ಹುಮಾಯೂನ್ ಗೋರಿ-ಇಸ್ಕಾನ್‌ಗೆ ನೋಟಿಸ್

Update: 2016-05-29 18:33 GMT

ಹೊಸದಿಲ್ಲಿ, ಮೇ 29: ಹುಮಾಯೂನ್ ಗೋರಿ, ಗಾಂಧು ದರ್ಶನ್, ಇಸ್ಕಾನ್ ದೇವಾಲಯ ಹಾಗೂ ಜೀವಶಾಸ್ತ್ರೀಯ ಉದ್ಯಾನಗಳ ಆವರಣಗಳಲ್ಲಿ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿದೆ. ಈ ಕಾರಣದಿಂದ ತನ್ನ ಡೆಂಗ್ ವಿರೋಧಿ ಅಭಿಯಾನದನ್ವಯ ಎಸ್‌ಡಿಎಂಸಿ, ಈ ಸ್ಮಾರಕಗಳ ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಿದೆ.

ದಕ್ಷಿಣ ದಿಲ್ಲಿ ನಗರ ಪಾಲಿಕೆಯ ಸೊಳ್ಳೆ ಉತ್ಪಾದನೆ ತಪಾಸಕರು ಹಾಗೂ ಮೇಲ್ವಚಾರಕರು ಅನೇಕ ಸ್ಮಾರಕಗಳನ್ನು ಹಾಗೂ ಪ್ರವಾಸಿ ಕೇಂದ್ರಗಳನ್ನು ಪರಿಶೀಲಿಸಿದ್ದು, ನಾಲ್ಕು ಪ್ರವಾಸಿ ಕೇಂದ್ರಗಳಲ್ಲಿ ಸೊಳ್ಳೆ ಉತ್ಪಾದನೆ ಹೆಚ್ಚಿರುವುದನ್ನು ಕಂಡು ಸಂಬಂಧಿತ ಅಧಿಕಾರಿಗಳಿಗೆ ನೋಟಿಸ್‌ಗಳನ್ನು ನೀಡಿದ್ದಾರೆಂದಯ ಎಸ್‌ಡಿಎಂಸಿಯ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರು 9 ಆಸ್ಪತ್ರೆಗಳು ಹಾಗೂ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕೇಂದ್ರಗಳು ಮತ್ತು ಧಾರ್ಮಿಕ ಸ್ಥಳಗಳ ತಪಾಸಣೆ ನಡೆಸಿದ್ದಾರೆ. ಅವರು ಸ್ಥಳಗಳ ಕೂಲಂಕಷ ತಪಾಸಣೆ ನಡೆಸಿ ಈಡಿಸ್ ಸೊಳ್ಳೆಗಳು ಬೆಳೆಯುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆಂದು ಅವರು ಹೇಳಿದ್ದಾರೆ.
ಕುತುಬ್ ಮೀನಾರ್, ಛತ್ತರ್‌ಪುರ ದೇವಾಲಯ, ಜಹಜ್ ಮಹಲ್ ಹಾಗೂ ಕಮಲ ಮಂದಿರಗಳಲ್ಲಿ ಸೊಳ್ಳೆಗಳ ಉತ್ಪಾದನೆ ಕಂಡು ಬಂದಿಲ್ಲವೆಂದು ಅಧಿಕಾರಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News