ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯವನ್ನು ಪ್ರಶ್ನಿಸಿದ ಶಿವಸೇನೆ

Update: 2016-05-21 16:36 GMT

ಮುಂಬೈ, ಮೇ 21: ಪಂಚ ರಾಜ್ಯ ವಿಧಾನಸಭಾ ಚುನಾವಣೆಗಳ ಸಾಧನೆಯ ಬಿಜೆಪಿಯ ಸಂಭ್ರಮದ ಬೆಲೂನಿಗೆ ಶಿವಸೇನೆಯು ಸತತ ಎರಡನೆಯ ದಿನವೂ ಸೂಜಿಯನ್ನು ಚುಚ್ಚಿದೆ. ಪಕ್ಷದ ‘ಶೇ.100 ಬಿಜೆಪಿ’ ನಡೆದ 5ರಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಶೇ.1ರಷ್ಟೂ ಮತ ಗಳಿಸಿಲ್ಲವೆಂದು ಟೀಕಿಸಿದೆ.

 ತನ್ನ ಸಾಧನೆಯ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರಕಾರದ ನೀತಿಗಳಿಗೆ ಬಿಜೆಪಿ ಸಲ್ಲಿಸಿರುವ ವಿರುದ್ಧ ಎನ್‌ಡಿಎಯ ಭಾಗವಾಗಿರುವ ಶಿವಸೇನೆ ವಾದಿಸಿದೆ.
ಅದು ಹಾಗಿರುತ್ತದ್ದರೆ, ಅವರ ಎಲ್ಲ ಪ್ರಯತ್ನದ ಹೊರತಾಗಿಯೂ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಜನರು ಬಿಜೆಪಿಯನ್ನೇಕೆ ಬೆಂಬಲಿಸಲಿಲ್ಲ? ಮೋದಿಯವರ ನೀತಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿರುವುದಕ್ಕಾಗಿ ಜನರು ಮಮತಾ ಬ್ಯಾನರ್ಜಿ ಹಾಗೂ ಜಯಲಲಿತಾರನ್ನು ಬೆಂಬಲಿಸಿದ್ದಾರೆಂದು ತಾವು ನಂಬಬೇಕು? ಎಂದು ಶಿವಸೇನೆಯ ಮುಖವಾಣ ‘ಸಾಮ್ನಾ’ದ ಸಂಪಾದಕೀಯವೊಂದು ಪ್ರಶ್ನಿಸಿದೆ.
ಬೇರೆ ರಾಜ್ಯಗಳಲ್ಲಿ ಖಾತೆ ತೆರೆಯುವುದು ದೊಡ್ಡ ಸಾಧನೆಯೇನಲ್ಲವೆಂದು ಹೇಳುವ ಮೂಲಕ ಶುಕ್ರವಾರ ಪತ್ರಿಕೆಯ ಅಸ್ಸಾಂನಲ್ಲಿ ಬಿಜೆಪಿ ಯ ಗೆಲುವನ್ನು ಪ್ರಶ್ನಿಸಿತ್ತು.
ಪ್ರಾದೇಶಿಕ ಪಕ್ಷಗಳನ್ನು ಸೋಲಿಸುವುದು ಬಿಜೆಪಿಯಿಂದ ಅಸಾಧ್ಯವೆಂಬುದನ್ನು ನಾವು ಒಪ್ಪಿಕೊಳ್ಳ ಬೇಕಾಗಿದೆಯೆಂದು ಶಿವಸೇನೆ ಹೇಳಿದೆ. ಬಿಜೆಪಿಯ ‘ಕಾಂಗ್ರೆಸ್’ ಮುಕ್ತ ಭಾರತ’ ಮಂತ್ರವನ್ನೂ ಅದು ಪರಿಹಾಸ್ಯ ಮಾಡಿದೆ.
ದಿಲ್ಲಿಯಲ್ಲಿತೇ ಕಾಂಗ್ರೆಸ್ ಮುಕ್ತ ಭಾರತದ ಅದರ ಕರೆ ವಿಫಲವಾಗಿದೆ. ಮತದಾರರು 2 ಸ್ಥಾನಗಳಲ್ಲಿ 7-8ಕಡೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸುಮಾರು 4 ಸ್ಥಾನಗಳನ್ನು ಗೆದ್ದಿದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಖಾತೆ ತೆರೆಯಲೂ ಸಾಧ್ಯವಾಗಿಲ್ಲ.ಆದರೆ, ತಮಿಳುನಾಡಿನ ಜನರು ಬಿಜೆಪಿ ಮುಕ್ತ ರಾಜ್ಯವನ್ನು ಬಯಸಿದ್ದಾರೆನ್ನುವುದು ಸರಿಯಾಗದೆಂದು ಶಿವಸೇನೆ ತಿವಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News