ಸಿವಿಲ್ ಸರ್ವೀಸ್‌ನಲ್ಲಿ ಒಂದನೆ ರ್ಯಾಂಕ್ ಪಡೆದ ಟೀನಾರ ಹೆಸರಲ್ಲಿ ಆಕ್ರಮಣಕಾರಿ ಬರಹಗಳಿರುವ ನಕಲಿ ಫೇಸ್‌ಬುಕ್ ಖಾತೆಗಳು!

Update: 2016-05-18 06:31 GMT

ಹೊಸದಿಲ್ಲಿ, ಮೇ 18:ಸಿವಿಲ್ ಸರ್ವೀಸ್‌ನಲ್ಲಿ ಒಂದನೆ ರ್ಯಾಂಕ್ ಪಡೆದ ಟೀನಾ ದಾಬಿಯ ಹೆಸರಿನಲ್ಲಿ 35ಕ್ಕೂ ಅಧಿಕ ನಕಲಿ ಫೇಸ್‌ಬುಕ್ ಪ್ರೋಫೈಲ್‌ಗಳಿವೆ. ಪ್ರಥಮ ಪ್ರಯತ್ನದಲ್ಲಿ ಸಿವಿಲ್ ಸರ್ವೀಸ್ ಪಾಸಾದ ಟೀನಾರ ಯಶಸ್ಸಿನಿಂದ ಲಾಭ ಪಡೆದು ಮೀಸಲಾತಿಯನ್ನು ವ್ಯಂಗ್ಯಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಟೀನಾರ ಹೆಸರಿನ ಪ್ರೊಫೈಲನ್ನು ಬಳಸಿ ಕೆಲವರು ಹೊಗಳುವ ಕೆಲಸವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.

ವಿವಿಧ ವಿಷಯಗಳಲ್ಲಿ ಅಭಿಪ್ರಾಯ ಪ್ರಕಟಿಸುವ, ಗೆಳೆಯರೊಂದಿಗೂ ಪ್ರಮುಖರೊಂದಿಗೂ ಇರುವ ಚಿತ್ರಗಳನ್ನು ಶೇರ್ ಮಾಡಿ ಸಮಾಜ ವಿರೋಧಿಗಳು ನಡೆಸುತ್ತಿರುವ ಕುಕೃತ್ಯ ಮಿತಿಮೀರಿದೆ ಎಂದು ಟೀನಾ ಬಹಿರಂಗವಾಗಿ ಆಕ್ಷೇಪಿಸಿದ್ದಾರೆ. ತನ್ನ ಹೆಸರಿನಲ್ಲಿ ಆರಂಭಿಸಲಾಗಿರುವ ಫೇಸ್ ಬುಕ್ ಫೇಜ್‌ಗಳು ತನಗೆ ಗೊತ್ತಿದ್ದೂ ಪ್ರಾರಂಭಿಸಲಾಗಿಲ್ಲ ಎಂದು ಟೀನಾ ತನ್ನ ನೈಜ ಫೇಸ್‌ಬುಕ್ ಪುಟದಲ್ಲಿ ಸ್ಪಷ್ಟ ಪಡಿಸಿದ್ದಾರೆ. ಕಠಿಣ ಪರಿಶ್ರಮ ನಡೆಸಿ ಯಶಸ್ಸು ಗಳಿಸಿದ ತನ್ನಂತಹ ಓರ್ವ ಹುಡುಗಿಯನ್ನು ಮನಶ್ಶಾಂತಿಯಿಂದ ಇರಲು ಬಿಡದಿರುವುದು ನೋವು ತಂದಿದೆ. ನಕಲಿ ಪ್ರೊಫೈಲ್ ಸೃಷ್ಟಿಸಿದವರಿಗೆ ತನ್ನ ವರ್ಚಸ್ಸಿಗೆ ಕಳಂಕ ತರುವುದು ಮಾತ್ರ ಉದ್ದೇಶವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಟೀನಾರ ಹೆಸರಿನ ನಕಲಿ ಪೇಜ್‌ಗಳಲ್ಲಿ ಮೀಸಲಾತಿ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ತನಗೆ ಪ್ರೇರಣೆ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಪರಿಶಿಷ್ಟ ಜಾತಿಯವಳಾದ್ದರಿಂದ ಡಾ. ಅಂಬೇಡ್ಕರ್‌ರನ್ನು ವಿಗ್ರಹವೆಂದು ಹೇಳಲು ತನ್ನನ್ನು ನಿರ್ಬಂಧಿಸಲಾಗುತ್ತಿದೆಯೇ ಎಂದು ಪ್ರಶ್ನಿಸುವ ಸ್ಟೇಟಸ್‌ನ್ನು ಯೋಜನಾಬದ್ಧವಾಗಿ ಪ್ರಸರಿಸಲಾಗಿತ್ತು.

ಮೀಸಲಾತಿಸಂಬಂಧಿಸಿದ ಪೋಸ್ಟ್‌ಗಳು ಆರೆಸ್ಸೆಸ್ ನಾಯಕರೊಬ್ಬರು ನಡೆಸಿದ ಅಭಿಪ್ರಾಯಕ್ಕೆ ಸಮಾನವಾದ ಸಂದೇಶವಾಗಿದೆ. ಸ್ಮತಿ ಇರಾನಿಗೆ ಭಾಷಣ ಬರೆದು ಕೊಡುವ ಶಿಲ್ಪಿ ತಿವಾರಿ ವಿರುದ್ಧ ಜೆಎನ್‌ಯು ವಿದ್ಯಾಥಿಗಳ ವಿರುದ್ಧ ನಕಲಿ ವೀಡಿಯೋ ಪ್ರಸಾರ ಮಾಡಿದ್ದಾರೆಂದು ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News