ಮೋಹನ್ ಭಾಗವತ್‌ರ ತಪ್ಪೊಪ್ಪಿಗೆ ಮತ್ತು ಆರ್ಟ್ ಆಫ್ ಲಿವಿಂಗ್‌ನ ಭಾಗೀದಾರಿಕೆ
‘‘ಸರಕಾರ (ಹಲವು ಸ್ಪೋಟ ಪ್ರಕರಣಗಳಲ್ಲಿ) ಆರೋಪಿತರನ್ನಾಗಿ ಮಾಡಿರುವ ಬಹುತೇಕ ಜನರಲ್ಲಿ ಕೆಲವರು ಸ್ವಯಂಪ್ರೇರಿತರಾಗಿ ಬಿಟ್ಟಿದ್ದಾರೆ ಮತ್ತು ಇನ್ನು ಕೆಲವರಿಗೆ, ಈ ತೀವ್ರವಾದ ಇಲ್ಲಿ ನಡೆಯುವುದಿಲ್ಲ ಹಾಗಾಗಿ ನೀವು ಹೊರನಡೆಯಿರಿ ಎಂದು ಸಂಘವೇ ಹೇಳಿದೆ.’’
ಜನವರಿ 10, 2011ರಂದು ಗುಜರಾತ್‌ನ ಸೂರತ್‌ನಲ್ಲಿ ಭಾಷಣ ಮಾಡುವ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಿಂದುತ್ವದ ಮೇಲಿನ ಬಾಂಬ್ ಸ್ಪೋಟಗಳ ಆರೋಪದ ಬಗ್ಗೆ ಹೇಳಿದ ಮಾತುಗಳಿವು. ಹಿಂದುತ್ವದ ಪಡೆಗಳು 2007ರ ಸಂಜೋತಾ ಎಕ್ಸ್‌ಪ್ರೆಸ್ ಸ್ಪೋಟ ಸೇರಿದಂತೆ ದೇಶಾದ್ಯಂತ ಮುಸ್ಲಿಮರ ವಿರುದ್ಧ ನಡೆಸಿರುವ ಸ್ಪೋಟಗಳ ವಿಷಯದಲ್ಲಿ ಎನ್‌ಐಎಯ ಇತ್ತೀಚಿನ ಬದಲಾವಣೆ ಒಂದೊಮ್ಮೆ ಆರೆಸ್ಸೆಸ್‌ನ ಹಿರಿಯ ನಾಯಕರಾಗಿದ್ದವರೇ ನಡೆಸುತ್ತಿರುವ ಪ್ರಸ್ತುತ ಸರಕಾರ ರಚಿಸಿರುವ ಯೋಜನೆಯಂತೆ ಹಿಂದುತ್ವ ಭಯೋತ್ಪಾದಕರು ನಿಧಾನವಾಗಿ ಬಿಡುಗಡೆಗೊಳ್ಳುತ್ತಾರೆ ಎಂಬುವುದನ್ನು ಕೊನೆಗೂ ಸ್ಪಷ್ಟಗೊಳಿಸಿದೆ. 2014ರಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಇದೇನೂ ಅನಿರೀಕ್ಷಿತವಾಗಿರಲಿಲ್ಲ. ಪ್ರಕರಣದ ಮುಖ್ಯ ನ್ಯಾಯವಾದಿ ರೋಹಿಣಿ ಸಾಲ್ಯಾನ್ ಹೀಗೆ 2015ರ ಮೊದಲಾರ್ಧದಲ್ಲೇ ನಡೆಯಲಿದೆ ಎಂದು ಎಚ್ಚರಿಸಿದ್ದರು. ಸ್ವತಂತ್ರ ಭಾರತದ ಅತ್ಯಂತ ಬಿರುದಾಂಕಿತ ಪೊಲೀಸ್ ಅಕಾರಿ ಮತ್ತು ಭಯೋತ್ಪಾದನೆ ಬಗ್ಗೆ ಅಗಾಧ ಜ್ಞಾನ ಹೊಂದಿರುವ ಜೂಲಿಯೊ ರಿಬೆರೊ, ‘‘ಹಿಂದು ಉಗ್ರವಾದದ ಬಗ್ಗೆ ನಿಧಾನವಾದ ಧೋರಣೆ ಅಪಾಯಕಾರಿ. ಅದು ಹೇಮಂತ್ ಕರ್ಕರೆಯವರ ಸ್ಮರಣೆಗೆ ಮಾಡುವ ಅವಮಾನ’’ ಎಂದು 2015ರ ಜೂನ್ 17ರಂದು ತಾನೇ ಸಹಿ ಹಾಕಿದ ಲೇಖನವೊಂದರಲ್ಲಿ ಎಚ್ಚರಿಸಿದ್ದರು. ತಮ್ಮ ಲೇಖನದಲ್ಲಿ ಜೂಲಿಯೊ ರಿಬೆರೊ ಪ್ರಕರಣದ ಕ್ಲಿಷ್ಟಕರ ಅಂಶಗಳನ್ನು ಹಂಚಿಕೊಂಡಿದ್ದರು;
‘‘ದೋಷರಹಿತ ಸಮಗ್ರತೆಯನ್ನು ಹೊಂದಿದ್ದ ಅತ್ಯುತ್ತಮ ಐಪಿಎಸ್ ಅಕಾರಿ ಮತ್ತು ಅಷ್ಟೇ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಹೊಂದಿದ್ದ ಹೇಮಂತ್ ಕರ್ಕರೆ, ಕರಾಚಿಯಿಂದ ಮುಂಬೈಗೆ ರಹಸ್ಯವಾಗಿ ಬಂದಿಳಿದ ಪಾಕಿಸ್ತಾನಿ ಭಯೋತ್ಪಾದಕರ ಗುಂಡಿಗೆ ಬಲಿಯಾಗುವ ಒಂದು ದಿನದ ಮೊದಲು ನನ್ನನ್ನು ಭೇಟಿಯಾಗಲು ಬಂದಿದ್ದರು. 2008 ಮಾಲೆಗಾಂವ್ ಸ್ಪೋಟ ಪ್ರಕರಣದ ಅವರ ತನಿಖೆ ಪಡೆದ ತಿರುವಿನ ಬಗ್ಗೆ ಕೆಲವು ಬಿಜೆಪಿ ನಾಯಕರು ಮುಖ್ಯವಾಗಿ ಎಲ್.ಕೆ. ಅಡ್ವಾಣಿಯ ಪ್ರತಿಕ್ರಿಯೆಯಿಂದ ಅವರು ಚಿಂತಿತರಾಗಿದ್ದರು.’’ ‘‘ಈ ಸಮಯದಲ್ಲಿ ಅವರು ಮುನ್ನಡೆಸುತ್ತಿದ್ದ ಭಯೋತ್ಪಾದಕ ನಿಗ್ರಹದಳ ಮೊದಲಿಗೆ ಜಿಹಾದಿ ಮತಾಂಧರ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿತ್ತು. ಆ ದಿನಗಳಲ್ಲಿ ಮುಸ್ಲಿಂ ಸಂಘಟನೆಗಳಾದ ಸಿಮಿ ಮುಂತಾದವು ದೇಶಾದ್ಯಂತ ಹಲವು ಸ್ಪೋಟ ಮತ್ತು ಇತರ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕಾರಣ ಯಾವುದೇ ಪೊಲೀಸ್ ಅಕಾರಿಗೆ ಅಂಥಾ ಯೋಚನೆ ಬರುವುದು ಸಹಜ.
ಆದರೆ ಎಟಿಎಸ್, ಒಮ್ಮೆಗೆ, ಅನಿರೀಕ್ಷಿತವಾಗಿ ಮತ್ತು ನಾನು ಹೇಳುವಂತೆ ಅದೃಷ್ಟವಶಾತ್ ಧ್ವನಿಮುದ್ರಿತ ಸಂಭಾಷಣೆಯಂಥಾ ಪ್ರಶ್ನಾತೀತ ಸಾಕ್ಷಿಗಳನ್ನು ಪಡೆಯುವ ಮೂಲಕ ನೂರಾರು ಜನರನ್ನು ಬಲಿಪಡೆದ ಮಾಲೆಗಾಂವ್ ಸ್ಪೋಟವೂ ಸೇರಿದಂತೆ ಅಜ್ಮೀರ್, ಹೈದರಾಬಾದ್ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಸ್ಪೋಟಗಳನ್ನು ರೂಪಿಸಿದ್ದು, ಯೋಜಿಸಿದ್ದು ಮತ್ತು ಕಾರ್ಯರೂಪಕ್ಕೆ ತಂದಿದ್ದು ಕೇವಲ ಪ್ರತೀಕಾರದ ಅಮಲೇರಿಸಿಕೊಂಡಿದ್ದ ಹಿಂದೂ ಮತಾಂಧರ ಗುಂಪು ಎಂಬುದು ಸಾಬೀತಾಗಿತ್ತು. ‘‘ನಿಜವಾದ ತಪ್ಪಿತಸ್ಥರನ್ನು ಹಿಡಿದು ಅವರಿಗೆ ಆ ದೇಶದ ಕಾನೂನಿನ ವ್ಯಾಪ್ತಿಯಲ್ಲಿ ಶಿಕ್ಷೆಯಾಗುವಂತೆ ನೋಡಿ ಕೊಳ್ಳುವುದು ಕಾನೂನು ಜಾರಿ ಮಾಡುವವರ ಕರ್ತವ್ಯ. ನ್ಯಾಯ ಮತ್ತು ಸತ್ಯದ ಹುಡುಕಾಟದಲ್ಲಿ ರಾಜಕೀಯ, ಧರ್ಮ, ಜಾತಿ, ಸಮುದಾಯಗಳಿಗೆ ಯಾವುದೇ ಪಾತ್ರವಿಲ್ಲ. ಇಂಥಾ ಉನ್ನತ ಆದರ್ಶಗಳನ್ನು ಈಗಾಗಲೇ ಮರೆಯಲಾಗಿದೆ ಎಂಬುದು ಸತ್ಯ, ಆದರೆ ತಮ್ಮ ಆತ್ಮಸಾಕ್ಷಿಯ ಮತ್ತು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳುವ ಪೊಲೀಸ್ ಅಕಾರಿಗಳು ಅದೃಷ್ಟವಶಾತ್ ಈಗಲೂ ಇದ್ದಾರೆ. ಹೇಮಂತ್ ಕರ್ಕರೆ ಅಂಥವರಲ್ಲಿ ಒಬ್ಬರು.’’ ‘‘ಇವರು ಕಲೆ ಹಾಕಿದ ಕೆಲವೊಂದು ಸಾಕ್ಷಿಗಳನ್ನು ನಾನು ಪರಿಶೀಲಿಸಿದೆ.
ನನಗೆ ಆಘಾತವಾಗಿತ್ತು. ತಮ್ಮ ಕೆಟ್ಟ ಪ್ರಯಾಣವನ್ನು ಆರಂಭಿಸಲಿದ್ದ ದುಷ್ಕರ್ಮಿಗಳ ಕೋಪಕ್ಕೆ ಕಾರಣವೇನೆಂದು ನನಗಾಗ ಉತ್ತರ ಸಿಕ್ಕಿತ್ತು. ಆದರೆ ಪೊಲೀಸ್ ಅಕಾರಿಯೊಬ್ಬ ತನ್ನ ಕರ್ತವ್ಯಕ್ಕೆ ಬದ್ಧನಾಗಿರಬೇಕು, ಅದೇನೆಂದರೆ ಸತ್ಯ ಮತ್ತು ಕಾನೂನಿಗೆ ಅಂಟಿಕೊಂಡಿರುವುದು. ತನ್ನ ಧರ್ಮದಂತೆ ನಡೆಯಲು ನಾನು ಕರ್ಕರೆಗೆ ಸಲಹೆ ನೀಡಿದೆ. ಬೇಕಾದರೆ ನಾನು ಅಡ್ವಾಣಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದೆ. ಅಡ್ವಾಣಿಯವರು, ಯಾವುದೇ ಒಬ್ಬ ನಿಜವಾದ ಸಂಭಾವಿತ ಮತ್ತು ದೇಶಪ್ರೇಮಿ ಏನು ಮಾಡುತ್ತಾನೋ ಅದನ್ನೇ ಕರ್ಕರೆ ಮಾಡಿದ್ದಾರೆ ಎಂದು ಶ್ಲಾಸುತ್ತಾರೆ ಎಂಬ ಭರವಸೆ ನನಗಿತ್ತು. ‘‘ದುರದೃಷ್ಟವಶಾತ್ ಅಜ್ಮಲ್ ಕಸಬ್ ಮತ್ತಾತನ ಬ್ರೆನ್‌ವಾಶ್‌ಗೊಳಪಟ್ಟಿದ್ದ ಜೊತೆಗಾರರು ಒಬ್ಬ ಉತ್ತಮ ವ್ಯಕ್ತಿಯ ಜೀವವನ್ನು ಕಸಿದುಕೊಂಡರು. ಪ್ರಕರಣವನ್ನು ಮುಂದುವರಿಸಲು ಕರ್ಕರೆ ಇರಲಿಲ್ಲ, ಆದರೆ ಅವರ ಉತ್ತರಾಕಾರಿಗಳು ತನಿಖೆಯನ್ನು ಮುಂದುವರಿಸಿದರು ಮತ್ತು ನಿಜವಾದ ದೋಷಿಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು.’’
ಎನ್‌ಐಎ ಹಿಂದುತ್ವ ಭಯೋತ್ಪಾದಕರ ಪರ ತನ್ನ ಪಕ್ಷವನ್ನು ಬದಲಿಸುತ್ತದೆ ಎಂಬ ರೋಹಿಣಿಯವರ ಎಚ್ಚರಿಕೆಯ ಬಗ್ಗೆ ಅವರು ಹೇಳುತ್ತಾರೆ:
‘‘ಸಾರ್ವಜನಿಕ ನ್ಯಾಯವಾದಿಗಳ ಮಧ್ಯೆ ರೋಹಿಣಿ ಸಾಲ್ಯಾನ್ ಅವರು ಒಂದು ದಂತಕಥೆ. ಪ್ರತಿಯೊಬ್ಬ ಪೊಲೀಸ್ ಅಕಾರಿಗೂ ಅವರ ಹೆಸರು ಗೊತ್ತು. ಹಾಗೆಯೇ ಮುಂಬೈಯ ಪ್ರತಿಯೊಬ್ಬ ವಕೀಲ ಮತ್ತು ನ್ಯಾಯಾೀಶರಿಗೂ ಕೂಡಾ. ತನ್ನ ಕೆಲಸದ ಬದ್ಧತೆಯ ಬಗ್ಗೆ ಆಕೆಯದ್ದು ಸ್ಥಿತ ಮನಸ್ಸು ಮತ್ತು ಆಕೆಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬುವುದು ಎಲ್ಲರಿಗೂ ಗೊತ್ತು. ‘‘ಭಯೋತ್ಪಾದಕ ಕೃತ್ಯಗಳ ಆರೋಪ ಹೊತ್ತಿರುವ ಹಿಂದೂ ತೀವ್ರವಾದಿಗಳ ಬಗ್ಗೆ ಸ್ವಲ್ಪಮೃದು ಧೋರಣೆ ಅನುಸರಿಸುವಂತೆ ತಿಳಿಸಲಾಗಿತ್ತು ಎಂದು ರೋಹಿಣಿಯವರು ಹೇಳಿರುವುದು ನಮ್ಮ ದೇಶವು ನಿಧಾನವಾಗಿ ನಮ್ಮ ಪಶ್ಚಿಮದ ಗಡಿಯಲ್ಲಿ ಸದಾ ನಮಗೆ ತೊಂದರೆ ನೀಡುವ ನಮ್ಮ ನೆರೆಯ ರಾಷ್ಟ್ರ ಬಳಸಿರುವ ಹಾದಿಯಲ್ಲೇ ಸಾಗುತ್ತಿದೆ ಎಂಬುದನ್ನು ನಂಬುವಂತೆ ಮಾಡಿ ಭಯ ಹುಟ್ಟಿಸುತ್ತದೆ. 26/11ರ ಮಾಸ್ಟರ್‌ಮೈಂಡ್‌ಗಳನ್ನು ಪಾಕಿಸ್ತಾನದಲ್ಲಿ ಹೀರೊಗಳಂತೆ ನೋಡಲಾಗಿತ್ತು.’’
‘‘ಕೇಸರಿ ಪಡೆಯ ಹತ್ಯಾಪರಾಗಳನ್ನು ಮುಕ್ತಗೊಳಿಸುವ ಸಲುವಾಗಿ ಕಾಣದ ಕೈಗಳು ನ್ಯಾಯಾಂಗ ವ್ಯವಸ್ಥೆಯನ್ನೇ ತಳ್ಳಿದರೆ ಎಂದು ಅವರು 2015ರ ಜೂನ್‌ನಲ್ಲಿ ಪಟ್ಟಿದ್ದ ಭಯ 2016ರ ಮೇ 13ರಂದು ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೆಮ್ಮರದ ರೂಪವನ್ನು ಪಡೆದಿತ್ತು. ಪತ್ರಿಕಾ ವರದಿಯ ಪ್ರಕಾರ, ಶುಕ್ರವಾರ, ಮೇ 13, 2016ರಂದು ನಡೆದ ಬದಲಾವಣೆಯಲ್ಲಿ ಎನ್‌ಐಎ 2008ರ ಮಾಲೆಗಾಂವ್ ಸ್ಪೋಟದಲ್ಲಿ ಸಾ್ವ ಪ್ರಜ್ಞಾ ಠಾಕೂರ್ ಮತ್ತು ಇತರ ಐದು ಮಂದಿಯ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಟ್ಟಿದೆ. ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಇತರ ಎಲ್ಲಾ ಹತ್ತು ಮಂದಿಯ ಮೇಲಿದ್ದ ಮೋಕಾ ಕಾಯ್ದೆಯನ್ನು ಕೈಬಿಡಲಾಗಿದೆ.’’ ‘‘ವಾಸ್ತವದಲ್ಲಿ ನವೆಂಬರ್ 27, 2008ರಲ್ಲಿ ಮುಂಬೈಯಲ್ಲಿ ಮತಾಂಧರು ಹೇಮಂತ್ ಕರ್ಕರೆಯನ್ನು ಹತ್ಯೆ ಮಾಡಿದ್ದೇ ಇಡೀ ಪ್ರಕ್ರಿಯೆ ಹಳಿ ತಪ್ಪುವಂತೆ ಮಾಡಿ ನಿಜವಾದ ಅಪರಾಗಳಿಗೆ ಶಿಕ್ಷೆಯಾಗುವುದು ತಪ್ಪಿದೆ. ತನಿಖಾ ಸಂಸ್ಥೆಗಳು ಯುಪಿಎ ಆಡಳಿತದ ಸಮಯದಲ್ಲೂ ಹೇಮಂತ್ ಕರ್ಕರೆಯವರ ನಿಧನದ ನಂತರ ಪ್ರಕರಣದ ಪ್ರಮುಖ ಸಾಕ್ಷಿಗಳ ಮೇಲೆ ಗಮನಹರಿಸಲೇ ಇಲ್ಲ. ಸರಕಾರ (ಹಲವು ಸ್ಪೋಟ ಪ್ರಕರಣಗಳಲ್ಲಿ) ಆರೋಪಿತರನ್ನಾಗಿ ಮಾಡಿರುವ ಬಹುತೇಕ ಜನರಲ್ಲಿ ಕೆಲವರು ಸ್ವಯಂಪ್ರೇರಿತರಾಗಿ ಬಿಟ್ಟಿದ್ದಾರೆ ಮತ್ತು ಇನ್ನು ಕೆಲವರಿಗೆ, ಈ ತೀವ್ರವಾದ ಇಲ್ಲಿ ನಡೆಯುವುದಿಲ್ಲ ಹಾಗಾಗಿ ನೀವು ಹೊರನಡೆಯಿರಿ ಎಂದು ಸಂಘವೇ ಹೇಳಿದೆ ಎಂದು 2011, ಜನವರಿ 10ರಂದು ಗುಜರಾತ್‌ನ ಸೂರತ್‌ನಲ್ಲಿ ನಡೆದ ಆರೆಸ್ಸೆಸ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಒಪ್ಪಿಕೊಂಡಿದ್ದರು.
‘‘ಆರೋಪಿಗಳ ಪೈಕಿ ಬಹುತೇಕರು ಆರೆಸ್ಸೆಸ್‌ನಲ್ಲಿದ್ದರು ಅವರಲ್ಲಿ ಕೆಲವರು ಸ್ವಯಂಪ್ರೇರಿತರಾಗಿ ಸಂಘ ತ್ಯಜಿಸಿದ್ದಾರೆ ಇನ್ನೂ ಕೆಲವರಿಗೆ ಸಂಘವೇ ಹೊರ ನಡೆಯಿರಿ ಎಂದು ಸೂಚಿಸಿದೆ ಎಂದು ಮೋಹನ್ ಭಾಗವತ್ ಸ್ಪಷ್ಟವಾಗಿ ಒಪ್ಪಿಕೊಂಡಿದ್ದರು. ಈ ಭಯೋತ್ಪಾದಕರ ಹೆಸರನ್ನು ತಿಳಿಸಲು ಮೋಹನ್ ಭಾಗವತ್‌ರನ್ನು ತನಿಖೆಗೆ ಕರೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ನಿಜವಾದ ಅಪರಾಗಳ ಶೋಧ ಇನ್ನೂ ಮುಂದುವರಿದಿರುವುದರಿಂದ ಆ ಅಪರಾಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಭಾಗವತ್‌ಗೆ ಪ್ರಮಾಣ ಮಾಡಿಸಬೇಕು ಮತ್ತು ಅವರನ್ನು ಪ್ರಕರಣದ ಸಾಕ್ಷಿದಾರರನ್ನಾಗಿ ಮಾಡಬೇಕು.’’ ‘‘ಸದ್ಯದ ಆರೋಪಪಟ್ಟಿಯಲ್ಲಿ ಇನ್ನೂ ಒಂದು ಆಘಾತಕಾರಿ ಅಂಶವಿದೆ. ಭಾರತದ ಒಂದು ಪ್ರಖ್ಯಾತ ಆಂಗ್ಲ ದೈನಿಕದಲ್ಲಿ ಪ್ರಕಟವಾದ ವರದಿಯ ಪ್ರಕಾರ, 2008ರ ಮಲೆಗಾಂವ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ‘ಆರ್ಟ್ ಆಫ್ ಲಿವಿಂಗ್’ ನ ನೆರಳಿನಡಿಯಲ್ಲಿ ತರಬೇತಿ ಶಿಬಿರವೊಂದನ್ನು ಆಯೋಜಿಸಿದ್ದ ಎಂದು ರಾಷ್ಟ್ರೀಯ ತನಿಖಾ ತಂಡ ಸಲ್ಲಿಸಿದ ಆರೋಪಪಟ್ಟಿಯಲ್ಲಿ ದಾಖಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಎನ್‌ಐಎ ಪಂಚ್‌ಮರಿಯಲ್ಲಿರುವ ಹೊಟೇಲೊಂದರ ಮಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಸರಕಾರಿ ಸಾಕ್ಷಿದಾರನಾಗಿರುವ ಆ ಹೊಟೇಲ್ ಮಾಲಕ, 2005ರ ಸೆಪ್ಟೆಂಬರ್‌ನಲ್ಲಿ ಪುರೋಹಿತ್ ತನ್ನನ್ನು ಭೇಟಿಯಾಗಿ ‘ಆರ್ಟ್ ಆಫ್ಲಿವಿಂಗ್’ಗೆ ಸಂಬಂಧಪಟ್ಟ 4050 ಜನರ ಶಿಬಿರವನ್ನು ನಡೆಸಲು ಪಂಚ್‌ಮರಿಯಲ್ಲಿ ಏರ್ಪಾಡು ಮಾಡುವಂತೆ ತಿಳಿಸಿದ್ದ ಎಂದು ಹೇಳಿಕೆ ನೀಡಿದ್ದ.’’
ಎನ್‌ಐಎಯು ತನ್ನ ಏನೂ ಇಲ್ಲದ ಆರೋಪಪಟ್ಟಿ ಬಗ್ಗೆಯಾ ದರೂ ಗಂಭೀರವಾಗಿದ್ದರೆ ಅದು ಕೂಡಲೇ ರವಿಶಂಕರ್‌ರನ್ನು ಮತ್ತು ಅವರ ಇಡೀ ಜಾಲವನ್ನು ಬಂಸಬೇಕು. ಖಂಡಿತವಾಗಿಯೂ ಮೋಹನ್ ಭಾಗವತ್ ಅವರನ್ನು ಪ್ರಶ್ನಿಸುವುದು ಮೊದಲ ಆದ್ಯತೆಯಾಗಬೇಕು.