ಮುಂಬೈ: ಸಚಿವ ಕಾಳ್ಸೆಗೆ ಹೊಸದಾಗಿ ಸುತ್ತಿಕೊಂಡ ಭೂ ಹಗರಣ

Update: 2016-05-24 05:55 GMT

ಮುಂಬೈ,ಮೇ 24: ಮಹಾರಾಷ್ಟ್ರದ ಕಂದಾಯ ಸಚಿವ ಬಿಜೆಪಿಯ ಹಿರಿಯ ನಾಯಕ ಏಕ್‌ನಾಥ್ ಕಾಳ್ಸೆ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಪುಣೆ ಭೋಸಾರಿಯ ಮಹಾರಾಷ್ಟ್ರ ವ್ಯವಸಾಯ ಅಭಿವೃದ್ಧಿ ಕಾರ್ಪೊರೇಶನ್(ಎಂಐಡಿಸಿ) ಅಧೀನವಿರುವ ಭೂಮಿಯನ್ನು ಕಡಿಮೆ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ಅವರ ವಿರುದ್ಧ ಆರೋಪ ಹೊರಿಸಲಾಗುತ್ತಿದೆ. 40ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಮೂರು ಎಕರೆ ಭೂಮಿಯನ್ನು ಕೇವಲ 75 ಲಕ್ಷ ರೂಪಾಯಿಗೆ ತನ್ನ ಮತ್ತು ಪತ್ನಿ ಮಂದಾಕಿನಿ ಹಾಗೂ ಗಿರೀಶ್ ಚೌಧರಿ ಎಂಬವರ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆಂದು ಮಾಹಿತಿ ಹಕ್ಕು ಹೋರಾಟಗಾರ ಹೇಮಂತ್ ಗೋವಡೆ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ದಾವೂದ್‌ರೊಂದಿಗೆ ಟೆಲಿಫೋನ್ ಸಂಭಾಷಣೆ, ಸರಕಾರಿ ಭೂಮಿಯನ್ನು ಮಂಜೂರು ಮಾಡಲು 30ಕೋಟಿರೂಪಾಯಿ ಉದ್ಯಮಿಯಿಂದ ಕೇಳಿದ್ದಕ್ಕೆ ಅವರ ಪಿಎಯ ಬಂಧನದ ಬೆನ್ನಿಗೆ ಎಂಐಡಿಸಿಯ ಭೂಹಗರಣ ಕಾಳ್ಸೆಯನ್ನು ಸುತ್ತುವರಿದಿದೆ.

ಕಳೆದ ವರ್ಷ ಎಪ್ರಿಲ್ 28ಕ್ಕೆ ಭೂಮಿ ಹಸ್ತಾಂತರಿಸಲಾಗಿದೆ ಎಂದು ಗಾವಡೆ ಆರೋಪಿಸಿದ್ದಾರೆ. ಪಿಎ ಬಂಧನ ಮತ್ತು ದಾವೂದ್‌ನೊಂದಿಗೆ ಸಂಬಂಧ ಕುರಿತು ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ಬ್ಯೂರೋ ಕಾಳ್ಸೆಗೆ ಕ್ಲೀನ್ ಚಿಟ್ ನೀಡಿತ್ತು. ಇದರ ಬೆನ್ನಿಗೆ ಕಾಳ್ಸೆ ವಿರುದ್ಧ ಸೋಮವಾರ ಹೊಸ ಆರೋಪ ಕೇಳಿಬಂದಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News