ಮುಸ್ಲಿಮ್ ಪತ್ರಕರ್ತನನ್ನು ಐಎಮ್ ಪರ ಎಂದ ಅರ್ನಬ್ ಗೋಸ್ವಾಮಿ

Update: 2016-05-25 09:15 GMT

ಮುಂಬೈ : ಮುಂಬೈನ ಬಟ್ಲಾ ಹೌಸ್ ಎನ್ಕೌಂಟರ್ ಸಂಬಂಧ ನಡೆದ ಚರ್ಚೆಯಲ್ಲಿಭಾಗವಹಿಸಿದ್ದ ಡಿಎನ್‌ಎ ಪತ್ರಕರ್ತ ಅಸದ್ ಅಶ್ರಫ್ ಅವರನ್ನು ಐಎಮ್ ಪರವೆಂದುಟೈಮ್ಸ್ ನೌಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಹೇಳಿದ ಪ್ರಕರಣ ವರದಿಯಾಗಿದ್ದು ಈ ಚರ್ಚೆಯ ವೀಡಿಯೋವನ್ನು ಇದೀಗ ತನ್ನ ವೆಬ್ ಸೈಟ್ ನಿಂದ ಟೈಮ್ಸ್ ನೌ ತೆಗೆದು ಹಾಕಿದೆ.ಬಟ್ಲಾ ಹೌಸ್ ಎನ್ಕೌಂಟರ್ ನಡೆದಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ ಉಗ್ರನಿಗೆ ಸಂಬಂಧಪಟ್ಟ ಇಸ್ಲಾಮಿಕ್ ಸ್ಟೇಟ್ ವೀಡಿಯೋ ಹೊರಬಿದ್ದ ನಂತರ ಟೈಮ್ಸ್ ನೌ ಈ ಬಗ್ಗೆ ಚರ್ಚಿಸಲುಬಟ್ಲಾ ಹೌಸ್ ಎನ್ಕೌಂಟರ್ ಬಗ್ಗೆ ಹಲವು ಶಂಕೆಗಳಿದ್ದ ಪತ್ರಕರ್ತ ಅಸದ್ ಅಶ್ರಫ್ ಅವರನ್ನು ಆಹ್ವಾನಿಸಿತ್ತು.

ಚರ್ಚೆಯ ವೇಳೆ ಅಸದ್ ಈ ಎನ್ಕೌಂಟರ್ ಪ್ರಕರಣದಲ್ಲಿರುವ ಹಲವಾರು ಲೋಪದೋಷಗಳತ್ತ ಬೆಳಕು ಚೆಲ್ಲಿದಾಗ ‘‘ಅರ್ನಬ್ ಯಾವುದೇ ಅಂಜಿಕೆಯಿಲ್ಲದೆ ನಾನು ಐಎಮ್ ಪರ ಎಂದು ಹೇಳಿದರು,’’ಎಂದು ಜನತಾ ಕಾ ರಿಪೋರ್ಟರ್ ನಲ್ಲಿ ಅಸದ್ ವಿವರಿಸಿದ್ದಾರೆ.

ಚರ್ಚೆಯ ಸಂದರ್ಭ ಆರೆಸ್ಸೆಸ್ ನಾಯಕ ರತನ್ ಶರ್ದ ಕೂಡ ಅಸದ್ ಅವರನ್ನು ಉಗ್ರ ಸಂಘಟನೆಗಳ ಬೆಂಬಲಿಗನೆಂದು ಹೇಳಿದ್ದರೆನ್ನಲಾಗಿದೆ. ‘‘ಇದಕ್ಕೆ ನನ್ನ ವಿರೋಧವನ್ನು ಪರಿಗಣನೆಗೆ ತೆಗೆದುಕೊಳ್ಳುವ ಬದಲು ಅರ್ನಬ್ ನನ್ನನ್ನು ಶಾಂತವಾಗಿರುವಂತೆ ಹೇಳಿ ಶರ್ದ ನನ್ನ ವಿರುದ್ಧ ಆಪಾದನೆ ಮುಂದುವರಿಸುವಂತೆ ನೋಡಿಕೊಂಡರು,’’ಎಂದು ಅಸದ್ ಆರೋಪಿಸಿದ್ದಾರೆ.

ಈ ಚರ್ಚೆಯ ವೀಡಿಯೋವನ್ನು ಟೈಮ್ಸ್ ನೌ ತೆಗೆದು ಹಾಕಿದೆಯೆಂದು ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್ ಹೇಳಿದ್ದಾರೆ. ‘‘ನಾಚಿಕೆಯಿಲ್ಲದ ಟೈಮ್ಸ್ ನೌಪತ್ರಕರ್ತ ಅಸದ್ ಅಶ್ರಫ್ ಹಾಗೂ ತಸ್ಲೀಂ ರಹಮಾಣಿಯವರನ್ನು ಅವರು ಟ್ಲಾ ಹೌಸ್ ಎನ್ಕೌಂಟರ್ ಸಂಬಂಧ ಹಲವಾರು ಶಂಕೆಗಳನ್ನು ವ್ಯಕ್ತಪಡಿಸಿದ ಕಾರಣಕ್ಕೆ ಅವರುಐಎಸ್ ಪರವೆಂದು ಅರ್ನಬ್ ಗೋಸ್ವಾಮಿ ಹೇಳುವ ವೀಡಿಯೋ ಲಿಂಕನ್ನುಅಪ್ ಲೋಡ್ ಮಾಡದಿರಲು ನಿರ್ಧರಿಸಿದೆ. ಈಗ ಅವರಿಗೆ ಕಾನೂನಿನ ಭಯ ಶುರುವಾಗಿದೆ,’’ಎಂದು ಅವರು ಬರೆದಿದ್ದಾರೆ. ಈ ವೀಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News