ನೀಟ್ ಕುರಿತ ಸುಗ್ರೀವಾಜ್ಞೆ ರದ್ದತಿಗೆ ಸುಪ್ರಿಂಕೋರ್ಟ್ ನಕಾರ

Update: 2016-05-27 10:12 GMT

ಎಲ್ಲ ರಾಜ್ಯಗಳಲ್ಲಿ ಪ್ರತ್ಯೇಕ ಪ್ರವೇಶ ಪರೀಕ್ಷೆಗೆ ಅವಕಾಶ

ಹೊಸದಿಲ್ಲಿ, ಮೇ 27: ಇತ್ತೀಚೆಗೆ(ಮೇ 24)ರಾಷ್ಟ್ರಪತಿಗಳಿಂದ ಅಂಕಿತ ಹಾಕಲ್ಪಟ್ಟಿರುವ ನೀಟ್ ಕುರಿತು ತರಲಾಗಿರುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಲು ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ‘ಮತ್ತಷ್ಟು ಗೊಂದಲ ಮಾಡಲು ಬಯಸಬೇಡಿ. ವಿದ್ಯಾರ್ಥಿಗಳು ದೃಢಚಿತ್ತದಿಂದ ಪರೀಕ್ಷೆ ಬರೆಯಲಿ’ ಎಂದು ಆದೇಶಿಸಿದೆ.

ನೀಟ್ ಕುರಿತ ತರಲಾಗಿರುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಿ ಮಧ್ಯಂತರ ಆದೇಶ ನೀಡಬೇಕೆಂದು ಸುಪ್ರೀಂಕೋರ್ಟ್‌ಗೆ ಮೇ 26 ರಂದು ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್‌ನ ಈ ಮಹತ್ವದ ಆದೇಶದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು 2016-17ರ ಶೈಕ್ಷಣಿಕ ಸಾಲಿನಲ್ಲಿ ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್‌ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಜೊತೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನೀಟ್‌ನ್ನು ನಡೆಸಬಹುದಾಗಿದೆ.

ಇದೀಗ ನೀಟ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಸರಕಾರದ ನಿಲುವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ಸರಕಾರ ಇದೀಗ ಯು-ಟರ್ನ್ ಪಡೆದಿದೆ. ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಒಳ್ಳೆಯ ಉದ್ದೇಶ ಹೊಂದಿಲ್ಲ ಎಂದು ಇದು ತೋರಿಸುತ್ತಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News