ಬಾಂಗ್ಲಾದೇಶದಲ್ಲಿರುವ ಬಾಲಕ ಸೋನು ಕರೆತರಲು ಭಾರತ ಪ್ರಯತ್ನ

Update: 2016-05-27 08:19 GMT

ಹೊಸದಿಲ್ಲಿ, ಮೇ 27: ತನ್ನ ಮನೆಯಿಂದ 2010ರಲ್ಲಿ ನಾಪತ್ತೆಯಾಗಿ ಆರು ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲಿ ಪತ್ತೆಯಾಗಿದ್ದ ಸೋನು ಹೆಸರಿನ ಬಾಲಕನನ್ನು ಸ್ವದೇಶಕ್ಕೆ ಕರೆ ತರುವ ಪ್ರಯತ್ನ ಬಿರುಸುಗೊಂಡಿದೆ.

ಇದೀಗ 12ರ ಹರೆಯಕ್ಕೆ ಕಾಲಿಟ್ಟಿರುವ ಸೋನುವನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಬಾಂಗ್ಲಾದೇಶದ ವಿದೇಶಿ ಸಚಿವಾಲಯಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೋರಿಕೆ ಸಲ್ಲಿಸಿದೆ.

ಬಾಂಗ್ಲಾದೇಶದ ವಿದೇಶಿ ಸಚಿವರಾದ ಅಬ್ದುಲ್ ಹಸನ್ ಮಹಮೂದ್ ಅಲಿ ಅವರೊಂದಿಗೆ ಸಭೆ ನಡೆಸಿರುವ ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈ ಕಮಿಶನರ್ ಹರ್ಷವರ್ಧನ್ ಸೋನುವನ್ನು ಕಸ್ಟಡಿಗೆ ಪಡೆಯಲು ವಿನಂತಿಸಿದ್ದಾರೆ.

2010ರಲ್ಲಿ ದಿಲ್ಲಿಯಿಂದ ನಾಪತ್ತೆಯಾಗಿ ಬಾಂಗ್ಲಾದೇಶದಲ್ಲಿ ಪತ್ತೆಯಾಗಿರುವ ಬಾಲಕ ಸೋನುವನ್ನು ಕರೆ ತರಲು ನಾವು ಪ್ರಯತ್ನ ನಡೆಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News