ಜೆ ಎನ್ ಯುನಲ್ಲಿ ಸಂಗಾತಿಗಳು ಈಗ ಕೇರಳದಲ್ಲಿ ಪ್ರತಿಸ್ಪರ್ಧಿ ಪಕ್ಷಗಳ ಶಾಸಕರು

Update: 2016-05-19 16:20 GMT

ತಿರುವನಂತಪುರಮ್ , ಮೇ 19: ಪ್ರತಿಷ್ಠಿತ ಹಾಗು ಇತ್ತೀಚಿಗೆ ವಿವಾದದ ಕೇಂದ್ರವಾಗಿದ್ದ  ದಿಲ್ಲಿಯ ಜವಾಹರ್ ಲಾಲ್ ವಿವಿಯ ಇಬ್ಬರು ವಿದ್ಯಾರ್ಥಿಗಳು ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಅಸೆಂಬ್ಲಿ ಪ್ರವೇಶಿಸಿದ್ದಾರೆ. 
ರೋಜಿ ಎಂ ಜಾನ್ ಅವರು ಯುಡಿಎಫ್ ಅಭ್ಯರ್ಥಿಯಾಗಿ ಅಂಗಮಲಿ ಯಿಂದ ಸುಮಾರು 9 ಸಾವಿರ ಮತಗಳ ಅಂತರದಿಂದ ಜಯಿಸಿದ್ದರೆ , ಮೊಹಮ್ಮದ್ ಮೊಹ್ಸಿನ್ ಅವರು ಎಡರಂಗದ ಅಭ್ಯರ್ಥಿಯಾಗಿ ಪಟ್ಟಾಂಬಿ ಕ್ಷೇತ್ರದಿಂದ  7 ಸಾವಿರ ಮತಗಳ ಗೆದ್ದಿದ್ದಾರೆ. 
ವಿಶೇಷವೆಂದರೆ , ಕೇರಳದಲ್ಲಿ ಎರಡು ಪ್ರತಿಸ್ಪರ್ಧಿ ಮೈತ್ರಿಕೂಟಗಳಿಂದ ಗೆದ್ದಿರುವ ಈ ಇಬ್ಬರು  ಕನ್ಹಯ್ಯ ಕುಮಾರ್ ಬಂಧನವಾದಾಗ ಒಗ್ಗಟ್ಟಿನಿಂದ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ಮೊಹ್ಸಿನ್ ಸಿಪಿಐ ವಿದ್ಯಾರ್ಥಿ ಘಟಕ  ಎ ಐ ಎಸ್ ಎಫ್ ನ ಜೆ ಎನ್ ಯು ಘಟಕದ ಉಪಾಧ್ಯಕ್ಷನಾಗಿದ್ದರೆ ಜಾನ್ ಅವರು ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ ಎಸ್ ಯು ಐ ನ ಅಧ್ಯಕ್ಷರಾಗಿದ್ದಾರೆ. 
ಮೊಹ್ಸಿನ್ ಪರ ಪ್ರಚಾರಕ್ಕಾಗಿ ಖುದ್ದು ಕನ್ಹಯ್ಯ ಅವರು ಬಂದಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News