ಪವರ್ ಕಟ್‌ಗೆ ಪರಿಹಾರ!

Update: 2016-05-31 03:43 GMT

ಹೊಸದಿಲ್ಲಿ:, ಮೇ 31: ಅನಿಯತ ವಿದ್ಯುತ್ ಕಡಿತದ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ವಿದ್ಯುತ್ ಸರಬರಾಜು ಕಂಪೆನಿಗಳು ನಿಗದಿಪಡಿಸಿದ ಸಮಯ ಮೀರಿ ವಿದ್ಯುತ್ ಕಡಿತಗೊಳಿಸಿದರೆ ಅಥವಾ ನಿಗದಿಪಡಿಸಿದ ವಿದ್ಯುತ್ ಕಡಿತದ ಅವಧಿಯನ್ನು ವಿಸ್ತರಿಸಿದರೆ, ಗ್ರಾಹಕರಿಗೆ ಗಂಟೆಗೆ 100 ರೂಪಾಯಿವರೆಗೂ ದಂಡ ಪಾವತಿಸಬಹುದಾಗಿದೆ ಎಂದು ದೆಹಲಿ ವಿದ್ಯುತ್ ನಿಯಂತ್ರಣ ನಿಗಮ ಆದೇಶ ನೀಡಿದೆ.
ಈ ಸಂಬಂಧ ಡಿಇಆರ್‌ಸಿ ಅಧಿಸೂಚನೆ ಹೊರಡಿಸಿದ್ದು, ದೆಹಲಿ ವಿದ್ಯುತ್ ಸರಬರಾಜು ಸಂಹಿತೆ ಹಾಗೂ ಕ್ಷಮತೆ ಗುಣಮಟ್ಟ ನಿಬಂಧನೆಗಳು ತಕ್ಷಣದಿಂದ ಜಾರಿಯಾಗುತ್ತವೆ ಎಂದು ಸ್ಪಷ್ಟಪಡಿಸಿದೆ.
ಕಳೆದ ವಾರ ದೆಹಲಿ ಸರಕಾರ ಡಿಇಆರ್‌ಸಿಗೆ ಸೂಚನೆ ನೀಡಿ, ವಿದ್ಯುತ್ ಕಾಯ್ದೆಯ ಸೆಕ್ಷನ್ 108ರ ಅನ್ವಯ ವಿಧಿಸಬಹುದಾದ ದಂಡದ ಪ್ರಮಾಣವನ್ನು ವಾರದೊಳಗೆ ನಿಗದಿಪಡಿಸುವಂತೆ ಸೂಚಿಸಿತ್ತು. ತೀವ್ರ ಬಿಸಿಗಾಳಿಯ ಸಂದರ್ದಲ್ಲಿ ಕೂಡಾ ದೆಹಲಿಯಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದಾಗಿ ನಾಗರಿಕರು ತತ್ತರಿಸುವಂತಾಗಿತ್ತು ಎಂಬ ಕಾರಣಕ್ಕೆ ಸರಕಾರ ಈ ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News