49 ಮಕ್ಕಳಿಗೆ ಒಂದೇ ಟೂತ್ ಬ್ರಶ್ !

Update: 2016-05-17 03:21 GMT

ಹೊಸದಿಲ್ಲಿ, ಮೇ 17: 49 ಮಕ್ಕಳು ಒಂದೇ ಟೂತ್‌ಬ್ರಶ್‌ನಲ್ಲಿ ಹಲ್ಲುಜ್ಜುತ್ತಾರೆ ಎಂದರೆ ನೀವು ನಂಬುತ್ತೀರಾ? ಹೌದು. ಸರ್ಕಾರಿ ಅನುದಾನಿತ ಅಂಗವಿಕಲರ ಹಾಸ್ಟೆಲ್ ಒಂದರ ದುರವಸ್ಥೆ ಇದು. ಒಂದು ಟ್ಯೂಬ್ ಟೂತ್‌ಪೇಸ್ಟನ್ನು ಮಾತ್ರ ಬಳಸಬೇಕು. ಇದು ಯಾವುದೋ ಸಂಘಟನೆಗಳು ಮಾಡಿದ ಆರೋಪವಲ್ಲ. ಸ್ವತಃ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರನ್ನು ಈ ಅಮಾನವೀಯ ದೃಶ್ಯ ಎರಡು ವರ್ಷದಿಂದ ಕಾಡುತ್ತಿದೆ. ದತ್ತು ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾಗಿನಿಂದಲೂ ಇದನ್ನು ನೋಡುತ್ತಾ ಬಂದಿದ್ದಾರೆ.

"ಯಾವ ರಾಜ್ಯದಲ್ಲಿ ಈ ಸ್ಥಿತಿ ಇದೆ ಎನ್ನುವುದು ಮುಖ್ಯವಲ್ಲ. ಬಹುತೇಕ ಇಂಥ ಅನುದಾನಿತ ಅಂಗವಿಕಲರ ಕಲ್ಯಾಣ ಕೇಂದ್ರಗಳಲ್ಲಿ ಈ ಸ್ಥಿತಿ ಇದೆ. ಈ ಬಗ್ಗೆ ಯಾರೂ ಗಮನ ಹರಿಸಿಲ್ಲ" ಎಂದು ಅವರು ವಿವರಿಸಿದ್ದಾರೆ.

"ಅಂಗವಿಕಲರು ಹಾಗೂ ಹಿರಿಯ ನಾಗರಿಕ ಗೃಹಗಳ ಸೌಲಭ್ಯವನ್ನು ಹೆಚ್ಚಿಸಲು ಸರ್ಕಾರದ ಅನುದಾನ ಇಲ್ಲ ಎಂದು ಪ್ರತಿ ದಿನ ಇಂಥ ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ಅವರ ಬದುಕಿನಲ್ಲಿ ಭರವಸೆ ಮೂಡಿಸಲು ಪ್ರಯತ್ನ ನಡೆಸುವ ದತ್ತು ಹೇಳುತ್ತಾರೆ.

ಅಂಗವಿಕಲರು ಹಾಗೂ ವೃದ್ಧರ ಕಲ್ಯಾಣಕ್ಕಾಗಿ ಇರುವ ನಿಧಿಯ ವ್ಯಾಪಕ ಸೋರಿಕೆಯನ್ನು ತಡೆಗಟ್ಟಿ, ಸೌಲಭ್ಯವನ್ನು ಹೆಚ್ಚಿಸಲು ಆ ಹಣವನ್ನು ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದು ಪ್ರತಿಪಾದಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿ ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗುವವರೆಗೂ ಪ್ರತಿ ದಿನ ಬೆಂಗಳೂರಿನ ವೃದ್ಧಾಶ್ರಮಗಳಿಗೆ ದತ್ತು ಭೇಟಿ ನೀಡಿ ಸ್ಥಿತಿಗತಿ ಅಧ್ಯಯನ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News