4 ಕೋಟಿ ಭಾರತೀಯರ ತಲೆಯ ಮೇಲೆ ಅಪಾಯದ ತೂಗು ಕತ್ತಿ: ವಿಶ್ವಸಂಸ್ಥೆಯ ವರದಿ

Update: 2016-05-20 12:23 GMT

ಹೊಸದಿಲ್ಲಿ, ಮೇ 20: ಹೆಚ್ಚುತ್ತಿರುವ ನಗರೀಕರಣದಿಂದಾಗಿ ಮುಂಬೈ ಮತ್ತು ಕೋಲ್ಕತಾದಂತಹ ಪಟ್ಟಣಗಳ ಮೇಲೆ ಭವಿಷ್ಯದಲ್ಲಿ ದೊಡ್ಡ ಅಪಾಯ ಕವಿದಿದೆ. ಸಮುದ್ರದಜಲಮಟ್ಟ ಹೆಚ್ಚುವ ಕಾರಣದಿಂದ ಭಾರತದಲ್ಲಿ ಸುಮಾರು 4 ಕೋಟಿ ಜನರು ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಗ್ಲೋಬಲ್ ಎನ್ವಯರ್‌ಮೆಂಟಲ್ ಔಟ್‌ಲುಕ್(ಜಿಯೊ-6) ಅಧ್ಯಯನ ಪ್ರಕಾರ ಆಗ್ನೇಯ ಏಷ್ಯದ ಪೆಸಿಫಿಕ್ ಮತ್ತು ದಕ್ಷಿಣ ವಲಯದ ಸಮುದ್ರದ ಬದಿಯಲ್ಲಿ ವಾಸಿಸುವವರಿಗೆ ಸಮುದ್ರದಿಂದ ಅಪಾಯ ಎದುರಾಗಿದೆ.

ವರದಿಯಲ್ಲಿ ತಿಳಿಸಿರುವಂತೆ ಏಷ್ಯದ ಏಳು ನಗರಗಳಲ್ಲಿ ಈ ಅಪಾಯವಿದ್ದು ಸಮುದ್ರದ ನೀರು ಹೆಚ್ಚಳದಿಂದಾಗಿ ನಾಲ್ಕು ಕೋಟಿ ಭಾರತೀಯರು, 2.5 ಕೋಟಿ ಬಾಂಗ್ಲಾದೇಶೀಯರು, 2ಕೋಟಿ ಚೀನಿಯರು ಮತ್ತು ಫಿಲಿಪ್ಪಿನ್ಸ್‌ನ 1.5 ಕೋಟಿ ಜನರು ಅಪಾಯದ ತೆಕ್ಕೆಯಲ್ಲಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News