ಯುಪಿಎಸ್‌ಸಿ ಅಂಕಪಟ್ಟಿ ಜಾಲತಾಣದಲ್ಲಿ ಬಹಿರಂಗ

Update: 2016-05-22 18:19 GMT

ಹೊಸದಿಲ್ಲಿ, ಮೇ 22: ನಾಗರಿಕ ಸೇವಾ ಪರೀಕ್ಷೆಗಳಿಗೆ ಹಾಜರಾಗಿದ್ದ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಕೇಂದ್ರ ಲೋಕ ಸೇವಾ ಆಯೋಗವು(ಯುಪಿಎಸ್‌ಸಿ) ಬಹಿರಂಗಪಡಿಸಿದೆ.
 
ಉತ್ತೀರ್ಣರಾದ ಹಾಗೂ ಆಗದ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಆಯೋಗವು ತನ್ನ ಡಿಡಿಡಿ.್ಠಠ್ಚ.ಜಟ.ಜ್ಞಿ ಜಾಲ ತಾಣದಲ್ಲಿ ಪ್ರಕಟಿಸಿದೆ. ನಾಗರಿಕ ಸೇವಾ ಪ್ರಾಥಮಿಕ ಪರೀಕ್ಷೆಗೆ ಹಾಜರಾದವರ ಅಂಕಪಟ್ಟಿಗಳು ಜು. 17ರ ವರೆಗೆ ಜಾಲತಾಣದಲ್ಲಿ ಲಭ್ಯವಿದ್ದರೆ, ಉತ್ತೀರ್ಣರಾದವರ ಹಾಗೂ ಆಗದಿರುವವರ ಅಂಕಪಟ್ಟಿಗಳು ಜು.13ರ ವರೆಗೆ ದೊರೆಯುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News