ಮೇ 26ರೊಳಗಡೆ ಹೊಸ ಶಿಕ್ಷಣ ನೀತಿ ಘೋಷಣೆ ಸಚಿವೆ: ಸ್ಮತಿ ಇರಾನಿ

Update: 2016-05-16 18:41 GMT

ಹೊಸದಿಲ್ಲಿ , ಮೇ 16 : ನರೇಂದ್ರ ಮೋದಿ ನೇತೃತ್ವದ ಸರಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಹೊಸ ಶಿಕ್ಷಣ ನೀತಿಯನ್ನು ಮೇ 26 ರ ಮೊದಲು ಘೋಷಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ. ಅವರು ಎನ್‌ಡಿಎ ಸರಕಾರ ಎರಡು ವರ್ಷಗಳನ್ನು ಪೂರೈಸಿದ ಪ್ರಯುಕ್ತ ಇಂಡಿಯಾ ಟಿವಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.

ಯುಪಿಎ ಅವಧಿಯಲ್ಲಿ ಪರಿಚಯಿಸಲಾಗಿದ್ದ ಶಾಲೆಗಳಲ್ಲಿ ಅನುತ್ತೀರ್ಣಗೊಳಿಸಬಾರದೆಂಬ ನೀತಿಯನ್ನು ಸರಕಾರ ಪರಿಶೀಲನೆ ನಡೆಸುತ್ತಿದೆ ಮತ್ತು ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವೆ ಇರಾನಿ ತಿಳಿಸಿದ್ದಾರೆ. 9ನೆ ತರಗತಿಯ ವಿದ್ಯಾರ್ಥಿಗಳಿಗೆ ಅನುತ್ತೀರ್ಣಗೊಳಿಸಬಾರದೆಂಬ ನೀತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.ಈ ಬಗ್ಗೆ ರಾಜ್ಯ ಸರಕಾರ ಅದನ್ನು ರದ್ದು ಗೊಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಬೋರ್ಡ್ ಪರೀಕ್ಷೆ ಸೇರಿದಂತೆ 9 ರಿಂದ 12 ನೆ ತರಗತಿಯ ವಿದ್ಯಾರ್ಥಿಗಳಿಗೆ 10 ಭಾರತೀಯ ಭಾಷೆಗಳಲ್ಲಿ ಮೊಬೈಲ್ ಆ್ಯಪ್ ಮತ್ತು ಪೋರ್ಟಲ್‌ಗಳ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುವುದು.ಮುಂಬರುವ ಎರಡು ತಿಂಗಳೊಳಗಡೆ ಇದನ್ನು ಪ್ರಾರಂಭಿಸಲಾಗುವುದು ಮತ್ತು ನೋಂದಣಿ ಮಾಡಿದ ಭಾರತೀಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್‌ಲೈನ್ ಶಿಕ್ಷಣವನ್ನು ಪಡೆಯಬಹುದಾಗಿದೆ ಮತ್ತು ಕೇವಲ ಹಣವನ್ನು ಪರೀಕ್ಷೆಗಳಿಗೆ ಮಾತ್ರ ಪಾವತಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News