ಕರಾಚಿಯಲ್ಲಿ ಡಿಕಂಪೆನಿ ರೆಸ್ಟೋರೆಂಟ್, ದಾವೂದ್ ಪುತ್ರ ಮಾಲಕ!

Update: 2016-05-18 10:15 GMT

ಹೊಸದಿಲ್ಲಿ, ಮೇ 18: ಡಿಕಂಪೆನಿ ಎಂದು ಕುಖ್ಯಾತವಾದ ಭೂಗತ ದೊರೆ ದಾವೂದ್ ಇಬ್ರಾಹೀಂ ಗ್ಯಾಂಗ್ ಪಾಕಿಸ್ತಾನದ ಕರಾಚಿಯಲ್ಲಿ ಫಾಸ್ಟ್‌ಫುಡ್ ರೆಸ್ಟೋರೆಂಟ್ ನಡೆಸುತ್ತಿದೆ. ಇದನ್ನು ರಾಷ್ಟ್ರೀಯಾ ತನಿಖಾ ಸಂಸ್ಥೆಯಾದ ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ದಾವೂದ್‌ನ ಈ ರೆಸ್ಟೋರೆಂಟ್‌ನ ಹೆಸರು “ಕೆಫೆ ಇಕ್ವಿನಾಕ್ಸ್” ಎಂದಾಗಿದೆ. ಈ ಸಂಸ್ಥೆಯನ್ನು ಡಿಕಂಪೆನಿಯ ದಾವೂದ್‌ಪಟೇಲ್ ಯಾನೆಜಾವೇದ್ ಚಿಕ್ನಾಆರಂಭಿಸಿದ್ದು ಈಗ ದಾವೂದ್‌ನ ಪುತ್ರ ನಡೆಸುತ್ತಿದ್ದಾನೆ.

ಎನ್‌ಐಎ ಈ ಚಾರ್ಜ್‌ಶೀಟ್‌ನಲ್ಲಿ ವಾಂಟೆಡ್ ಆರೋಪಿಗಳಿಗೆ ಪಾಕಿಸ್ತಾನದ ಎರಡು ವಿಳಾಸಗಳನ್ನು ನೀಡಲಾಗಿದೆ. ಒಂದರಲ್ಲಿ ಜಾವೇದ್ ಚಿಕ್ನಾ ಇದ್ದು ಒಂದು ವಿಳಾಸ ಹೀಗಿದೆ ಏಕ್ ವರ್ ಇಬ್ನೆ ಕಾಶಿಮ್ ಸಮೀಪ್, ಕ್ಲಿಪ್ಟನ್ ಕರಾಚಿ. ಇದೇ ವಿಳಾಸದಲ್ಲಿ ದಾವೂದ್ ಮನೆ ಇರುವ ಸಾಧ್ಯತೆಯೂ ಇದೆ.

ಚಿಕ್ನಾನ ಪಾಕಿಸ್ತಾನದ ಇನ್ನೊಂದು ವಿಳಾಸ ಹೀಗಿದೆ-ಡಿ-5ಮ್ಯಾನ್ಮಾರ್ ಆರ್ಕೆಡ್, ಗುಲ್ಶನ್ ಎ ಇಕ್ಬಾಲ್, ಗುಲ್ಶನ್ ಸಾರ್ವಜನಿಕ ಆಸ್ಪತ್ರೆ, ಕರಾಚಿ.

ಜಾವೇದ್ ಚಿಕ್ನಾ ಶಿರೀಷ್ ಭಾಯಿ ಬಂಗಾಳಿ, ವಕೀಲ್ ಮೋದಿ,ವಿರಲ್ ದೇಸಾಯಿ ಮತ್ತು ಜೈಕಾರ್ ಮಹಾರಾಜ್ ಹತ್ಯೆಯ ಆರೋಪಿಯಾಗಿದ್ದಾನೆ. ಈ ನಾಲ್ವರನ್ನು ಜಾವೇದ್ ಚಿಕ್ನಾ ಇವರನ್ನು ಜಾಹಿದ್ ಮಿಯಾ ಜೊತೆಗೂಡಿ ಕೊಂದಿದ್ದಾನೆ.

2002ರ ಗೋಧ್ರಾ ದಂಗೆಯ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳು ಆರೆಸ್ಸೆಸ್, ವಿಹಿಂಪ, ಮತ್ತು ಬಿಜೆಪಿಯ ಜನರ ಹತ್ಯೆಗೆ ಸಂಚು ನಡೆಸಿದ್ದರು ಎನ್ನಲಾಗುತ್ತಿದೆ. ಎನ್‌ಐಎಯ ಅಧಿಕಾರಿಗಳ ಪ್ರಕಾರ ಜಾವೇದ್ ಚಿಕ್ನಾ ಮತ್ತು ಜಾಹಿದ್ ಮಿಯಾರಿಗೆ ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐ ಭಾರತದಲ್ಲಿ ದಾಳಿ ಮಾಡಲು ಆದೇಶಿಸಿತ್ತು. ಈ ರೆಸ್ಟೋರೆಂಟನ್ನು ಡಿಕಂಪೆನಿಯ ಆದಾಯಕ್ಕಾಗಿ ಅಥವಾ ಭಯೋತ್ಪಾದಕ ಕೃತ್ಯಗಳ ಸಂಚಿಗಾಗಿ ಬಳಸಲಾಗುತ್ತಿದೆಯೇ ಎಂದು ಸ್ಪಷ್ಟವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿಕ್ನಾನ ಮೇಲೆ ಹವಾಲ ವಹಿವಾಟಿನ ಆರೋಪವೂ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News