರು. ಪಾಕಿಸ್ತಾನದ ಫೈಸಲಾಬಾದ್‌ನ ತಾಹಿರಾ ಭಾರತದಲ್ಲಿ ಏಳುವರ್ಷ ಇದ್ದ ಬಳಿಕೆ 2011ರಲ್ಲಿ ಭಾರತ ನಾಗರಿಕತೆಗೆ ಅರ್ಜಿ ಸಲ್ಲಿಸಿದ್ದರು. ಭಾರತದ ನಾಗರಿಕತೆಯನ್ನು ಪಡೆಯಬೇಕಿದ್ದರೆ ಕೇವಲ ಏಳು ವರ್ಷ ಭಾರತದಲ್ಲಿದ್ದರೆ ಸಾಕೆಂಬ ನಿಯಮವಿದೆ. ಆದರೆ ಪಂಜಾಬ್ ಸರಕಾರ ಈ ಪ್ರಕರಣವನ್ನು ಕೇಂದ್ರಸರಕಾರಕ್ಕೊಪ್ಪಿಸಿತ್ತು. ಕೇಂದ್ರ ಗೃಹಸಚಿವಾಲಯ ಇವರಿಗೆ ನಾಗರಿಕತೆ ಕೊಡಲಿಲ್ಲ. ಬದಲಾಗಿ ವೀಸಾ ನೀಡಿತ್ತು.

ಆದ್ದರಿಂದ ಕಳೆದ ಹದಿಮೂರು ವರ್ಷಗಳಲ್ಲಿ ಕಾಂದಿಯದಿಂದ ತಾಹಿರಾ ಹೊರಹೋಗುವಂತಿರಲಿಲ್ಲ. ಮದುವೆಯಾಗಿ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇದ್ದಾಳೆ ಎಂದು ತಾಹಿರಾ ಹೇಳುತ್ತಾರೆ. ಅವರ ಎಲ್ಲ ಮಕ್ಕಳಿಗೆ ಭಾರತೀಯ ನಾಗರಿಕತೆ ಇದೆ ಎಲ್ಲಿ ಬೇಕಾದರೂ ಹೋಗಿ ಬರುವ ಸ್ವಾತಂತ್ರ್ಯವಿದೆ. ಭಾರತೀಯ ನಾಗರಿಕತೆ ಸಿಕ್ಕಿದ ಬಳಿಕ ತನ್ನ ತಾಯಿಯಯನ್ನು ನೋಡಲು ಪಾಕಿಸ್ತಾನಕ್ಕೆ ಹೋಗಲು ಬಯಸುತ್ತಿದ್ದಾರೆ. ಅವರ ತಾಯಿ ಕಳೆದ ಐದು ವರ್ಷಗಳಿಂದ ರೋಗಗ್ರಸ್ಥರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News