ರನ್ ವೇ ಎಂದು ಭಾವಿಸಿ ರಸ್ತೆಯಲ್ಲಿ ಇಳಿಯಲು ಮುಂದಾದ ಇಂಡಿಗೋ ವಿಮಾನ. !

Update: 2016-05-23 05:39 GMT

ಹೊಸದಿಲ್ಲಿ, ಮೇ 23: ಇಂಡಿಗೊ ಏರ್ ಲೈನ್ಸ್ ಗೆ  ಸೇರಿದ ವಿಮಾನವೊಂದು ರನ್ ವೇ ಎಂದು ಭಾವಿಸಿ ಜೈಪುರ ಸಮೀಪ ರಸ್ತೆಯಲ್ಲಿ ಇಳಿಯಲು ಹೊರಟ ಘಟನೆ ಬೆಳಕಿಗೆ ಬಂದಿದೆ.

ಅಹ್ಮದಾಬಾದ್-ಜೈಪುರ ವಿಮಾನ 6 ಇ- 237 ನೆಲ ತಲುಪಲು 900 ಅಡಿ ಅಥವಾ 1.5 ನಿಮಿಷಗಳು ಬಾಕಿ ಇದ್ದಾಗ ವಿಮಾನ ರನ್ ವೇ ಬಿಟ್ಟು ರಸ್ತೆಯಲ್ಲಿ ಇಳಿಯಲು ತಯಾರಿ ನಡೆಸಿರುವ ವಿಚಾರ ಗೊತ್ತಾಯಿತು.

ಪೈಲೆಟ್ ಮಾಡಿಕೊಂಡ   ಎಡವಟ್ಟಿನಿಂದಾಗಿ ಈ ಘಟನೆ ನಡೆದಿದ್ದು, ವಿಮಾನದಲ್ಲಿರುವ ಇಜಿಪಿಡಬ್ಲ್ಯುಎಸ್ ವ್ಯವಸ್ಥೆ  ವಿಮಾನ ದಾರಿ ತಪ್ಪಿರುವ ಬಗ್ಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ವಿಮಾನ ರಸ್ತೆಯಲ್ಲಿ ಇಳಿಯುವುದು ತಪ್ಪಿದೆ. ನಿದ್ದೆಯಲ್ಲಿದ್ದ ಪೈಲೆಟ್ ಗಳನ್ನು ಎಬ್ಬಿಸಿದ ಪರಿಣಾಮವಾಗಿ ಮುಂದೆ ನಡೆಯಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ. ಒಂದು ನಿಮಿಷ ಉರುಳಿದ್ದರೆ ವಿಮಾನ ರಸ್ತೆ ತಲುಪುವ ಸಾಧ್ಯತೆ ಇತ್ತು.

2016ರ ಫೆಬ್ರವರಿ 27ರಂದು ಈ ಘಟನೆ ನಡೆದಿದ್ದು, ವಿಮಾನವನ್ನು ಇಳಿಸಲು ಹೊರಟ ಇಬ್ಬರು ಪೈಲೆಟ್ ಗಳನ್ನು ಇಂಡಿಗೊ ವಿಮಾನ ಸಂಸ್ಥೆ ಅಮಾನತುಗೊಳಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News