ಎಲ್ಲ ಖಾಸಗಿ ಕಾಲೇಜುಗಳು ನೀಟ್ ವ್ಯಾಪ್ತಿಗೆ

Update: 2016-05-24 14:30 GMT

ಹೊಸದಿಲ್ಲಿ, ಮೇ 24: ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳು ‘ನೀಟ್’ನ ವ್ಯಾಪ್ತಿಗೆ ಬರುತ್ತವೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಮಂಡಳಿಗಳನ್ನು ಒಂದು ವರ್ಷದ ಮಟ್ಟಿಗೆ ನೀಟ್‌ನಿಂದ ಹೊರಗಿಡುವ ಅಧ್ಯಾದೇಶಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹಿ ಹಾಕಿದ ಬಳಿಕ ಅವರು ಮಾತನಾಡುತ್ತಿದ್ದರು.

ಅಧ್ಯಾದೇಶವು ಸಾಮಾನ್ಯ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ‘ದೃಢ ಹಾಗೂ ಕಾಯ್ದೆ ಬದ್ಧ’ ಬೆಂಬಲವನ್ನು ನೀಡಿದೆಯೆಂದು ಉಲ್ಲೇಖಿಸಿದ ನಡ್ಡಾ , ರಾಜ್ಯಗಳ ವಿದ್ಯಾರ್ಥಿಗಳು ಈ ವರ್ಷ (2016-17) ಪದವಿ ಪೂರ್ವ ಪರೀಕ್ಷೆಗಳಿಗೆ ಹಾಜರಾಗುವ ಅವಕಾಶ ಪಡೆಯಲಿದ್ದಾರೆ ಎಂದರು.

ಎಲ್ಲ ಖಾಸಗಿ ಸಂಸ್ಥೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ನೀಟ್‌ನ ಪರಿಧಿಗೆ ಬರುತ್ತದೆ. ರಾಜ್ಯ ಸರಕಾರಗಳು ಯುಜಿ ಸೀಟ್‌ಗಳನ್ನು ತುಂಬಲು ತಮ್ಮದೇ ಆದ ಪರೀಕ್ಷೆ ನಡೆಸುವ ಅಥವಾ ನೀಟ್‌ಗೆ ಹೋಗುವ ಆಯ್ಕೆಯನ್ನು ಪಡೆದಿದೆ. ಆದಾಗ್ಯೂ, ಸ್ನಾತಕೋತ್ತರ ಕೋರ್ಸ್‌ಗಳಿಗೆ 2017-18ನೆ ಸಾಲಿಗಾಗಿ ಈ ವರ್ಷ ಡಿಸೆಂಬರ್‌ನಲ್ಲಿ ನೀಟ್‌ನ ಅನ್ವಯ ಪರೀಕ್ಷೆ ನಡೆಯಲಿದೆಯೆಂದು ಅವರು ತಿಳಿಸಿದರು.

ರಾಜ್ಯಗಳಿಗೆ ಒಂದು ಆಯ್ಕೆಯಿದೆ. ಅಂದಾಜು 5 ರಾಜುಗಳು ತಮ್ಮದೇ ಪರೀಕ್ಷೆಯನ್ನು ನಡೆಸಿವೆ. ವಿವಿಧ ರಾಜ್ಯಗಳ ಪರೀಕ್ಷೆಗಳಿಗೆ ಸುಮಾರು 6.5 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. 6.25 ಲಕ್ಷ ವಿದ್ಯಾರ್ಥಿಗಳು ನೀಟ್-1 ಪರೀಕ್ಷೆ ಬರೆದಿದ್ದಾರೆಂದು ನಡ್ಡಾ ಹೇಳಿದರು.

ಕೆಲವು ರಾಜ್ಯಗಳು ಉತ್ತರಪ್ರದೇಶದಂತೆ ಪರೀಕ್ಷೆಯನ್ನು ಮೂಂದೂಡಿದ್ದರೆ, ಬಿಹಾರ ನೀಟನ್ನು ಆರಿಸಿಕೊಂಡಿದೆ. ಅವುಗಳಿಗೆ ಒಂದು ಆಯ್ಕೆಯಿತ್ತು. ಆದರೆ, ಈ ಸೀಟುಗಳನ್ನು ಒಂದೋ ನೀಟ್ ಅಥವಾ ರಾಜ್ಯ ಸರಕಾರಗಳು ತುಂಬಲಿವೆಯೆಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಂಪುಟ ಕಳುಹಿಸಿದ್ದ ಅಧ್ಯಾದೇಶಕ್ಕೆ ಇಂದು ರಾಷ್ಟ್ರಪತಿ ಸಹಿ ಹಾಕಿದ್ದಾರೆ. ಆ ಬಳಿಕ ಕಾನೂನು ಪ್ರಕ್ರಿಯೆಗಳಿಗೆ ಚಾಲೆನ ನೀಡಲಾಗಿದೆ. ಅದನ್ನು ಇಂದು ಅಧಿ ಸೂಚಿಸಲಾಗುವುದೆಂದು ನಡ್ಡಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News