ಶೀಘ್ರ ಡಿಎಂಕೆಯ ನಾಯಕತ್ವದಲ್ಲಿ ಬದಲಾವಣೆ ಸಾಧ್ಯತೆ : ಸ್ಟಾಲಿನ್ ಉದಯ ಸೂರ್ಯನ ಶುಕ್ರದೆಸೆ

Update: 2016-05-20 06:35 GMT

ಚೆನ್ನೈ,ಮೇ 20: ತುರುಸಿನ ತ್ರಿಕೋನ ಸ್ಪರ್ಧೆ ಏರ್ಪಟ್ಟ ತಮಿಳ್ನಾಡು ಚುನಾವಣೆಯಲ್ಲಿ ಕರುಣಾನಿಧಿಯಿಂದ ಪುತ್ರ ಸ್ಟಾಲಿನ್‌ರ ಕೈಗೆ ಪಕ್ಷದ ಚುಕ್ಕಾಣಿ ಸೇರುವುದಕ್ಕೆ ತಮಿಳ್ನಾಡು ಸಾಕ್ಷಿಯಾಗಲಿದೆ ಎಂದು ವರದಿಯಾಗಿದೆ. ಡಿಎಂಕೆಯ ನೇತೃತ್ವ ಬದಲಾವಣೆ ಹೆಚ್ಚು ಸಮಯ ಕಳೆಯದೆ ನಡೆಯಲಿದೆ ಎಂಬ ಸೂಚನೆ ಲಭಿಸಿದೆ. 13 ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದ ಕಲೈಂಜರ್ ಕರುಣಾನಿಧಿಗೆ ಆರನೆ ಬಾರಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಾಗ್ಯ ಲಭಿಸಲಿಲ್ಲ. 93ವರ್ಷವಾಗಿರುವ ಅವರ ವಯೋಸಹಜವಾದ ಅಸೌಖ್ಯವೂ ಕರುಣಾನಿಧಿಯವರನ್ನು ಕಾಡುತ್ತಿದೆ. ಕರುಣಾನಿಧಿ ರಸ್ತೆಹಾದಿಯಾಗಿ ಮತಯಾಚಿಸಲು ಹೋದುದುರ ಪ್ರಯೋಜನ ಡಿಎಂಕೆಗೆ ಆಗಿದ್ದರೂ ಅಧಿಕಾರವನ್ನು ಅದು ತಂದು ಕೊಡಲಿಲ್ಲ. ಆದರೆ ಕಳೆದ ಬಾರಿ ಕೇವಲ 23 ಸೀಟುಗಳಿಸಿದ್ದ ಡಿಎಂಕೆಯನ್ನು 97 ಸೀಟುಗಳಿಸುವೆಡೆಗೆ ತಲುಪಿಸಿದ್ದು ಸ್ಟಾಲಿನ್‌ರ ಪರಿಶ್ರಮವಾಗಿದೆ ಎಂದು ವರದಿಯಾಗಿದೆ.

ಜಯಲಲಿತಾರಿಗಿಂತ ಭಿನ್ನವಾಗಿ ಜನರ ನಡುವೆ ಹೋದ ಸ್ಟಾಲಿನ್ ಜನರ ಹೆಗಲಿಗೆ ಕೈಹಾಕಿ ಅವರ ಸಮಸ್ಯೆಯನ್ನು ಆಲಿಸುವಷ್ಟು ತಾಳ್ಮೆಯನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ತಮಿಳ್ನಾಡಿನಲ್ಲಿ ಹೊಸ ಸಂಸ್ಕಾರವನ್ನು ಸ್ಟಾಲಿನ್ ಹುಟ್ಟುಹಾಕಿದರು. ಡಿಎಂಕೆಯಲ್ಲಿ ಸೇರದೆ ಜನಕಲ್ಯಾಣ ಸಖ್ಯಕೂಟವನ್ನು ಕಟ್ಟಿದ ವಿಜಯಕಾಂತ್ ನಿರ್ಧಾರದಲ್ಲಿ ಆವೇಶಕ್ಕೊಳಗಾಗದಂತೆ ಕಾರ್ಯಕರ್ತರನ್ನು ತಡೆದು ನಿಲ್ಲಿಸಲು ಸ್ಟಾಲಿನ್‌ಗೆ ಸಾಧ್ಯವಾಯಿತು. ಮುಖ್ಯಮಂತ್ರಿ ಸ್ಥಾನದ ಕುರಿತ ಸಮೀಕ್ಷೆಯಲ್ಲಿ ಸ್ಟಾಲಿನ್‌ಗೆ ಜನಾಭಿಪ್ರಾಯ ದೊರಕಿತ್ತು. ವಿಜಯಕಾಂತ್‌ರನ್ನು ಮೈತ್ರಿ ಸಾಧಿಸಲಾಗದ್ದು ಸ್ಟಾಲಿನ್‌ರಿಂದಾದ ಎಡವಿಕೆಯಾಗಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಪಕ್ಕದಲ್ಲೇ ಪ್ರತಿಪಕ್ಷಗಳಿರುತ್ತವೆ ಎಂದು ಎಕ್ಸಿಟ್ ಪೋಲ್ ಫಲಿತಾಂಶ ಡಿಎಂಕೆಗೆ ಸಿಕ್ಕಿರುವ ಚೇತರಿಕೆಯಿಂದ ಸತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News