ಅಸ್ಸಾಂ ಮುಖ್ಯಮಂತ್ರಿಯಾಗಿ ಮಂಗಳವಾರ ಸೊನೊವಾಲ್ ಪ್ರಮಾಣ ವಚನ ಸ್ವೀಕಾರ

Update: 2016-05-20 15:07 GMT

ಗುವಾಹಟಿ,ಮೇ 20: ಬಿಜೆಪಿ ನಾಯಕ ಸರಬಾನಂದ ಸೊನೊವಾಲ್ ಅವರು ಮಂಗಳವಾರ ಅಸ್ಸಾಮಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ ಶಾ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೊನೊವಾಲ್ ಜೊತೆಗೆ ಅವರ ಸಂಪುಟ ಸದಸ್ಯರೂ ಪ್ರಮಾಣ ವಚನಗಳನ್ನು ಸ್ವೀಕರಿಸಲಿದ್ದಾರೆ ಬಿಜೆಪಿ ತನ್ನ ಮತ್ತು ಮಿತ್ರಪಕ್ಷಗಳ ಆಡಳಿತದ ರಾಜ್ಯಗಳ ಹಾಗೂ ಎಲ್ಲ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News