ಸ್ತನ ಕ್ಯಾನ್ಸರ್ ಗೆದ್ದು ಬಂದವರು

Update: 2016-05-18 05:18 GMT

ಸಣ್ಣ ತಲೆನೋವು, ಜ್ವರ ಬಂದರೂ ಮುದುಡುವವರು ನಾವು. ಆದರೆ ತನ್ನ ಸ್ತನಕ್ಕೆ ಕ್ಯಾನ್ಸರ್ ಬಾಧಿಸಿದರೂ ಧೈರ್ಯಗೆಡದೆ ಬದುಕಿನೆಡೆಗೆ ಮುಖಮಾಡಿದ ಆಸ್ಟ್ರೇಲಿಯಾದ ಕೈಲಿ ಆಮ್‌ಸ್ಟ್ರಾಂಗ್ ನಮಗೆಲ್ಲರಿಗೂ ಮಾದರಿಯಾಗಬಲ್ಲರು.

ತನ್ನ ಸ್ತನದಲ್ಲಿ ಹೊಸದಾಗಿ ಕಾಣಿಸಿಕೊಂಡ ಸುಳಿಗಳ ಭಾಗಗಳನ್ನು ಕೈಲಿ ಕಳೆದ ಫೆಬ್ರವರಿಯಲ್ಲಿ ಗಮನಿಸಿದರು. ಅದನ್ನು ನೋಡಿ ತೀವ್ರ ಅಸ್ವಸ್ಥಗೊಂಡ ಅವರು ಕೂಡಲೇ ವೈದ್ಯರನ್ನು ಭೇಟಿಯಾಗುತ್ತಾರೆ. ಮ್ಯಾಮೋಗ್ರಾಂ, ಅಲ್ಟ್ರಾಸೌಂಡ್ ಸ್ಕಾನಿಂಗ್ ಮಾಡಲಾಯಿತು. ಆಕೆ ಹೆದರಿದಂತೆಯೇ ಸಂಭವಿಸಿತ್ತು. ಇದು ಬ್ರೆಸ್ಟ್ ಕ್ಯಾನ್ಸರ್‌ನ ಆರಂಭ ಎಂದು ವೈದ್ಯರು ಖಚಿತಪಡಿಸಿದರು.

ಧೃತಿಗೆಡದ ಕೈಲಿ
ಆದರೆ ಕೈಲಿ ಮಾನಸಿಕ ಸ್ಥೆರ್ಯವಿರುವ ಮಹಿಳೆಯಾಗಿದ್ದರು. ತನಗೆ ಬಂದ ಕಾಯಿಲೆಯಿಂದ ಒಂದೊಮ್ಮೆ ಭಯಪಟ್ಟಿದ್ದರೂ ನಂತರ ಧೈರ್ಯಗೆಡಲಿಲ್ಲ. ತನ್ನಂತೆ ಸಾವಿರಾರು ಮಹಿಳೆಯರು ಈ ಜಗತ್ತಿನಲ್ಲಿದ್ದಾರೆ ಎಂಬುದು ಅವರಿಗೆ ಗೊತ್ತಿತ್ತು. ಆದ್ದರಿಂದ ತನ್ನ ಸ್ತನದಲ್ಲಿ ಕಾಣಿಸಿಕೊಂಡ ಸುಳಿಯ ಚಿತ್ರವನ್ನು ಕ್ಯಾಮರಾದಲ್ಲಿ ತೆಗೆದು ಅವರು ಅದನ್ನು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದರು.

ಜಾಗೃತರಾಗಿ
‘‘ಈ ಮೂರು ಸುಳಿಗಳು ನನ್ನ ಮತ್ತು ನನ್ನ ಕುಟುಂಬವನ್ನೇ ಬುಡಮೇಲು ಮಾಡಿವೆ. ಬ್ರೆಸ್ಟ್ ಕ್ಯಾನ್ಸರ್‌ನ್ನು ಗುರುತಿಸಲು ಯಾವಾಗಲೂ ಸಾಧ್ಯವಾಗಬೇಕೆಂದೇನಿಲ್ಲ. ಆದರೆ ಎಂದಾದರೂ ಸ್ತನದ ಭಾಗದಲ್ಲಿ ಅಸಹಜವಾದ ಏನಾದರೂ ಗಮನಕ್ಕೆ ಬಂದರೆ ತಕ್ಷಣ ಪರೀಕ್ಷಿಸಬೇಕು. ಆರಂಭ ಘಟ್ಟದ ಈ ಪರೀಕ್ಷೆಯಿಂದ ನಿಮ್ಮ ಪ್ರಾಣವನ್ನು ರಕ್ಷಿಸಲು ಸಾಧ್ಯವಾಗಬಹುದು. ೇಸ್ಬುಕ್‌ನಲ್ಲಿ ಈ ಚಿತ್ರವನ್ನು ನೋಡಿ ಕಣ್ಣೀರು ಹಾಕುವವರು, ಸಂಕಟಪಡುವವರು ಧಾರಾಳವಿರಬಹುದು. ಆದರೆ ಈ ಚಿತ್ರವನ್ನು ನೋಡಿ ಕೆಲವರಾದರೂ ಜಾಗೃತರಾದರೆ ಅಷ್ಟು ನನಗೆ ಸಾಕು’’ ಎಂದು ಕೈಲಿ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅರಿವು ಅಗತ್ಯ
ಕೈಲಿಯ ಪೋಸ್ಟ್ ತುಂಬಾ ಜನೋಪಕಾರಿಯಾದುದು. ಕಾರಣವೇನೆಂದರೆ ಸಾಮಾನ್ಯವಾಗಿ ಸುಳಿಗಳನ್ನು ನಾವು ಅಷ್ಟಾಗಿ ಗಮನಿಸುವುದಿಲ್ಲ. ಕಾರಣ ಗಡ್ಡೆ ಅಥವಾ ಬೊಜ್ಜು ಕ್ಯಾನ್ಸರ್‌ನ ಮುಖ್ಯ ಲಕ್ಷಣ ಎಂದು ಹೆಚ್ಚಿನವರು ನಂಬಿದ್ದಾರೆ. ಆದರೆ ವಿವಿಧ ರೀತಿಯ ಲಕ್ಷಣಗಳ ಬಗ್ಗೆ ಅರಿವುಳ್ಳವರಾಗಬೇಕಾದುದು ಅಗತ್ಯವಾಗಿದೆ ಎಂದು ಆಸ್ಟ್ರೇಲಿಯನ್ ಸ್ತನ ಕ್ಯಾನ್ಸರ್ ತಜ್ಞೆ ಡಾ.ಸ್ಯೂ ಫ್ರೇಸರ್ ಹೇಳುತ್ತಾರೆ.

ಕ್ಯಾನ್ಸರ್‌ಗೆ ಕಾರಣ
ಸ್ತನ ಜೀವಕೋಶಗಳ ಹೆಚ್ಚಿನ ಬೆಳವಣಿಗೆಯಿಂದಾಗಿ ಸ್ತನ ಕ್ಯಾನ್ಸರ್ ಉಂಟಾಗುತ್ತದೆ. ಮಹಿಳೆಯರು ಹಾಗೂ ಪುರುಷರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳುತ್ತವೆ. ಶ್ವಾಸಕೋಶದ ಕ್ಯಾನ್ಸರ್‌ನ ನಂತರ ಅತ್ಯಂತ ಹೆಚ್ಚು ಜನರನ್ನು ಕಾಡುವ ಕಾಯಿಲೆಯಾಗಿದೆ ಸ್ತನ ಕ್ಯಾನ್ಸರ್. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 12ರಷ್ಟಿರುತ್ತದೆ. ವಯಸ್ಸು ಹೆಚ್ಚಾದಂತೆಯೇ ಸ್ತನ ಕ್ಯಾನ್ಸರ್‌ನ ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ.

ಗುಣಪಡಿಸಲು ಸಾಧ್ಯ
ಶೀಘ್ರ ಕಂಡುಹಿಡಿದರೆ ಸಂಪೂರ್ಣವಾಗಿ ಇದನ್ನು ಗುಣಪಡಿಸಬಹುದು. ಆದ್ದರಿಂದ ಆಗಾಗ ಪರೀಕ್ಷೆ ನಡೆಸುವುದು ಅಗತ್ಯವಾಗಿದೆ. ಸ್ತನದಲ್ಲಿ ಉಂಟಾಗುವ ಗಡ್ಡೆಗಳು, ಸ್ತನದ ಆಕಾರದಲ್ಲುಂಟಾಗುವ ಬದಲಾವಣೆ, ಚರ್ಮದ ಮೇಲೆ ಉಂಟಾಗುವ ಬದಲಾವಣೆ, ಸ್ತನಗಳ ತೊಟ್ಟು ಒಳಗೆಳೆದುಕೊಂಡಿರುವುದು, ಸ್ತನತೊಟ್ಟುಗಳಲ್ಲಿ ಸೋರುವಿಕೆ, ಸ್ತನತೊಟ್ಟುಗಳ ಬಣ್ಣ ಬದಲಾವಣೆ, ಕಂಕುಳ ಗಡ್ಡೆ ಇವುಗಳನ್ನು ಕ್ಯಾನ್ಸರ್‌ನ ಲಕ್ಷಣ ಎಂದು ಹೇಳಲಾಗುತ್ತದೆ. 20 ವರ್ಷ ಕಳೆದ ಎಲ್ಲ ಸೀಯರೂ ತಿಂಗಳಿಗೊಮ್ಮೆಯಾದರೂ ಈ ಬಗ್ಗೆ ಸ್ವತಃ ಪರೀಕ್ಷಿಸಬೇಕು. ಸ್ತನ ಚರ್ಮದ ಬಣ್ಣದಲ್ಲಿ ವ್ಯತ್ಯಾಸ, ಆಕಾರದಲ್ಲಿ, ಗಾತ್ರದಲ್ಲಿ ಬದಲಾವಣೆ, ಸ್ತನತೊಟ್ಟುಗಳ ನಡುವಿನ ವ್ಯತ್ಯಾಸಗಳು ಇವುಗಳನ್ನು ಸಮರ್ಪಕವಾಗಿ ಗಮನಿಸುತ್ತಿರಬೇಕು. ಮುಟ್ಟಿನ ಬಳಿಕ ಒಂದು ವಾರ ಕಳೆದನಂತರವೇ ಪರೀಕ್ಷೆ ನಡೆಸಬೇಕು. ಮುಟ್ಟಿನ ಅವ ಮುಗಿದವರು, ಗರ್ಭಕೋಶ ತೆಗೆಯಲ್ಪಟ್ಟವರು ತಿಂಗಳಿಗೊಮ್ಮೆ ಪರೀಕ್ಷಿಸಬೇಕು. 20-40ರ ನಡುವಿನ ಪ್ರಾಯದವರು ಎರಡು ವರ್ಷಗಳಿಗೊಮ್ಮೆ ವೈದ್ಯರ ಬಳಿ ಹೋಗಿ ಸ್ತನಗಳನ್ನು ಪರೀಕ್ಷಿಸಬೇಕು.

ಕ್ಯಾನ್ಸರ್‌ಗೆ ಚಿಕಿತ್ಸೆ
ಸ್ತನದ ಕ್ಯಾನ್ಸರ್‌ಗೆ ಅತ್ಯಂತ ಉತ್ತಮ ಚಿಕಿತ್ಸೆಯೆಂದರೆ, ಕ್ಯಾನ್ಸರ್‌ನ ಪ್ರಾರಂಭದಲ್ಲೇ ಅದನ್ನು ಪತ್ತೆಹಚ್ಚುವುದಾಗಿದೆ. ಯಾವುದೇ ಸ್ತನ ಗಡ್ಡೆಗಳು ಕಂಡು ಬಂದರೂ ಅದನ್ನು ಸ್ತನ ಕ್ಯಾನ್ಸರ್ ಎಂದು ಭಾವಿಸಿ ಚಿಕಿತ್ಸೆಗೆ ಸಿದ್ಧವಾಗಬೇಕು. ಕಾಯಿಲೆ ಬಾಸಿದ ಜಾಗ ಅಥವಾ ಪೂರ್ತಿ ಸ್ತನವನ್ನೇ ತೆಗೆಯುವುದು ಪ್ರಾಥಮಿಕ ಶಸಕ್ರಿಯೆಯ ಸಾಮಾನ್ಯ ನಿಯಮ. ಸ್ತನಗಳೊಂದಿಗೆ ಸಂಬಂಧ ಹೊಂದಿದ ಕಂಕುಳದ ಗ್ರಂಥಿಗಳನ್ನೂ ತೆಗೆಯುವುದು ಚಿಕಿತ್ಸೆಯ ಭಾಗ. ಈ ಗ್ರಂಥಿಗಳಲ್ಲದೆ ಸ್ತನಗಳನ್ನು ಮಾತ್ರ ತೆಗೆಯುವುದಿದೆ. ಆದರೆ ಕೆಲವೊಮ್ಮೆ ಸ್ತನಗಳನ್ನು ತೆಗೆಯದೆ, ಕ್ಯಾನ್ಸರ್ ಬಾಧಿತ ಅಂಗಗಳನ್ನು ಮಾತ್ರ ತುಂಡರಿಸಿ ತೆಗೆಯುವ ರೀತಿಯೂ ಇದೆ.

ಮೊಸರಲ್ಲಿ ಕಲ್ಲು ಹುಡುಕುವವರು
 ಇನ್ನು ಕೈಲಿಯ ವಿಷಯಕ್ಕೆ ಬರೋಣ. ಅವರು ತನ್ನ ಕ್ಯಾನ್ಸರ್ ಬಾಧಿತ ಸ್ತನದ ಚಿತ್ರವನ್ನು ಫೇಸ್ಬುಕ್‌ನಲ್ಲಿ ಹಾಕುತ್ತಾರೆ. ಆದರೆ ಮೊಸರಲ್ಲಿ ಕಲ್ಲು ಹುಡುಕುವ ಕೆಲ ಕಿಡಿಗೇಡಿಗಳು ಕೈಲಿಯ ಪೋಸ್ಟ್‌ನಲ್ಲಿಯೂ ಸಮಸ್ಯೆಯನ್ನು ಸೃಷ್ಟಿಸಲು ಪ್ರಯತ್ನಿಸಿದರು. ನಗ್ನತೆ ತೋರಿಸಲಾಗಿದೆ ಎಂದು ಆರೋಪಿಸಿ ಅವರ ಫೋಟೊ ಫೇಸ್ಬುಕ್‌ನಲ್ಲಿ ಹಾಕಿದರು. ಆದರೆ ಫೇಸ್ಬುಕ್ ಆ ಚಿತ್ರವನ್ನು ತೆಗೆದುಹಾಕಲಿಲ್ಲ. ಅಷ್ಟೇ ಅಲ್ಲದೆ ಹಲವರು ಆ ಚಿತ್ರವನ್ನು ನೋಡಿ ಷೇರ್ ಮಾಡಿ, ಕೈಲಿಯನ್ನು ಅಭಿನಂದಿಸಿದರು.

ಬದುಕಿನೆಡೆಗೆ
  ಹಾಗೆ ಕೈಲಿ ಮಾರ್ಚ್ 4ಕ್ಕೆ ಶಸಕ್ರಿಯೆಗೊಳಗಾಗಿ ಕ್ಯಾನ್ಸರ್‌ನಿಂದ ಮುಕ್ತವಾದರು. ಈಗ ಅವರು ಕ್ಯಾನ್ಸರ್‌ನಂತಹ ರೋಗಗಳಿಂದ ನರಳುತ್ತಿರುವವರಿಗಾಗಿ ಸಾಮಾಜಿಕ ಸೇವೆ ಮಾಡಲು ಸಿದ್ಧರಾಗುತ್ತಿದ್ದಾರೆ.

                                                                             ಕೃಪೆ: ಮನೋರಮಾ ಆನ್‌ಲೈನ್

Writer - ರಲಿಯಾ ಸಿದ್ದೀಕ್, ಪರ್ಲಿಯ

contributor

Editor - ರಲಿಯಾ ಸಿದ್ದೀಕ್, ಪರ್ಲಿಯ

contributor

Similar News